೨ನೇ ಬಾರಿ ಶಾಸಕರು ಇಂಡಿ ಮತಕ್ಷೇತ್ರ, ವಿಜಯಪುರ ಜಿಲ್ಲೆ | ಇಂಡಿ ತಾಲೂಕನ್ನು ಅಭಿವೃದ್ದಿಯ ಪಥದತ್ತ ಸಾಗಿಸುವುದು| ಶಿಕ್ಷಣಕ್ಕೆ ಹಾಗೂ ರೈತರಿಗೆ ಮಾನ್ಯತೆ|
2nd term MLA Indi Constituency|
ಕರ್ನಾಟಕ ಸರಕಾರದ ಜಿಲ್ಲಾ ಪಂಚಾಯಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಜಯಪೂರ ಇವರ ಸ೦ಯುಕ್ತಾಶ್ರಯದಲ್ಲಿ ವಿಜಯಪೂ ರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಿಮಿ೯ಸುತ್ತಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ನೂತನ ಕಟ್ಟಡ ಭೂಮಿ ಪೂಜೆ ನೆವೇರಿಸಲಾಯಿತು.
#ಶಿಕ್ಷಣವೇ_ಮಕ್ಕಳ_ಸಂಪತ್ತು.
ನನ್ನ ಇಂಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಡನೂರು ಗ್ರಾಮದ ಡಿ.ಜಿ.ಬಿರಾದಾರ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ #ನೂತನ_ಶಾಲಾ_ಕೋಣೆಯನ್ನು ಉದ್ಘಾಟನೆ ನೆರವೇರಿಸಲಾಯಿತು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ,
ಪ್ರಸಿದ್ಧ ರಂಗಭೂಮಿ ತಜ್ಞ, ಪ್ರಗತಿಪರ ವಿಚಾರದ #ಡಾ_ಗಿರೀಶ್_ಕಾರ್ನಾಡ್ ಅವರ ಅಗಲಿಕೆ ಸಾಹಿತ್ಯ ಲೋಕಕ್ಕೆ,ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿರುತ್ತದೆ. ಅವರ ಅಗಲಿಕೆ ವೈಯುಕ್ತಿಕವಾಗಿ ಆಘಾತವನ್ನುಂಟು ಮಾಡಿದೆ, ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೆನೆ.
ನನ್ನ ಇಂಡಿ ವಿಧಾನಸಭಾ ಕ್ಷೇತ್ರದ ಇಂಡಿ ಪುರಸಭೆ ವ್ಯಾಪ್ತಿಯಲ್ಲಿ ಮೆಗಾ ಮಾರುಕಟ್ಟೆ ನಿರ್ಮಾಣಕ್ಕೆ ರೂ. 8.00 ಕೋಟಿಗಳ ಅನುದಾನ ರಾಜ್ಯ ಸರ್ಕಾರದಿಂದ ಮಂಜೂರಾಗಿದೆ ಎಂಬುದನ್ನು ಸಾರ್ವಜನಿಕರ ಗಮನಕ್ಕೆ ತರುತ್ತಿದ್ದೇನೆ.
ಕಾಂಗ್ರೆಸ್ ಪಕ್ಷದ ಅಧಿನಾಯಕಿ #ಶ್ರೀಮತಿ_ಸೋನಿಯಾ_ಗಾಂಧಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಭಗವಂತ ನಿಮಗೆ ಆರೋಗ್ಯ ,ಆಯಸ್ಸು ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ.
@RahulGandhi
ಮಾಜಿ ಸಚಿವರು ಹಾಗೂ ಜನಪ್ರಿಯ ನಟರು ಮತ್ತು ನನಗೆ ಆತ್ಮೀಯರಾದ #ಶ್ರೀ_ಅಂಬರೀಶ್'ರವರ
ಅಕಾಲಿಕ ಮರಣದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಗಿದ್ದು, ಈ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ತ್ಯಾಗ, ದಾನ ಹಾಗೂ ಪುಣ್ಯದ ಕಾರ್ಯಗಳ ಮಹತ್ವ ಸಾರುವ ಮೂಲಕ ಆಚರಿಸಲ್ಪಡುವ ಈದ್-ಮಿಲಾದ್ ಹಬ್ಬವು ನಾಡಿನಲ್ಲಿ ಸ್ನೇಹ ಸೌಹಾರ್ದತೆಯನ್ನು ಬೆಳೆಸುವಲ್ಲಿ ಪ್ರೇರಕ ಶಕ್ತಿಯಾಗಲಿ ಎಂದು ಹಾರೈಸುತ್ತೇನೆ.
#EidMilad
ಮಾನ್ಯ ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ರಸಗೊಬ್ಬರ ಖಾತೆಯ ಸಚಿವರೂ ಹಾಗೂ ರಾಜ್ಯ ಬಿಜೆಪಿಯ ಹಿರಿಯ ನಾಯಕರೂ ಆಗಿದ್ದ #ಸನ್ಮಾನ್ಯ_ಶ್ರೀ_ಅನಂತ್_ಕುಮಾರ್ ರವರು ಅಗಲಿದ್ದು ದುಃಖಕರ.ಆ ದೇವರು ಅವರ ಕುಟುಂಬಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ಈ ಅಗಲಿಕೆಯ ನೋವು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಲೋಕಸಭೆ ಹಾಗೂ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಮೈತ್ರಿ ಕೂಟದ ಅಭ್ಯರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಬಿಜೆಪಿ ಪಕ್ಷಕ್ಕೆ ತಕ್ಕ ಉತ್ತರವನ್ನು ನೀಡುವ ಮೂಲಕ ಜನತೆ ದೀಪಾವಳಿಯ ಉಡುಗೊರೆಯನ್ನು ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದಾರೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಸರ್ವರಿಗೂ ಧನ್ಯವಾದಗಳು.
ಬೆಳಕಿನ ಹಬ್ಬ ದೀಪಾವಳಿ ನಿಮ್ಮ ಬದುಕಿನಲ್ಲಿ ಹೊಸ ಬೆಳಕು ಮೂಡಲಿ...!
ಕಳೆದು ಹೋದ ದಿನಗಳ ನೆನಪಿಗಿಂತ
ಬರಲಿರುವ ಭವ್ಯ ಭವಿಷ್ಯವನ್ನು ಎದಿರು
ನೋಡೋಣ.....!!
ನಿಮ್ಮ ಮುಂದಿನ ದಿನಗಳು ಸುಖ-ಶಾಂತಿ-ನೆಮ್ಮದಿ, ಐಶ್ವರ್ಯದಿಂದ
ಕೂಡಿರಲಿ...
ನಿಮಗೆ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ
ದೀಪಾವಳಿ ಹಬ್ಬದ ಶುಭಾಷಯಗಳು....
ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ಪ್ರಾರಂಭವಾದ ಮರಗೂರಿನ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ೨೦೧೮ - ೧೯ ನೇ ಸಾಲಿನ ಹಂಗಾಮು ಕಬ್ಬು ನುರಿಸುವ ಕಾರ್ಯಕ್ರಮಕ್ಕೆ ಇಂಡಿ ತಾಲೂಕಿನ ಸಮಸ್ತ ರೈತರಿಂದ ಚಾಲನೆ ನೀಡಲಾಯಿತು.