ರಾಹುಲ್ ಗಾಂಧಿ ವಿರುದ್ಧದ ಹೇಳಿಕೆ ಖಂಡನೀಯ: ಯಶ್ ಪಾಲ್ ಸುವರ್ಣ ಕ್ಷಮೆಯಾಚಿಸಬೇಕು – ಮಮತಾ ಗಟ್ಟಿ
ಮಂಗಳೂರು: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕುರಿತು ಬಳಸಿರುವ ಭಾಷೆ ಹಾಗೂ ಮಾಡಿರುವ ವೈಯಕ್ತಿಕ ಆರೋಪಗಳು ಅತ್ಯಂತ ಖಂಡನೀಯ, ಬೇಜವಾಬ್ದಾರಿಯುತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ವ್ಯಕ್ತಿಯ ಘನತೆಗೆ ಧಕ್ಕೆ ತರುವ ರೀತಿಯ ಆರೋಪಗಳನ್ನು ಮಾಡುವುದು ರಾಜಕೀಯ ಸಂಸ್ಕೃತಿಗೆ ವಿರುದ್ಧವಾಗಿದೆ. ದೇಶದ ಪ್ರಮುಖ ನಾಯಕರ ವಿರುದ್ಧ ವೈಯಕ್ತಿಕ ನಿಂದನೆ ಮಾಡುವ ಬದಲು, ಜನರ ಸಮಸ್ಯೆಗಳ ಕುರಿತು ಚರ್ಚಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಯಶ್ ಪಾಲ್ ಸುವರ್ಣ ಅವರು ಮಾಡಿರುವುದಾಗಿ ವರದಿಯಾಗಿರುವ, "ರಾಹುಲ್ ಗಾಂಧಿ ಅವರ ಕುಟುಂಬವನ್ನು ಬಾಬರಿ ಮಸೀದಿ ಧ್ವಂಸ ಮಾಡಿದಂತೆ ಧ್ವಂಸ ಮಾಡುತ್ತೇವೆ" ಎಂಬ ಹೇಳಿಕೆ ಇನ್ನಷ್ಟು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಮಾತುಗಳು ದ್ವೇಷ ಪ್ರಚೋದನೆ ಹಾಗೂ ಪ್ರಜಾಪ್ರಭುತ್ವದ ಸಂಸ್ಕೃತಿಗೆ ವಿರುದ್ಧವಾದ ಮನೋಭಾವವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಟೀಕಿಸಿದರು.
ಯಶ್ ಪಾಲ್ ಸುವರ್ಣ ಅವರು ತಮ್ಮ ಹೇಳಿಕೆಯನ್ನು ತಕ್ಷಣ ಹಿಂತೆಗೆದುಕೊಂಡು ದೇಶದ ಜನರ ಕ್ಷಮೆಯಾಚಿಸಬೇಕು. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳು ಈ ಹೇಳಿಕೆಗಳ ಕುರಿತು ಕಾನೂನುಬದ್ಧವಾಗಿ ಪರಿಶೀಲನೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
#Mangaluru #mamathagatti #yashpalsuvarna #udupi #newskarnataka
ಹೆಣ್ಣಾಗಲಿ.. ಗಂಡಾಗಲಿ..ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತನೇ ಜಿಲ್ಲಾಧ್ಯಕ್ಷರಾಗಲಿ - ರಮಾನಾಥ್ ರೈ
ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ ಕುರಿತು ರಮಾನಾಥ್ ರೈ ಅಭಿಪ್ರಾಯ
ಮಂಗಳೂರು: ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಚಾರವಾಗಿ ಮಾಜಿ ಸಚಿವ ರಮಾನಾಥ್ ರೈ ಮಾತನಾಡಿ ಕಾಂಗ್ರೆಸ್ ನ ನೈಜ, ಕ್ರಿಯಾಶೀಲ, ಸಕ್ರಿಯ ಒಬ್ಬ ಸಾಮಾನ್ಯ ಕಾರ್ಯಕರ್ತ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಗಬೇಕು. ಮೊನ್ನೆ ಮೊನ್ನೆ ಬಂದವರಲ್ಲ. ಅದು ಕೂಡ ಸುಮಾರು ವರುಷಗಳಿಂದ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದವರು ಆಗಬೇಕು. ಅದು ಹೆಣ್ಣಾಗಲಿ, ಗಂಡಾಗಲಿ ಜಿಲ್ಲಾಧ್ಯಕ್ಷ ನಾಗಿ ಬರಬೇಕಾಗಿ ನನ್ನ ಅಪೇಕ್ಷೆ ಎಂದರು.
#Mangaluru #ramanathrai #Congress #newskarnataka
ಬಾಬರಿ ಮಸೀದಿಯಂತೆ..ರಾಹುಲ್ ಗಾಂಧಿ ಕುಟುಂಬ ಧ್ವಂಸ ಹೇಳಿಕೆ: ಯಶ್ ಪಾಲ್ ಸುವರ್ಣ ವಿರುದ್ಧ ರಮಾನಾಥ ರೈ ತಿರುಗೇಟು
ಕಾಂಗ್ರೆಸ್ ನ ಸಾಮಾನ್ಯ ಕಾರ್ಯಕರ್ತನನ್ನು ಮುಟ್ಟಿ ನೋಡು; ಈ ಜಿಲ್ಲೆಯಲ್ಲಿ ಏನಾಗುತ್ತದೆಂದು ನೋಡು -
ರಮಾನಾಥ ರೈ ಸವಾಲು
ಮಂಗಳೂರು: ಯಶ್ ಪಾಲ್ ಸುವರ್ಣ ತಲೆಯಲ್ಲಿ ಡ್ರಗ್ ಗಿಂತ ದೊಡ್ಡ ಅಮಲು ಹರಡಿದೆ, ಬಾಬರಿ ಮಸೀದಿಯಂತೆ ರಾಹುಲ್ ಗಾಂಧಿ ಕುಟುಂಬವನ್ನು ಧ್ಬಂಸ ಮಾಡುತ್ತೇನೆಂದು ಹೇಳಿದ್ದಾನೆ. ಧ್ವಂಸ ಬಿಡು, ಕಾಂಗ್ರೆಸ್ ನ ಸಾಮಾನ್ಯ ಕಾರ್ಯಕರ್ತನನ್ನು ಮುಟ್ಟಿ ನೋಡು, ಈ ಜಿಲ್ಲೆಯಲ್ಲಿ ಏನಾಗುತ್ತದೆಂದು ನೋಡು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಶ್ಪಾಲ್ ಸುವರ್ಣನ ಪ್ರತಿಯೊಂದು ಹೇಳಿಕೆ ಕಾಂಗ್ರೆಸ್ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ನೋವಾಗಿದೆ. ರಾಹುಲ್ ಗಾಂಧಿ ಡ್ರಗ್ ಎಡಿಕ್ಟ್ ಎನ್ನುವ ಪುರಾವೆ ಇವರ ಬಳಿ ಇದೆಯೇ? ರಾಜಕೀಯದಲ್ಲಿ ಟೀಕೆ ಇದ್ದದ್ದೇ. ಹಿಂದೆ ಕಾಂಗ್ರೆಸ್ ಮುಕ್ತ ಎಂದು ಹೇಳಿದ್ದರು. ಅದರೆ ಡ್ರಗ್ ಎಡಿಕ್ಟ್ ಎನ್ನುವುದು, ಧ್ವಂಸ ಮಾಡುತ್ತೇನೆಂದು ಹೇಳುವುದು ಟೀಕೆಯಲ್ಲ, ಅದು ವೈಯಕ್ತಿಕ ದ್ವೇಷ. ಕುಟುಂಬ ನಾಶ ಮಾಡುತ್ತೇನೆ ಎನ್ನುವ ಮಾತು ಯಾರೇ ಹೇಳಿದರೂ ತಪ್ಪು ಎಂದು ರೈ ಪ್ರತಿಪಾದಿಸಿದರು.
ಮತೀಯ ಭಾವನೆಯನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಲು ಹಿನ್ನಡೆ ಆಗುತ್ತಿರುವ ಸಂದರ್ಭದಲ್ಲಿ ಇವರು ಹೇಳಿಕೆಗಳಿಗೆ ಮೊರೆ ಹೋಗಿದ್ದಾರೆ, ಚಿಕ್ಕಮಗಳೂರು ಶಾಸಕರೂ ಇತ್ತೀಚಿಗೆ ಹೇಳಿಕೆ ನೀಡಿದ್ದಾರೆ. ಅವರು ಬುದ್ಧಿವಂತರಾಗಿದ್ದಾರೆನ್ನುವ ಭಾವನೆ ಇರಬಹುದು, ಆದರೆ ನಾವು ದಡ್ಡರೆನ್ನುವ ಭಾವನೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೇಡ.ಯಶ್ಪಾಲ್ ಅವರ ಶಾಸಕ ಸ್ಥಾನ ರದ್ದುಪಡಿಸಬೇಕು, ತಕ್ಷಣ ಬಂಧಿಸಬೇಕೆಂದು ರೈ ಒತ್ತಾಯಿಸಿದ್ದಾರೆ.
ರಕ್ಷಣೆಗಾಗಿ ಮನೆಯಲ್ಲಿ ಕತ್ತಿ ಇಡಿ, ತಲ್ವಾರು ಇಡಿ ಎಂದು ಕಾಂಗ್ರೆಸ್ ನ ಯಾರೂ ಹೇಳುವುದಿಲ್ಲ. ಇಂಥ ಹೇಳಿಕೆಗಳು ಸಂವಿಧಾನದ ಮೇಲೆ ವಿಶ್ವಾಸ. ಕಾನೂನಿನ ಮೇಲೆ ನಂಬಿಕೆ ಇಲ್ಲದವರಿಂದ ಮಾತ್ರ ಬರುತ್ತದೆ ಎಂದು ರೈ ಆಕ್ರೋಶ ವ್ಯಕ್ತಪಡಿಸಿದರು.
#mangaluru #ramanathrai #congress #bjp #yashpalsuvarna #controversy #newskarnataka
'ಸ್ವಾತಂತ್ರ್ಯ ಹೋರಾಟದಲ್ಲಿ ಆರ್ಎಸ್ಎಸ್ ಎಲ್ಲೂ ಇರಲಿಲ್ಲ'
ಸಂಘದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ
'ಸತ್ಯ ಮತ್ತು ಅಹಿಂಸೆ ಭಾರತದ ಆತ್ಮ' ಎಂದು ಹೇಳಿಕೆ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆರ್ಎಸ್ಎಸ್ (RSS) ಯಾವುದೇ ಪಾತ್ರ ವಹಿಸಿಲ್ಲ ಮತ್ತು ದೇಶದ ಮೂಲಭೂತ ಮೌಲ್ಯಗಳನ್ನು ಬದಲಾಯಿಸಲು ಅದಕ್ಕೆ ಸಾಧ್ಯವಿಲ್ಲ ಎಂದು ಆರೋಪಿಸುವ ಮೂಲಕ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಆ ಸಂಘಟನೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಗಳ ವೇಳೆ ಯುವಜನತೆ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಪ್ರಸ್ತಾಪಿಸಿದ ಅವರು, ಸತ್ಯ, ಅಹಿಂಸೆ ಮತ್ತು ಸಹೋದರತ್ವದ ಮೇಲೆ ದೇಶದ ಅಡಿಪಾಯ ನಿಂತಿದೆ ಎಂದು ಹೇಳಿದರು; ಅಲ್ಲದೆ, ಶಿಕ್ಷಣ ನೀತಿ ಅಥವಾ ಐತಿಹಾಸಿಕ ನಿರೂಪಣೆಗಳಲ್ಲಿನ ಬದಲಾವಣೆಗಳ ಮೂಲಕ ಈ ಆದರ್ಶಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.
#PriyankaGandhi #RSS #Parliament #MonsoonSession #newskarnataka