ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಗಾಂಧಿ ಜಯಂತಿಯ ಅಂಗವಾಗಿ ಗಂಗಾವತಿ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿಯವರು ಹಾಗೂ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಸೇವಾಕಾಂಕ್ಷಿಯಾದ ಶ್ರೀ ಲಕ್ಷ್ಮಿ ಅರುಣ ರವರ ನೇತೃತ್ವದಲ್ಲಿ "ನಾರಿ ಜೀವನ್" ಮಹಿಳೆಯರಿಗಾಗಿ ಉಚಿತ ತರಬೇತಿ ಶಿಬಿರಗಳ ಅಡಿಯಲ್ಲಿ 10 ದಿನಗಳ ಕಾಲ "ಮೆಹೆಂದಿ ತರಬೇತಿ ಶಿಬಿರ".
ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿಯವರು ಹಾಗೂ ಅವರ ಧರ್ಮಪತ್ನಿ ಲಕ್ಷ್ಮಿ ಅರುಣರವರ ನೇತೃತ್ವದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಹಯೋಗದಲ್ಲಿ ನಾಳೆ ವರಮಹಾಲಕ್ಷ್ಮಿ ಹಬ್ಬದ ದಿನದಂದು ಬಳ್ಳಾರಿಯಲ್ಲಿ ನಡೆಯುವ ಉಚಿತ ಸಾಮೂಹಿಕ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಹೃದಯಪೂರ್ವಕ ಆದರದ ಸ್ವಾಗತ.🙏🏻
ಮಹಾನ್ ಕ್ರಾಂತಿಕಾರಿ,ಹಿಂದುಸ್ತಾನ್ ಸೋಶಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಎಂಬ ಕ್ರಾಂತಿಕಾರಿ ಸಂಘಟನೆಯನ್ನು ಹುಟ್ಟುಹಾಕಿ ದೇಶದಲ್ಲಿ ಸ್ವಾತಂತ್ರ್ಯ ಚಳುವಳಿಯನ್ನು ತೀವ್ರಗೊಳಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ನೀಡಿದ ಮಹಾನ್ ನಾಯಕ ಚಂದ್ರಶೇಖರ್ ಆಜಾದ್ ಅವರ ಜಯಂತಿಯ ಶುಭಾಶಯಗಳು.
#ChandrashekarAzad#BirthAnniversary
"ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು" ಎಂಬ ಘೋಷವಾಕ್ಯದೊಂದಿಗೆ ಹೋರಾಡಿದ ನಮ್ಮ ದೇಶದ ಸ್ವಾತಂತ್ರ್ಯ ಚಳುವಳಿಯ ಜನಪ್ರಿಯ ನಾಯಕ, ಮೊದಲ ಸ್ವಾತಂತ್ರ್ಯ ಚಳುವಳಿಯ ಜನಕ, ರಾಷ್ಟ್ರೀಯತಾವಾದದ ಪಿತಾಮಹ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರ ಜಯಂತಿಯಾದ ಇಂದು ಅವರನ್ನು ಮನಃಪೂರ್ವಕವಾಗಿ ಸ್ಮರಿಸಸೋಣ.
#BalGangadharTilak#BirthAnniversary
ಕಲ್ಪತರು ನಾಡು ತುಮಕೂರಿನ ಪವಿತ್ರ ಸಿದ್ಧಗಂಗಾ ಕ್ಷೇತ್ರದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಸ್ವಾಮಿಯವರ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
#SiddhalingaSwamiji#siddhagangamutt
ಇಂದು 13 ವರ್ಷಗಳ ಬಳಿಕ 16ನೇ ವಿಧಾನಸಭೆಯ ಅಧಿವೇಶನಕ್ಕೆ ಸಮಸ್ತ ನಾಡಿನ ಮಹಾಜನತೆಯ ಶುಭ ಹಾರೈಕೆ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರದ ಜನತೆಯ ಆಶೀರ್ವಾದ ಹಾಗೂ ಬೆಂಬಲದಿಂದ ವಿಧಾನಸಭೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ದ ಸಂಸ್ಥಾಪಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿ ಯವರು ಪ್ರವೇಶಿಸಿದ ಕ್ಷಣಗಳು.
ರಾಜ್ಯಾದ್ಯಂತ ತಮ್ಮ ಪ್ರವಚನ, ಉಪನ್ಯಾಸಗಳಿಂದ ಇಡೀ ನಾಗರೀಕ ಸಮಾಜದಲ್ಲಿ ಜಾಗ್ರತಿಯನ್ನುಂಟು ಮಾಡಿದ ಯಾದಗಿರಿ ಜಿಲ್ಲೆಯ ಹೆಡಗಿಮದ್ರಾ ಸುಕ್ಷೇತ್ರದ ರೆಡ್ಡಿ ಸಮಾಜದ ಪರಮ ಪೂಜ್ಯ ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶ್ರೀಗಳಿಗೆ ಜನ್ಮದಿನದ ಶುಭಾಶಯಗಳು.
ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಮಾನ್ಯ ಶ್ರೀ ಸಿದ್ದರಾಮಯ್ಯ ನವರಿಗೆ ಹಾಗೂ ರಾಜ್ಯದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಕೆಪಿಸಿಸಿ ಅಧ್ಯಕ್ಷ ಶ್ರೀ ಡಿ.ಕೆ ಶಿವಕುಮಾರ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಶ್ರೀಮತಿ ಲಕ್ಷ್ಮಿ ಅರುಣಾ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು..
#galikalshmiaruna#marriageanniversary
ಕಲ್ಯಾಣ ಕರ್ನಾಟಕದ ಕನಸನ್ನು ಹೊತ್ತು ರಾಜ್ಯದ ಏಳಿಗೆಗಾಗಿ ಶ್ರಮಿಸಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಗೆಲ್ಲಿಸಲು ಕೇವಲ ಐದು ತಿಂಗಳಿನಲ್ಲಿ ನಿಷ್ಠೆಯಿಂದ ಹಗಲಿರುಳು ಶ್ರಮಿಸಿದ ಪಕ್ಷದ ಎಲ್ಲಾ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು, ಪದಾಧಿಕಾರಿಗಳಿಗೆ ಹೃದಯಪೂರ್ವಕ ವಂದನೆಗಳು ಮತ್ತು ಅಭಿನಂದನೆಗಳು.
ಇಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ಗಂಗಾವತಿ ನಗರದ ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಕಾರ್ಯಾಲಯ ಗಂಜ್ ಮತಗಟ್ಟೆಗೆ ತೆರಳಿ ಜಿ.ಜನಾರ್ಧನ ರೆಡ್ಡಿ ಯವರು ಪ್ರಜಾಪ್ರಭುತ್ವ ದೊಡ್ಡ ಹಬ್ಬದಲ್ಲಿ ಭಾಗಿಯಾಗಿ ಹಕ್ಕುನ್ನು ಚಲಾಯಿಸಿದರು.
#ಕಲ್ಯಾಣರಾಜ್ಯಪ್ರಗತಿಪಕ್ಷ#kalyanarajyapragathiaksha
" ಪ್ರಜಾಪ್ರಭುತ್ವದಲ್ಲಿ ಮತದಾನ ಸರ್ವಶ್ರೇಷ್ಠ ಜವಾಬ್ದಾರಿ ಅದನ್ನು ಸಮರ್ಪಕವಾಗಿ ನಿರ್ವಹಿಸೋಣ."
ಗಂಗಾವತಿ ಮತಕ್ಷೇತ್ರದ ಕ್ರಮಸಂಖ್ಯೆ 7ರ ಪುಟ್ಬಾಲ್ ⚽ ಗುರುತಿಗೆ ಮತ ನೀಡಿ ಕರ್ನಾಟಕದ ಅಭಿವೃದ್ಧಿಯಲ್ಲಿ ಪಾಲುದಾರರಾಗೋಣ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಮನೋಹರ ಗೌಡ ಹೇರೂರು ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ನರಸಪ್ಪ ಅಮರಜ್ಯೋತಿ ಅವರ ನೇತೃತ್ವದಲ್ಲಿ ಇಂದು ಗಂಗಾವತಿ ನಗರದಲ್ಲಿ ಬೃಹತ್ ಪಾದಯಾತ್ರೆ ಮಾಡಲಾಯಿತು. ಗಂಗಾವತಿ ಅಭ್ಯರ್ಥಿ ಗಾಲಿ ಜನಾರ್ದನ ರೆಡ್ಡಿ ಅವರ ಪರ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.
ಬಳ್ಳಾರಿ ನಗರದ ಹವಂಬಾವಿಯ ಅರುಣೋದಯ ಆಸ್ಪತ್ರೆಯ ಪಕ್ಕದ ಮೈದಾನದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬೃಹತ್ ಸಮಾವೇಶ ನಡೆಯಿತು.
ಈ ವೇಳೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ದ ಬಳ್ಳಾರಿ ನಗರದ ಅಭ್ಯರ್ಥಿ ಲಕ್ಷ್ಮಿ ಅರುಣಾ ಅವರು ಸೆರಗೊಡ್ಡಿ ಮತಯಾಚನೆ ಮಾಡಿದರು.
ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಈ ಐತಿಹಾಸಿಕ ಸಮಾವೇಶಕ್ಕೆ ಸಾಕ್ಷಿಯಾದರು..