ಪ್ರತಿಪಕ್ಷ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿಯಾದರು.
📍 ದೆಹಲಿ
@RahulGandhi@rssurjewala@DKShivakumar@siddaramaiah@HariprasadBK2
ಕಾಂಗ್ರೆಸ್ ಹಿರಿಯ ಚೇತನರಿಗೆ ಭಾವಪೂರ್ಣ ನಮನ
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ರಾಜ್ಯಸಭೆ ಮಾಜಿ ಸದಸ್ಯರು, ಕೇಂದ್ರ ರೇಷ್ಮೆ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷರಾಗಿದ್ದ ಹೆಚ್. ಹನುಮಂತಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ಗೌರವ ನಮನ ಸಲ್ಲಿಸಿದೆ.
ಹೆಚ್. ಹನುಮಂತಪ್ಪ ಅವರು 1982ರಿಂದ 2000ರವರೆಗೆ ಸತತವಾಗಿ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು. ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ರೇಷ್ಮೆ ಕ್ಷೇತ್ರದ ಅಭಿವೃದ್ಧಿಗೆ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ, ರೈತರ ಹಾಗೂ ರೇಷ್ಮೆ ಬೆಳೆಗಾರರ ಹಿತಾಸಕ್ತಿಗಾಗಿ ಶ್ರಮಿಸಿದ್ದರು.
ರಾಜಕೀಯವನ್ನು ಅಧಿಕಾರದ ಸಾಧನವಾಗಿ ಅಲ್ಲ, ಜನಸೇವೆಯ ಮಾರ್ಗವಾಗಿ ಕಂಡಿದ್ದ ಹೆಚ್. ಹನುಮಂತಪ್ಪ ಅವರಂತಹ ಹಿರಿಯ ಮುತ್ಸದ್ದಿಯ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆದರ್ಶಗಳು, ಸಮಾಜಮುಖಿ ಚಿಂತನೆಗಳು ಹಾಗೂ ಜನಪರ ಸೇವೆಗಳು ಸದಾ ಸ್ಮರಣೀಯವಾಗಿರಲಿವೆ.
ಕರ್ನಾಟಕ ಅಪಾರ್ಟ್ಮೆಂಟ್ (ಮಾಲಿಕತ್ವ ಮತ್ತು ನಿರ್ವಹಣೆ) ವಿಧೇಯಕ-2025 ಕುರಿತಂತೆ ಕರ್ನಾಟಕ ಅಪಾರ್ಟ್ಮೆಂಟ್ ಅಸೋಷಿಯೇಷನ್ ಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
ಬೆಂಗಳೂರಿನ ನೆಹರೂ ತಾರಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮವನ್ನು ಮುಖ್ಯಮಂತ್ರಿ @DKShivakumar ಅವರು ಉಧ್ಘಾಟಿಸಿದರು, ಇದೇ ವೇಳೆ ಬೆಂಗಳೂರು ನಗರ ಅಭಿವೃದ್ದಿ ಸಚಿವರಾದ ಶ್ರೀ ಕೃಷ್ಣಭೈರೇಗೌಡ, ಸಚಿವರುಗಳಾದ ಕೆ.ಜೆ.ಜಾರ್ಜ್, ಭೈರತಿ ಸುರೇಶ್ ಸೇರಿದಂತೆ ಶಾಸಕರುಗಳು, ವಿಧಾನಪರಿಷತ್ತಿನ ಸದಸ್ಯರುಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
ಸರಳ ಸಜ್ಜನಿಕೆಯ ರಾಜಕಾರಣಿ ಇಂದು ನಮ್ಮೊಡನಿಲ್ಲ
ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಮಾಜಿ ಸಚಿವರಾದ ಶ್ರೀ ರಾಮಚಂದ್ರ ಗೌಡರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಅವರ ಪಾರ್ಥಿವ ಶರೀರಕ್ಕೆ ಭಾವಪೂರ್ಣ ನಮನ ಸಲ್ಲಿಸಲಾಯಿತು.
ರಾಮಚಂದ್ರ ಗೌಡರ ಕುಟುಂಬ ಹಾಗೂ ಅಪಾರ ಅಭಿಮಾನಿಗಳ ದುಃಖದಲ್ಲಿ ನಾನು ಕೂಡ ಭಾಗಿಯಾಗಿದ್ದು, ಮೃತರ ಅಗಲಿಕೆಯ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Today, NSUI workers held a massive protest March against the Modi govt and demanding resignation of Dharmendra Pradhan.
My question to CJP is that why they are not supporting this massive protest, why they need a separate platform?
ಸ್ವತಂತ್ರ ಹೋರಾಟಗಾರರು, ದೇಶ ಕಂಡ ಮೌಲಿಕ ರಾಜಕಾರಣಿ, ತಮಿಳುನಾಡಿನ "ಕಲ್ವಿ ತಂದೆ" (ಶಿಕ್ಷಣದ ಪಿತಾಮಹ), ಮಾಜಿ ಮುಖ್ಯಮಂತ್ರಿ ಶ್ರೀ ಕೆ.ಕಾಮರಾಜ್ ಅವರ ಜನ್ಮ ಜಯಂತಿಯ ಶುಭಾಶಯಗಳು.
ನೆಹರೂ ನಂತರದ ದುರಿತ ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನ ಮುನ್ನಡೆಸಿದ ಗಟ್ಟಿಗರಾಗಿದ್ದ ಅವರು, ಉಚಿತ ಶಿಕ್ಷಣ ಹಾಗೂ ಬಿಸಿಯೂಟ ಯೋಜನೆಯ ರೂವಾರಿಯಾಗಿ ಹಿಂದುಳಿದ, ಬಡ-ದೀನ ದಲಿತರ ಕಲ್ಯಾಣಕ್ಕಾಗಿ ಮಾದರಿ ಆಡಳಿತ ನಡೆಸಿದರು. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಕ್ಕೆ ನಿಷ್ಟರಾಗಿ, ಸರಳತೆಯನ್ನೆ ಬದುಕನ್ನಾಗಿಸಿದ ಮಹಾನ್ ಚೇತನಕ್ಕೆ ನನ್ನ ನಮನಗಳು.🙏
जब सपने पेपर लीक की भेंट चढ़ जाएं, परीक्षाएँ अव्यवस्था की शिकार हों जाएं और बेरोज़गारी युवाओं का भविष्य छीनने लगे, तब खामोश रहना विकल्प नहीं है।
#ChhatronKiGoonj के तहत प्रयागराज में निकला यह मशाल जुलूस छात्रों के अधिकार, बेहतर शिक्षा, पारदर्शी परीक्षा प्रणाली और सम्मानजनक रोज़गार की मांग का प्रतीक है।
मशालें जल चुकी हैं, अब छात्रों की आवाज़ दबेगी नहीं।
Delighted to inaugurate and address the Google I/O Connect India 2026 event at BIEC, Bengaluru.
Bengaluru's emergence as one of the world's top five AI cities and the home of nearly 40% of India's unicorn startups is a testament to Karnataka's talent, innovation ecosystem and entrepreneurial spirit. While we take pride in these achievements, our vision is far greater. We are committed to making Karnataka the AI Capital of India.
To turn this vision into reality, we are establishing India's first Government-led AI University and an AI Innovation Hub. We are introducing AI education from the school level and building next generation Green Data Centres along Karnataka's coast and near Bengaluru to power the AI economy. Through our Beyond Bengaluru vision, we are also creating world class technology hubs in Mysuru, Mangaluru, Hubballi-Dharwad, Belagavi and Kalaburagi so that global opportunities reach talented young people across every region of our State.
I firmly believe that technology must never replace humanity. Its true purpose is to empower people and improve lives. From providing AI-enabled agricultural advisory services in Kannada for our farmers to strengthening rural healthcare and transforming education, we are ensuring that technology serves every citizen. Through our Government First policy, we are also ready to become the first customer for innovative startup solutions, giving our entrepreneurs the confidence to build, test and scale their ideas. Karnataka will continue to lead with innovation, inclusivity and a clear vision for the future.
ಮಮತೆಯ ನೆರಳು...
ಶಿಕ್ಷಣಕ್ಕಾಗಿ ಕನಕಪುರದಿಂದ ಬೆಂಗಳೂರಿನ ಮೆಟ್ಟಿಲು ಹತ್ತಿದಾಗ, ನನಗೆ ಆಶ್ರಯ ನೀಡಿ ಹೆತ್ತ ತಾಯಿಗಿಂತಲೂ ಹೆಚ್ಚಾಗಿ ಬರೋಬ್ಬರಿ 13 ವರ್ಷಗಳ ಕಾಲ ಪ್ರೀತಿಯಿಂದ ಸಾಕಿ ಬೆಳೆಸಿದವರು ನನ್ನ ದೊಡ್ಡಮ್ಮ ಲಿಂಗಮ್ಮ ಅವರು. ಇಂದು ಬೆಂಗಳೂರಿನಲ್ಲಿ ನನ್ನ ಧರ್ಮಪತ್ನಿ ಉಷಾ ಅವರೊಂದಿಗೆ ದೊಡ್ಡಮ್ಮನನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಿ, ಅವರ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆದೆ.
ಕಾಲ ಬದಲಾಗಬಹುದು, ಜವಾಬ್ದಾರಿಗಳು ದೊಡ್ಡದಾಗಬಹುದು. ಆದರೆ, ದೊಡ್ಡಮ್ಮನ ಕೈ ತುತ್ತು ಉಂಡು ಬೆಳೆದ ಆ ದಿನಗಳ ನೆನಪುಗಳು ಎಂದಿಗೂ ಮಾಸದವು. ಇಂದು ಅವರ ಕೈಯನ್ನು ನನ್ನ ಕೈಯಲ್ಲಿ ಹಿಡಿದು ಕುಳಿತಾಗ, ಅವರ ಕಣ್ಣುಗಳಲ್ಲಿ ಕಂಡ ಆ ಅಕ್ಕರೆ ಮತ್ತು ತಲೆಯ ಮೇಲಿಟ್ಟು ಹರಸಿದ ಆ ಕೈಗಳು ನನ್ನ ಎಲ್ಲ ಆಯಾಸವನ್ನು ಮರೆಸಿ, ಮನಸ್ಸಿಗೆ ಅಪಾರ ನೆಮ್ಮದಿಯನ್ನು ನೀಡಿದವು.
ನಿಜಕ್ಕೂ, ನನ್ನ ಹೆತ್ತ ಅಮ್ಮ ಗೌರಮ್ಮ ಮತ್ತು ದೊಡ್ಡಮ್ಮ ಲಿಂಗಮ್ಮನವರ ನಡುವೆ ಇಂದಿಗೂ ಇರುವ ಆ ಅಪೂರ್ವ, ಅವಿನಾಭಾವ ಸಂಬಂಧವನ್ನು ಹತ್ತಿರದಿಂದ ನೋಡುತ್ತಾ ಬೆಳೆಯುವ ಭಾಗ್ಯ ನನ್ನದು. ಆ ಇಬ್ಬರು ತಾಯಂದಿರ ನಡುವಿನ ಈ ನಿಸ್ವಾರ್ಥ ಪ್ರೀತಿ ಮತ್ತು ಕೌಟುಂಬಿಕ ಒಗ್ಗಟ್ಟೇ ಇಂದು ನನ್ನ ಬದುಕಿನಲ್ಲಿ ನನ್ನ ಒಡಹುಟ್ಟಿದ ತಮ್ಮ ಹಾಗೂ ತಂಗಿಯ ಜೊತೆಗೆ ಇಷ್ಟೊಂದು ಆತ್ಮೀಯವಾದ, ಗಟ್ಟಿಯಾದ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಅಡಿಪಾಯವಾಗಿದೆ. ಹಿರಿಯರು ತೋರಿದ ಆ ದಾರಿಯೇ ಇಂದು ನಮ್ಮನ್ನು ಒಂದಾಗಿ ಹಿಡಿದಿಟ್ಟಿದೆ.
ಇದೇ ಸಂದರ್ಭದಲ್ಲಿ, ನನ್ನ ಬೆಳವಣಿಗೆಯ ಪ್ರತಿ ಹಂತದಲ್ಲೂ ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ನೀಡಿದ್ದ ದೊಡ್ಡಪ್ಪನವರಾದ ದಿವಂಗತ ಎಂ. ಕೃಷ್ಣಪ್ಪ ಅವರ ಸಮಾಧಿಗೆ ಮಾಲಾರ್ಪಣೆ ಮಾಡಿ ಭಾವಪೂರ್ಣ ನಮನ ಸಲ್ಲಿಸಿದೆ. ದೈಹಿಕವಾಗಿ ಅವರು ನಮ್ಮೊಂದಿಗಿಲ್ಲದಿದ್ದರೂ, ಅವರು ಹಾಕಿಕೊಟ್ಟ ದಾರಿ ಮತ್ತು ಆಶೀರ್ವಾದದ ಶಕ್ತಿ ಸದಾ ನನ್ನೊಂದಿಗಿರುತ್ತದೆ ಎಂಬ ಭಾವನೆ ಮನಸ್ಸನ್ನು ತುಂಬಿತು. ಹಿರಿಯರ ಈ ಪ್ರೀತಿಯೇ ನನ್ನ ಬದುಕಿನ ದಾರಿ ದೀಪ.
ಅಧಿಕಾರದ ಅಹಂಕಾರಕ್ಕಿಂತ ಪ್ರಜಾಪ್ರಭುತ್ವದ ಧ್ವನಿಗೆ ಬೆಲೆ ನೀಡುವುದು ಸರ್ಕಾರದ ಕರ್ತವ್ಯವಾಗಬೇಕು. ಶ್ರೀ ಸೋನಂ ವಾಂಗ್ಚುಕ್ ಅವರ ಅಚಲ ಬದ್ಧತೆ, ಪ್ರಜಾಸತ್ತಾತ್ಮಕ ಹೋರಾಟ, ಅಹಿಂಸಾತ್ಮಕ ಸತ್ಯಾಗ್ರಹದ ಮನೋಭಾವಕ್ಕೆ ನನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇನೆ.
ನೀಟ್ ಪರೀಕ್ಷೆಯ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಪರಿಸರವಾದಿ ಹೋರಾಟಗಾರ "ಸೋನಂ ವಾಂಗ್ಚುಕ್" ಅವರು ಕೈಗೊಂಡಿರುವ ಉಪವಾಸ ಸತ್ಯಾಗ್ರಹವು ದೇಶದ ಯುವಜನರ ಆತಂಕ ಮತ್ತು ಆಕ್ರೋಶದ ಪ್ರತೀಕವಾಗಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಇಂತಹ ಗಂಭೀರ ಪ್ರಶ್ನೆಗಳ ಎದುರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೋರಿಸುತ್ತಿರುವ ಮೌನ ಮತ್ತು ನಿರ್ಲಕ್ಷ್ಯ ಅತ್ಯಂತ ಖಂಡನೀಯ.
ದೇಶದ ಯುವಜನರು ನ್ಯಾಯ ಕೇಳುತ್ತಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಮರುಸ್ಥಾಪಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರದ ಮೌನ ಮತ್ತು ನಿರ್ಲಕ್ಷ್ಯವು ಆತಂಕಕಾರಿ. ಪ್ರಶ್ನೆಪತ್ರಿಕೆ ಸೋರಿಕೆಯಂತಹ ಗಂಭೀರ ಪ್ರಕರಣಗಳಲ್ಲಿ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳುವ ಬದಲು ಸತ್ಯವನ್ನು ಮುಚ್ಚಿಹಾಕುವ ಪ್ರಯತ್ನಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಪ್ರಶ್ನಿಸುವಂತಿವೆ.
ಒಬ್ಬ ಪರಿಸರವಾದಿ ಹೋರಾಟಗಾರ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಉಪವಾಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ದೇಶದ ಆಡಳಿತ ವ್ಯವಸ್ಥೆಗೆ ದೊಡ್ಡ ಎಚ್ಚರಿಕೆಯ ಗಂಟೆ. ಅಧಿಕಾರದಲ್ಲಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಇದು. ಪ್ರಜಾಪ್ರಭುತ್ವದಲ್ಲಿ ಭಿನ್ನಮತವನ್ನು ಆಲಿಸುವುದು ಸರ್ಕಾರದ ದೌರ್ಬಲ್ಯವಲ್ಲ, ಅದು ಅದರ ನೈತಿಕ ಹೊಣೆಗಾರಿಕೆ.
ಕೇಂದ್ರ ಸರ್ಕಾರ ಕೂಡಲೇ ಸಂವಾದಕ್ಕೆ ಮುಂದಾಗಿ, ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು, ಅವರ ಉಪವಾಸ ಸತ್ಯಾಗ್ರಹವನ್ನು ಗೌರವಯುತವಾಗಿ ಅಂತ್ಯಗೊಳಿಸುವ ಪರಿಸ್ಥಿತಿಯನ್ನು ನಿರ್ಮಿಸಬೇಕು.
#NEET #SonamWangchuk
Empowering women on the moves… #Kochi Corporation launches its 3rd Ro-Ro service and introduces FREE rides for #women, following the vision of the #Priyadarshini project. A commendable step towards safer and more accessible public transport.