ಇಂದು ಬೆಂಗಳೂರಿನ ಕಚೇರಿಯಲ್ಲಿ *ಸಾರಿಗೆ ಹಾಗೂ ಮುಜರಾಯಿ ಇಲಾಖಾ ಸಚಿವರಾದ ಸನ್ಮಾನ್ಯ ಶ್ರೀ.ರಾಮಲಿಂಗಾರೆಡ್ಡಿ* ರವರನ್ನು *ಶ್ರೀ.ಬಾಗೂರು ಮಂಜೇಗೌಡರು* , ಕಾಂಗ್ರೆಸ್ ಮುಖಂಡರು, ಹಾಸನ ಕ್ಷೇತ್ರ, ರವರು ಭೇಟಿ ಮಾಡಿ ಶುಭ ಕೋರಿದರು.🌹
ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಸಂವಿಧಾನ ಶಿಲ್ಪಿ, ಭಾರತರತ್ನ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯಂದು ಗೌರವ ನಮನಗಳು. ಅನ್ಯಾಯ, ಅಸಮಾನತೆ ಹಾಗೂ ಶೋಷಣೆ ವಿರುದ್ಧ ದನಿ ಎತ್ತಿ ಸಮಸಮಾಜ ನಿರ್ಮಾಣಕ್ಕೆ ಅವರ ಪ್ರಯತ್ನಗಳು ಸ್ಪೂರ್ತಿದಾಯಕ. ಅವರನ್ನು ಈ ದಿನ ಗೌರವದಿಂದ ನೆನೆಯೋಣ.
#AmbedkarJayanti2023
ಕನ್ನಡ ನಾಡಿನ ಹೆಮ್ಮೆಯ ವರನಟ, ನಟಸಾರ್ವಭೌಮ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಪದ್ಮಭೂಷಣ ಡಾ.ರಾಜ್ಕುಮಾರ್ ಅವರ ಪುಣ್ಯ ಸ್ಮರಣೆಯಂದು ಅವರಿಗೆ ಗೌರವ ಪೂರ್ವಕ ನಮನಗಳು. ಸರಳ ವ್ಯಕ್ತಿತ್ವ, ಸಜ್ಜನಿಕೆಯ ಪ್ರೀತಿಯ ಅಣ್ಣಾವ್ರು ಕಲಾ ರಸಿಕರ ಮನದಲ್ಲಿ ಅಮರರಾಗಿದ್ದಾರೆ.
#DrRajkumar
ಕನ್ನಡ ನಾಡಿನ ಹೆಮ್ಮೆಯ ಬ್ರಾಂಡ್
ನಂದಿನಿಯನ್ನು ಗುಜರಾತ್ ನ ಅಮೂಲ್ ನೊಂದಿಗೆ ವಿಲೀನಗೊಳಿಸುವ ಬಿಜೆಪಿ ಸರ್ಕಾರದ ಪ್ರಯತ್ನವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಹಾಸನದಲ್ಲಿ ನಂದಿನಿ ಉತ್ಪನ್ನಗಳನ್ನು ಖರೀದಿಸಿ ಸ್ವಾಭಿಮಾನ ಪ್ರದರ್ಶಿಸಲಾಯಿತು. ಸ್ವಾಭಿಮಾನಿ ಕನ್ನಡಿಗರು ಬಿಜೆಪಿಯ ಇಂತಹ ಕೆಟ್ಟ ಯೋಜನೆಗಳನ್ನು ಎಂದಿಗೂ ಸಹಿಸುವುದಿಲ್ಲ.
ಹಾಸನದ ನಂದಿನಿ ಮಳಿಗೆಗೆ ಇಂದು ಭೇಟಿ ನೀಡಿ ಹಾಲಿನ ಉತ್ಪನ್ನಗಳನ್ನು ಖರೀದಿಸಿದೆ. ನಮ್ಮ ರೈತರ ಹಾಗೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ನಂದಿನಿ ಬ್ರಾಂಡ್ಅನ್ನು ಹೈಜಾಕ್ ಮಾಡಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ಆದರೆ ಬಿಜೆಪಿ ಸರ್ಕಾರಕ್ಕೆ ಇದು ನೆನಪಿರಲಿ ಕನ್ನಡಿಗರು ಎಂದಿಗೂ ತಮ್ಮ ಸ್ವಾಭಿಮಾನ ಮಾರಿಕೊಳ್ಳುವುದಿಲ್ಲ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ
◆ರಾಜ್ಯದ ರೈತರಿಗೆ ಹೈನುಗಾರಿಕೆ ಪ್ರೋತ್ಸಾಹದ ಯೋಜನೆಗಳನ್ನು ರೂಪಿಸುತ್ತದೆ.
◆KMF ಸಂಸ್ಥೆಯ ಉನ್ನತಿಕರಣಕ್ಕೆ ಆದ್ಯತೆ.
◆"ನಂದಿನಿ" ಬ್ರಾಂಡ್ನ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ಕ್ರಮ.
◆ಮುಖ್ಯವಾಗಿ ನಂದಿನಿಯನ್ನು ಗುಜರಾತಿನ ಹಿತಾಸಕ್ತಿಗೆ ಬಲಿ ಕೊಡುವುದನ್ನು ಶತಾಯಗತಾಯ ತಡೆಯುತ್ತೇವೆ.
ಹಾಸನದ ನಂದಿನಿ ಮಳಿಗೆಗೆ ಇಂದು ಭೇಟಿ ನೀಡಿ ಹಾಲಿನ ಉತ್ಪನ್ನಗಳನ್ನು ಖರೀದಿಸಿದೆ. ನಮ್ಮ ರೈತರ ಹಾಗೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ನಂದಿನಿ ಬ್ರಾಂಡ್ಅನ್ನು ಹೈಜಾಕ್ ಮಾಡಲು ಬಿಜೆಪಿ ಸರ್ಕಾರ ಯತ್ನಿಸುತ್ತಿದೆ. ಆದರೆ ಬಿಜೆಪಿ ಸರ್ಕಾರಕ್ಕೆ ಇದು ನೆನಪಿರಲಿ ಕನ್ನಡಿಗರು ಎಂದಿಗೂ ತಮ್ಮ ಸ್ವಾಭಿಮಾನ ಮಾರಿಕೊಳ್ಳುವುದಿಲ್ಲ.
ಹಾಸನ ನಗರದ ಹೇಮಾವತಿ ಪ್ರತಿಮೆಯ ನಂದಿನಿ ಡೈರಿ ಬಳಿ ಇಂದು ಗುಜರಾತಿನ ಅಮೂಲ್ ಜೊತೆ ನಂದಿನಿ ವಿಲೀನ ವಿರೋಧಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾನ್ಯ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಶ್ರೀ.ಡಿ.ಕೆಶಿವಕುಮಾರ್ ಅವರೊಂದಿಗೆ ಹಾಸನ ಕಾಂಗ್ರೆಸ್ ಮುಖಂಡರಾದ ಶ್ರೀ.ಬಾಗೂರು ಮಂಜೇಗೌಡರು ಭಾಗವಹಿಸಿದ್ದರು.
#ನಂದಿನಿಉಳಿಸಿ@INCKarnataka@DKShivakumar
1965 ರ ಈ ದಿನ, ಪಾಕ್ ಮತ್ತು ಭಾರತೀಯ CRPF ಸೇನೆಯ ಸಣ್ಣ ತುಕಡಿಯ ನಡುವೆ ನಡೆದ ಭೀಕರ ಹೋರಾಟದಲ್ಲಿ, ಪಾಕಿಸ್ತಾನಿ ಸೈನಿಕರನ್ನು ಬಗ್ಗು ಬಡಿದು ಜಯ ಸಾಧಿಸಿದ ನಮ್ಮ ಸಿಬ್ಬಂದಿಗೆ ಸಹಸ್ರ ಪ್ರಣಾಮಗಳು. ಅವರ ಶೌರ್ಯ, ಸಾಹಸ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿ.
#CRPFValourDay
ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ ವೀರ ಸೇನಾನಿ, ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ, ಶ್ರೀ ಮಂಗಲ್ ಪಾಂಡೆ ಅವರ ಪುಣ್ಯತಿಥಿಯಂದು ಶ್ರದ್ಧೆಯ ನಮನಗಳು. ಅವರ ಶೌರ್ಯ, ಸಾಹಸ ಮತ್ತು ದೇಶ ಪ್ರೇಮ ಇಂದಿನ ಯುವ ಪೀಳಿಗೆಗೆ ಪ್ರೇರಣೆ.
#MangalPandey
ಆತ್ಮೀಯ ಗೆಳೆಯ, ಸಹೋದರ ಶ್ರೀ ಧ್ರುವನಾರಾಯಣ ಅವರು ಅಗಲಿಕೆಯ ನೋವು ಇನ್ನೂ ಮಾಸಿಲ್ಲ, ಅಷ್ಟರಲ್ಲೇ ಅವರ ಧರ್ಮಪತ್ನಿ ಶ್ರೀಮತಿ ವೀಣಾ ಅವರು ನಿಧನರಾಗಿರುವುದು ಅತೀವ ನೋವು ತಂದಿದೆ. ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ. ದುಃಖತಪ್ತ ಕುಟುಂಬಕ್ಕೆ ನೋವು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.
ಕರುನಾಡಿನ ಜನತೆಗೆ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು. ಶ್ರೀ ಆಂಜನೇಯನು ತನ್ನ ಪರಾಕ್ರಮ ಮತ್ತು ಬುದ್ಧಿ ಶಕ್ತಿಯನ್ನು ಎಲ್ಲರಿಗೂ ದಯಪಾಲಿಸಲಿ. ಜನರ ಜೀವನದಲ್ಲಿ ಎದುರಾಗುವ ಅಡಚಣೆಗಳನ್ನು ನಿವಾರಿಸಿ ಸಂತೋಷ, ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#HanumanJayanti
ರಾಷ್ಟ್ರೀಯ ಕಡಲ ದಿನದ ಶುಭಾಶಯಗಳು.
ಭಾರತದ ಆರ್ಥಿಕತೆಯ ಏರುಗತಿಯ ಪ್ರಗತಿಗೆ ಕಡಲ ಉದ್ಯಮಗಳು ನೀಡುತ್ತಿರುವ ಕೊಡುಗೆ ಗಣನೀಯವಾದುದು. ಈ ವಲಯದಲ್ಲಿ ಹಗಲಿರುಳು ದುಡಿಯುವ ಸಿಬ್ಬಂದಿಯ ಶ್ರಮವನ್ನು ಗೌರವದಿಂದ ಸ್ಮರಿಸೋಣ.
#NationalMaritimeDay
ಸಮಾಜ ಸುಧಾರಕ, ದೀನ ದಲಿತರ, ಹಿಂದುಳಿದ ವರ್ಗಗಳ ಆಶಾಕಿರಣ, ಮಾಜಿ ಉಪ ಪ್ರಧಾನಿ ಶ್ರೀ ಡಾ.ಬಾಬು ಜಗಜೀವನರಾಮ್ ಅವರ ಜಯಂತಿಯಂದು ಗೌರವಪೂರ್ವಕ ಪ್ರಣಾಮಗಳು. ಅವರು ಬಡವರ ಹಾಗೂ ರೈತರ ಧ್ವನಿಯಾಗಿ ಹೋರಾಡಿದ್ದಾರೆ. ಅವರ ಆದರ್ಶ, ಚಿಂತನೆಗಳು ಸರ್ವ ಕಾಲಕ್ಕೂ ಮಾದರಿ.
#BabuJagajeevanRam
ಹಾಸನ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕಟ್ಟಾಯ ಹೋಬಳಿಯಲ್ಲಿ ಆಯೋಜಿಸಿದ್ದ, ಕಾರ್ಯಕರ್ತರ ಸಮಾವೇಶದಲ್ಲಿ ಮುಖಂಡರಾದ ಶ್ರೀ ಬಾಗೂರು ಮಂಜೇಗೌಡರು ಪಾಲ್ಗೊಂಡರು. ಪೂಜ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿಯವರ ಜಯಂತಿ ಪ್ರಯುಕ್ತ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
@INCKarnataka
ಹಾಸನ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ದಂಡಿಗನಹಳ್ಳಿ ಹಾಗೂ ದುದ್ದ ಹೋಬಳಿಯ ಕಾರ್ಯಕರ್ತರ ಸಮಾವೇಶದಲ್ಲಿ ಮಾನ್ಯ ಸಂಸದರಾದ ಶ್ರೀ @DKSureshINC ಅವರೊಂದಿಗೆ ಮುಖಂಡರಾದ ಶ್ರೀ ಬಾಗೂರು ಮಂಜೇಗೌಡರು ಪಾಲ್ಗೊಂಡರು.
ಈ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
@INCKarnataka
ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ (ಮೈಸೂರು) ಅಧ್ಯಕ್ಷರಾದ ಶ್ರೀ ವಿ.ಜಿ.ಅಶೋಕ್ ಅವರ ಮೊಮ್ಮಗಳು ನಿಶ್ವಿಕಾಳ ಮೊದಲ ವರ್ಷದ ಹುಟ್ಟುಹಬ್ಬವು ಹಾಸನದ ವಿದ್ಯಾನಗರದ ನಿಸರ್ಗ ಕನ್ವೆನ್ಷನ್ ಹಾಲ್ನಲ್ಲಿ ನಡೆಯಿತು. ಜನಪ್ರಿಯ ಕಾಂಗ್ರೆಸ್ ಮುಖಂಡರಾದ ಶ್ರೀ ಬಾಗೂರು ಮಂಜೇಗೌಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಾಶಯ ಕೋರಿದರು.
ಹಾಸನ ಕ್ಷೇತ್ರ, ಗುಡ್ಡೇನಹಳ್ಳಿ, ಬೂತ್ 80, 81, 82, 83, 84 ರಲ್ಲಿ ಕಾಂಗ್ರೆಸ್ ಯೋಜನೆಗಳಾದ ಗೃಹಲಕ್ಷ್ಮಿ, ಉಚಿತ ವಿದ್ಯುತ್, ಅನ್ನಭಾಗ್ಯ, ಯುವ ನಿಧಿ ಕುರಿತು, ಜನ ಮೆಚ್ಚಿದ ನಾಯಕರಾದ ಶ್ರೀ ಬಾಗೂರು ಮಂಜೇಗೌಡರು ಜಾಗೃತಿ ಮೂಡಿಸಿದರು.
@RahulGandhi@kharge@siddaramaiah@DKShivakumar@INCKarnataka