ಜನಪ್ರಿಯ ನಾಯಕರಾದ ಶ್ರೀ @siddaramaiah ಅವರು ಕರ್ನಾಟಕದ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಕರ್ನಾಟಕದ ಇತಿಹಾಸದಲ್ಲಿ ಪೂರ್ಣಾವಧಿ ಪೂರೈಸಿ, ದೀರ್ಘಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಅವರ ರಾಜಕೀಯ ನಡೆ ಅನೇಕರಿಗೆ ಸ್ಪೂರ್ತಿದಾಯಕ.
#Siddaramaiah
ರಾಜ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಈ ನಾಡಿನ ಜನತೆಯ ಸೇವಾ ಮಾಡಲು ನಾಡದೇವತೆ ತಾಯಿ ಚಾಮುಂಡೇಶ್ವರಿ ನಿಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ, ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ .
#Siddaramaiah
ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ನಾಯಕ, ಪಂಚ ವಾರ್ಷಿಕ ಯೋಜನೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿಕೊಟ್ಟ ಸಮರ್ಥ ನಾಯಕ, ನಮ್ಮೆಲ್ಲರ ಸ್ಪೂರ್ತಿ ಶ್ರೀ ಪಂಡಿತ ಜವಾಹರಲಾಲ್ ನೆಹರೂರವರ ಜನ್ಮದಿನದಂದು ಅವರಿಗೆ ನನ್ನ ಗೌರವ ಪೂರ್ವಕ ನಮನಗಳು.
#JawaharlalNehru
ತಮ್ಮ ಅದ್ಭುತ ಬರಹಗಳ ಮೂಲಕ ಕನ್ನಡ ನಾಡು- ನುಡಿ ಸಂಸ್ಕೃತಿಗೆ ಜೀವಕಳೆ ತುಂಬಿದ ಕನ್ನಡದ ಸಾಹಿತ್ಯ ಲೋಕದ ದಿವ್ಯ ಚೇತನ, ಹೆಮ್ಮೆಯ ಕನ್ನಡಿಗ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕುವೆಂಪು ರವರ ಪುಣ್ಯ ಸ್ಮರಣೆಯಂದು ಅವರಿಗೆ ನನ್ನ ಗೌರವ ಪೂರ್ವಕ ನಮನಗಳು.
#Kuvempu
ಸ್ವಾತಂತ್ರ್ಯ ಹೋರಾಟಗಾರರು, ದೇಶದ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಶಿಕ್ಷಣ ತಜ್ಞ ಶ್ರೀ ಮೌಲಾನ ಅಬ್ದುಲ್ ಕಲಾಂ ಅಜಾದ್ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ಪೂರ್ವಕ ನಮನಗಳು
#NationalEducationDay
ಚಿತ್ರದುರ್ಗದ ಮೇಲೆ ಹೈದಾರಾಲಿಯ ಸೈನಿಕರು ಆಕ್ರಮಣ ಮಾಡಿದಾಗ ತನ್ನ ಒನಕೆಯಿಂದಲೇ ಅವರನ್ನೆಲ್ಲ ಸೆದೆಬಡಿದು ಚಿತ್ರದುರ್ಗದ ಕೋಟೆ ರಕ್ಷಿಸಿದ ಓಬವ್ವ ಸಾರ್ವಕಾಲಿಕ ಸಾಹಸಿ ಹೆಣ್ಣು ಮಗಳು.
ವೀರ ವನಿತೆ ಒನಕೆ ಓಬವ್ವ ಶೌರ್ಯ ಹಾಗೂ ಸಾಹಸದ ಪ್ರತೀಕ.
ಒನಕೆ ಓಬವ್ವ ಜಯಂತಿಯಂದು ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
#OnakeObavva
ವಿಶ್ವದ ಸಮಸ್ತ ಕನ್ನಡಿಗರಿಗೆ ಕರುನಾಡಿನ ಗಂಧ, ಸಾರ, ಸತ್ವವನ್ನು ಸಾರುವ ಹೆಮ್ಮೆಯ ಹಬ್ಬ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು.
ಕನ್ನಡಾಭಿಮಾನ ಎಂಬುದು ಬರೀ ನವೆಂಬರ್ಗೆ ಸೀಮಿತವಾಗದೆ ಕನ್ನಡ ಬೆಳೆಸೋಣ, ಕನ್ನಡ ಕಲಿಸೋಣ ಇಂತಹ ಪಾವನ ಭೂಮಿಯಲ್ಲಿ ಜನ್ಮ ನೀಡಿದ ಕನ್ನಡಾಂಬೆಗೆ, ಬದುಕು ನೀಡಿದ ಕರುನಾಡಿಗೆ ಋಣಿಯಾಗಿರೋಣ
#KannadaRajyotsava
ಭಾರತ ಏಕೀಕರಣಕ್ಕಾಗಿ ಶ್ರಮಿಸಿದ ಧೀಮಂತ ನಾಯಕ, ಭಾರತದ ಮೊದಲ ಉಪ ಪ್ರಧಾನಿ, ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಭಾರತರತ್ನ ಶ್ರೀ ಸರ್ದಾರ್ ವಲ್ಲಭಭಾಯ್ ಪಟೇಲ್ ರವರ ಜನ್ಮದಿನದಂದು ಅವರಿಗೆ ನನ್ನ ಗೌರವ ಪೂರ್ವಕ ನಮನಗಳು.
#SardarVallabhbhaiPatel
ಬೆಳಕಿನ ಹಬ್ಬ ದೀಪಾವಳಿ .....
ಕನ್ನಡ ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ತುಂಬು ಹೃದಯದ ಶುಭಾಶಯಗಳು. ನಾಡಿನ ಎಲ್ಲೆಡೆ ಮುಂಬರುವ ದಿನಗಳಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಲ್ಲರ ಬಾಳು ಬಂಗಾರವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
#HappyDeepavali#Deepavali2024
ಕರುನಾಡಿನ ಕಣ್ಮಣಿ, ಕರ್ನಾಟಕ ರತ್ನ, ಪವರ್ ಸ್ಟಾರ್, ನಮ್ಮೆಲ್ಲರ ಪ್ರೀತಿಯ ಅಪ್ಪು ಶ್ರೀ ಡಾ.ಪುನೀತ್ ರಾಜ್ ಕುಮಾರ್ ಅವರ ಪುಣ್ಯಸ್ಮರಣೆ, ತಮ್ಮ ವ್ಯಕ್ತಿತ್ವ , ಪ್ರತಿಭೆ, ಸಮಾಜ ಸೇವೆಯ ಮೂಲಕ ಕೋಟ್ಯಾಂತರ ಹೃದಯಗಳನ್ನು ಗೆದ್ದ ಪುನೀತ್ ರಾಜ್ ಕುಮಾರ್ ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಕನ್ನಡಿಗರ ಹೃದಯದಲ್ಲಿ ಎಂದಿಗೂ ಅಜರಾಮರ.
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ, ಧೈರ್ಯ, ಪರಾಕ್ರಮಗಳಿಗೆ ಹೆಸರಾದ ಕನ್ನಡ ನಾಡಿನ ಧೀರ ಮಹಿಳೆ ಸ್ತ್ರೀಕುಲದ ಸ್ವಾಭಿಮಾನದ ಪ್ರತೀಕವಾದ ಕಿತ್ತೂರು ರಾಣಿ ಚೆನ್ನಮ್ಮ ಅವರ ಜನ್ಮ ಜಯಂತಿಯಂದು ಅವರಿಗೆ ನನ್ನ ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
#KitturRaniChennamma
ನಾಡಿನ ಸಮಸ್ತ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.
ರಾಮಾಯಣವೆಂಬ ಅತ್ಯದ್ಭುತ ಮಹಾ ಕಾವ್ಯದ ಮೂಲಕ ಸಾರ್ವಕಾಲಿಕ ಆದರ್ಶ, ಜೀವನ ಮೌಲ್ಯಗಳನ್ನು ಇಡೀ ಮನುಕುಲಕ್ಕೆ ತಿಳಿಸಿಕೊಟ್ಟ ಮಹಾಕವಿ ಮಹರ್ಷಿ ವಾಲ್ಮೀಕಿ ಜಯಂತಿಯಂದು ನನ್ನ ಗೌರವ ನಮನಗಳು.
#ValmikiJayanti
ಭಾರತೀಯ ಬಾಹ್ಯಾಕಾಶದ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ ಕ್ಷಿಪಣಿ ಮಾನವ ಎಂದೇ ಖ್ಯಾತಿ ಪಡೆದ ಜನ ಸಾಮಾನ್ಯರ ರಾಷ್ಟ್ರಪತಿ ನಮ್ಮೆಲ್ಲರ ಸ್ಪೂರ್ತಿ ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ರವರ ಜನ್ಮದಿನದಂದು ಅವರಿಗೆ ನನ್ನ ಗೌರವ ಪೂರ್ವಕ ನಮನಗಳು
#AbdulKalam
ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಾಗೂ ನಾಡಹಬ್ಬ ದಸರಾ ಮಹೋತ್ಸವದ ಹಾರ್ದಿಕ ಶುಭಾಶಯಗಳು.
ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ತಮ್ಮೆಲ್ಲರಿಗೂ ಆರೋಗ್ಯ, ಐಶ್ವರ್ಯ, ನೆಮ್ಮದಿ, ಸುಖ, ಶಾಂತಿ ವೃದ್ಧಿಸಲಿ ಎಂದು ಆಶಿಸುತ್ತೇನೆ.
#Vijayadashami#DasaraFestival
ನಾಡಿನ ಸಮಸ್ತ ಜನತೆಗೆ ಮಹಾನವಮಿ ಆಯುಧಪೂಜೆಯ ಹಾರ್ದಿಕ ಶುಭಾಶಯಗಳು .
ನಮ್ಮ ಜೀವನದ ಭಾಗವಾಗಿರುವ ನಾವು ಬಳಸುವ ವಿವಿಧ ಉಪಕರಣಗಳು, ಯಂತ್ರೋಪಕರಣಗಳು, ವಾಹನಗಳು ಸೇರಿದಂತೆ ಎಲ್ಲಾ ವಸ್ತುಗಳನ್ನು ಪೂಜಿಸಿ ಜಗನ್ಮಾತೆಯ ಆಶೀರ್ವಾದವನ್ನು ಪಡೆಯೋಣ.
#AyudhaPuja#Dasara
ಇಂದು ಮಹಾಲಿಂಗಪುರ ಪಟ್ಟಣದ ಆರಾದ್ಯ ದೈವ ಶ್ರೀ ಗುರು ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದು, ಇದೆ ಸಂದರ್ಭದಲ್ಲಿ ಜಾತ್ರಾ ಕಮೀಟಿ ಸದಸ್ಯರು, ಅನೇಕ ಗಣ್ಯರು, ಹಿರಿಯರು, ಹಾಜರಿದ್ದರು.
#Mahalingpur#Mahalingeshwara#Bagalkot#Terdal
ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ. ಮಾನವ ಕುಲಕೋಟಿಯನ್ನು ಉದ್ಧರಿಸಲು ಶ್ರೀ ಕೃಷ್ಣ ಪರಮಾತ್ಮನೆ ಈ ಭೂಮಿಯ ಮೇಲೆ ಜನ್ಮ ತಾಳಿದ ಮಹತ್ವದ ದಿನ.ಈ ಶುಭಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ .
#KrishnaJanmashtami
ಸರ್ವರಿಗೂ ರಕ್ಷಾ ಬಂಧನದ ಶುಭಾಶಯಗಳು.
ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬ ರಕ್ಷಾ ಬಂಧನ. ಪವಿತ್ರ ರಕ್ಷೆಯು ಸಮಾಜದಲ್ಲಿ ಬಾಂಧವ್ಯ ಬೆಸೆಯಲಿ. ಭ್ರಾತೃತ್ವದ ಸಂಕೇತವಾಗಿರುವ ರಕ್ಷೆಯು ಎಲ್ಲರ ಜೀವನದಲ್ಲಿ ಯಶಸ್ಸು ತರಲಿ.
#RakshaBandhan