ಹೊಸ ಮಾದರಿಯ ಐಫೋನ್ ಮಾರುಕಟ್ಟೆಗೆ ಲಗ್ಗೆಯಿಟ್ಟಾಗಲೆಲ್ಲ ಶೋರೂಂಗಳ ಮುಂದೆ ಕಿಲೋಮೀಟರುಗಟ್ಟಲೆ ಉದ್ದದ ಸಾಲುಗಳು ಬೆಳೆಯುವುದು ಇತ್ತೀಚಿನ ವರ್ಷಗಳ ಸಾಮಾನ್ಯ ದೃಶ್ಯ. ಆಪಲ್ ಸಂಸ್ಥೆ ಹೊಸ ಐಫೋನ್ ಡ್ಯುಯೊ (iPhone Duo) ಬಿಡುಗಡೆ ಮಾಡಿದ ಬೆನ್ನಲ್ಲೇ ಜಗತ್ತಿನಾದ್ಯಂತ ಉಂಟಾಗಿರುವ ತಂತ್ರಜ್ಞಾನದ ಕ್ರೇಜ್ ಅಷ್ಟಿಷ್ಟಲ್ಲ.
ಅಂದ ಹಾಗೆ ಐಫೋನ್ ಡ್ಯುಯೊ (iPhone Duo) ಬೆಲೆ ಕೇಳಿದರೆ ಹೌಹಾರಿಹೋಗುತ್ತೀರಿ. 2TB ಐಫೋನ್ ಡ್ಯುಯೊ ಗೆ ಹತ್ತಿರ ಹತ್ತಿರ ನಾಲ್ಕು ಲಕ್ಷ ರುಪಾಯಿ ! ಆರಂಭಿಕ ಮಾಡೆಲ್ ಬೆಲೆಯೇ ಮೂರು ಲಕ್ಷ ರುಪಾಯಿ!
ಇದನ್ನು ನೋಡಿದಾಗ ನನಗೆ ಒಂದು ಮಾತು ನೆನಪಾಯಿತು - If your phone costs more than the money in your bank account, you’re not serious about your life. (ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಮೊತ್ತಕ್ಕಿಂತ ನಿಮ್ಮ ಜೇಬಿನಲ್ಲಿರುವ ಫೋನಿನ ಬೆಲೆ ಹೆಚ್ಚಾಗಿದ್ದರೆ, ನೀವು ನಿಮ್ಮ ಬದುಕಿನ ಬಗ್ಗೆ ಗಂಭೀರವಾಗಿಲ್ಲ ಎಂದೇ ಅರ್ಥ.)
ಈ ಮಾತು ಮೇಲ್ನೋಟಕ್ಕೆ ವ್ಯಂಗ್ಯದಂತೆ ಕಂಡರೂ, ಇಂದಿನ ಯುವ ಪೀಳಿಗೆ ಸಿಲುಕಿಕೊಂಡಿರುವ ಆರ್ಥಿಕ ಭ್ರಮೆಯ ಕನ್ನಡಿಯಾಗಿದೆ. ಆಧುನಿಕ ಮಾರುಕಟ್ಟೆ ಜಗತ್ತು ಮನುಷ್ಯನ ನಿಜವಾದ ಅಗತ್ಯಗಳಿಗಿಂತ ಅವನ ಕೃತಕ ಆಸೆಗಳನ್ನು ಬಂಡವಾಳ ಮಾಡಿಕೊಂಡು ಬೆಳೆಯುತ್ತಿದೆ. ಒಂದು ಕರೆ ಮಾಡಲು, ಸಂದೇಶ ಕಳುಹಿಸಲು ಅಥವಾ ಇಂಟರ್ನೆಟ್ ಜಾಲಾಡಲು ಯಾವುದೇ ಸಾಧಾರಣ ಸ್ಮಾರ್ಟ್ಫೋನ್ ಸಾಕು. ಆದರೆ ಪ್ರೀಮಿಯಂ ಬ್ರ್ಯಾಂಡ್ಗಳು ಮಾರಾಟ ಮಾಡುತ್ತಿರುವುದು ಕೇವಲ ಎಲೆಕ್ಟ್ರಾನಿಕ್ ಉಪಕರಣವನ್ನಲ್ಲ, ಬದಲಿಗೆ ಒಂದು 'ಸಾಮಾಜಿಕ ಸ್ಥಾನಮಾನ'ವನ್ನು.
ಕೇವಲ ಅರ್ಧ ಕಚ್ಚಿದ ಸೇಬಿನ ಲೋಗೋ ಜೇಬಿನಲ್ಲಿದ್ದರೆ ತಾನು ಸಮಾಜದ ಗಣ್ಯ ವರ್ಗಕ್ಕೆ ಸೇರಿದವನು ಎಂಬ ಕೀಳರಿಮೆಯ ಮುಖವಾಡವನ್ನು ಜನ ಧರಿಸುತ್ತಿದ್ದಾರೆ. ಬ್ಯಾಂಕಿನಲ್ಲಿ ಕನಿಷ್ಠ ಮೊತ್ತವನ್ನು ಉಳಿಸಿಕೊಳ್ಳಲು ಪರದಾಡುವ ವ್ಯಕ್ತಿ, ಒಂದೂವರೆ-ಎರಡು ಲಕ್ಷ ರುಪಾಯಿಯ ಫೋನ್ ಕೈಯಲ್ಲಿಡಿದು ಓಡಾಡುವುದು ಕೇವಲ ತೋರಿಕೆಯ ಪರಮಾವಧಿ.
ಇಂದಿನ ತಲೆಮಾರನ್ನು ಆವರಿಸಿರುವ ಅತ್ಯಂತ ಅಪಾಯಕಾರಿ ಪಿಡುಗು ಎಂದರೆ ‘ನೋ-ಕಾಸ್ಟ್ ಇಎಂಐ’ (No-Cost EMI) ಮತ್ತು ಸಾಲದ ಸೌಲಭ್ಯಗಳು. ಜೇಬಿನಲ್ಲಿ ಹಣವಿಲ್ಲದಿದ್ದರೂ, ಮುಂದಿನ ಹನ್ನೆರಡು ಅಥವಾ ಇಪ್ಪತ್ನಾಲ್ಕು ತಿಂಗಳುಗಳ ಕಷ್ಟದ ದುಡಿಮೆಯನ್ನು ಅಡವಿಟ್ಟು ದುಬಾರಿ ಗ್ಯಾಜೆಟ್ಗಳನ್ನು ಖರೀದಿಸುವುದು ಸುಲಭವಾಗಿದೆ. ಬ್ಯಾಂಕ್ ಖಾತೆಯಲ್ಲಿ ಹತ್ತು ಸಾವಿರ ರುಪಾಯಿ ಕೂಡ ಉಳಿತಾಯವಿಲ್ಲದಿದ್ದಾಗ, ಲಕ್ಷ ರುಪಾಯಿಯ ಸಾಲದ ಕಂತನ್ನು ಮೈಮೇಲೆ ಎಳೆದುಕೊಳ್ಳುವುದು ಆರ್ಥಿಕ ಆತ್ಮಹತ್ಯೆಗೆ ಸಮಾನ. ಪ್ರತಿ ತಿಂಗಳ ಸಂಬಳ ಬರುತ್ತಿದ್ದಂತೆ ಅರ್ಧಕ್ಕಿಂತ ಹೆಚ್ಚು ಹಣ ಈ ಸಾಲಗಳ ಪಾವತಿಗೇ ಮುಗಿದುಹೋದರೆ, ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಆರ್ಥಿಕ ಭದ್ರತೆ ಸಂಪೂರ್ಣವಾಗಿ ನಾಶವಾಗುತ್ತದೆ.
ಮನಃಶಾಸ್ತ್ರಜ್ಞರು ಇದನ್ನು ‘ಫೋಮೊ’ (FOMO - Fear of Missing Out) ಎಂದು ಕರೆಯುತ್ತಾರೆ. ಅಂದರೆ ಗೆಳೆಯರ ನಡುವೆ, ಆಫೀಸಿನಲ್ಲಿ ಅಥವಾ ಸೋಷಿಯಲ್ ಮೀಡಿಯಾದಲ್ಲಿ ತಾನು ಹಿಂದೆ ಬಿದ್ದುಬಿಡುತ್ತೇನೋ ಎಂಬ ಅನಗತ್ಯ ಭಯ. ಇನ್ಸ್ಟಾಗ್ರಾಮ್ ಮತ್ತು ಇತರ ಜಾಲತಾಣಗಳಲ್ಲಿ ಕನ್ನಡಿಯ ಮುಂದೆ ನಿಂತು ಐಫೋನ್ ಹಿಡಿದು ಸೆಲ್ಫಿ ಕ್ಲಿಕ್ಕಿಸಿ ಹಾಕುವ ಒಂದು ಕ್ಷಣದ ‘ಲೈಕ್ಸ್’ ಮತ್ತು ‘ಕಾಮೆಂಟ್ಸ್’ಗಾಗಿ ಜನರು ತಮ್ಮ ಭವಿಷ್ಯದ ಉಳಿತಾಯವನ್ನೇ ಪಣಕ್ಕಿಡುತ್ತಿದ್ದಾರೆ. ಬೇರೆಯವರ ಮೆಚ್ಚುಗೆಯನ್ನು ಕೊಳ್ಳಲು ನಮ್ಮ ಸ್ವಂತ ಪರಿಶ್ರಮದ ಹಣವನ್ನು ಸುರಿಯುವುದು ಈ ಜಮಾನದ ಹುಚ್ಚು ಕ್ರೇಜ್.
ಬದುಕಿನ ಬಗ್ಗೆ ಗಂಭೀರವಾಗಿರುವ ಒಬ್ಬ ವ್ಯಕ್ತಿ ಯಾವತ್ತೂ ‘ಆಸ್ತಿ’ (Asset) ಮತ್ತು ‘ಹೊಣೆಗಾರಿಕೆ’ (Liability) ನಡುವಿನ ವ್ಯತ್ಯಾಸವನ್ನು ಚೆನ್ನಾಗಿ ಅರಿತಿರುತ್ತಾನೆ. ಚಿನ್ನ, ಭೂಮಿ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿದ ಹಣ ಕಾಲಕ್ರಮೇಣ ಬೆಳೆಯುತ್ತದೆ ಮತ್ತು ಸಂಕಷ್ಟದ ಸಮಯದಲ್ಲಿ ನೆರವಾಗುತ್ತದೆ. ಆದರೆ ಸ್ಮಾರ್ಟ್ಫೋನ್ ಎನ್ನುವುದು ಕೊಂಡ ಕ್ಷಣದಿಂದಲೇ ಮೌಲ್ಯ ಕಳೆದುಕೊಳ್ಳುವ (Depreciating) ವಸ್ತು. ಇಂದು ಲಕ್ಷ ರುಪಾಯಿ ಕೊಟ್ಟು ಕೊಂಡ ಫೋನ್, ನಾಳೆ ಬೆಳಗ್ಗೆ ಬಾಕ್ಸ್ ತೆರೆದ ತಕ್ಷಣ ಇಪ್ಪತ್ತು ಸಾವಿರ ಮೌಲ್ಯ ಕಳೆದುಕೊಳ್ಳುತ್ತದೆ. ಇಂಥ ತ್ವರಿತವಾಗಿ ಮೌಲ್ಯ ಕಳೆದುಕೊಳ್ಳುವ ವಸ್ತುವಿನ ಮೇಲೆ ತನ್ನೆಲ್ಲ ಶಕ್ತಿಯನ್ನು ಸುರಿಯುವವನು ಬದುಕಿನ ಗುರಿಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದಾನೆಂದು ಭಾವಿಸುವುದು ಮೂರ್ಖತನ.
ಆಕಸ್ಮಿಕವಾಗಿ ಎದುರಾಗುವ ವೈದ್ಯಕೀಯ ತುರ್ತು ಪರಿಸ್ಥಿತಿಗಳು ಅಥವಾ ಉದ್ಯೋಗ ನಷ್ಟದಂಥ ಸಂದರ್ಭಗಳಲ್ಲಿ ಕೈಯಲ್ಲಿರುವ ದುಬಾರಿ ಫೋನ್ ಯಾವ ನೆರವಿಗೂ ಬರುವುದಿಲ್ಲ. ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಆರು ತಿಂಗಳ ಖರ್ಚಿಗೆ ಆಗುವಷ್ಟು ತುರ್ತು ನಿಧಿ (Emergency Fund) ಇಲ್ಲದ ವ್ಯಕ್ತಿ, ಯಾವುದೇ ಅನಿರೀಕ್ಷಿತ ಹೊಡೆತಕ್ಕೆ ಸುಲಭವಾಗಿ ಕುಸಿದುಹೋಗುತ್ತಾನೆ. ಆಸ್ಪತ್ರೆಯ ಬಿಲ್ ಕಟ್ಟಲು ಸಂಬಂಧಿಕರ ಮುಂದೆ ಕೈಚಾಚುವ ಪರಿಸ್ಥಿತಿ ಬಂದಾಗ, ಕೈಯಲ್ಲಿರುವ ಪ್ರೀಮಿಯಂ ಫೋನ್ ಆತನ ಬೇಜವಾಬ್ದಾರಿತನವನ್ನು ಎತ್ತಿ ತೋರಿಸಿ ಅಣಕಿಸತೊಡಗುತ್ತದೆ. ಬದುಕನ್ನು ಪ್ರೀತಿಸುವವನು ಮೊದಲು ಸುರಕ್ಷತೆಯ ಕೋಟೆಯನ್ನು ಕಟ್ಟುತ್ತಾನೆಯೇ ಹೊರತು, ಕೇವಲ ರಂಗುರಂಗಿನ ತೋರಿಕೆಯ ಗೋಡೆಯನ್ನಲ್ಲ.
ಶ್ರೀಮಂತಿಕೆ ಎನ್ನುವುದು ವ್ಯಕ್ತಿಯ ಬಳಿ ಇರುವ ವಸ್ತುಗಳಲ್ಲಲ್ಲ, ಬದಲಿಗೆ ಆತ ಉಳಿಸಿರುವ ಮತ್ತು ಹೂಡಿಕೆ ಮಾಡಿರುವ ಆರ್ಥಿಕ ಸಂಪನ್ಮೂಲದಲ್ಲಿದೆ. ನಿಜವಾದ ಶ್ರೀಮಂತರು ತಮ್ಮ ಹಣವನ್ನು ದುಡಿಸುತ್ತಾರೆ ಮತ್ತು ಆ ಹಣ ತರುವ ಲಾಭದಿಂದ ಐಷಾರಾಮಿ ವಸ್ತುಗಳನ್ನು ಕೊಳ್ಳುತ್ತಾರೆ. ಆದರೆ ಮಧ್ಯಮ ವರ್ಗದವರು ಮತ್ತು ಯುವಜನರು ತಾವು ಪಡುವ ಕಷ್ಟದ ದುಡಿಮೆಯನ್ನೇ ನೇರವಾಗಿ ಐಷಾರಾಮಿಗೆ ಸುರಿದು, ಬಡತನದ ವಿಷವರ್ತುಲದಲ್ಲಿ ಶಾಶ್ವತವಾಗಿ ಸಿಲುಕಿಕೊಳ್ಳುತ್ತಾರೆ. ನಿಮ್ಮ ನಿವ್ವಳ ಮೌಲ್ಯಕ್ಕಿಂತ (Net Worth) ನಿಮ್ಮ ಜೀವನಶೈಲಿಯ ವೆಚ್ಚ ಹೆಚ್ಚಾಗಿದ್ದರೆ…
ಮುಂದಿನ ಓದಿಗೆ : https://t.co/WxEyMcOoCf
📍 ನವದೆಹಲಿ
🇮🇳 ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರ ದೂರದೃಷ್ಟಿಯ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಹೊಸ ಮೈಲುಗಲ್ಲು ಒಂದು ಸ್ಥಾಪನೆಯಾಗುತ್ತಿದೆ. ದೇಶಿಯ ಉತ್ಪಾದನೆ ಮತ್ತು ಅಭಿವೃದ್ಧಿಯ ಭಾಗವಾಗಿ ನಮ್ಮ ಹೆಮ್ಮೆಯ HMT ಸಜ್ಜಾಗಿದೆ.
⌚ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ರಮೇಶ್ ಕುಮಾರ್ ಅವರು ನನ್ನನ್ನು ಭೇಟಿಯಾಗಿ HMT ಕೈಗಡಿಯಾರಗಳಿಗೆ ದೊರೆಯುತ್ತಿರುವ ಅದ್ಭುತಪೂರ್ವ ಬೇಡಿಕೆಯ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು.
📈 ಸ್ವಾತಂತ್ರ್ಯ ದಿನದಂದು ಬೆಂಗಳೂರಿನಲ್ಲಿ ₹35 ಲಕ್ಷಕ್ಕೂ ಹೆಚ್ಚು ಮಾರಾಟವಾಗಿದೆ. 2.5 ಕಿಮೀ ಉದ್ದದ ಸರತಿ ಸಾಲಿನಲ್ಲಿ ನಿಂತು ಸಾರ್ವಜನಿಕರು ಕೈ ಗಡಿಯಾರಗಳನ್ನು ಖರೀದಿಸಿದರು.
👏 ಈ ಗಮನಾರ್ಹ ಸಾಧನೆಗಾಗಿ ಶ್ರೀ ರಮೇಶ್ ಕುಮಾರ್ ಅವರು ಮತ್ತು ಇಡೀ HMT ತಂಡವನ್ನು ಅಭಿನಂದಿಸಲಾಯಿತು.
🇮🇳 ಗಂಡಭೇರುಂಡ, ಆಪರೇಷನ್ ಸಿಂಧೂರ್, ಸ್ವಾತಂತ್ರ್ಯ ದಿನ, ಜನತಾ, ಸ್ಟೆಲ್ಲಾರ್ ಮತ್ತು ಅಮೃತ್ ಆವೃತ್ತಿಗಳ ಕೈ ಗಡಿಯಾರಗಳನ್ನು ಪರಿಶೀಲಿಸಿದೆ.
⭐ HMT ತನ್ನ ಪೂರ್ವವೈಭವವನ್ನು ಮರಳಿ ಪಡೆಯಲು ಕೆಲಸ ಮಾಡುತ್ತಿರುವಾಗ ಗುಣಮಟ್ಟದ ಬಗ್ಗೆ ಯಾವುದೇ ರಾಜಿ ಇರುವುದಿಲ್ಲ.
🇮🇳 HMT ನಮ್ಮದೇ ಆದ ಮೇಕ್ ಇನ್ ಇಂಡಿಯಾ ಪರಂಪರೆಯ ಭಾಗವಾಗಿದೆ. ಗೌರವಾನ್ವಿತ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ನಿರಂತರ ಬೆಂಬಲ, ಮಾರ್ಗದರ್ಶನದೊಂದಿಗೆ ಇದು ಭಾರತದ ಸ್ಥಳೀಯ ಉತ್ಪಾದನಾ ಕಥೆಯನ್ನು ಬಲಪಡಿಸುವಲ್ಲಿ ಬಹಳ ದೂರ ಪ್ರಯಾಣಿಸುತ್ತದೆ ಎಂಬುದು ನನ್ನ ಬಲವಾದ ನಂಬಿಕೆ.
@MHI_GoI@HMT_Group_Cos
#HMT #MakeInIndia #AtmanirbharBharat #ViksitBharat2047
During the Congress governments, because of high tax rates, the monthly budget of people was disturbed. Whereas, the NDA government has left no stone unturned in giving timely relief to the people.
ಸರ್ಕಾರದವರು ವಾರಾಂತ್ಯ ಕರ್ಪು ಮಾಡೋದ್ರಿಂದ ಸೋಂಕಿನ ಪ್ರಮಾಣ ಕಡಿಮೆ ಆಗುತ್ತೆ ಅಂತ ಹೇಳ್ತಿದೀರಾ ..ಆದರೆ ಜನ ಈಗ ರಜೆ ಸಿಗ್ತು ಅಂತ ಹೆಚ್ಚೆಚ್ಚಾಗಿ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸುತ್ತಿದ್ದು ಬಸ್ಸುಗಳಲ್ಲಿ ಉಸಿರು ಗಟ್ಟುವ ವಾತಾವರಣ ನಿರ್ಮಾಣವಾಗುತ್ತಿದೆ ಇದರಿಂದ ಸೋಂಕು ಹೆಚ್ಚು ಹರಡುವುದಿಲ್ಲವೇ .?
@CMofKarnataka@sriramulubjp
ಸರ್ಕಾರದವರು ವಾರಾಂತ್ಯ ಕರ್ಪು ಮಾಡೋದ್ರಿಂದ ಸೋಂಕಿನ ಪ್ರಮಾಣ ಕಡಿಮೆ ಆಗುತ್ತೆ ಅಂತ ಹೇಳ್ತಿದೀರಾ ..ಆದರೆ ಜನ ಈಗ ರಜೆ ಸಿಗ್ತು ಅಂತ ಹೆಚ್ಚೆಚ್ಚಾಗಿ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸುತ್ತಿದ್ದು ಬಸ್ಸುಗಳಲ್ಲಿ ಉಸಿರು ಗಟ್ಟುವ ವಾತಾವರಣ ನಿರ್ಮಾಣವಾಗುತ್ತಿದೆ ಇದರಿಂದ ಸೋಂಕು ಹೆಚ್ಚು ಹರಡುವುದಿಲ್ಲವೇ .?
@CMofKarnataka@sriramulubjp
Lots of good news today that should warm the cockles of @RahulGandhi’s heart. #GST collection in Oct zooms to Rs 1.3 lakh crore, #exports surge 42%, #UPI transactions cross $100b, manufacturing #PMI shoots up to 55.9. Happy Dhanteras folks!
ವಿಧಿಯ ಕ್ರೂರ ಆಟ ಮೇರು ಮತ್ತು ಪ್ರತಿಭಾವಂತ ನಟ ಪುನೀತ್ ರಾಜ್ ಕುಮಾರ್ ಅವರನ್ನು ನಮ್ಮಿಂದ ಕಸಿದುಕೊಂಡಿದೆ. ಇದು ಸಾಯುವ ವಯಸ್ಸಲ್ಲ. ಮುಂಬರುವ ಪೀಳಿಗೆಯೂ ಅವರ ಅದ್ಭುತ ವ್ಯಕ್ತಿತ್ವ ಮತ್ತು ಕಾರ್ಯಕ್ಕಾಗಿ ಅವರನ್ನು ಪ್ರೀತಿಯಿಂದ ಸ್ಮರಿಸುತ್ತಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ.