ಸಮಯ ಜಾರುವ ಮುನ್ನ ಒಮ್ಮೆ ಮಾತಾಡುವ
ಕಿರು ಬೆರಳ ಹಿಡಿದು ಕಡಲ ತೀರದಲ್ಲಿ ಇನ್ನೊಮ್ಮೆ ನಡೆದಾಡುವ
ಮೌನ ತಬ್ಬಿದ ಇಳಿ ಸಂಜೆಯಲ್ಲಿ ಮನವ ಆಲಂಗಿಸುವ
ಇರುವ ಸಮಯವು ಸೋರುವ ಮುನ್ನ ತಿಳಿದು ಕೂಡಿ ಸಾಗುವ
ತಿರುವು ತಪ್ಪಾಗುವ ಮೊದಲು ಅರಿತು ಜೀವಿಸುವ
ಸಮಯ ಜಾರುವ ಮುನ್ನ ಒಮ್ಮೆ ಮಾತಾಡುವ...!!
#love#happiness
ಅಮ್ಮನಲ್ಲಿ ಇರುವುದು ಎರಡೇ ಪದ ಆದರೂ,
ಅಂತ್ಯವಿಲ್ಲದ ಪ್ರೀತಿಯನ್ನು ತೋರಿದವಳು.
ಇಡೀ ಜಗವೆಲ್ಲ ನಿಂತರೂ ಎದುರಿಗೆ
“ಅವಳಿದ್ದಾಳಲ್ಲ” ಎನ್ನುವ ತುಸು ಜಂಬ ಎನಗೆ
ದೇವನಲ್ಲಿ ಕೋರುವೆ ಒಂದೇ ಬೇಡಿಕೆ
ಅವಳಿಗೆ ದೀರ್ಘಾಯಸ್ಸಿನ ಇರುವಿಕೆ.
#amma