Goods vehicles are meant to carry materials, not human lives; never risk your family’s safety by travelling in a vehicle designed only for transporting goods.
@DgpKarnataka@Rangepol_SR@KarnatakaCops
ಕುಶಾಲನಗರದ ವಿಕಾಸ್ ಎಂಬವರು ಕಳೆದುಕೊಂಡಿದ್ದ ಮೊಬೈಲ್ ಫೋನ್ ಅನ್ನು ಮಡಿಕೇರಿಯ ಸೈಬರ್ ಪೊಲೀಸ್ ಠಾಣೆಯ ಸಿಬ್ಬಂದಿಯವರು CEIR ಪೋರ್ಟಲ್ ಮೂಲಕ ಪತ್ತೆ ಮಾಡಿ ವಾರಸುದಾರರಾದ ವಿಕಾಸ್ರವರಿಗೆ ತಲುಪಿಸಲಾಯಿತು.
#CEIRKodagu@DgpKarnataka@Rangepol_SR@KarnatakaCops
ವಿಮೆ ಇಲ್ಲದೆ ರಿಕ್ಷಾ ಚಾಲಿಸುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಸಿದ್ಧಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ನ್ಯಾಯಾಲಯವು ರಿಕ್ಷಾ ಚಾಲಕರಿಗೆ ರೂ.12,000/- ದಂಡ ವಿಧಿಸಿ ಆದೇಶಿಸಿದೆ.
@DgpKarnataka@Rangepol_SR@KarnatakaCops
ಜಿಲ್ಲಾ ಅಕ್ಕಪಡೆ ಸಿಬ್ಬಂದಿಗಳು ಕುಶಾಲನಗರ ಗುಡ್ಡೆ ಹೊಸೂರ್ ತೆಪ್ಪದ ಗುಂಡಿ ರಂಗಸಮುದ್ರ ದುಬಾರೆ ತಾಣಗಳಿಗೆ ಬಂದಂತಹ ಪ್ರವಾಸಿಗರಿಗೆ ಪ್ರವಾಸಿ ಸ್ಥಾನಗಳಲ್ಲಿ ಅಥವಾ ವಸತಿ ಗೃಹಗಳಲ್ಲಿ ಯಾವುದೇ ತೊಂದರೆಗಳಾದರೆ ಕೂಡಲೇ 112 ಗೆ ಕರೆ ಮಾಡುವಂತೆ ಜಾಗೃತಿ ಮೂಡಿಸಲಾಯಿತು.
@DgpKarnataka@Rangepol_SR@KarnatakaCops
ಕೊಡಗು ಜಿಲ್ಲೆಯಲ್ಲಿ ದಿನಾಂಕ 07-08-2026 ರವರೆಗೆ ಜಾರಿಯಲ್ಲಿದ್ದ ಮರಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆ ಹಾಗೂ ಭಾರೀ ವಾಹನಗಳ ಸಂಚಾರದ ನಿಷೇಧಾಜ್ಞೆಯನ್ನು ದಿನಾಂಕ 17-08-2026 ರವರೆಗೆ ವಿಸ್ತರಿಸಿ ಕೊಡಗು ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ.
@DgpKarnataka@Rangepol_SR@KarnatakaCops
A motorcycle is designed for two people, not three; triple riding affects balance, reduces control, increases braking distance, and puts three lives at unnecessary risk.
@DgpKarnataka@Rangepol_SR@KarnatakaCops
ಅಕ್ರಮವಾಗಿ ಮಾದಕ ವಸ್ತು ಹೊಂದಿದ್ದ ಮೂವರನ್ನು ಮಡಿಕೇರಿ ನಗರ ಠಾಣೆ ಪೊಲೀಸರು ನಗರ ವ್ಯಾಪ್ತಿಯ ಸಂಪಿಗೆ ಕಟ್ಟೆ ಬಳಿ ಪತ್ತೆ ಹಚ್ಚಿ 10.05 ಗ್ರಾಂ MDMA, ಒಂದು ರಿಕ್ಷಾ ಮತ್ತು ಕಾರನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ತಂಡದ ಕಾರ್ಯಕ್ಷಮತೆಯನ್ನು ಶ್ಲಾಘಿಸಿದೆ.
@DgpKarnataka@Rangepol_SR@KarnatakaCops
ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿದ ಗೋಣಿಕೊಪ್ಪ ಠಾಣೆ ಪೊಲೀಸರು ಅಸ್ಸಾಂ ಮೂಲದ ಐವರನ್ನು ಬಂಧಿಸಿ 6.950 ಕೆ.ಜಿ. ಒಣ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
@DgpKarnataka@Rangepol_SR@KarnatakaCops
ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನಿಗೆ ಚಾಲಿಸಲು ವಾಹನ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ವಾಹನದ ಮಾಲೀಕ ಪೋಷಕರಿಗೆ ರೂ.25,000 ದಂಡ ವಿಧಿಸಿ ತೀರ್ಪು ನೀಡಿದೆ. ಅಪ್ರಾಪ್ತ ಬಾಲಕರಿಗೆ ಚಾಲನೆಗೆ ವಾಹನ ನೀಡುವುದು ನಿಯಮ ಬಾಹಿರವಾಗಿದ್ದು ಶಿಕ್ಷಾರ್ಹವಾಗಿರುತ್ತದೆ.
@DgpKarnataka@Rangepol_SR
A SIM swap fraud can begin with one careless disclosure and end with empty accounts, so stay alert, verify every request, and secure your mobile number with strong protection.
#CyberSafeKodagu
🚨 ಹಿರಿಯ ನಾಗರಿಕರೇ, ಡಿಜಿಟಲ್ ಅರೆಸ್ಟ್ ವಂಚನೆಯಿಂದ ಎಚ್ಚರ! 📱⚠️
ಸೈಬರ್ ವಂಚಕರು ಪೊಲೀಸ್, CBI, RBI ಅಥವಾ ಇತರ ಸರ್ಕಾರಿ ಅಧಿಕಾರಿಗಳಂತೆ ಸೋಗು ಹಾಕಿ, ನೀವು ಅಪರಾಧದಲ್ಲಿ ಭಾಗಿಯಾಗಿದ್ದೀರಿ ಎಂದು ಸುಳ್ಳು ಹೇಳಿ ಹೆದರಿಸಿ, ತಕ್ಷಣ ಹಣ ವರ್ಗಾಯಿಸಲು ಅಥವಾ ದೀರ್ಘ ಸಮಯ ವಿಡಿಯೋ ಕರೆಯಲ್ಲೇ ಇರಲು ಒತ್ತಡ ಹೇರಬಹುದು.
🔒 ನಿಮ್ಮನ್ನು ಸುರಕ್ಷಿತವಾಗಿರಿಸಿ:
✅ OTP, ಬ್ಯಾಂಕ್ ಖಾತೆ ವಿವರಗಳು, PIN ಅಥವಾ ಪಾಸ್ವರ್ಡ್ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
✅ ಅನುಮಾನ ಬಂದರೆ ತಕ್ಷಣ ಕರೆ ಕಡಿತಗೊಳಿಸಿ ಮತ್ತು ಅಧಿಕೃತ ಮೂಲಗಳಿಂದ ಮಾಹಿತಿ ಪರಿಶೀಲಿಸಿ.
✅ ನಿಮ್ಮ ಮೊಬೈಲ್ನಲ್ಲಿ ವಿಶ್ವಾಸಾರ್ಹ ಕುಟುಂಬ ಸದಸ್ಯರನ್ನು Emergency Contacts ಆಗಿ ಉಳಿಸಿ.
✅ ನಿಮ್ಮ WhatsApp ಖಾತೆಗೆ Two-Step Verification ಅನ್ನು ಸಕ್ರಿಯಗೊಳಿಸಿ.
📞 ಸೈಬರ್ ವಂಚನೆ ನಡೆದರೆ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ https://t.co/gi1itlrihq ನಲ್ಲಿ ದೂರು ದಾಖಲಿಸಿ.
⏱️ 🚨 ಹೆದರದೆ ತಕ್ಷಣ ದೂರು ನೀಡಿ. ಆರಂಭದಲ್ಲೇ ದೂರು ದಾಖಲಿಸಿದರೆ, ಕಳೆದುಹೋದ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
#DigitalArrest #CyberSafety #CyberCrimeAwareness #StayAlert #1930 #Dial112 #SeniorCitizenSafety #BengaluruCityPolice #SouthEastDivision
Careless double parking can delay an ambulance, frustrate hundreds, and cause accidents—choose discipline over convenience.
@DgpKarnataka@Rangepol_SR@KarnatakaCops