Slap on face of internal miscreants/goondas trying to malign @BYVijayendra
BYV on sacred land of Shri Dharmasthala clarifies tht there is NO BIZ partnership & NO political bonding WITH @DKShivakumar !
People who still try to spread falsehood, matter is in the COURT of SWAMY🙏🙏
Yatnal supporters/miscreants use the distorted video of @natusuvarna 's interview with @BYVijayendra to claim the Business Partnership between BYV and @DKShivakumar@natusuvarna himself clarifies tht this is not true & an edited video was circulated to spread false propaganda.
Looks like CROSS VOTING in MLC elections is a planned conspiracy by internal dissidents trying to target @BYVijayendra
Ramesh Jarkiholli's refusal to visit Shree Dharmasthala, Yatnal's letter just bfore elections raises eyebrows.
There is something more than what meets the eye!
Quite astonishing to see @nimmasuresh being silent when there was a series of personal attacks on @BSYBJP . As a senior veteran leader, you didnt even express your displeasure. But when @BYVijayendra takes a step in interest of party, all of a sudden "ದಿಗ್ಭ್ರಮೆ"ಗೊಳ್ಳತ್ತೀರ!
ಈ ಪ್ರಕ್ರಿಯೆಯಲ್ಲಿ ಮಾರ್ಗದರ್ಶನ ನೀಡಿದ ಸಮಿತಿಯ ಪ್ರಮುಖರಾದ ಡಾ.ಜಾಹ್ನವಿ , ಡಾ ಮಂಜುನಾಥ್, ಡಾ.ವಿಶ್ವನಾಥ್, ಡಾ ಹರ್ಷ,ಡಾ.ಅನಿತಾ, ಡಾ ದರ್ಶನ್, ಹಲವು ಪ್ರಮುಖರು ಸೇರಿದಂತೆ ನನ್ನ ಮಾರ್ಗದರ್ಶಕರಾದ ಡಾ ಶೈಲೇಶ್ ರಾಜ್ ಅರಸ್ ಅವರು, ನಮ್ಮ ಪತ್ರಿಕೋದ್ಯಮ ವಿಭಾಗದ ಸಂಶೋಧನಾ ಸಹಪಾಟಠಿಗಳು ಉಪಸ್ಥಿತರಿದ್ದರು. 3/3
#PhDResearch#HumanEthics
ಇಂದು ಮೈಸೂರಿನ ನಮ್ಮ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಮಾನವ ನೈತಿಕ ಸಮಿತಿಯ ಸಭೆಯಲ್ಲಿ ನಮ್ಮ PhD ಸಂಶೋಧನಾ ವಿಷಯವನ್ನು Human Ethics Committee ಮುಂದೆ ಯಶಸ್ವಿಯಾಗಿ ಮಂಡಿಸಲಾಯಿತು. 1\3
ಸಂಶೋಧನೆಯ ಗುಣಮಟ್ಟ, ನೈತಿಕ ಮೌಲ್ಯಗಳು ಹಾಗೂ ಸಮಾಜಕ್ಕೆ ಅದರ ಉಪಯುಕ್ತತೆಯ ಕುರಿತು ಸಮಿತಿಯೊಂದಿಗೆ ಅರ್ಥಪೂರ್ಣ ಚರ್ಚೆ ನಡೆಯಿತು. ಈ ಮಹತ್ವದ ಹಂತವು ನಮ್ಮ ಸಂಶೋಧನಾ ಪಯಣದ ಮತ್ತೊಂದು ಮೈಲಿಗಲ್ಲಾಗಿದೆ. 2/3
ಕೈ ಹಿಡಿಯಬೇಕಾದ ಸರ್ಕಾರವೇ ಕೈ ಕೊಟ್ಟಾಗ ರೈತ ಎಲ್ಲಿಗೆ ಹೋಗಬೇಕು?
ತುಮಕೂರು ಜಿಲ್ಲೆಯ ತುರುವೇಕೆರೆ ಎಪಿಎಂಸಿಯಲ್ಲಿ ಸೂಕ್ತ ಸಮಯಕ್ಕೆ ರಾಗಿ ಖರೀದಿಸದ ಈ ನಿರ್ಲಜ್ಜ @INCKarnataka ಸರ್ಕಾರಕ್ಕೆ ರೈತರ ಬೆವರಿನ ಬೆಲೆ ತಿಳಿದಿಲ್ಲ. ಸಾಲ ಮಾಡಿ ಬೆಳೆದ ಬೆಳೆ ಮಣ್ಣು ಪಾಲಾಗುತ್ತಿದೆ, ನಿಂತಲ್ಲೇ ಟ್ರ್ಯಾಕ್ಟರ್ಗಳು ತುಕ್ಕು ಹಿಡಿಯುತ್ತಿವೆ. ಇದು ಕೇವಲ ತುರುವೇಕೆರೆಯ ವ್ಯಥೆಯಲ್ಲ, ಇಡೀ ಕರ್ನಾಟಕದ ಅನ್ನದಾತರ ದಾರುಣ ಸ್ಥಿತಿ!
ರೈತರ ಹಿತ ಕಾಯದೆ ಕುಂಭಕರ್ಣ ನಿದ್ರೆಯಲ್ಲಿರುವ @Siddaramaiah ಸರ್ಕಾರವನ್ನು, ಇಡೀ ರಾಜ್ಯದ ರೈತಾಕ್ರೋಶದ ಕಿಚ್ಚು ಸುಡದೆ ಬಿಡದು.
#CongressFailsKarnataka
#RaithaVirodhiCongress
ಸಕ್ಕರೆ ಕಾರ್ಖಾನೆ ಮಾಲೀಕರನ್ನು ಎದುರಿಸಿ ಕಬ್ಬು ಬೆಳೆಗಾರರ ಪರವಾಗಿ ನಿಂತ ಏಕೈಕ ವ್ಯಕ್ತಿ ನಮ್ಮ ರೈತ ನಾಯಕ ವಿಜಯೇಂದ್ರ ಯಡಿಯೂರಪ್ಪನವರು .
ತಂದೆಗೆ ತಕ್ಕ ಮಗನಾಗಿ ರೈತಪರ ಬದ್ಧತೆಯನ್ನು ತೋರಿ, ಅನ್ನದಾತರ ಹಿತ ಕಾಪಾಡಲು ಹೆಗಲು ಕೊಟ್ಟ ನಿಮಗೆ ರೈತಪರ ವಂದನೆ.🙏
@BJP4Karnataka@BYVijayendra
ನಮ್ಮ ಹೆಮ್ಮೆಯ ನಾಯಕರಾದ ಶ್ರೀ @BYVijayendra ಅವರ ಜನ್ಮದಿನದ ಅಂಗವಾಗಿ, ಬೆಂಗಳೂರಿನ ಅಧಿದೇವತೆ ಶ್ರೀ “ಅಣ್ಣಮ್ಮ ದೇವಿ”ಸನ್ನಿಧಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ನಲ್ಮೆಯ ಸಹೋದರರೊಂದಿಗೆ ಆರೋಗ್ಯ, ದೀರ್ಘಾಯುಷ್ಯ ಮತ್ತು ಯಶಸ್ಸಿಗಾಗಿ ವಿಶೇಷ ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ನಡೆಸಲಾಯಿತು.
#HappyBirthdayBYV#HappyBirthdayVijayendra
ವಿಜಯ ನಿಮ್ಮೊಂದಿಗೇ ಇದೆ, ಸಹೃದಯತೆ-ಔದಾರ್ಯ ನಿಮ್ಮ ಅಂತರಂಗದಲ್ಲಿದೆ,
ಹೋರಾಟ ನಿಮ್ಮ ಕಣ ಕಣದಲ್ಲಿದೆ ಜನ ಪ್ರೀತಿ ನಿಮಗೆ ಬಳುವಳಿಯಾಗಿ ಬಂದಿದೆ, ಸವಾಲುಗಳು ನಿಮಗೆ ಬರುವ ಪರೀಕ್ಷೆಗಳು,
ತಾಳ್ಮೆ ನಿಮ್ಮ ಸಾಧನೆಯ ಹಿಂದಿನ ಜಾಣ್ಮೆ ,
ದಿಟ್ಟತನ ನಿಮ್ಮ ಬತ್ತಳಿಕೆಯ ಅಸ್ತ್ರ, ‘ಸಮರ ಛಲ -ವಿಜಯ ಅಚಲ’
ಜನ್ಮದಿನದ ಶುಭಾಶಯಗಳು.💐 @BYVijayendra
"ರೈತ ನಕ್ಕರೆ ನಾಡು ಬೆಳಗುವುದು
ರೈತ ನೊಂದರೆ ಸಮಾಜ ನಲುಗುವುದು"
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಭಾಗಗಳ ಕಬ್ಬು ಬೆಳೆಗಾರರ ಬೆವರ ಪರಿಶ್ರಮಕ್ಕೆ ತಕ್ಕ ಬೆಲೆಗಾಗಿ ನ್ಯಾಯದ ಸೆರಗೊಡ್ಡಿ ನಿಂತಿದ್ದಾರೆ, ಅವರೊಂದಿಗೆ ದನಿ ಗೂಡಿಸುವುದು ನನ್ನ ಪಾಲಿನ ಶ್ರೇಷ್ಠ ಕರ್ತವ್ಯ. ಕಬ್ಬು ಬೆಳೆಗಾರರ ಬೇಡಿಕೆ ಈಡೇರಿ ಸಿಹಿಯ ಬೆಲೆ ದೊರಕುವವರೆಗೂ ನಿದ್ರೆಗೆ ಜಾರುವ ಮಾತೇ ಇಲ್ಲ. ಅಂದು ರೈತರಿಗಾಗಿ ಪಡಿಮಿಡಿದವರು ಮಾನ್ಯ @BSYBJP ಅವರು, ಇಂದು ಆ ನಿಟ್ಟಿನಲ್ಲಿ ರೈತ ಸಮುದಾಯದೊಂದಿಗೆ ಹೆಗಲು ಕೊಡುವುದು ನನ್ನ ಪರಮ ಕರ್ತವ್ಯ. ಭೂಮಿ ನಂಬಿ ಬದುಕುವ ರೈತ ಈ ದೇಶದ ಅನ್ನದಾತ, ರೈತರಿದ್ದರೆ ನಾಡು, ರೈತರಿಗಾಗಿ ನಾವು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿ, ಶಾಸಕರಾದ ಶ್ರೀ ದುರ್ಯೋಧನ ಐಹೊಳೆ, ಶ್ರೀ ಸಿದ್ದು ಸವದಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪಿ .ರಾಜೀವ್, ರಾಜ್ಯ ಕಾರ್ಯದರ್ಶಿ ಶ್ರೀ ಶರಣು ತಳ್ಳಿಕೇರಿ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಶ್ರೀ ಸುಭಾಷ್ ಪಾಟೀಲ್, ವಿಜಯಪುರ ಜಿಲ್ಲಾಧ್ಯಕ್ಷರಾದ ಶ್ರೀ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕ ಶ್ರೀ ವಿಶ್ವನಾಥ್ ಪಾಟೀಲ್, ಮುಖಂಡರಾದ ಶ್ರೀ ಮಹಾಂತೇಶ್ ವಕ್ಕುಂದ್, ಸೇರಿದಂತೆ ರೈತ ಹೋರಾಟಗಾರರು, ವಿವಿಧ ರೈತಪರ ಸಂಘಟನೆಗಳ ಪ್ರಮುಖರು, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
#CongressFailsKarnataka #ರೈತವಿರೋಧಿಕಾಂಗ್ರೆಸ್ #BJPWithFarmers
ಆತ್ಮೀಯ ಅಭಿಮಾನಿ-ಹಿತೈಷಿಗಳಲ್ಲಿ ವಿನಂತಿ...
ಕಳೆದ ಆರು ದಿನಗಳಿಂದಲೂ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಭಾಗಗಳ ಕಬ್ಬು ಬೆಳೆಗಾರ ರೈತರು ಗುರ್ಲಾಪುರ ಕ್ರಾಸ್ ಬಳಿ ನಡೆಸುತ್ತಿರುವ ಹೋರಾಟದಲ್ಲಿಂದು ಭಾಗವಹಿಸಿದ್ದೇನೆ. ಆದರೆ ಇಲ್ಲಿನ ಪರಿಸ್ಥಿತಿ ಗಂಭೀರವಾಗಿದ್ದು ಕಬ್ಬು ಬೆಳೆಗಾರರ ಬೇಡಿಕೆ ಅತ್ಯಂತ ನ್ಯಾಯೋಜಿತವಾಗಿದೆ. ಇವರ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ಈ ಹೋರಾಟಕ್ಕೆ ಹೆಗಲುಕೊಟ್ಟು ನಿಲ್ಲಬೇಕಾಗಿರುವುದು ನನ್ನ ಕರ್ತವ್ಯವೆಂದು ಪರಿಭಾವಿಸಿ ನಾಳಿನ ನನ್ನ ಜನ್ಮದಿನಾಚರಣೆಯ ಸಂದರ್ಭದ ಸಡಗರವನ್ನು ಬದಿಗೊತ್ತಿ ರೈತರೊಂದಿಗೆ ಇದ್ದು, ಅವರ ಹೋರಾಟಕ್ಕೆ ದನಿಗೂಡಿಸುವವನಿದ್ದೇನೆ.
ಪೂಜ್ಯ ತಂದೆ ಮಾನ್ಯ ಬಿ.ಎಸ್.ಯಡಿಯೂರಪ್ಪನವರು ನಾಡಿನ ರೈತರು ಸಂಕಷ್ಟಕ್ಕೀಡಾದಾಗಲೆಲ್ಲ ದನಿ ಎತ್ತಿ ಹೋರಾಟ ನಡೆಸಿದ್ದಾರೆ, ರೈತರ ಹಕ್ಕುಗಳಿಗಾಗಿ ತಮ್ಮ ಸಾರ್ವಜನಿಕ ಬದುಕಿನ ಬಹು ಭಾಗವನ್ನು ಮೀಸಲಿಟ್ಟು ಹೋರಾಡಿದ್ದಾರೆ. ಅದೇ ಮಾರ್ಗದಲ್ಲಿ ಮುನ್ನಡೆಯುವ ಸಂಕಲ್ಪ ಹೊತ್ತ ನಾನು ರೈತರು ಸಂಕಷ್ಟದಲ್ಲಿರುವಾಗ ಅವರೊಂದಿಗೆ ಇರಬೇಕಾಗಿರುವುದು ನನ್ನ ಆದ್ಯ ಕರ್ತವ್ಯವೆಂದು ಭಾವಿಸಿದ್ದೇನೆ. ಈ ಕಾರಣಕ್ಕಾಗಿ ನಾನು ಹೋರಾಟದ ಸ್ಥಳದಿಂದ ಬೆಂಗಳೂರಿಗೆ ಹಿಂದಿರುಗುವ ನಿರ್ಧಾರ ಕೈಬಿಟ್ಟಿದ್ದೇನೆ. ಆದ್ದರಿಂದ ನನ್ನ ಅಭಿಮಾನಿಗಳು, ಹಿತೈಷಿಗಳು, ಪಕ್ಷದ ಕಾರ್ಯಕರ್ತರು ನನ್ನ ಈ ನಿಲುವನ್ನು ಬೆಂಬಲಿಸಿ ನಾಳೆ ತಾವು ಇದ್ದಲ್ಲಿಂದಲೇ ನನ್ನನ್ನು ಹಾರೈಸಬೇಕೆಂದು ಮನವಿ ಮಾಡುವೆ.🙏