ನಾ ತಿಂದೆ ಇಡ್ಲಿ ಸಾಂಬಾರ್
ಆಕೆ ತಿಂದಳು ವಡಾ ಮೊಸರ್
ನಾನಂದೆ ನೋಡು ಒಂದಾಯಿತು
ನಮ್ಮ ಪ್ರೀತಿಯ ಟಿಫಿನ್
ಅವಳಂದಳು ಇದೆ ಋಷಿಗೆ
ಕಟ್ಟು ನೀನೇ ಪೂರ್ತಿ ಬಿಲ್..!
#hanigavana#kannada#shortpoem
ಕಗ್ಗದ ಹೂರಣದ ಸವಿಯ ನೀಡಿ
ಬದುಕಿನ ಪಾಕದ ಅರ್ಥ ಹೇಳಿ
ಕಷ್ಟದ ಕಲ್ಲೂ ಸಿಕ್ಕರೆ ಸಕ್ಕರೆಯೆಂದೇಳಿ
ಇರುವ ಭಾಗ್ಯವ ನೆನೆದು ಬಾರನೆಂಬುದನು
ಮರೆಯೆಂದ ಆಧುನಿಕ ಸರ್ವಜ್ಞ
ಜ್ಞಾನಿ ಡಿವಿಜಿಯ ಜನುಮ ದಿನ
#dvg#kannada#dvgundappa#birthday#hanigavana#dharwad
ಪದ ಬಳಸಿ ಪದ ಕಟ್ಟಿದವ
ಕಷ್ಟ ಕವಿದ್ರೂ ಕವಿಯಾದವ
ಅಂಬಿಕಾ ತನಯ ಜಗದಕವಿ ಇವ
ಯುಗ ಮುಗಿದರೂ ಉಳಿಯುವ
ನಕ್ಕಾವ ಗೆದ್ದಾವ ಸಾಧನಕೇರಿಯವ
ಬೆಂದ್ರೆ ಬೇಂದ್ರೆ ಆಗ್ತಿ ಅಂದಾವ
#drbendre#kavi#kannada#ambikatanayadatta
ನೂರಾರು ಸಸಿಗಳ ಹಚ್ಚಿ ಹೆಮ್ಮರವಾಗಿ
ಬೆಳೆದು ಪಕ್ಷಿ ಪ್ರಾಣಿ ಮಾನವರಿಗೆ
ವೃಕ್ಷಗಳ ಸೆರಗು ಹಾಸಿ ತಂಪೆರದ
ಕನ್ನಡ ನಾಡಿನ ಹಿರಿಯ ಮುಗ್ದ ತಾಯಿ
ಸಾಲುಮರದ ತಿಮ್ಮಕ್ಕಗೆ ನುಡಿ ನಮನ
#kannada#salumaradatimmakka#vrukshamate
ಕಳೆದೊಂದು ತಿಂಗಳಿಂದ ನಾನೋಡಾಡುತ್ತಿರುವ ರಸ್ತೆಯ ಬದಿಯಲ್ಲಿನ ಮರಡದಿ ಯಾರೋ ಎಸೆದ ಬುದ್ಧನ ಒಂದು ಚಿಕ್ಕ ಮೂರ್ತಿ ನನ್ನನು ನೋಡುತ್ತಿತ್ತು. ಅದನ್ನು ನೋಡಿಕೊಂಡು ಕೆಲಸಕ್ಕೆ ಹೋಗುವಾಗ ಏನೋ ಒಂದು ಮನದಲ್ಲಿನ ತಳಮಳ ಮಾಯವಾದಂತೆ ಭಾಸವಾಗುತ್ತಿತ್ತು. (1)
ರಸ್ತೆ ಬಳಿ ಬುದ್ಧ
ಪ್ರಖರದ ಬಿಸಿಲು ಮಳೆಗೆ
ನಲುಗದೆ ಶರಣಾದ ಬುದ್ಧ
ಅಗರ್ಭನ ಮನೆಯೋ
ಬಡವನ ಗುಡಿಯೋ ಸ್ಪರ್ಶಿಸಿದ ಬುದ್ಧ
ತನ್ನ ಕಷ್ಟ ಮುರಿಯಲು ದುಡಿದ
ಮೂರ್ತಿಕಾರ ನಗಿಸಿದ ಬುದ್ಧ
ವರ್ಷ ಕಳೆದರೂ, ಭಾಗ ತುಂಡಾದರೂ
ಶಾಂತತೆಯ ಭಾವ ತೋರುವ ಬುದ್ಧ
ಹಾದು ಹೋಗರ ಮನಕ್ಕೆ ಮಂದಹಾಸದ
ಕಿರಣವ ಬೀರಿ ಎಲ್ಲಿಯವರೆಗೆ ಕೂರುವ ಬುದ್ಧ
Kantara chapter 1 🔥🔥
Watch and enjoy - fighting scenes, vfx and comedy mixed perfect film. Don't listen negative reviews, it's worth film to watch in theaters. Amazing direction by @shetty_rishab and music is smooth and perfect.
#kantharachapter1#kannada#RishabShetty