Today, visited the automated parking system in Delhi along with Hon’ble Deputy Chief Minister Sri @DKShivakumar, and discussed plans to implement a similar solution in Bengaluru to enhance urban mobility, reduce traffic congestion, and strengthen parking infrastructure.
ಶಾಂತಿನಗರದ ದೊಮ್ಮಲೂರಿನಲ್ಲಿ ಬೆಂಗಳೂರಿನ ಇಂದಿರಾನಗರದ ರೋಟರಿ ವತಿಯಿಂದ ನಿರ್ಮಿಸಲಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದೆ. ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ. ಎಚ್. ಮುನಿಯಪ್ಪ ಅವರು ಇಂದು ನನ್ನನ್ನು ಬಿಡಿಎ ಕಚೇರಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು. ಈ ವೇಳೆ ಬಿಡಿಎ ಆಯುಕ್ತರಾದ ಪಿ ಮಣಿವಣ್ಣನ್ ಉಪಸ್ಥಿತರಿದ್ದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ವಾಸ್ತುಶಿಲ್ಪಿ ಶ್ರೀ ವಿ.ಆರ್. ಸುಜಯ್ ಹಾಗೂ ಶ್ರೀಮತಿ ಮಂಜುಳಾ ನಾಯ್ಡು ಅವರು ಇಂದು ಬಿಡಿಎ ಕಚೇರಿಗೆ ಬಂದು ನನ್ನನ್ನು ಭೇಟಿಯಾದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಐಪಿಎಲ್ 2025 ವಿಜಯೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಭೀಕರ ಕಾಲ್ತುಳಿತದ ದುರ್ಘಟನೆ ಅತ್ಯಂತ ಹೃದಯವಿದ್ರಾವಕವಾಗಿದೆ. ಈ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಅತ್ಯಂತ ನೋವಿನ ಸಂತಾಪಗಳು. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ.
ಯಾವುದೇ ಸಂಭ್ರಮವೂ ಜೀವಕ್ಕಿಂತ ಮಿಗಿಲಾದದ್ದಲ್ಲ. ಕರ್ನಾಟಕ ಸರ್ಕಾರವು ಸಂತ್ರಸ್ತ ಕುಟುಂಬಗಳಿಗೆ 10 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದು, ಗಾಯಾಳುಗಳ ಚಿಕಿತ್ಸೆಗೆ ಉಚಿತ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ಮೂಲಕ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ.
ಈ ದುಃಖದ ಸಂದರ್ಭದಲ್ಲಿ, ಸಂತ್ರಸ್ತ ಕುಟುಂಬಗಳ ಜೊತೆಗೆ ನಾವೆಲ್ಲರೂ ಒಗ್ಗಟ್ಟಿನಿಂದ ನಿಲ್ಲೋಣ ಮತ್ತು ಭವಿಷ್ಯದಲ್ಲಿ ಇಂತಹ ದುರ್ಘಟನೆಗಳನ್ನು ತಡೆಗಟ್ಟಲು ಎಲ್ಲ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸೋಣ.
Electrifying atmosphere at the #TCSWorld10KBengaluru. Congratulations to the 35,000+ participants for embodying the spirit of Bengaluru. Honored to have many dignitaries in attendance, adding to the excitement and prestige of this fabulous event. A huge congratulations to all participants, organisers and supporters for making this event unforgettable.
ಕರ್ನಾಟಕ ಚಿತ್ರರಂಗದ ಅನರ್ಘ್ಯ ರತ್ನ ಡಾ. ರಾಜಕುಮಾರ್ ಅವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಚಿತ್ರರಂಗದ ಕಲಾವಿದರು, ಸದಸ್ಯರು ಮತ್ತು ಅವರ ಕುಟುಂಬದವರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದರು. ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ @DKShivakumar ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಚಲನಚಿತ್ರ ಮಂಡಳಿಯ ಅಧ್ಯಕ್ಷರಾದ ಎಂ. ನರಸಿಂಹಲು, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ, ಶಾಸಕರಾದ @ArshadRizwan ಹಾಗೂ ಚಿತ್ರರಂಗದ ಪ್ರಮುಖ ಸದಸ್ಯರು ಭಾಗವಹಿಸಿದ್ದರು.
ಜೋಗುಪಾಳ್ಯದಲ್ಲಿ ನಡೆದ ಆರ್ಜಿ ಯುನೈಟೆಡ್ನ ಸೀಸನ್ 11 ಮಾಸ್ಟರ್ ಕಪ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಭಾಗವಹಿಸಿ ವಿಜೇತ ತಂಡಕ್ಕೆ ಹಾಗೂ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದೆ.
ಶಾಂತಿನಗರ ವಿಧಾನಸಭಾ ಕ್ಷೇತ್ರದ ಪ್ರೈಮ್ ರೋಸ್ ರಸ್ತೆಯ ಬಾಲಕರ ವಿದ್ಯಾರ್ಥಿ ನಿಲಯದ ವತಿಯಿಂದ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಭಾಗವಹಿಸಿ ಬಾಬಾ ಸಾಹೇಬರ ತತ್ವ, ಆದರ್ಶಗಳು ನಮ್ಮ ಬದುಕಿಗೆ ಹೇಗೆ ದಾರಿದೀಪವಾಗಬೇಕೆಂಬುದರ ಕುರಿತು ಮಾತನಾಡಿದೆ. ಹಿರಿಯ ನ್ಯಾಯವಾದಿ, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ, ಉನ್ನತ ಶಿಕ್ಷಣ ಸಚಿವರಾದ ಎಂ ಸಿ ಸುಧಾಕರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಜಾತಿರಹಿತ, ವರ್ಗರಹಿತ, ವರ್ಣರಹಿತ ಸಮಾಜದ ನಿರ್ಮಾತೃ, ಜಗತ್ತಿನ ಪ್ರಥಮ ಸಂಸತ್ತು ʼಅನುಭವ ಮಂಟಪʼದ ಹರಿಕಾರರು, ವಚನಗಳ ಮೂಲಕ ನಮ್ಮೊಳಗಿನ ಜ್ಞಾನದ ದೀವಿಗೆ ಬೆಳಗಿದ
“ಜಗಜ್ಯೋತಿ ಬಸವ ಜಯಂತಿ'ಯ
ಹಾರ್ದಿಕ ಶುಭಾಶಯಗಳು.
Warm wishes to all on the auspicious occasion of Basava Jayanti.
May the teachings of Bhagwan Basavanna guide us towards the path of harmony, equality, and justice.
#BasavaJayanti #Jagajyotibasavanna
ಕಲಾಕ್ಷೇತ್ರದ ಸಾಧನೆಗೆ ವಯೊಲಿನ್ ವಾದಕರಾದ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂ, ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಎ.ಸೂರ್ಯಪ್ರಕಾಶ್ ಅವರು ಮತ್ತು ಕನ್ನಡ ಚಿತ್ರರಂಗದ ಹಿರಿಯ ನಟ ಅನಂತನಾಗ್ ಅವರು ‘ಪದ್ಮಭೂಷಣ’ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಹಾಗೆಯೇ ಕಲಾ ಕ್ಷೇತ್ರದ ಸಾಧನೆಗಾಗಿ ಬಾಗಲಕೋಟೆಯ ಭೀಮಮ್ಮ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ, ಹಾಸನ್ ರಘು, ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ಸಾಧನೆಗಾಗಿ ಪ್ರಶಾಂತ್ ಪ್ರಕಾಶ್, ಕಲಾ ಕ್ಷೇತ್ರದ ಸಾಧನೆಗಾಗಿ ರಿಕಿ ಗ್ಯಾನ್ ಕೇಜ್, ಜಾನಪದ ಗಾಯಕ ವೆಂಕಪ್ಪ ಅಂಭಾಜಿ ಸುಗತೇಕರ, ಕ್ಯಾನ್ಸರ್ ರೋಗ ಚಿಕಿತ್ಸಾ ತಜ್ಞೆ ವಿಜಯಲಕ್ಷ್ಮಿ ದೇಶಮಾನೆ ಅವರು ‘ಪದ್ಮಶ್ರಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದೇಶದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾದ, ರಾಷ್ಟ್ರಪತಿಗಳಿಂದ ಗೌರವ ಸ್ವೀಕರಿಸಿದ ನಮ್ಮ ಕನ್ನಡದ ಹೆಮ್ಮೆಯ ಸಾಧಕರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ.
#PadmashriAward #PadmaBhushanAward #Karnataka
Attended the WPC Karnataka State Powerlifting Championship at Relentless Strength Gym, Domlur. Impressive display of strength and determination by the athletes! Congratulations to all participants and winners.
ನನ್ನ ಸ್ನೇಹಿತರಾದ ಎ.ಎಂ.ಆರ್. ರಮೇಶ್ ಬರೆದು ನಿರ್ದೇಶಿಸಿದ ಇಸವಿ 2006ರಲ್ಲಿ ಬಿಡುಗಡೆಯಾಗಿದ್ಧ “ಸೈನೈಡ್” ಚಿತ್ರದ ಮರುಬಿಡುಗಡೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ಕಥಾಹಂದರ ಇರುವ ಈ ರೋಚಕ ಚಿತ್ರ ಮತ್ತೊಮ್ಮೆ ಯಶಸ್ವಿಯಾಗಲಿ; ಚಿತ್ರದ ಸಂದೇಶ ಇವತ್ತಿನ ಪೀಳಿಗೆಯನ್ನು ತಲುಪಲಿ ಎಂದು ಹಾರೈಸುತ್ತೇನೆ.
Just attended the rerelease of "Cyanide" (2006), written and directed by My friend A.M.R. Ramesh! This intense Kannada film dramatizes the assassination of former PM Rajiv Gandhi, with possible context drawn from Indira Gandhi's story. Powerful performances and gripping storyline.
#Cyanide #AMRRamesh #indiancinema
Gowthampura Darshana Matha's chapel celebrated a historic milestone with the inauguration of its new flagpole during the 200th annual feast. Rev. Fr. Maria Louis graced the ceremony, which was sponsored by Sarala Mohan, Ex-Corporator.
#200YearsOfDevotion#TempleTraditions
ನಲಪಾಡ್ ಅಕಾಡೆಮಿ ಇಂಟರ್ನ್ಯಾಷನಲ್ ಶಾಲಾ ತಂಡದೊಂದಿಗೆ ಅಮೆಜಾನ್ ಫ್ಯೂಚರ್ ಎಂಜಿನಿಯರ್ ಮೇಕರ್ಸ್ಪೇಸ್ ಲ್ಯಾಬ್ಗೆ ಭೇಟಿ ನೀಡಿದೆ.
Visited Amazon future engineer makerspace lab along with Nalapad Academy International school team.
ಪಹಲ್ಘಾಮ್ ದಾಳಿಗೆ ಉತ್ತರವಾಗಿ ಭಾರತದ ರಕ್ಷಣಾ ಪಡೆಗಳು ಕೈಗೊಂಡ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಗೆ ಬೆಂಬಲವಾಗಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಬೆಂಗಳೂರಿನ ಕೆ.ಆರ್. ವೃತ್ತದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ನಡೆದ “ತಿರಂಗಾ ಯಾತ್ರೆ”ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಭಾಗವಹಿಸಿದೆ.
ಕಾಂಗ್ರೆಸ್ ನಾಯಕರು, ಸಾಹಿತಿಗಳು, ಚಿತ್ರರಂಗದ ಗಣ್ಯರು, ಪ್ರಗತಿಪರ ಹೋರಾಟಗಾರರು ಸೇರಿದಂತೆ ಸಾವಿರಾರು ಜನರು ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ನಡೆಸಿದರು. ಈ ತಿರಂಗಾ ಯಾತ್ರೆ ಭಯೋತ್ಪಾದನೆ ವಿರುದ್ಧ ಭಾರತದ ದೃಢ ನಿಲುವನ್ನು ಪ್ರೋತ್ಸಾಹಿಸಿದ್ದು; ಭಯೋತ್ಪಾದನೆಯ ಬುಡಸಮೇತ ನಿರ್ನಾಮಕ್ಕೆ ಕೈ ಜೋಡಿಸಿದೆ.
#PahalgamAttack #OperationSindoor