ಮುಡಾದಲ್ಲಿ ಬಿಜೆಪಿಯವರೇ ಅಧ್ಯಕ್ಷರಿದ್ದಾಗ ಸಿದ್ದರಾಮಯ್ಯ ಅವರ ಪತ್ನಿಗೆ ನ್ಯಾಯ ಬದ್ಧವಾಗಿ ಸೈಟ್ ಗಳನ್ನು ನೀಡಿದ್ದಾರೆ.
ಆದರೂ ಸಿದ್ದರಾಮಯ್ಯ ಅವರ ವಿರುದ್ಧ ಯಾವುದೇ ದಾಖಲೆಗಳಿಲ್ಲದಿದ್ದರೂ
ಬಿಜೆಪಿ-ಜೆಡಿಎಸ್ ಸುಳ್ಳು ಅಪಪ್ರಚಾರ ಮಾಡುತ್ತಿವೆ.
ಸರ್ಕಾರವನ್ನು ಅಸ್ಥಿರಗೊಳಿಸುವುದೇ ಇದರ ಹಿಂದಿನ ಉದ್ದೇಶ.
#ShamelessBJP_JDS
ಜನಾಂದೋಲನ
ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ಧನ ರೆಡ್ಡಿ ಅವರ ಮೇಲೂ ದೂರುಗಳಿವೆ, ಇಷ್ಟು ವರ್ಷಗಳಾದರೂ ಅವರಿಗೆ ನೋಟಿಸ್ ನೀಡದೇ,
ಸಿಎಂ ಸಿದ್ದರಾಮಯ್ಯ ಅವರಿಗೆ ಮಾತ್ರವೇ ತರಾತುರಿಯಲ್ಲಿ ಶೋಕಾಸ್ ನೋಟಿಸ್ ಕೊಟ್ಟಿದ್ದು ಏಕೆ?
ಕೇಂದ್ರದಿಂದ ರಾಜಭವನದ ದುರ್ಬಳಕೆ ಆಗುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
#ShamelessBJP_JDS
ಜನಾಂದೋಲನ
ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಕಾನೂನು ಬಾಹಿರವಾಗಿ ನೋಟಿಸ್ ಕೊಟ್ಟಿದ್ದು, ಇದು ಸಂವಿಧಾನ-ಪ್ರಜಾಪ್ರಭುತ್ವ ನಾಶ ಮಾಡುವ ಪ್ರಯತ್ನ.
ರಾಜಭವನ ಕೇಂದ್ರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟ.
#ShamelessBJP_JDS
ಜನಾಂದೋಲನ
ರಾಜ್ಯಪಾಲರು ಸಂವಿಧಾನದ ರಕ್ಷಕರು. ಕಾನೂನು ಬದ್ಧವಾಗಿ ಅವರು ಕೆಲಸ ಮಾಡಬೇಕು.
ರಾಜಭವನ ಪಕ್ಷಾತೀತವಾಗಿರಬೇಕು, ಅದು ಬಿಜೆಪಿಯ ಕಚೇರಿ ಆಗಬಾರದು, ರಾಜ್ಯಪಾಲರು ಬಿಜೆಪಿಯ ಏಜೆಂಟ್ ಆಗಬಾರದು.
#ShamelessBJP_JDS
ಜನಾಂದೋಲನ
ಮುಖ್ಯಮಂತ್ರಿ ಸ್ಥಾನಕ್ಕೆ ₹2,500 ಕೋಟಿ,
ಸಚಿವ ಸ್ಥಾನಕ್ಕೆ ₹ 100 ಕೋಟಿ,
ಕೋವಿಡ್ ಸಮಯದಲ್ಲಿ ಸಾವಿರಾರು ಕೋಟಿ ಲೂಟಿ,
ಮಾರಿಷಸ್ ಖಾತೆಗೆ ₹ 10 ಸಾವಿರ ಕೋಟಿ ಹೋಗಿದೆ ಎಂದು ಬಿಜೆಪಿ ಶಾಸಕರು, ಕೇಂದ್ರ ಮಾಜಿ ಸಚಿವರಾದ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು.
ಇದಕ್ಕೆ BJP-JDS ಮೊದಲು ಉತ್ತರ ನೀಡಲಿ.
#ShamelessBJP_JDS
ಜನಾಂದೋಲನ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ,
ಐಟಿ ಅಧಿಕಾರಿಗಳು ನಿಮ್ಮ ಮನೆ, ನಿಮ್ಮ ಆಪ್ತರ ಮನೆ ಮೇಲೆ ದಾಳಿ ಮಾಡಿ ದಾಖಲೆ ತೆಗೆದುಕೊಂಡು ಹೋದರಲ್ಲ ಅವು ಏನಾದವು? ಇದು ಯಾಕಾಯ್ತು?
ನಿಮ್ಮ ಪಕ್ಷದವರೇ ನಿಮ್ಮ ವಿರುದ್ಧ ಮಾಡಿರುವ ಇಂಥ ಗಂಭೀರ ಆರೋಪಗಳಿಗೆ ಉತ್ತರ ಕೊಡಿ.
#ShamelessBJP_JDS
ಜನಾಂದೋಲನ
ಬಿಜೆಪಿ-ಜೆಡಿಎಸ್ ಪಕ್ಷದಲ್ಲೇ ಭಿನ್ನಾಭಿಪ್ರಾಯವಿದೆ. ಇವರು ಮಾಡುತ್ತಿರುವ ಪಾದಯಾತ್ರೆಗೆ ಅವರ ಪಕ್ಷದವರಿಂದಲೇ ಬೆಂಬಲ ಇಲ್ಲ.
ಈ ಕಾರಣಕ್ಕಾಗಿಯೇ ಬಿಜೆಪಿ-ಜೆಡಿಎಸ್ ನ ಎಲ್ಲ ನಾಯಕರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿಲ್ಲ.
ಹಾಗಾಗಿ ಈ ಪಾದಯಾತ್ರೆ ರಾಜಕೀಯ ಪ್ರೇರಿತ ಎನ್ನುವುದು ಸ್ಪಷ್ಟವಾಗುತ್ತದೆ.
#ShamelessBJP_JDS
ಜನಾಂದೋಲನ
NDA ಮೈತ್ರಿ ಕೂಡದಿಂದ 19 ಜನರನ್ನು ಕರ್ನಾಟಕದ ಜನರು ಸಂಸತ್ತಿಗೆ ಆರಿಸಿ ಕಳಿಸಿದರೂ, ಪ್ರಸಕ್ತ ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಶೂನ್ಯ.
ಇದನ್ನು ಪ್ರಶ್ನಿಸಬೇಕಾದ ಬಿಜೆಪಿ-ಜೆಡಿಎಸ್ ಪಕ್ಷಗಳು, ತಮ್ಮ ವೈಫಲ್ಯಗಳನ್ನ, ರಾಜ್ಯಕ್ಕಾಗದ ಅನ್ಯಾಯವನ್ನ ಮರೆಮಾಚಲು ಪಾದಯಾತ್ರೆಯ ಗಿಮಿಕ್ ಮಾಡುತ್ತಿವೆ.
#ShamelessBJP_JDS
ಜನಾಂದೋಲನ
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಬಗ್ಗೆ ಎನ್ಡಿಎ ಮೈತ್ರಿಕೂಟಕ್ಕೆ ಗೌರವವಿಲ್ಲ.
ಕೇಂದ್ರ ಚುನಾವಣಾ ಆಯೋಗ ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಸಲು ಅವಕಾಶ ನೀಡಲಿಲ್ಲ.
ಬದಲಿಗೆ ಚುನಾವಣಾ ಆಯೋಗವನ್ನ ದುರ್ಬಳಕೆ ಮಾಡಿಕೊಂಡು, ಮತದಾನ ಪ್ರಕ್ರಿಯೆ ಹಾಗೂ ಮತದಾನದ ಘನತೆಯನ್ನು ಕಸಿದುಕೊಂಡಿದೆ.
#ShamelessBJP_JDS
ಜನಾಂದೋಲನ
ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಬಿಜೆಪಿ-ಜೆಡಿಎಸ್, ಆಧಾರ ರಹಿತ ಮುಡಾ ಪ್ರಕರಣದ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಇದಕ್ಕಾಗಿ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಇದು ರಾಜಕೀಯ ಪ್ರೇರಿತವಾದ ಪಾದಯಾತ್ರೆ.
#ShamelessBJP_JDS
ಜನಾಂದೋಲನ
ಕೇಂದ್ರ ಸಚಿವ ಕುಮಾರಸ್ವಾಮಿ ಅವರೇ,
ನಿಮ್ಮ ಸಹೋದರ ಬಾಲಕೃಷ್ಣ ಗೌಡ ಅವರ ಕುಟುಂಬ ಅವರ ತಂದೆ ಹಾಗೂ ಮೈಸೂರು, ಶ್ರೀರಂಗಪಟ್ಟಣದ ಅವರ ಸಂಬಂಧಿಗಳು ಬೇನಾಮಿಗಳು ಎಷ್ಟೆಷ್ಟು ಜಮೀನು ಹೊಂದಿದ್ದಾರೆ?
ಒಬ್ಬ ಸರ್ಕಾರಿ ನೌಕರ ಎಷ್ಟು ಸಾವಿರ ಕೋಟಿಗೆ ಬಾಳುತ್ತಾರೆ?
ಯಾವ ಈರುಳ್ಳಿ, ಆಲುಗಡ್ಡೆಯಲ್ಲಿ ಅಷ್ಟು ಹಣ ಸಂಪಾದಿಸಿದ್ದೀರಿ?
#ShamelessBJP_JDS
ಮಹಾದಾಯಿ - ಮೇಕೆದಾಟು ಯೋಜನೆಗಳಿಗೆ ಕೇಂದ್ರ ಬಿಜೆಪಿ ಸರ್ಕಾರ ಅನುಮತಿ ನೀಡದೇ, ಅಗತ್ಯ ಹಣಕಾಸು ನೆರವು ನೀಡದೇ ರಾಜ್ಯದ ಜನರಿಗೆ ಅನ್ಯಾಯ ಮಾಡಿದೆ. ಇದನ್ನು ಪ್ರಶ್ನಿಸದೇ ಜೆಡಿಎಸ್ ದ್ರೋಹ ಬಗೆದಿದೆ.
ಕರ್ನಾಟಕದ ಜನರಿಗೆ ಕುಡಿಯುವ ನೀರು ಒದಗಿಸುವುದು ಬಿಜೆಪಿ-ಜೆಡಿಎಸ್ ಪಕ್ಷಗಳ ಆದ್ಯತೆಯ ವಿಚಾರ ಆಗಲೇ ಇಲ್ಲ.
#ShamelessBJP_JDS
ಜನಾಂದೋಲನ
ದೇಶದಲ್ಲೇ ಅತೀ ಹೆಚ್ಚು ತೆರಿಗೆ ಸಂಗ್ರಹಿಸುವ 2ನೇ ರಾಜ್ಯ ಕರ್ನಾಟಕ.
ದೇಶದ ಆರ್ಥಿಕ ಪ್ರಗತಿಗೆ ಸಿಂಹಪಾಲು ನೀಡುತ್ತಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬಂದಿದೆ.
ನಮ್ಮ ತೆರಿಗೆ ಪಾಲನ್ನು ನಮಗೆ ಕೊಡದೇ ದ್ರೋಹ ಎಸಗುತ್ತಿರುವುದನ್ನು ಜೆಡಿಎಸ್ ಪ್ರಶ್ನಿಸದೇ ಮೋಸ ಮಾಡುತ್ತಿದೆ.
#ShamelessBJP_JDS
ಜನಾಂದೋಲನ
ರಾಜ್ಯಕ್ಕೆ ಅಗತ್ಯ ಅನುದಾನ ಬರಲಿ, ರಾಜ್ಯದ ಅಭಿವೃದ್ಧಿಯಾಗಲಿ ಎಂದು ರಾಜ್ಯದಿಂದ 25 ಮಂದಿ BJP ಸಂಸದರನ್ನ ಗೆಲ್ಲಿಸಿ ಕಳಿಸಿದ್ದೆವು.
ನೆರೆ, ಬರ, ಕೊರೊನ, GST ಪಾಲು, ಅನುದಾನ ಹಂಚಿಕೆ ಯಾವುದೇ ವಿಚಾರದಲ್ಲೂ ಬಿಜೆಪಿ ಸಂದರಿಂದ ರಾಜ್ಯದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಮೋದಿಯವರ ಮುಂದೆ ಅವರು ಬಾಯಿ ಬಿಡಲೇ ಇಲ್ಲ.
#KarnatakaVirodhiBJP
ಅನುದಾನ ಹಂಚಿಕೆ, ತೆರಿಗೆ ಪಾಲು ವಿತರಣೆ ಸೇರಿದಂತೆ ಎಲ್ಲ ವಿಚಾರದಲ್ಲೂ ಕೇಂದ್ರ ಬಿಜೆಪಿ ಸರ್ಕಾರ, ಕರ್ನಾಟಕಕ್ಕೆ ನಿರಂತರವಾಗಿ ದ್ರೋಹ ಬಗೆಯುತ್ತಲೇ ಬಂದಿದೆ.
ಕರ್ನಾಟಕ, ಕನ್ನಡಿಗರನ್ನು ಕಂಡರೆ ಬಿಜೆಪಿಗೆ ಅಸಡ್ಡೆ, ತಿರಸ್ಕಾರ.
#KarnatakaVirodhiBJP
ಅನ್ನಭಾಗ್ಯ ಕಾರ್ಯಕ್ರಮದಡಿ ಉಚಿತವಾಗಿ ಅಕ್ಕಿ ವಿತರಿಸಿ ರಾಜ್ಯವನ್ನು ಹಸಿವು ಮುಕ್ತಗೊಳಿಸುವುದು ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ.
"ಈ ಯೋಜನೆಗಾಗಿ ಅಕ್ಕಿ ಕೊಡಿ, ಪ್ರತಿ ಕೆಜಿಗೆ ₹34 ಹಣ ಕೊಡುತ್ತೇವೆ" ಎಂದು ಕೋರಿಕೊಂಡರೂ ಅಕ್ಕಿ ಕೊಡದೆ, 'ಭಾರತ್ ಅಕ್ಕಿ' ಹೆಸರಲ್ಲಿ ₹29ಗೆ ಮಾರಲು ಹೊರಟಿದ್ದಾರೆ.
#KarnatakaVirodhiBJP
ಭದ್ರಾ ಮೇಲ್ದಂಡೆ ಯೋಜನೆ ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರು ಒದಗಿಸುವ ರಾಜ್ಯ ಸರ್ಕಾರದ ಜನಪರ ಯೋಜನೆ.
ಯೋಜನೆಗೆ ಕೇಂದ್ರ ಬಿಜೆಪಿ ಸರ್ಕಾರ ₹5,300 ಕೋಟಿ ಘೋಷಿಸಿತ್ತು. ಇದರಲ್ಲಿ ನಯಾ ಪೈಸೆ ಅನುದಾನವೂ ಬರಲಿಲ್ಲ.
ಆದರೆ ಈಗ ಚುನಾವಣೆ ಪ್ರಚಾರಕ್ಕೆ ಅಮಿತ್ ಶಾ ಅವರು ಮಾತ್ರ ತಪ್ಪದೆ ಬರುತ್ತಿದ್ದಾರೆ.
#KarnatakaVirodhiBJP
ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾದರೂ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸದೆ ಮೋಸ ಮಾಡಿದೆ.
ರಾಜ್ಯದ ಜನರಿಗೆ ಅನ್ಯಾಯ ಮಾಡುವುದೇ ಬಿಜೆಪಿಯ ಜನ್ಮ ಸಿದ್ಧ ಹಕ್ಕಿನಂತಾಗಿದೆ.
#KarnatakaVirodhiBJP
ನರೇಗಾ ಹಣ ಬಿಡುಗಡೆ ವಿಚಾರದಲ್ಲೂ ಕೇಂದ್ರ BJP ಸರ್ಕಾರ ರಾಜ್ಯಕ್ಕೆ ತಾರತಮ್ಯ ಎಸಗಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯಕ್ಕೆ ಕೊಡಬೇಕಾಗದ ₹676 ಕೋಟಿ ಬಾಕಿ ಹಣವನ್ನೂ ಕೇಂದ್ರ ಸರ್ಕಾರ ಕೊಟ್ಟಿಲ್ಲ.
ಈ ಮೂಲಕ ನರೇಗಾ ಕಾರ್ಮಿಕರು ವಲಸೆ ಹೋಗುವ ಹೀನ ಸ್ಥಿತಿಯನ್ನ ನಿರ್ಮಿಸಿದೆ.
#KarnatakaVirodhiBJP