Fantastic news! Very happy to see that Shatavadhani Dr. R Ganesh has been awarded the Padmabhushan! The award has found a fitting recipient indeed!
🙏🏻🙏🏻🙏🏻
PadmaAwards2026.pdf https://t.co/tYABYbOFFe
@hsraghav - is there a online source(s) or a book(s) where we can get कविकाव्यपरिचयः for both ancient, medieval and modern Sanskrit poets? DhanyavAdaH 🙏
"No civilization, no matter how rich, no matter how refined, can long survive once it loses the power to meet force with equal or superior force."
- Introduction to the Iliad translated by Robert Fagles
@elonmusk Not true. I just tried. And maybe the original video was doctored? You could have searched for Kamala Harris and then 'entered' Donald Trump but did not press search!! Quite possible...
ಭಾರತದ ನೈಜ ಸ್ವಾತಂತ್ರ್ಯ ಇತಿಹಾಸದ ಬಗ್ಗೆ ಎಲ್ಲ ಭಾರತೀಯರೂ ಅವಶ್ಯವಾಗಿ ಮತ್ತೆ ಮತ್ತೆ ಕೇಳಿ, ತಿಳಿದು, ವಿಚಾರ-ಮಂಥನ ಮಾಡಿಕೊಳ್ಳಬೇಕಾದ ಅದ್ಭ���ತ ಉಪನ್ಯಾಸಗಳ ಕೊಂಡಿ ಇಲ್ಲಿವೆ. ಇದನ್ನು ಹೆಚ್ಚು ಹೆಚ್ಚು ಭಾರತೀಯರಿಗೆ ತಲುಪಿಸಿ, ಕೇಳಲು ಪ್ರೋತ್ಸಾಹಿಸಬೇಕೆಂದು ವಿನಂತಿ.
ಮಾತು ಮತ್ತು ಬರಹದ ಬಗ್ಗೆ :
----------------------------
ಯಾವ ಭಾಷೆಗೂ ಮೊದಲು ಲಿಪಿ ಇರುವುದಿಲ್ಲ - ಏಕೆಂದರೆ ಮಾತು ಮೊದಲು ಬರೆಹ ನಂತರ. ಕನ್ನಡದ ಮೊದಲ ದಾಖಲೆ ಸಿಕ್ಕಿರುವುದು ಸಾಮಾನ್ಯಶಕ 2-3 ನೇ ಶತಮಾನದಲ್ಲಿ. ಅದಕ್ಕೆ ಮೊದಲು ಕನ್ನಡ ಇರಲಿಲ್ಲವೆಂದು ತಿಳಿಯೋಣವೇ? ಅಥವಾ ಆಗ ಬರವಣಿಗೆ��ೆ ಕನ್ನಡವನು ಒಳಪಡಿಸಿದರು ಎಂದು ತಿಳಿಯೋಣವೇ? ಎರಡನೆಯ ಅಭಿಪ್ರಾಯ ಸರಿಯಾಗಿರಬೇಕೆಂದು ತುಸು ಯೋಚಿಸಿದರೆ ತಿಳಿಯುತ್ತದೆ.
ಸಂಸ್ಕೃತ ಭಾಷೆಗೂ ಹಾಗೇ. ಲಿಪಿಯಿಲ್ಲದ ಕಾಲ ಒಂದಿತ್ತು. ಒಂದು ಕಾಲದಲ್ಲಿ ಬರೆಹದ ಶಕ್ತಿಯನ್ನರಿತ ಮೇಲೆ, ಬರೆವಣಿಗೆ ಬಂದಿತು. ಅದು ಬಂದ ನಂತರವೂ ಮೌಖಿಕ ಪರಂಪರೆಯೂ ಜೊತೆಗೇ ಮುಂದುವರೆಯಿತು. ಮುದ್ರಣ ಸಾಧ್ಯವಾಗುವತನಕ ನೆನಪಿನಲ್ಲಿಡುವುದಕ್ಕೆ ಇರುತ್ತಿದ್ದ ಹೆಚ್ಚಾಯ ತಿಳಿದೇ ಇದೆ. ಪುಸ್ತಕಗಳನ್ನು ಪ್ರತಿ ಮಾಡಲು ಇದ್ದ ಕಷ್ಟಗಳು, ತಾಳೆಗರಿಗಳನ್ನು ರಕ್ಷಿಸಿ ಇಡಲು ಇರುತ್ತಿದ್ದ ತೊಂದರೆಗಳು, ಇವುಗಳನ್ನೆಲ್ಲ ನೋಡಿದಾಗ, ಗ್ರಂಥಗಳನ್ನು ಬಾಯಿಂದ ಬಾಯಿಗೆ ದಾಟಿಸುವಂತಹ ಪರಂಪರೆಯೂ ಬರವಣಿಗೆಯ ಜೊತೆಗೇ ಮುಂದುವರೆದಿದ್ದರ ಕಾರಣ ತಿಳಿಯುತ್ತದೆ.
ಪಾಣಿನಿಯ ಕಾಲಕ್ಕಾಗಲೆ ಲಿಪಿ ಇತ್ತು ಎಂಬುದು ನಿರ್ವಿವಾದ. ಚಾಣಕ್ಯನ ಅರ್ಥಶಾಸ್ತ್ರವು ಲೆಕ್ಕ ಪತ್ರಗಳನ್ನು ಬರೆದಿಡ��ವ ವಿಷಯವನ್ನು ಹೇಳುತ್ತದೆ. ಲಿಪಿಯಿಲ್ಲದೇ ಇದು ಸಾಧ್ಯವೇ? ಹಾಗಾಗಿ ಭಾರತದ ಇನ್ನಾವ ಭಾಷೆಗೂ ಮೊದಲೇ ಸಂಸ್ಕೃತವನ್ನು ಬರೆಯುತ್ತಿದ್ದರು ಅಂತ ಖಚಿತವಾಗಿ ಹೇಳಬಹುದು. ಸಿಕ್ಕಿರುವ ಮೊದಮೊದಲ ಶಾಸನಗಳು ಪ್ರಾಕೃತದವು, ಆದರೆ ಪ್ರಾಕೃತವೂ ಸಂಸ್ಕೃತದ್ದೇ ಛಾಯೆಯೇ ಹೊರತು ಪೂರಾ ಬೇರೆ ಭಾಷೆಯೆಂದೆನಿಸುವುದಿಲ್ಲ. ಖಾತ್ರಿಯಾಗಿ ಹೇಳಬಹುದೇನೆಂದರೆ ಮೊದಮೊದಲ ಶಿಲಾಶಾಸನಗಳಲ್ಲಿ ಪ್ರಾಕೃತ ಬಳಸಿ ಒಂದೆರಡು ಶತಮಾನಗಳ ನಂತರ ಸಂಸ್ಕೃತ ಬಳಸಿದ್ದಾರೆ ಎಂದು ಅಷ್ಟೇ. ಅದಕ್ಕಿಂತ ಹೆಚ್ಚು ಏನು ಹೇಳಿದರೂ ಅದು ಊಹೆಯೇ.
ಬಹಳ ಜನರು ಸಂಸ್ಕೃತ ಎಂದರೆ ದೇವನಾಗರಿ ಎಂದುಕೊಂಡು, ಹತ್ತನೇ ಶತಮಾನ (ಸಾಮಾನ್ಯಶಕ) ದವರೆಗೆ ಸಂಸ್ಕೃತ ಬರವಣಿಗೆಯೇ ಇರಲಿಲ್ಲವೆಂಬ ತಪ್ಪು ಅಭಿಪ್ರಾಯವನ್ನು ಇಟ್ಟುಕೊಂಡಂತೆ ಕಾಣುತ್ತದೆ. ಆದರೆ, ಸಂಸ್ಕೃತದ ಲಿಪಿಯೂ ದೇಶ ಕಾಲಗಳಿಗೆ ಬದಲಾಗುತ್ತಾ ಹೋಗಿದೆ. ದೊರಕಿರುವ ಇತಿಹಾಸವನ್ನು ನೋಡಿದರೆ ಮೊದಲು ಬ್ರಾಹ್ಮೀ ( ಅದಕ್ಕೂ ಮೊದಲು ಯಾವುದಾದರೂ ಲಿಪಿ ಇದ್ದರೆ, ಪಾಣಿನಿಯ ಕಾಲದಲ್ಲಿ, ಅದು ನಮಗೆ ದೊರೆತಿಲ್ಲ. ಅಂದಹಾಗೆ ಬ್ರಾಹ್ಮೀ ಅನ್ನುವುದೂ ೧೯ನೇ ಶತಮಾನದಲ್ಲಿಟ್ಟ ಹೊಸ ಹೆಸರು, ೨0೦೦ ವರ್ಷಗಳ ಹಿಂದೆ ಆ ಲಿಪಿಗೆ ಹೆಸರಿತ್ತೇ, ಹೆಸರಿದ್ದರೆ ಏನು ಎಂಬುದೆಲ್ಲ ಊಹಾಪೋಹವಷ್ಟೇ). ನಂತರ ಶಾರದಾ, ವಂಗ, ನಾಗರೀ, ಸಿದ್ಧಂ, ಗ್ರಂಥ, ಕನ್ನಡ/ತೆಲುಗು ಮಲಯಾಳ ತಿಗಳಾರಿ ತಿಬೆಟ್ ಹೀಗೆ ಹತ್ತು ಹಲವು ಲಿಪಿಗಳಲ್ಲಿ ಬರೆದಿರುವುದು ಕಂಡುಬರುತ್ತರೆ. ಈ ಎಲ್ಲ ಲಿಪಿಗಳೂ ಬ್ರಾಹ್ಮಿಯು ಬದಲಾಗುತ್ತ ಬಂದ ಬೆಳವಣಿಗೆಯ ಹಂತಗಳೆಂದು ನೋಡಿದಾಗ ಸಂಸ್ಕೃತಕ್ಕೆ ಲಿಪಿಯಿಲ್ಲ ಎಂಬ ಮಾತಿಗೆ ಹುರುಳಿಲ್ಲವೆಂಬುದು ತಿಳಿಯುತ್ತದೆ.
ಸಂಸ್ಕೃತವನ್ನು ಕೇವಲ ದೇವನ���ಗರಿಯಲ್ಲಿ ಮಾತ್ರ ಬರೆಯುತ್ತಿ��ುವುದು ಇತ್ತೀಚಿನ ರೂಢಿ. ಸಂಸ್ಕೃತವನ್ನು ಹಲವು ಲಿಪಿಗಳಲ್ಲಿ ಬರೆವ ರೂಢಿ ಏಕೆ ಬಂತೆಂದರೆ ದೇಶ ವಿದೇಶಗಳ ವಿವಿಧ ಭಾಗಗಳಲ್ಲೂ ಸಂಸ್ಕೃತದಲ್ಲಿ ಉಪಯೋಗವೆನಿಸುವ ಶಾಸ್ತ್ರ-ಕಾವ್ಯ ಕೃತಿಗಳಿದ್ದದ್ದು. ಅಂಥ ಕೃತಿಗಳು ತಮಗೆ ಉಪಯುಕ್ತವೆಂದು ಸಂಸ್ಕೃತವನ್ನು (ಹೆಚ್ಚಾಗಿ) ಮಾತಾಡದ, ಅಥವಾ ಸಂಸ್ಕೃತ ಜನ್ಯವಾದ ಭಾಷೆಗಳನ್ನು ಮಾತಾಡ ಪ್ರದೇಶದ ಜನರೂ ಅರಿತಿದ್ದೇ ಅದಕ್ಕೆ ಕಾರಣ. ಆ ದಾರಿಯಲ್ಲಿ, ಒಂದೇ ಭಾಷೆಯನ್ನು ಬರೆಯಲು ತಮ್ಮ ತಮ್ಮ ಪ್ರದೇಶಗಳಲ್ಲಿ ಪ್ರಚಲಿತವಾದ ಲಿಪಿಗಳನ್ನು ಬಳಸ���ದರು ಅಷ್ಟೇ. ಒಟ್ಟಿನಲ್ಲಿ ಹತ್ತು ಹನ್ನೆರಡನೇ ಶತಮಾನದವರೆಗೆ ದೇವನಾಗರಿ ಲಿಪಿ ಕಂಡುಬರುವುದಿಲ್ಲ ಎಂದ ಮಾತ್ರಕ್ಕೆ ಅಲ್ಲಿಯವರೆಗೆ ಸಂಸ್ಕೃತವನ್ನುಬರೆಯಲಿಲ್ಲ ಎಂದು ಅರ್ಥವಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು.
ಕನ್ನಡದ ಲಿಪಿಯೂ ಹೀಗೇ - ಮೊದಲಿಗೆ ಕದಂಬ, ನಂತರ ಚಾಲುಕ್ಯ , ನಂತರ ಹೊಯ್ಸಳ, ನಂತರ ವಿಜಯನಗರ ಹೀಗೆ ಕಾಲಕಾಲಕ್ಕೆ ಬದಲಾಗುತ್ತಬಂದದ್ದೇ. ಕದಂಬ ಚಾಲುಕ್ಯ ಲಿಪಿಗಳಲ್ಲಿ ಸಂಸ್ಕೃತ ತೆಲುಗು ಕನ್ನಡ ಮೂರೂ ಭಾಷೆಗಳನ್ನು ಬರೆದಿರುವುದನ್ನು ನೋಡುವಾಗ, ನಾವು ��ಹೊಳೆಯ ರವಿಕೀರ್ತಿ ಶಾಸನದ ಲಿಪಿಯನ್ನು "ಕನ್ನಡ" ಲಿಪಿ ಎಂದು ಕರೆಯೋಣವೋ? ಚಾಲುಕ್ಯ ಲಿಪಿ ಎಂದು ಕರೆಯೋಣವೋ ಎಂಬ ಪ್ರಶ್ನೆ ನಾವೇ ಹಾಕಿಕೊಳ್ಳಬಹುದು. ಸಾಮಾನ್ಯ ನೆಲೆಯಲ್ಲಿ ಸರಳವಾಗಿ ಹೇಳ���ವಾಗ ಅದನ್ನು ಕನ್ನಡ ಲಿಪಿ ಎಂದೇವೇ ಹೊರತು, ಅದು ಕನ್ನಡಕ್ಕೆ ಮಾತ್ರ ಎಂದೇನಲ್ಲ.
ಒಟ್ಟಿನಲ್ಲಿ, ಸಂಸ್ಕೃತಕ್ಕೆ ಲಿಪಿಯಿರಲಿಲ್ಲವೆಂದಾಗಲಿ, ಸಂಸ್ಕೃತ ಬಲ್ಲವರು ಬರವಣಿಗೆಯನ್ನು ಧಿಕ್ಕರಿಸಿದರೆಂದಾಗಲೀ ಅಭಿಪ್ರಾಯಗಳನ್ನು ನೀವು ಅಲ್ಲಲ್ಲಿ ನೋಡಿದರೆ, ಅಂತಹ ಬೀಸು ಹೇಳಿಕೆಗಳನ್ನು ನೆಚ್ಚಬೇಡಿ!
(ಸಾರ್ವಜನಿಕ ಹಿತಾಸಕ್ತಿ ಟ್ವೀಟ್ - ಯಾವುದೋ ಫೇಸ್ ಬುಕ್ ಪೋಸ್ಟ್ ಗೆ ನಾನು ಬರೆದಿದ್ದ ಉತ್ತರವನ್ನು ತುಸು ಓರಣಗೊಳಿಸಿ ಹಾಕಿದ್ದೇನೆ).
@devduttmyth Dude, give references to your claims which are anyway unfounded. Why would I want to believe you who distorted the meaning of so many stories.