Today, the Hon'ble Commissioner of Police, Bengaluru City, Shri Seemanth Kumar Singh, IPS, and the Additional Commissioner of Police, East Zone, Shri Ramesh Banoth, IPS, held a meeting with all ACPs and PI's of the Whitefield Division.
During the meeting, detailed discussions were held on maintaining law and order, prevention of crime, ensuring quality investigation of cases, expeditious disposal of public grievances, and further strengthening a citizen-friendly policing system. Necessary guidelines and instructions were issued in this regard.
ಇಂದು ಬೆಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ಹಾಗೂ ಪೂರ್ವ ವಲಯದ ಅಪರ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಣೋತ್, ಐಪಿಎಸ್ ರವರು ವೈಟ್ಫೀಲ್ಡ್ ವಿಭಾಗದ ಎಲ್ಲಾ ಎಸಿಪಿ ಹಾಗೂ ಪಿಐ ರವರೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ತಡೆಗಟ್ಟುವಿಕೆ, ಪ್ರಕರಣಗಳ ಗುಣಮಟ್ಟದ ತನಿಖೆ, ಸಾರ್ವಜನಿಕರ ದೂರುಗಳ ತ್ವರಿತ ವಿಲೇವಾರಿ ಹಾಗೂ ಸಾರ್ವಜನಿಕ ಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ಸವಿಸ್ತಾರವಾಗಿ ಚರ್ಚಿಸಿ, ಅಗತ್ಯ ಮಾರ್ಗಸೂಚಿ ಹಾಗೂ ಸೂಚನೆಗಳನ್ನು ನೀಡಿದರು.
@BlrCityPolice@CPBlr@AddlCPEast
ಇಂದು ವೈಟ್ಫೀಲ್ಡ್ ವಿಭಾಗದ ವರ್ತೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರ್ತೂರ್ ಪೊಲೀಸ್ ಠಾಣೆ ಹಾಗೂ ವೈಟ್ಫೀಲ್ಡ್ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ಜನ ಸಂಪರ್ಕ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಸೂಕ್ತ ಸಲಹೆಗಳನ್ನು ನೀಡಿ, ಮುಕ್ತ ಸಂವಾದ ನಡೆಸಲಾಯಿತು. ಸಾರ್ವಜನಿಕರ ಅಹವಾಲುಗಳು ಮತ್ತು ಸಮಸ್ಯೆಗಳನ್ನು ಗಮನಪೂರ್ವಕವಾಗಿ ಆಲಿಸಿ, ಸಂಬಂಧಿತ ವಿಷಯಗಳ ಕುರಿತು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
#ಜನಸಂಪರ್ಕಸಭೆ #WhitefieldPoliceStation #ವೈಟ್ಫೀಲ್ಡ್ವಿಭಾಗ #ಸಾರ್ವಜನಿಕಸೇವೆ
#ಬೆಂಗಳೂರುನಗರಪೊಲೀಸ್
Today, a Public Interaction Meeting was successfully organized within the jurisdiction of Varthur Police Station under Whitefield Division by Varthur Police Station and Whitefield Traffic Police Station.
During the meeting, suitable guidance was provided to the public regarding traffic management and law & order, followed by an open interaction session. Citizens’ grievances and concerns were carefully heard, and officers were instructed to take immediate and appropriate action on the related issues.
#PublicInteractionMeeting #WhitefieldPoliceStation #WhitefieldDivision #PublicService #BengaluruCityPolice
@BlrCityPolice@AddlCPEast@CPBlr
ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಬಂಧಿಸಿ, ಪೊಲೀಸರು ಯಶಸ್ವಿಯಾಗಿ ಕೆಳಕಂಡ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
🔹 47 ಗ್ರಾಂ ಚಿನ್ನಾಭರಣ (ಅಂದಾಜು ಮೌಲ್ಯ ₹6,00,000/-)
🔹 196 ಗ್ರಾಂ ಚಿನ್ನಾಭರಣ, 1756 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ₹22,000/- ನಗದು (ಒಟ್ಟು ಅಂದಾಜು ಮೌಲ್ಯ ₹40,00,000/-)
#KRPuramPolice #BengaluruCityPolice #ಕಳ್ಳತನ_ಪ್ರಕರಣ #ಸ್ವತ್ತು_ವಶ #ಪೊಲೀಸ್_ಕಾರ್ಯ #ಸಾರ್ವಜನಿಕ_ಸುರಕ್ಷತೆ
In connection with two theft cases registered at K.R. Puram Police Station, the police have successfully arrested 5 accused persons and recovered the following stolen property:
🔹 47 grams of gold ornaments (approximate value ₹6,00,000/-)
🔹 196 grams of gold ornaments, 1756 grams of silver articles, and cash amounting to ₹22,000/- (total approximate value ₹40,00,000/-)
#KRPuramPolice #BengaluruCityPolice #TheftCase #PropertyRecovery #PoliceWork
@BlrCityPolice@AddlCPEast@CPBlr
🚨 *Special Enforcement Drive Tonight in Whitefield Division* 🚨
To ensure road safety and security, all Police Stations in the Whitefield Division will be conducting intensive vehicle checks today from 6:00 PM to 10:00 PM. Our teams are specifically looking for vehicles with faulty, improper, or masked number plates.
Please ensure your vehicle displays a clear, legal standard plate. Non-compliance will result in immediate cases being registered. Let’s keep our streets safe and accountable!
#RoadSafety #WhitefieldPolice #TrafficRules #LawEnforcement
🚨 *ಇಂದು ವೈಟ್ ಫೀಲ್ಡ್ ವಿಭಾಗದಲ್ಲಿ ವಿಶೇಷ ವಾಹನ ತಪಾಸಣೆ* 🚨
ರಸ್ತೆ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ, ವೈಟ್ ಫೀಲ್ಡ್ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇಂದು ಸಂಜೆ 6:00 ರಿಂದ ರಾತ್ರಿ 10:00 ರವರೆಗೆ ತೀವ್ರತರವಾದ ವಾಹನ ತಪಾಸಣೆಯನ್ನು ನಡೆಸಲಾಗುವುದು. ವಿಶೇಷವಾಗಿ ದೋಷಪೂರಿತ ಅಥವಾ ಅಸ್ಪಷ್ಟ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರು ತಮ್ಮ ವಾಹನಗಳಿಗೆ ಕಾನೂನುಬದ್ಧ ನಂಬರ್ ಪ್ಲೇಟ್ಗಳನ್ನು ಅಳವಡಿಸಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಕೋರುತ್ತೇವೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
#ರಸ್ತೆಸುರಕ್ಷತೆ #ವೈಟ್ ಫೀಲ್ಡ್ ಪೊಲೀಸ್ #ಸಂಚಾರನಿಯಮಗಳು #ಬೆಂಗಳೂರುಪೊಲೀಸ್
Marathahalli ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಾಹನಗಳ ತಪಾಸಣೆ ನಡೆಸಿದರು . ವಿಶೇಷವಾಗಿ ಕಾನೂನುಬದ್ಧ ನಂಬರ್ ಪ್ಲೇಟ್ ಇಲ್ಲದ ವಾಹನಗಳ ಮೇಲೆ ಗಮನಹರಿಸಿ ಕ್ರಮ ಕೈಗೊಳ್ಳಲಾಯಿತು . ಇಂತಹ ತಪಾಸಣೆಗಳು ರಸ್ತೆ ಸುರಕ್ಷತೆ, ಕಾನೂನು ಪಾಲನೆ ಹಾಗೂ ಅಪರಾಧ ನಿಯಂತ್ರಣಕ್ಕೆ ಸಹಾಯಕವಾಗುತ್ತವೆ.
🛡️ HOW TO PROTECT YOURSELF
✅ Never share OTP, PIN, CVV, or bank details with anyone
✅ Do not click on unknown links
✅ Verify before transferring money
✅ Do not install unknown apps (such as screen sharing apps)
✅ Regularly update your mobile and applications
✅ Use strong passwords and enable Two-Step Verification
✅ Do not believe offers that promise “huge profits”
📞 If cyber fraud occurs, immediately call 1930
🌐 File a complaint at https://t.co/dYXzNdDV9R
#CyberSafety #Call1930 #StayAlert
🛡️ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬೇಕು
✅ OTP, PIN, CVV ಅಥವಾ ಬ್ಯಾಂಕ್ ವಿವರಗಳನ್ನು ಯಾರಿಗೂ ಹಂಚಿಕೊಳ್ಳಬೇಡಿ
✅ ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ
✅ ಹಣ ವರ್ಗಾವಣೆ ಮಾಡುವ ಮೊದಲು ಖಚಿತಪಡಿಸಿಕೊಳ್ಳಿ
✅ ಅಪರಿಚಿತ ಆ್ಯಪ್ಗಳನ್ನು (ಸ್ಕ್ರೀನ್ ಶೇರಿಂಗ್ ಆ್ಯಪ್ಗಳು ಮುಂತಾದವು) ಇನ್ಸ್ಟಾಲ್ ಮಾಡಬೇಡಿ
✅ ನಿಮ್ಮ ಮೊಬೈಲ್ ಹಾಗೂ ಆ್ಯಪ್ಗಳನ್ನು ನಿಯಮಿತವಾಗಿ ಅಪ್ಡೇಟ್ ಮಾಡಿ
✅ ಬಲವಾದ ಪಾಸ್ವರ್ಡ್ ಬಳಸಿರಿ ಮತ್ತು 2-ಹಂತದ ಪರಿಶೀಲನೆ (Two-Step Verification) ಸಕ್ರಿಯಗೊಳಿಸಿ
✅ “ಬಹಳ ಲಾಭ” ಎಂದು ಹೇಳುವ ಆಫರ್ಗಳನ್ನು ನಂಬಬೇಡಿ
📞 ಸೈಬರ್ ವಂಚನೆ ನಡೆದರೆ ತಕ್ಷಣ 1930 ಗೆ ಕರೆ ಮಾಡಿ.
🌐 https://t.co/dYXzNdDV9R ನಲ್ಲಿ ದೂರು ದಾಖಲಿಸಿ.
#ಸೈಬರ್ಸುರಕ್ಷತೆ #Call1930 #StayAlert
@BlrCityPolice@CPBlr
Within the limits of Mahadevapura Police Station, Whitefield Division, one accused who was attempting to sell prohibited ganja has been arrested, and the police have successfully seized a total of 19 kg 200 grams of prohibited ganja from the accused, with an estimated value of ₹15,00,000/-.
ವೈಟ್ಫೀಲ್ಡ್ ವಿಭಾಗದ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿಯಿಂದ ಒಟ್ಟು 19 ಕೆಜಿ 200 ಗ್ರಾಂ ನಿಷೇಧಿತ ಗಾಂಜಾ (ಅಂದಾಜು ಮೌಲ್ಯ ₹15,00,000/-) ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
@BlrCityPolice@CPBlr
@Baba_vairagii We appreciate your patience & calmness during that situation. plz don't get disturb ,we are here to take action as per law...so plz visit police station and give more details or details through DM..@Baba_vairagii thank you sir @CPBlr@BlrCityPolice@BangaloreMirror
🚨 *Another Successful Operation by Whitefield Police* 🚨
Within the limits of Whitefield Police Station under Whitefield Division, an accused who was attempting to sell banned ganja has been arrested. Based on the information provided by the accused, approximately 27 kg 239 grams of banned narcotic substance worth ₹55,00,000/- and 3.2 liters of hashish oil have been seized.
In two other separate cases, 15 laptops worth around ₹10,00,000/- and 14 iPhones worth approximately ₹9,00,000/- have also been recovered.
Whitefield Police continue to take strict action against illegal activities. The public is requested to immediately report any suspicious activities.
*ವೈಟ್ ಫೀಲ್ಡ್ ಪೊಲೀಸರ ಮತ್ತೊಂದು ಯಶಸ್ವಿ ಕಾರ್ಯಾಚರಣೆ* 🚨
ವೈಟ್ ಫೀಲ್ಡ್ ವಿಭಾಗದ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ನೀಡಿದ ಮಾಹಿತಿಯ ಆಧಾರದ ಮೇಲೆ ಸುಮಾರು ₹55,00,000/- ಮೌಲ್ಯದ 27 ಕೆ.ಜಿ 239 ಗ್ರಾಂ ನಿಷೇಧಿತ ಮಾದಕ ವಸ್ತು ಹಾಗೂ 3.2 ಲೀಟರ್ ಹ್ಯಾಶಿಸ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ.
ಇನ್ನೂ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು ₹10,00,000/- ಮೌಲ್ಯದ 15 ಲ್ಯಾಪ್ಟಾಪ್ಗಳು ಹಾಗೂ ₹9,00,000/- ಮೌಲ್ಯದ 14 ಐ-ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ರಮ ಚಟುವಟಿಕೆಗಳ ವಿರುದ್ಧ ವೈಟ್ ಫೀಲ್ಡ್ ಪೊಲೀಸರು ಕಟ್ಟುನಿಟ್ಟಿನ ಕ್ರಮವನ್ನು ಮುಂದುವರಿಸುತ್ತಿದ್ದಾರೆ. ಸಾರ್ವಜನಿಕರು ಯಾವುದೇ ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣ ಮಾಹಿತಿ ನೀಡುವಂತೆ ವಿನಂತಿ
#WhitefieldPolice
#BengaluruCityPolice
#AntiDrugDrive
#SayNoToDrugs
#DrugFreeBengaluru
#CrimePrevention
#PoliceAction
#StayAlert
@BlrCityPolice@CPBlr
within the jurisdiction of Marathahalli Police Station under Whitefield Division, two accused persons who were attempting to illegally sell the prohibited narcotic substance ganja were arrested during a police operation. About 15 kg of banned ganja, valued at approximately ₹6,75,000/-, was successfully seized from their possession
ವೈಟ್ಫೀಲ್ಡ್ ವಿಭಾಗದ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಕಾರ್ಯಾಚರಣೆ ಮೂಲಕ ಬಂಧಿಸಿ, ಅವರ ಬಳಿಯಿಂದ ಸುಮಾರು ₹6,75,000/- ಮೌಲ್ಯದ 15 ಕೆ.ಜಿ ನಿಷೇಧಿತ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
@BlrCityPolice@CPBlr
Within the limits of Mahadevapura Police Station under Whitefield Division, one accused person who was attempting to illegally store and sell the prohibited narcotic substance ganja was apprehended by the police based on credible information and a raid. Approximately 10 kg 90 grams of banned ganja, valued at around ₹2,50,000/-, was successfully seized from his possession.
ವೈಟ್ ಫೀಲ್ಡ್ ವಿಭಾಗದ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಒಬ್ಬ ಆರೋಪಿಯನ್ನು ಪೊಲೀಸರು ಸೂಕ್ತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿ, ಆರೋಪಿಯಿಂದ ಸುಮಾರು ₹2,50,000/- ಮೌಲ್ಯದ 10 ಕೆ.ಜಿ 90 ಗ್ರಾಂ ನಿಷೇಧಿತ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
@BlrCityPolice@CPBlr