“No man is an island…” wrote the poet John Donne.
His message was that we are all part of a larger whole, whether that’s a continent or a community.
But the fact is, most of us occasionally crave a little isolation and individual reflection, just as much as we seek the company of others.
Siddharth Dialani of BharatAgri shared his experience of the Jumadi Islands, just a 5-minute boat ride from Udupi, Karnataka, where, through a homestay, he said he had an entire island to himself for just INR 5k a night! (I suspect the price may not be quite the same now as when he posted! 🙂)
In a nation of 1.4 billion people, having an island all to yourself may just be the ultimate luxury…
#SundayWanderer
(Pics by @siddharth_iitm & video by Twinstars Homestay)
ನಮ್ಮ ಸೇನೆ ನಮ್ಮ ಹೆಮ್ಮೆ!🇮🇳
ನಮ್ಮ ವೀರ ಯೋಧರು ಭಾರತ ಮಾತೆಯ ಗೌರವ ಮತ್ತು ಸಮ್ಮಾನ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ತಮ್ಮ ಕರ್ತವ್ಯನಿಷ್ಠೆಯ ಲಕ್ಷ್ಯದತ್ತ ದೃಷ್ಟಿ ನೆಟ್ಟು ಮುನ್ನಡೆದು ಜಯಶೀಲರಾದರು. ಭಾರತ ಮಾತೆಯ ಗೌರವ ಇಮ್ಮಡಿಗೊಳಿಸಿದರು. ದಿಟ್ಟತನದ ಸರ್ಜಿಕಲ್ ಸ್ಟ್ರೈಕ್ ಮೂಲಕ ಇಡೀ ಜಗತ್ತಿಗೇ ನಮ್ಮ ವೀರ ಯೋಧರು ಪರಾಕ್ರಮ ತೋರಿಸಿದ ದಿನವಿಂದು.
#SurgicalStrike
ಭಾರತೀಯ ಸ್ವಾತಂತ್ರ್ಯ ಚಳುವಳಿಯ ಅನರ್ಘ್ಯ ರತ್ನ ಶಹೀದ್ ಭಗತ್ ಸಿಂಗ್ ಅವರ ಶೌರ್ಯ ಎಲ್ಲಾ ಪೀಳಿಗೆಗೂ ಪ್ರೇರಣಾಶಕ್ತಿ.
ಭಾರತಾಂಬೆಯ ಹೆಮ್ಮೆಯ ಪುತ್ರ ಭಗತ್ ಸಿಂಗ್ ಅವರ ಜನ್ಮದಿನದಂದು ಶತ ಶತ ನಮನಗಳು.
#BhagatSingh
25 ವರ್ಷಗಳ ಸೇವೆ, ಸಂಕಲ್ಪ ಮತ್ತು ಉತ್ತಮ ಆಡಳಿತ, ರಾಷ್ಟ್ರ ನಿರ್ಮಾಣದ ಅದ್ಭುತ ಪಯಣ !
ಗುಜರಾತ್ನಲ್ಲಿ ಜನಸೇವಕರಾಗಿ ಪ್ರಾರಂಭಗೊಂಡ ಪಯಣದಿಂದ ಹಿಡಿದು ಪ್ರಧಾನಿಯಾಗಿ ರಾಷ್ಟ್ರ ಸೇವೆ ಮಾಡುವವರೆಗೆ, ಕೃಷಿಯಿಂದ ನೀರಾವರಿವರೆಗೆ, ಆರೋಗ್ಯದಿಂದ ಆರ್ಥಿಕ ಸೇರ್ಪಡೆಯವರೆಗೆ, ಪ್ರತಿ ಮನೆಯಲ್ಲಿ ಶುದ್ಧ ಇಂಧನದಿಂದ ನೀರಿನವರೆಗೆ ಮತ್ತು ವಾಯು ಸಂಪರ್ಕದಿಂದ ಡಿಜಿಟಲ್ ಇಂಡಿಯಾದವರೆಗೆ ಜನರ ಆಶಯಗಳಿಗೆ ಸ್ಪಂದಿಸುತ್ತಾ, ದೇಶದ ಪ್ರಗತಿ ಮತ್ತು ಸಮೃದ್ಧಿಗಾಗಿ ನಿರಂತರವಾಗಿ ಸಾಗುತ್ತಿರುವ ರಾಷ್ಟ್ರ ನಿರ್ಮಾಣದ ಪಯಣವಿದು.
ಪ್ರಧಾನಿ ಶ್ರೀ ನರೇಂದ್ರ ಮೋದಿಯವರ 25 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಸೇವೆ, ಉತ್ತಮ ಆಡಳಿತ ಮತ್ತು ದೃಢ ಸಂಕಲ್ಪದೊಂದಿಗೆ ಭಾರತವು ವಿಕಸಿತ ಭಾರತದ ಹಾದಿಯಲ್ಲಿ ನಿರಂತರವಾಗಿ ಮುನ್ನಡೆಯುತ್ತಿದೆ.
#SevaSankalpAbhiyan
#NamoSevaAnkahiKahaniyan
Another Gold Medal in Kabaddi!
Our Kabaddi Men’s team has clinched the Gold Medal at the Asian Games 2026. This victory is a testament to the top notch skills, talent and indomitable spirit of our athletes. India is proud of this success. Congratulations to the team. My best wishes for their future endeavours.
ಪ್ರವಾಸೋದ್ಯಮದಲ್ಲಿ ಉದ್ಯೋಗ ಸೃಷ್ಟಿಗೆ, ಸುಸ್ಥಿರ ಅಭಿವೃದ್ಧಿಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸಿತಾಣಗಳ ಸ್ವಚ್ಛತೆ, ಸುರಕ್ಷತೆಯನ್ನು ಕಾಪಾಡೋಣ.
ಎಲ್ಲರಿಗೂ ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು.
#WorldTourismDay
3RD GOLD MEDAL FOR INDIA AT ASIAN GAMES 2026. 🏅
Gold medal winners in Women's Kabbadi at the Asian Games.🥇
2010 - India. 🇮🇳
2014 - India. 🇮🇳
2018 - Iran. 🇮🇷
2022 - India. 🇮🇳
2026 - India. 🇮🇳
25 ವರ್ಷಗಳ ಜನಸೇವೆ...
ಇದು ಕೇವಲ ಒಂದು ಪಯಣವಲ್ಲ, ಬದಲಾಗಿ ಅಸಂಖ್ಯಾತ ಜನರ ಜೀವನಗಳಿಗೆ ಸ್ಪೂರ್ತಿ ತುಂಬಿದ, ಬದಲಾವಣೆಯ ಅಡಿಪಾಯ ಹಾಕಿದ ಮತ್ತು ಹೊಸ ಕನಸುಗಳು ಸಾಕಾರಗೊಂಡ ಕಥೆಯಾಗಿದೆ.
ಪ್ರತಿಯೊಂದು ಉಪಕ್ರಮದ ಹಿಂದೆ ಒಂದು ಸಂಕಲ್ಪ, ಪ್ರತಿ ಬದಲಾವಣೆಯ ಹಿಂದೆ ಕೋಟ್ಯಂತರ ಜನರ ಖುಷಿ. ಇದು ಸೇವೆಯಿಂದ ಬದಲಾವಣೆಯವರೆಗಿನ ಪಯಣವನ್ನು ಪ್ರತಿಬಿಂಬಿಸುವ ಅಮೋಘ ಕತೆಗಳ ಒಂದು ಚಿತ್ರಣವಿದು.
#SevaSankalpAbhiyan
#NamoSevaAnkahiKahaniyan
ನಾಡಹಬ್ಬ ಮೈಸೂರು ದಸರಾ 2026ರ ಉದ್ಘಾಟನೆಯನ್ನು ಜ್ಞಾನ ಮತ್ತು ದಾಸೋಹದ ಕಾಯಕಯೋಗಿ, ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ನೆರವೇರಿಸಲಿರುವುದು ನಾಡಿನ ಜನತೆಗೆ ಹೆಮ್ಮೆಯ ಹಾಗೂ ಸಂತಸದ ಕ್ಷಣ.
ಬೇವು ಲೇಪಿತ ಯೂರಿಯಾ... ರೈತರಿಗೆ ವರದಾನ !
ಪ್ರಧಾನಿ ಶ್ರೀ ನರೇಂದ್ರ ಮೋದಿಯವರ 25 ವರ್ಷಗಳ ಸೇವೆ ಮತ್ತು ಸಂಕಲ್ಪದ ಪಯಣದಲ್ಲಿ ರೈತರ ಕಲ್ಯಾಣದ ಹಲವು ಉಪಕ್ರಮಗಳು ಜಾರಿಗೊಂಡವು. ಬೇವು ಲೇಪಿತ ಯೂರಿಯಾ ಈ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.
ರೈತ ಕಲ್ಯಾಣದಿಂದ ರಾಷ್ಟ್ರೀಯ ಹಿತಾಸಕ್ತಿಯವರೆಗೆ... ಇದು ಸೇವೆಯ ಪ್ರತಿಜ್ಞೆ!
#SevaSankalpAbhiyan
#NamoSevaAnkahiKahaniyan
Heartfelt birthday greetings to our beloved PM Narendra Modi Ji on his 76th birthday.
A true inspiration for the youth, he embodies the spirit of Seva and lives by the unwavering principle of Nation First.
May Maa Bharati bless you with a long, healthy and purposeful life, dedicated to the service of the nation.
Happy Birthday, Modi Ji! 🇮🇳
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಿಂದ ಪುರಸ್ಕೃತರಾದ ಪ್ರಸಿದ್ಧ ನಟ ಅನಂತ್ ನಾಗ್ ಅವರಿಗೆ ಅಭಿನಂದನೆಗಳು.
ಕಳೆದ ಹಲವು ದಶಕಗಳಿಂದ, ಅವರ ಸಹಜ ಅಭಿನಯ, ಗಮನಾರ್ಹ ವೈವಿಧ್ಯತೆ ಹಾಗೂ ಶ್ರೇಷ್ಠ ಕಲಾಪ್ರತಿಭೆಯು ಭಾರತೀಯ ಚಲನಚಿತ್ರರಂಗದಲ್ಲಿ, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ, ಅವಿಸ್ಮರಣೀಯ ಛಾಪನ್ನು ಮೂಡಿಸಿವೆ. ಅವರು ಅಭಿನಯಿಸಿದ ಪ್ರತಿಯೊಂದು ಪಾತ್ರದಲ್ಲೂ ಅಭೂತಪೂರ್ವ ಅಭಿನಯ ಮತ್ತು ಜೀವಂತಿಕೆಯನ್ನು ತುಂಬಿದ್ದಾರೆ.
ನಿಜಕ್ಕೂ ಇದು ಒಬ್ಬ ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವವಾಗಿದೆ.
ಕೋಟ್ಯಂತರ ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕಾಯಕ ತಪಸ್ವಿ ಶ್ರೀ ನರೇಂದ್ರ ಮೋದಿ ಅವರು 2014 ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇದುವರೆಗೆ ಅವರ ಆಡಳಿತಾವಧಿಯಲ್ಲಿ ನಿರ್ಧಾರ ಕೈಗೊಂಡು ದೇಶದ ಗತಿ ಬದಲಿಸಿದ 76 ಸಾಧನೆಗಳಿವು...
#HappyBdayPMModi#SevaSankalpAbhiyan