ಬಸವ ಜಯಂತಿಯ ವಿಶೇಷ ಸಂದರ್ಭದಲ್ಲಿ, ಜಗದ್ಗುರು ಬಸವೇಶ್ವರರಿಗೆ ಮತ್ತು ಅವರ ಶಾಶ್ವತ ಬೋಧನೆಗಳಿಗೆ ಭಕ್ತಿಪೂರ್ವಕ ನಮನಗಳು. ನ್ಯಾಯಸಮ್ಮತ ಸಮಾಜದ ಅವರ ದೂರದೃಷ್ಟಿ ಮತ್ತು ಜನರನ್ನು ಸಬಲೀಕರಣಗೊಳಿಸಲು ಅವರು ಮಾಡಿದ ಅಚಲ ಪ್ರಯತ್ನಗಳು ನಮಗೆ ಸದಾ ಪ್ರೇರಣೆಯಾಗಿರುತ್ತವೆ.
ಬಸವ ಜಯಂತಿಯನ್ನು ನಾಡಿನಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬಸವಣ್ಣನವರು ವೈಶಾಖ ಮಾಸದ ತೃತೀಯ (ಅಕ್ಷಯ) ದಿನದಂದು ಜನಿಸಿದ ಕಾರಣ, ಪ್ರತಿ ವರ್ಷ ಅಕ್ಷಯ ತೃತೀಯ ದಿನದಂದೇ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಬಸವಣ್ಣನವರ "ಇವನಾರವ ಇವನಾರವ ಎನ್ನದೆ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ" ಎಂಬ ಸಮಾನತೆಯ ಸಂದೇಶವೇ ಈ ಹಬ್ಬದ ಮೂಲ ಆಶಯ.
ಅಕ್ಕಮಹಾದೇವಿ (ಗಿರಿ ತಟದಲಿ ಮನೆಯ ಮಾಡಿ)
"ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗೆ ಅಂಜಿದಡೆ ಎಂತಯ್ಯ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆ ತೆರೆಗಳಿಗೆ ಅಂಜಿದಡೆ ಎಂತಯ್ಯ?"
(ಸಂಸಾರದಲ್ಲಿದ್ದ ಮೇಲೆ ಕಷ್ಟಗಳಿಗೆ ಹೆದರಬಾರದು ಎಂಬುದು ಅಕ್ಕಮಹಾದೇವಿಯವರ ನಿಲುವು.)
ಓಂ ನಮಃ ಶಿವಾಯ ಜಗದ್ಗುರು ಆದಿಶಂಕರಾಯ ನಮಃ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಓಂ ಶ್ರೀ ಬಸವೇಶ್ವರ ಮಹಾರಾಜ್ ಕೀ ಜಯ್ ಓಂ ಶ್ರೀ ಗುರುಬಸವ ಲಿಂಗಾಯ ನಮಃ ಸಮಸ್ತ ನಾಡಿನ ಜನತೆಗೆ ಶುಭ ಶುಕ್ರವಾರ