ದೇಹದೊಳಗಿದ್ದ ಆತ್ಮ ಅಗಲಿ ಇಂದಿಗೆ ಎರಡು ವರ್ಷ.. ಹೌದು ನನ್ನ ರೋಹಿತಣ್ಣನ ಉಸಿರು ನಿಂತು ಎರಡು ವರ್ಷ ಕಳೆಯಿತು. ಈ ಎರಡು ವರ್ಷದಲ್ಲಿ ನೀವಿಲ್ಲದ ಬದುಕು ಹಾವು-ಏಣಿಯಂತೆ... ಈ ಬಾರಿ ನೀವು ಗ್ರೀನ್ ಸಿಗ್ನಲ್ ನೀಡಿ ಮದುವೆಯಾಗು ಎಂದ ಹುಡುಗಿಯ ಕೈ ಹಿಡಿದ್ದಿದ್ದೇನೆ... ಇನ್ನೊಂದು ನಿಮ್ಮ ಕನಸು ನನಸು ಮಾಡುವ ಜವಬ್ದಾರಿ ಬಾಕಿ ಇದೆ. ಮಿಸ್ ಯೂ ಅಣ್ಣಾ
ಕಣ್ಣ ಹನಿಯೊಂದು ಕಣ್ಣಲೇ ತೂಗಿ ಎದೆಯೊಳಗೆ ನೋವು ತುಂಬಿ ವಿಧಿಯ ಹಣೆಬರಹವ ನೆನೆಸುತ್ತಿದ್ದಾಗ, ದೇವರ ಮಗನೊಬ್ಬ ಮರುಜನ್ಮವ ನೀಡಿದ್ದರು. ದೇಶಕ್ಕೆ ಶಾಸಕ, ಸಚಿವರಿರಬಹುದು ನನ್ನ ಪಾಲಿನ ಜೀವ-ಜೀವನ ಕೊಟ್ಟ ದೇವ ಸ್ವರೂಪಿ ಮಾನವ. ಹ್ಯಾಪಿ ಬರ್ತಡೇ ಸರ್!! ದೇವರು ನಿಮ್ಮೊಂದಿಗೆ ಇದ್ದಾನೆ.*
*ಎಂದಿಗೂ ನಿಮ್ಮ ಆಭಾರಿ*
@utkhader
ಪಾಕಿಸ್ತಾನ ಶಾಂತಿಯ ಮಾತಿನ ಬೆನ��ನಲ್ಲೇ ಭಾರತಕ್ಕೆ ಇರಿದ ಚೂರಿಯ ಗಾಯದ ಗುರುತೇ ಈ ಕಾರ್ಗಿಲ್. ಚಳಿಗಾಲದಲ್ಲಿ ಭಾರತದ ಪ್ರದೇಶವನ್ನು ಅಕ್ರಮಿಸಿಕೊಂಡಿದ್ದ ಪಾಕಿಸ್ತಾನಕ್ಕೆ ಭಾರತ ಗಡಿಯಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಟ್ಟಹೊಡೆತದ ನೆನಪಿನ ದಿನವೇ ಕಾರ್ಗಿಲ್ ವಿಜಯ್ ದಿವಸ್. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಎಲ್ಲಾ ಸೈನಿಕರಿಗೂ ಸಲಾಂ
ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು, ಭಾರತದ ಇತಿಹಾಸದಲ್ಲಿ ಅಜರಾಮರರಾದ ಬಾಲ ಗಂಗಾಧರ ತಿಲಕ್ ಹಾಗು ಚಂದ್ರಶೇಖರ್ ಆಜಾದ್ ರವರು ಜನಿಸಿದ ಸುದಿನವಿಂದು. ಪ್ರಖರ ಭಾರತೀಯ ರಾಷ್ಟ್ರವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯೋಣ.
ತಂದೆಯ ಅಗಲುವಿಕೆ ಅಪಾರ ನೋವುಂಟಾಗಿದೆ. ನಿಮೋನಿಯ ಹಾಗೂ ಹೃದಯಾಘಾತದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು ಜೀವನದ ಸಂಕಷ್ಟದ ಸಮಯದಲ್ಲಿ ನನಗೆ ಸಹಕರಿಸಿದ ಶಾಸಕ ಯುಟಿ ಖಾದರ್ ಡಾ.ಇಫ್ತಿಕಾರ್ ಅಲಿಯವರ ಸಹಾಯಕ್ಕೆ ಎಂದಿಗೂ ಚಿರ ಋಣಿ ಆಗಿರಲು ಇಚ್ಛಿಸುತ್ತೇನೆ. ಜೀವನದ ಉದ್ದಕ್ಕೂ ತೀರಿಸಲಾಗದ ಕೃತಜ್ಞತಾ ಭಾವದೊಂದಿಗೆ.@utkhader@u_ifthikar
Stay home stay safe.ಇಂದು ಕೊರೊನಾ ಪರೀಕ್ಷೆಗೆ ಮಾಡಿದ್ದೇನೆ. ನಾಳೆ ರಿಸಲ್ಟ್ ಬರುವವರೆಗೆ ಸಂಪರ್ಕ ಸೋಶಿಯಲ್ ಡಿಸ್ಟೆಂಟ್.
ಜಾಸೀಮ್ ಎನ್.ಎಮ್.ಸಿ
ಮಾಧ್ಯಮ ವಕ್ತಾರ
ದ.ಕ ಯುವ ಕಾಂಗ್ರೆಸ್ ಸೌತ್
ದೇಶದ ಪ್ರಥಮ ಪ್ರಧಾನಿ ಭಾರತದ ಪ್ರಜಾಪ್ರಭುತ್ವದ ಹರಿಕಾರ ಮಾಜಿ ಪ್ರಧಾನಿ ಜವಹರಲಾಲ್ ನೆಹರುರವರ ಪುಣ್ಯಸ್ಮರಣೆಯಂದು ಗೌರ���ಪೂರ್ವಕ ನಮನಗಳು
ಜಾಸೀಮ್ ಎನ್.ಎಮ್.ಸಿ
ಮಾಧ್ಯಮ ವಕ್ತಾರರು
ದ.ಕ ಯುವ ಕಾಂಗ್ರೆಸ್ ಸಮಿತಿ
ಬಿರುವೆರ್ ಕುಡ್ಲ ಜೆಪ್ಪು ಘಟಕ