ಚನ್ನರಾಯಪಟ್ಟಣ ದ ಅಭಿವೃದ್ಧಿ ಯ ಹರಿಕಾರ ಮಾಜಿ ಸಚಿವರಾದ ನನ್ನ ನೆಚ್ಚಿನ ತಾತ ದಿವಂಗತ ಶ್ರೀ ಹೆಚ್ ಸಿ ಶ್ರೀಕಂಠಯ್ಯ ನವರಿಗೆ 97 ನೇ ವರ್ಷದ ಜನ್ಮದಿನದ ಶುಭಾಶಯಗಳು
- ಹೆಚ್ ಸಿ ಲಲಿತ್ ರಾಘವ್ (ದೀಪು)
'ಪವನ ತನಯ ಸಂಕಟಹರಣ
ಮಂಗಳಮೂರುತಿ ರೂಪ
ರಾಮ ಸೌಮಿತ್ರಿ ಸೀತಾ ಸಹಿತ
ನೆಲೆಸು ಹೃದಯದಿ ಸುರಭೂಪ'
ನಾಡಿನ ಸಮಸ್ತ ಜನತೆಗೆ ಶಕ್ತಿ, ಧೈರ್ಯ ಮತ್ತು ಸಂಯಮದ ಸಂಕೇತವಾದ ಭಗವಾನ್ ಹನುಮ ಜಯಂತಿಯ ಶುಭಾಶಯಗಳು
ನಾಡಿನ ಗುರುಪರಂಪರೆಯ ಶ್ರೇಷ್ಠ ಸಂತ, ಶತಾಯುಷಿ ಡಾ. ಶಿವಕುಮಾರ ಸ್ವಾಮೀಜಿಯವರು ಜಾತಿ-ಮತದ ತಾರತಮ್ಯವಿಲ್ಲದೇ ಶಿಕ್ಷಣಕ್ರಾಂತಿಗೈದ ಮಹಾತ್ಮರು. ಅವರ ಜಯಂತಿಯಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ ಸೀತಾಯಃ ಪತಯೇ ನಮಃ||
ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು
ಈ ಪವಿತ್ರ ದಿನದಂದು ಜನರ ಎಲ್ಲಾ ಸಂಕಷ್ಟಗಳು ನಿವಾರಣೆಯಾಗಲೆಂದು ಪ್ರಾರ್ಥಿಸುತ್ತೇನೆ.
ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪರಮ ಪೂಜ್ಯ ಜಗದ್ಗುರುಗಳಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ನಮ್ಮನ್ನೆಲ್ಲ ಅಗಲಿದ್ದು ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸುತ್ತೇನೆ.
ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಭಕ್ತಸಮೂಹಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಇಂದು ಹಿರೀಸಾವೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಹಾಸನ ಜಿಲ್ಲಾಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ B.C ಕಿರಣ್ ಅವರಿಗೆ ಶುಭ ಕೋರಿದೆ.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ದೇವರಾಜ್ & ಗುಂಡ ಅವರು ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ನಂಬಿ ಪಕ್ಷ ಸೇರ್ಪಡೆಗೊಂಡರು ಅವರಿಗೆ ನನ್ನ ಅಭಿನಂದನೆಗಳು
ಕತ್ತಲಾವರಿಸಿದ ಯುವ ಸಮುದಾಯದ ಬದುಕಿಗೆ ಬೆಳಕೊಂದನ್ನು ತರುತ್ತಿದೆ ನಮ್ಮ ಕಾಂಗ್ರೆಸ್ ಗ್ಯಾರಂಟಿ ನಂ 4
ಪ್ರತಿ ತಿಂಗಳು ಎರಡು ವರ್ಷದವರೆಗೆ ನಿರುದ್ಯೋಗ ಪದವೀಧರರಿಗೆ 3000 ಹಾಗೂ ಡಿಪ್ಲೋಮೊ ಪದವೀಧರರಿಗೆ 1500 ರೂಪಾಯಿ ನೀಡುವ #YuvaNidhi ಯೋಜನೆಯನ್ನ ಘೋಷಣೆ.
ಯುವಶಕ್ತಿ ಎಂದರೆ ದೇಶದ ಶಕ್ತಿ
#YuvaNidhi
ಕಾಂಗ್ರೆಸ್ ಪಕ್ಷದ ಮಾಜಿ ಸಂಸದರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಧ್ರುವನಾರಾಯಣ್ ಅವರು ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿದು ಅಪಾರ ದುಃಖವಾಯಿತು.
ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಕುಟುಂಬವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಮಹಿಳೆ ಎಂದರೆ ಭವಿಷ್ಯ, ಮಹಿಳೆ ಬದುಕಿಗೆ ಬಲ.ನಮ್ಮ ಬದುಕನ್ನು ರೂಪಿಸಿದ, ಜೀವನಕ್ಕೆ ಶಕ್ತಿ ತುಂಬಿದ ಎಲ್ಲಾ ಮಹಿಳೆಯರನ್ನು ಗೌರವಿಸೋಣ. ಅವರ ಮಮತೆ, ತ್ಯಾಗ, ಶ್ರಮಕ್ಕೆ ಧನ್ಯವಾದ ಹೇಳೋಣ.
ಎಲ್ಲಾ ಮಹಿಳೆಯರಿಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು
#WomensDay2023