"ನಮ್ಮ ಜೀವನ ಅದೆಷ್ಟು ಸೋಜಿಗವಲ್ಲವೇ. ಮೊದಮೊದಲಿಗೆ 'ಬೇಡದ್ದು' ಎಂದು ಆಚೆಯೆತ್ತಿಟ್ಟ ಅದೇ ಹಂಬಲವೇ, ಮುಂದೊಂದು ದಿನ ಬೇಕಾದದ್ದಾಗಿ, ಅದು ಸಿಗದಿದ್ದಲ್ಲಿ ಜೀವನವೇ ಸಾಗದು ಎಂದೆನಿಸಿ, ಆ ಹಂಬಲವು 'ತೀವ್ರ ಹಂಬಲವಾಗಿ', ದಕ್ಕುವ ತನಕವೂ ದಿನಗಳುದ್ದಕ್ಕೆ ಕಾಡುತ್ತದೆ, ಎಡಬಿಡದೆ!"
#ಗುರುವಾರ_ಮತ್ತೆ_ಸಿಗುವಾ!
"ನಾವು ಮಾಡುವ ಬಲುದೊಡ್ಡ ತಪ್ಪೆಂದರೇ ಎಲ್ಲದಕ್ಕೂ ಸಮಯವಿದೆ ಎಂದು ತಿಳಿಯುವುದು. ನಂತರ, ಇದ್ದೆಲ್ಲಾ ಸಮಯದ ಅಪವ್ಯಯವಾದ ಮೇಲೆ ಸಮಯವೆಂಬುದು ಬರೀ ಮರೀಚಿಕೆಯಾಗಿತ್ತು ಎಂದು ಮರುಗುವುದು."
#ಗುರುವಾರ_ಮತ್ತೆ_ಸಿಗುವಾ!
"ವರ್ಷದ ಎಲ್ಲಾ ದಿನಗಳನ್ನು "ಪರ್ಫೆಕ್ಟ್" ಆಗಿಸಲು ಮನಸ್ಸು ಮಾಡದ ನಾವು, ವರ್ಷದ ಕೊನೆದಿನವನ್ನು ಮಾತ್ರವೇಕೆ ಅತಿ ನಯನಾಜುಕಾದ ಪರಿಪೂರ್ಣತೆಯಲ್ಲಿ ಮುಗಿಸುವ ಗೋಜಿಗೆ ಕೈಹಾಕುತ್ತೇವೆ? ಪರಿಪೂರ್ಣತೆ ದಕ್ಕದಿದ್ದಲ್ಲಿ ಬೇಸರಗೊಂಡು ಅದೇ ಬೇಸರವನ್ನೇಕೆ "ಹೊಸವರುಷ"ದೊಳಗೆಳೆದು ನಡೆಯುತ್ತೇವೆ?!"
#ಅಂಕುಡೊಂಕು_ಭಾವಗಳ್#ಶುಕ್ರವಾರಕ್ಕೊಂದು_ಮಾತು
"ಇದುವೂ ಹಾಗೆ ತಾನೆ?
ಈ ದಿನದ ಸ್ವಚ್ಛಂದ ತಿಳಿನೀಲಿ ಬಾನಿಗೆ, ಸೂರ್ಯನ ಬಲುಚೆಂದದ ಬೆಳ್ಹೊಳಪಿಗೆ, ಹಿಂದಿನ ದಿನ ಸುರಿದ ಬಿರುಸಾದ ಗುಡುಗುಸಿಡಿಲು ಸಹಿತ ಜಡಿಮಳೆ ಕಾರಣವಾಗುವಂತೆ!?"
#ಗುರುವಾರ_ಮತ್ತೆ_ಸಿಗುವ !!
"The present scenario of Online classes and virtual classrooms reminds me of our Class 9th english chapter, 'The fun they had' by Isaac Asimov!"
#TuesdayThoughts
"ಗೋಡೆಗೆ ಬಿರುಸಾಗಿ ಎಸೆಯಲಾದ ಚೆಂಡು ಅದೇ ರೀತಿಯಲ್ಲಿ, ಅಷ್ಟೇ ವೇಗದಲ್ಲಿ ತನ್ಬತ್ತ ಧಾವಿಸಿದಾಗ ಗೋಡೆಯನ್ನು ತೆಗಳಿ ಹೀಗಳೆಯುವುದು ತರವೇ ?! ಅದು ತಾನು ಮಾಡಿದ ಕ್ರಿಯೆಯ ಪ್ರತಿಫಲವೇ ಅಲ್ಲವೆ ?!"
ಒಮ್ಮೆ ಓರ್ವ ಹಿರಿಯ ಹೀಗೆಂದ -
" ನಿಮಗೆ ಲೈಲಾವನ್ನು ನೋಡಿದಾಗ ಆಕೆ ಮಜ್ನು ಹೊಗಳುವಷ್ಟು ಸುಂದರಿಯೇನಲ್ಲ ಎನಿಸಬಹುದು. ಆದರೆ, ಒಂದು ವಿಷಯ ಗಮನದಲ್ಲಿರಲಿ. ಲೈಲಾವಿನ ಆ ಸೌಂದರ್ಯವನ್ನು ಕಾಣಲು ಮಜ್ನುವಿನ ಕಂಗಳಿಂದ ಮಾತ್ರ ಸಾಧ್ಯ. ಹಾಗೆಯೇ, ಒಂದು ವಿಚಾರದ ತೀವ್ರತೆಯನ್ನು ಅತಿಮಿಗಿಲಾಗಿ ಅರಿಯಲು ಅದನ್ನು ಅನುಭವಿಸಿದವನಿಂದ ಮಾತ್ರ ಸಾಧ್ಯ."
"It is very easy to break a person when he is already corroded completely from inside. Though yours is a simple touch, you may be the one responsible for the destruction."
✨
-- An excerpt from #TheBrokenOnes .
"ಇಷ್ಟ-ಕಷ್ಟಗಳಾವುದೂ ಶಾಶ್ವತವಲ್ಲ. ಮನುಷ್ಯ ತನ್ನ ಶಕ್ತಿಯನ್ನೆಲ್ಲಾ ಕೊನೆಗೊಂದು ದಿನ ಕೆಳೆದುಕೊಂಡಾಗ, ಅವನ ಕಣ್ಣಿಗೆ ಎಲ್ಲವೂ ಸಮಾನವಾಗೇ ಕಾಣುತ್ತವೆ, ಆತ ಕಷ್ಟವೆನ್ನುತ್ತಿದ್ದದನ್ನು ಕೂಡ ಇಷ್ಟಪಡುತ್ತಾನೆ. ಹಾಗಾಗಿ, ಅಂತ್ಯದಿ ಕಾಣುವ ಆ ಸಮಾನ ಇಷ್ಟಭಾವವನ್ನು ಈಗಲಿಂದಲೇ ಕಂಡರೆ ಜೀವನ ನಲಿವಲ್ಲವೆ ? ಒಳಿತಲ್ಲವೇ ?"
#ಬುಧವಾರದ_ಬುದ್ಧಿಜೀವಿಗಳು
"Picking up a good habit is very tough, whereas, dropping a bad habit is also equally tough, but, it becomes easy when we change our intentions a bit."
Lines from #AadaiTheMovie
To all those who think that their friend has ignored them and has treated them like an option-
"Never ever think that you are an option. Remember, once you become friends, you are FRIENDS FOREVER. Talk to them, spend time with them and you will know how much they care for you."✨
"ಸುಂದರ ಹಕ್ಕಿಯನ್ನು ಕಂಡರೆ ಯಾರಿಗೆ ತಾನೆ ಇಷ್ಟವಾಗದಿದ್ದೀತು? ಹಾಗೆಂದು ಅದನ್ನು ಪಂಜರದೊಳಗೆ ಕೂಡಿ ಹಾಕಿ ಅದರ ಸೌಂದರ್ಯವೆಲ್ಲವನೂ ತಾನು ಮಾತ್ರ ಆಸ್ವಾಧಿಸಬೇಕೆಂಬುದು ಎಷ್ಟು ಸರಿ?"
#ಶುಕ್ರವಾರಕ್ಕೊಂದು_ಮಾತು
"ಚಿಕ್ಕ ಚಿಕ್ಕ ಸಂತಸಗಳನ್ನು ದೊಡ್ಡದಾಗಿ ಆಚರಿಸಬೇಕೇ ಹೊರತು ಸಣ್ಣ ಸಣ್ಣ ವಿರಸಗಳನ್ನಲ್ಲ. ಸರಿ ತಪ್ಪು ಎಷ್ಟೇ ಇದ್ದರೂ ಒಪ್ಪಿ ಮುನ್ನಡೆಯುತ್ತಾ ಹಸನಾದ ನೆನಪಿನ ರಾಹ ಸೃಷ್ಟಿಸುವುದೇ ಜೀವನ."
#ಕುಟುಂಬಕ್ಕೊಂದು_ಕಿವಿಮಾತು#ಮಂಗಳವಾರದ_ಮಾತುಗಳು