ರಾತ್ರಿ ಗಸ್ತು ಕರ್ತವ್ಯ – ಕಾನೂನು ಸುವ್ಯವಸ್ಥೆಗೆ ಆದ್ಯತೆ
ಈ ದಿನ ರಾತ್ರಿ ಕರ್ತವ್ಯದಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಹಾಜರಾತಿ ಪಡೆದು, ಠಾಣಾ ಸರಹದ್ದಿನಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ನಿಗಾ ವಹಿಸುವಂತೆ ಸೂಚಿಸಲಾಯಿತು.
@DcpIndiranagar@CCP_Blr@DcpEastBcp@DgpKarnataka@halasuru34152
"ನಿಮ್ಮ ದೂರು – ನಮ್ಮ ಜವಾಬ್ದಾರಿ; ಕಳೆದು ಹೋದ ಮೊಬೈಲ್ ಮತ್ತೆ ನಿಮ್ಮ ಕೈಯಲ್ಲಿ!" 📱
ನಮ್ಮ ಪೊಲೀಸ್ ತಂಡದ ತ್ವರಿತ ಕ್ರಮದಿಂದ ಕಳೆದುಹೋಗಿದ್ದ ಫೋನ್ ಅನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ಅದರ ಮಾಲೀಕರಿಗೆ ಸುರಕ್ಷಿತವಾಗಿ ಹಿಂತಿರುಗಿಸಲಾಗಿದೆ.@DcpIndiranagar
ನಾಗರಿಕ ಬಂಧುಗಳಿಗೆ ಗೌರವಪೂರ್ವಕ ನಮಸ್ಕಾರ. 🙏🏽
ಸದ್ಯ ಬೆಂಗಳೂರಿನ ಇಂದಿರಾನಗರ ವಿಭಾಗದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಆಗಿ ದಿನಾಂಕ 19/11/26 ರಂದು ಅಧಿಕಾರ ವಹಿಸಿಕೊಂಡಿದ್ದೇನೆಂದು ತಮಗೆ ತಿಳಿಸಲು ನನಗೆ ಸಂತೋಷವಾಗುತ್ತಿದೆ.
ಇಂದಿರಾನಗರ ವಿಭಾಗದಲ್ಲಿ *“ಆಪರೇಷನ್ ಬ್ರೋಕನ್ ವಿಂಡೋ”* ಕಾರ್ಯಾಚರಣೆ ಕೈಗೊಂಡು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದವರ ವಿರುದ್ಧ 90 ಲಘು ಪ್ರಕರಣಗಳು ಹಾಗೂ 33 COTPA ಪ್ರಕರಣಗಳನ್ನು ದಾಖಲಿಸಿ, ಮಾನ್ಯ ನ್ಯಾಯಾಲಯಕ್ಕೆ ದಂಡ ವಿಧಿಸಲು ವರದಿ ಸಲ್ಲಿಸಲಾಗಿದೆ.
#OperationBrokenWindow
#ಬೆಂಗಳೂರು ನಗರದ ನೂತನ ಕೇಂದ್ರ ಪೊಲೀಸ್ ಆಯುಕ್ತರಾದ ಮಾನ್ಯ ಶ್ರೀ ಲಾಭು ರಾಮ್, IPS ರವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಸ್ವಾಗತ.
ಇಂದು ನೂತನ ಕೇಂದ್ರ ಪೊಲೀಸ್ ಆಯುಕ್ತರಾದ ಶ್ರೀ ಲಾಭುರಾಮ್,IPS ರವರು ಇಂದಿರಾನಗರ ವಿಭಾಗದ ಅಧಿಕಾರಿಗಳೊಂದಿಗೆ ಅಪರಾಧ ತಡೆ,ಪತ್ತೆ ಹಾಗೂ ತನಿಖೆ ಕುರಿತು ಪರಿಶೀಲಿಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ರಾತ್ರಿ ಗಸ್ತು ಕರ್ತವ್ಯ – ಕಾನೂನು ಸುವ್ಯವಸ್ಥೆಗೆ ಆದ್ಯತೆ
ಈ ದಿನ ರಾತ್ರಿ ಕರ್ತವ್ಯದಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಹಾಜರಾತಿ ಪಡೆದು, ಠಾಣಾ ಸರಹದ್ದಿನಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ನಿಗಾ ವಹಿಸುವಂತೆ ಸೂಚಿಸಲಾಯಿತು.
@DcpIndiranagar@CCP_Blr@DcpEastBcp@DgpKarnataka@halasuru34152
ಈ ದಿನ ಮಾನ್ಯ ಡಿಸಿಪಿ ಸಾಹೇಬರು, ಇಂದಿರಾನಗರ ಪೊಲೀಸ್ ಠಾಣೆ ಭೇಟಿ ನೀಡಿ, ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ನಿರಂತರ ಗಸ್ತು, ಪರಿಣಾಮಕಾರಿ ಬೀಟ್ ವ್ಯವಸ್ಥೆ, ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಬಲಪಡಿಸುವಂತೆ ಸೂಚಿಸಿದರು. ಜೊತೆಗೆ, ಸೈಬರ್ ಅಪರಾಧಗಳ ನಿಯಂತ್ರಣ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾರ್ಗದರ್ಶನ ನೀಡಿದರು
ಈ ದಿನ ಮಾನ್ಯ ಡಿಸಿಪಿ ಸಾಹೇಬರು,ಇಂದಿರಾನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ,ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜನಸ್ನೇಹಿ ಸೇವೆ,ಸಾರ್ವಜನಿಕರ ದೂರುಗಳಿಗೆ ತ್ವರಿತ ಸ್ಪಂದನೆ,ಸಿಬ್ಬಂದಿಗಳ ಕುಂದುಕೊರತೆಗಳ ಪರಿಹಾರ,ಅಪರಾಧ ತಡೆ, ಸೈಬರ್ ಅಪರಾಧ ನಿಯಂತ್ರಣ, ರೌಡಿ ಚಟುವಟಿಕೆಗಳ ನಿಗ್ರಹ ಹಾಗೂ ಮಾದಕ ವಸ್ತುಗಳ ಹಾವಳಿ ತಡೆಗೆ ಸೂಕ್ತ ಮಾರ್ಗದರ್ಶನ ನೀಡಿದರು.
ರೌಡಿ ಶೀಟರ್ಗಳ ಮನೆಗಳಿಗೆ ದಿಢೀರ್ ಭೇಟಿ – ಎಚ್ಚರಿಕೆ!
ಇಂದು ಸಕ್ರಿಯ ರೌಡಿ ಶೀಟರ್ಗಳ ಮನೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.
@halasuru34152@CCP_Blr@DcpIndiranagar
ಸಮನ್ವಯದ ಮೂಲಕ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನ!
ಬೆಂಗಳೂರು ನಗರ ಮುಖ್ಯ ಪೊಲೀಸ್ ಆಯುಕ್ತರಾದ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ಐವರು ಪೊಲೀಸ್ ಆಯುಕ್ತರೊಂದಿಗೆ ಕರ್ನಾಟಕದ ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದರು.
ಬೆಂಗಳೂರು ನಗರ ಪೊಲೀಸ್ ಇಲಾಖೆಯನ್ನು ಐದು ಕಮಿಷನರೇಟ್ಗಳಾಗಿ ಪುನರ್ರಚಿಸಿದ ಹಿನ್ನೆಲೆಯಲ್ಲಿ ನಡೆದ ಈ ಔಪಚಾರಿಕ ಭೇಟಿಯು, ಪರಿಣಾಮಕಾರಿ ಸಮನ್ವಯ, ಬಲಿಷ್ಠ ಕಾನೂನು ಪಾಲನೆ, ಸಾರ್ವಜನಿಕ ಸುರಕ್ಷತೆ ಮತ್ತು ನಾಗರಿಕ ಕೇಂದ್ರಿತ ಪೊಲೀಸ್ ಸೇವೆಯ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು.
Strengthening Policing Through Coordination!
Sri R. Hithendra, IPS, Chief Commissioner of Police, Bengaluru City, along with the five Commissioners of Police, met Shri Priyank Kharge, Hon’ble Home Minister of Karnataka.
The meeting marked a formal interaction following the restructuring of Bengaluru City Police into five commissionerates, reaffirming the commitment to effective coordination, strengthened law enforcement, public safety and citizen-centric policing.
#BengaluruCityPolice #KarnatakaPolice #PublicSafety #PoliceCoordination
ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ನಗರ ಮುಖ್ಯ ಪೊಲೀಸ್ ಆಯುಕ್ತರಾದ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ನೂತನವಾಗಿ ನಿಯೋಜನೆಗೊಂಡಿರುವ ಐವರು ಪೊಲೀಸ್ ಆಯುಕ್ತರಾದ ಶ್ರೀ ಲಾಭೂ ರಾಮ್, ಐ.ಪಿ.ಎಸ್. (ಕೇಂದ್ರ ವಿಭಾಗ), ಡಾ. ಪಿ. ಎಸ್. ಹರ್ಷ, ಐ.ಪಿ.ಎಸ್. (ಪೂರ್ವ ವಿಭಾಗ), ಶ್ರೀ ವಿಕಾಸ್ ಕುಮಾರ್ ವಿಕಾಸ್, ಐ.ಪಿ.ಎಸ್. (ಪಶ್ಚಿಮ ವಿಭಾಗ), ಡಾ. ಎಂ. ಬಿ. ಬೋರಲಿಂಗಯ್ಯ, ಐ.ಪಿ.ಎಸ್. (ಉತ್ತರ ವಿಭಾಗ) ಮತ್ತು ಶ್ರೀ ಸಿ. ವಂಶಿ ಕೃಷ್ಣ, ಐ.ಪಿ.ಎಸ್. (ದಕ್ಷಿಣ ವಿಭಾಗ) ಅವರೊಂದಿಗೆ ಬೆಂಗಳೂರಿನ ಲೋಕಭವನದಲ್ಲಿ ಕರ್ನಾಟಕದ ಮಾನ್ಯ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರನ್ನು ಅಧಿಕೃತವಾಗಿ ಭೇಟಿ ಮಾಡಿದರು.
ಬೆಂಗಳೂರು ನಗರ ಪೊಲೀಸ್ ಇಲಾಖೆಯನ್ನು ಐದು ಕಮಿಷನರೇಟ್ಗಳಾಗಿ ಪುನರ್ರಚಿಸಿದ ಹಿನ್ನೆಲೆಯಲ್ಲಿ ನಡೆದ ಈ ಔಪಚಾರಿಕ ಭೇಟಿಯು, ಸಮನ್ವಯದ ಪೊಲೀಸ್ ವ್ಯವಸ್ಥೆ, ಪರಿಣಾಮಕಾರಿ ಕಾನೂನು ಪಾಲನೆ ಮತ್ತು ಸಾರ್ವಜನಿಕ ಸುರಕ್ಷತೆಯ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು.
Shri R. Hithendra, IPS, Additional Director General & Chief Commissioner of Police, Bengaluru City, along with the five newly appointed Commissioners of Police — Shri Labhu Ram, IPS (Central), Dr. P. S. Harsha, IPS (East), Shri Vikash Kumar Vikash, IPS (West), Dr. M. B. Boralingaiah, IPS (North), and Shri C. Vamsi Krishna, IPS (South) — paid a official visit to Hon’ble Governor of Karnataka, Dr. Sudha Yadav, at Lok Bhavan, Bengaluru.
The visit marked a formal interaction following the restructuring of Bengaluru City Police into five commissionerates, reaffirming the commitment to coordinated policing, effective law enforcement and public safety.
#BengaluruCityPolice #KarnatakaPolice #GovernorOfKarnataka #PublicSafety
ಸಾರ್ವಜನಿಕ ವೈ-ಫೈ ಬಳಸುವಾಗ ಎಚ್ಚರಿಕೆ ಇರಲಿ! ಉಚಿತ ಇಂಟರ್ನೆಟ್ ಎಂಬ ಆಮಿಷಕ್ಕೆ ಒಳಗಾಗಿ ನಿಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕಿಂಗ್ ವಿವರಗಳು ಹಾಗೂ ಪಾಸ್ವರ್ಡ್ಗಳನ್ನು ಅಪಾಯಕ್ಕೆ ಸಿಲುಕಿಸಿಕೊಳ್ಳಬೇಡಿ. ಅಪರಿಚಿತ ಅಥವಾ ನಕಲಿ ವೈ-ಫೈ ನೆಟ್ವರ್ಕ್ಗಳಿಗೆ ಸಂಪರ್ಕಿಸಬೇಡಿ. ಸುರಕ್ಷಿತವಾಗಿರಿ, ಸೈಬರ್ ವಂಚನೆಗಳಿಂದ ಜಾಗೃತರಾಗಿರಿ.
#StaySafe
🚨 Quick Loan Apps — ಎಚ್ಚರದಿಂದಿರಿ! 📱💰
ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುವ “ತಕ್ಷಣ ಸಾಲ”, “Quick Funds” ಅಥವಾ Instant Loan ಜಾಹೀರಾತುಗಳನ್ನು ಪರಿಶೀಲಿಸದೆ ನಂಬಬೇಡಿ.
⚠️ ಡಿಜಿಟಲ್ ಸಾಲ ಪಡೆಯುವ ಮೊದಲು:
🔹 ಸಾಲ ನೀಡುವ ಸಂಸ್ಥೆ RBIಯಲ್ಲಿ ನೋಂದಾಯಿತ/ನಿಯಂತ್ರಿತ ಸಂಸ್ಥೆಯೇ ಎಂಬುದನ್ನು ಪರಿಶೀಲಿಸಿ.
🚨 ಟ್ರಾಫಿಕ್ ದಂಡದ ಹೆಸರಿನಲ್ಲಿ ಸೈಬರ್ ವಂಚನೆ — ಎಚ್ಚರಿಕೆ ವಹಿಸಿ! 📱⚠️
ಟ್ರಾಫಿಕ್ ದಂಡ ಪಾವತಿಸಲು ಅಥವಾ ಇ-ದಂಡದ ನೋಟಿಸ್ ಡೌನ್ಲೋಡ್ ಮಾಡಲು ಲಿಂಕ್ ಹೊಂದಿರುವ SMS ಬಂದಿದೆಯೇ? ಯಾವುದೇ ಪರಿಶೀಲನೆ ಇಲ್ಲದೆ ಲಿಂಕ್ ಕ್ಲಿಕ್ ಮಾಡಬೇಡಿ!
🚨 ಸಂದೇಹಾಸ್ಪದ ಡಿಜಿಟಲ್ ಗುರುತುಗಳನ್ನು ಪರಿಶೀಲಿಸಿ ಮತ್ತು ವರದಿ ಮಾಡಿ! 📱⚠️
ಯಾವುದೇ ಮೊಬೈಲ್ ಸಂಖ್ಯೆ, WhatsApp/Telegram ಸಂಖ್ಯೆ, ಸಾಮಾಜಿಕ ಜಾಲತಾಣದ ಪ್ರೊಫೈಲ್, ವೆಬ್ಸೈಟ್, ಇಮೇಲ್ ಐಡಿ, ಆಪ್ ಅಥವಾ ಇತರ ಡಿಜಿಟಲ್ ಗುರುತುಗಳು ಸೈಬರ್ ವಂಚನೆಗೆ ಸಂಬಂಧಿಸಿರಬಹುದು ಎಂದು ಅನುಮಾನವಿದೆಯೇ? ನಿರ್ಲಕ್ಷಿಸಬೇಡಿ!
📦ಆನ್ಲೈನ್ ಉತ್ಪನ್ನ ರಿಟರ್ನ್ ಮತ್ತು ಹಣ ಮರುಪಾವತಿ ವಂಚನೆ—ಎಚ್ಚರದಿಂದಿರಿ!⚠️
ನೀವು ಖರೀದಿಸಿದ ಉತ್ಪನ್ನವನ್ನು ಹಿಂದಿರುಗಿಸಲು ಅಥವಾ ಹಣಮರುಪಾವತಿ ಪಡೆಯಲು ಬಯಸುವಿರಾ? ಇಂಟರ್ನೆಟ್ನಲ್ಲಿ ಗ್ರಾಹಕ ಸೇವಾ(Customer Care)ದೂರವಾಣಿ ಸಂಖ್ಯೆಗಳಿಗಾಗಿ ಹುಡುಕಬೇಡಿ.
🔎 ವಂಚಕರು ಆನ್ಲೈನ್ನಲ್ಲಿ ನಕಲಿ ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸಬಹುದು
🚨🏦 ಹಿರಿಯ ನಾಗರಿಕರೇ, ನಿಮ್ಮ ನಿವೃತ್ತಿ ಉಳಿತಾಯವನ್ನು ಸೈಬರ್ ವಂಚಕರಿಂದ ರಕ್ಷಿಸಿಕೊಳ್ಳಿ! ⚠️
ನಿಮ್ಮ ಜೀವನಪರ್ಯಂತದ ದುಡಿಮೆಯ ಉಳಿತಾಯವನ್ನು ಸುರಕ್ಷಿತವಾಗಿರಿಸಿಕೊಳ್ಳಿ!
🔹 OTP, ATM PIN, CVV ಅಥವಾ ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
🔹 ನಕಲಿ KYC, ಪಿಂಚಣಿ ನವೀಕರಣ ಹಾಗೂ ಹೂಡಿಕೆ ಕರೆಗಳ ಬಗ್ಗೆ ಎಚ್ಚರದಿಂದಿರಿ.
🚫💊 ಮಾದಕ ವಸ್ತುಗಳಿಗೆ “NO” ಹೇಳಿ, “ಬೇಡಾ ಬ್ರೋ” ಅಪ್ಪಿಕೊಳ್ಳಿ! 🎓
ನಮ್ಮ ಕಾಲೇಜು ಕ್ಯಾಂಪಸ್ಗಳನ್ನು ಮಾದಕ ವಸ್ತು ಮುಕ್ತವಾಗಿರಿಸೋಣ! 🛡️
📲 KSP ಆ್ಯಪ್ ಮೂಲಕ ಮಾದಕ ವಸ್ತುಗಳ ಚಟುವಟಿಕೆಗಳ ಬಗ್ಗೆ ಅನಾಮಧೇಯವಾಗಿ ಮಾಹಿತಿ ನೀಡಿ.
#BedaBro#DrugFreeKarnataka#SayNoToDrugs#DrugFreeCampus#RISE