ಗೆ
ಅಧ್ಯಕ್ಷರು,
AKSSA
ಮಾನ್ಯರೇ,
ವಿಷಯ :- ಅಪರಾಧ ಘಟನಾ ಸ್ಥಳಾಧಿಕಾರಿ ಹುದ್ದೆ (SOCO) ಗಳಲ್ಲಿ ವಿಧಿ ವಿಜ್ಞಾನ ವಿಷಯದ ಆಕಾಂಕ್ಷಿಗಳಿಗೆ ಮಾತ್ರ ಅವಕಾಶ ಕೊಡುವ ಕುರಿತು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ
ಅಪರಾಧ ಘಟನಾ ಸ್ಥಳಾಧಿಕಾರಿ ಹುದ್ದೆ (SOCO), ಕಳೆದ ಐದು ವರ್ಷಗಳಿಂದ ಯಾವುದೇ ನೇಮಕಾತಿ ಆಗಿರುವುದಿಲ್ಲ, ಈಗಾಗಲೇ ವಿಧಿವಿಜ್ಞಾನ ಮತ್ತು ಅಪರಾಧಶಾಸ್ತ್ರ ಮುಗಿಸಿದ ಪದವೀಧರ ಸಾವಿರಾರು ಸಂಖ್ಯೆಯ ಆಕಾಂಕ್ಷಿಗಳ ಮುಖ್ಯ ಸಮಸ್ಯೆಗಳು
ವಿಧಿ ವಿಜ್ಞಾನ ಪದವಿದರರು ಸರ್ಕಾರಿ ಹುದ್ದೆ ಪಡೆಯಲು FACT & FACT Plus ಪರೀಕ್ಷೆಯ ತೇರ್ಗಡೆಯಾದರೆ ಮಾತ್ರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಬಹುದಾಗಿದೆ.
ಇನ್ನಿತರ ವಿಜ್ಞಾನ ವಿಷಯದ ಅಭ್ಯರ್ಥಿಗಳಿಗೆ ಅರಣ್ಯ ಇಲಾಖೆ, ಕೃಷಿ, ಭೂ ಮಾಪಕರು, Wireless Police, ಮೀನುಗಾರಿಕೆ , ಹಾಗೂ ವಿವಿಧ ಹಲವಾರು ಇಲಾಖೆಗಳಲ್ಲಿ ಅವರಿಗೆ ಅವಕಾಶಗಳಿವೆ ಆದರೆ ನಮ್ಮಗೆ ಕೇವಲ ವಿಧಿ ವಿಜ್ಞಾನ ಪ್ರಯೋಗಾಲಯ ಹೊರತುಪಡಿಸಿ ಬೇರೆ ಯಾವುದೇ ಇಲಾಖೆಗಳಲ್ಲಿ ಅವಕಾಶ ಕಲ್ಪಿಸಲಾಗಿಲ್ಲ.
ವಿಧಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ 1 ವರ್ಷಗಳ ಕಾಲ ದೇಶದ ವಿವಿಧ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ವಿವಿಧ ರಾಜ್ಯಗಳ ಪೊಲೀಸ್ ಇಲಾಖೆ ಅಡಿಯಲ್ಲಿ ಅಪರಾಧ ಘಟನಾ ಸ್ಥಳ ವಿಭಾಗದಲ್ಲಿ. ಇಂಟರ್ನ್ಶಿಪ್ ಕೂಡ ಪಡೆದಿದ್ದೇವೆ.
ಅದಕ್ಕಾಗಿ SOCO ಹುದ್ದೆಗಳ ನೇಮಕಾತಿಯಲ್ಲಿ ಕೇವಲ ವಿಧಿ ವಿಜ್ಞಾನ ಆಕಾಂಕ್ಷಿಗಳಿಗೆ ಪ್ರಸ್ತುತ ನಿಯಾನುಸಾರ ಹಾಗೂ ಅದೆಷ್ಟೋ ಬೇಗನೆ ನೇಮಕಾತಿ ಮಾಡಿಕೊಳ್ಳಲು ತಾವುಗಳು ಕ್ರಮವಹಿಸಬೇಕಂದು ತಮ್ಮಲ್ಲಿ ಎಲ್ಲಾ SOCO ಸ್ಪರ್ಧಾರ್ಥಿಗಳಿಂದ ಕೇಳಿಕೊಳ್ಳುತ್ತಿದ್ದೇವೆ.
ವಂದನೆಗಳೊಂದಿಗೆ
ಇಂತಿ ,
ಅಪರಾಧ ಘಟನಾ ಸ್ಥಳಾಧಿಕಾರಿ ಹುದ್ದೆಯ
ವಿಧಿ ವಿಜ್ಞಾನ ವಿಷಯದ ಆಕಾಂಕ್ಷಿಗಳು