"1979-80 ರಲ್ಲಿ ಚಾಮರಾಜನಗರದಲ್ಲಿ ಮುಸ್ಲಿಮರು ಇರುವ ರಸ್ತೆಯಲ್ಲಿ ಗಣೇಶ ಮೆರವಣಿಗೆ ಹೋಗಬಾರದು ಎಂದು ಅಂದಿನ ಜಿಲ್ಲಾಧಿಕಾರಿ ನಿಷೇಧ ಮಾಡುತ್ತಾರೆ. ಈ ನಿಷೇಧ ಸರಿ ಎಂದು ಹೈಕೋರ್ಟ್ ಆದೇಶ ಕೊಟ್ಟರೆ ಸುಪ್ರೀಂ ಕೋರ್ಟ್ ಭಾರತ ಜಾತ್ಯಾತೀತ ದೇಶ ಎಂದು ಹೇಳಿ ಮೆರವಣಿಗೆಗೆ ಅನುಮತಿ ನೀಡುತ್ತೆ" - ಅಂದಿನ ಪ್ರಕರಣದ ಬಗ್ಗೆ ಹೆಚ್.ಆರ್. ರಂಗನಾಥ್ ವಿವರಣೆ
#GaneshChaturthi #Mysuru #Chamarajanagara #HRRanganath #TNnarasipur
ನಮ್ಮದು ವರ್ಷಕ್ಕೆ 2,000 ಕೋಟಿ ಟರ್ನ್ ಓವರ್ ಇದೆ - ಇನ್ನು 2 ಕೋಟಿ ದೊಡ್ಡ ವಿಚಾರ ಅಲ್ಲ: ಇ.ಡಿ ರೇಡ್ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ
#SatishJarkiholi#ED#Congress#Bengaluru
ಅಧಿಕಾರಕ್ಕಾಗಿ ಯಾರ ಕಾಲು ಬೇಕಾದರೂ ಹಿಡಿಯಬಲ್ಲ, ಶುದ್ಧ ಸಮಯಸಾಧಕ, ಡಬಲ್ ಗೇಮ್ ರಾಜಕಾರಣಿ ಸುಮಾರಣ್ಣ, ಮೋದಿಯ ಕೃಪೆಗೆ ಪಾತ್ರನಾಗಲು ಬಕೆಟ್ ಅಲ್ಲ ಸಿಂಟೆಕ್ಸ್ ಹಿಡಿಯಲು ಹೋಗಿದ್ದಾರೆ. ತೆನೆ ಹೊತ್ತ ಮಹಿಳೆಯನ್ನು ಪಕ್ಷದ ಸಿಂಬಲ್ ಮಾಡಿಕೊಂಡಿರುವ ಪಕ್ಷದ ಮಾನಗೇಡಿ ನಾಯಕನಿಗೆ ಮಹಿಳೆಯರಿಗೆ ಗೌರವ ಕೊಡೋದೆ ಗೊತ್ತಿಲ್ಲ.
ಸ್ವಂತ ಸಾಮರ್ಥ್ಯ ಇಲ್ಲದೇ ಬೇರೆ ಪಕ್ಷಗಳ ಕಾಲಿಡಿದು ರಾಜಕಾರಣ ಮಾಡುವ ಸುಮಾರಣ್ಣನಿಗೆ ಬೇರೆಯವರ ರಕ್ತದ ಬಗ್ಗೆ ಮಾತನಾಡುವ ಉಸಾಬರಿ ಬೇಡ!
#CulutrelessSumaranna
Deeply pained by the passing of Smt. Chennamma Ji, wife of former Prime Minister Shri Deve Gowda Ji. She was admired for her humility and passion towards serving society. In this hour of grief, my thoughts are with Shri Deve Gowda Ji and his entire family. Om Shanti.
ಮಾಜಿ ಪ್ರಧಾನಮಂತ್ರಿ ಶ್ರೀ ದೇವೇಗೌಡ ಅವರ ಪತ್ನಿ ಶ್ರೀಮತಿ ಚೆನ್ನಮ್ಮನವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ತಮ್ಮ ವಿನಯ ಮತ್ತು ಸಮಾಜ ಸೇವೆಯ ಮೇಲಿನ ಬದ್ಧತೆಗಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಈ ದುಃಖದ ಸಮಯದಲ್ಲಿ, ಶ್ರೀ ದೇವೇಗೌಡರು ಮತ್ತು ಅವರ ಇಡೀ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಂತಾಪಗಳು. ಓಂ ಶಾಂತಿ.
Guided by the visionary leadership of Hon’ble Prime Minister Shri @narendramodi avaru, the Union Cabinet’s approval of the Ballari–Hosapete 3rd & 4th railway line marks a decisive stride in strengthening Karnataka’s freight and passenger backbone. This strategic 65 km expansion will unlock greater efficiency across our mining, steel and industrial ecosystem.
By enhancing connectivity across Ballari and Vijayanagara districts, the project will enable more passenger services, streamline logistics, and improve access to iconic destinations such as Hampi and the Tungabhadra Dam.
With projected annual logistics savings of ₹323 crore and a substantial reduction in carbon emissions, this initiative advances both economic dynamism and sustainable development.
#RailInfrastructure #KarnatakaGrowth #LogisticsEfficiency #SustainableDevelopment
ಸಾಲದ ಸುಳಿಯಲ್ಲಿ ಕರ್ನಾಟಕ! 📉
"ಸಾಲ ಮಾಡಿಯಾದರೂ ತುಪ್ಪು ತಿನ್ನು" ಎನ್ನುವ ಮಾತನ್ನು @siddaramaiah ಮುಖ್ಯಮಂತ್ರಿ ಹುದ್ದೆಗೇರಿದ ದಿನದಿಂದ ಚಾಚು ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ.
2023ರಲ್ಲಿ ₹5.35 ಲಕ್ಷ ಕೋಟಿ ಇದ್ದ ರಾಜ್ಯದ ಸಾಲ 2026 ಮಾರ್ಚ್ʼಗೆ ₹7.64 ಲಕ್ಷ ಕೋಟಿಗೆ ಕೋಟಿ ರೂ.ಗೆ ತಲುಪುವ ಅಂದಾಜಿಸಲಾಗಿದೆ.
ರಾಜ್ಯ ಸರ್ಕಾರ ಸಂಗ್ರಹಿಸುವ ರಾಜಸ್ವದ ಶೇ. 17.23ರಷ್ಟು ಭಾಗ ಕೇವಲ ಬಡ್ಡಿ ಕಟ್ಟುವುದಕ್ಕೆ ಬಳಕೆಯಾದರೆ ರಸ್ತೆ, ನೀರಾವರಿ, ಶಿಕ್ಷಣಕ್ಕೆ ಹಣ ಎಲ್ಲಿಂದ ಬರುತ್ತೆ? ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ?
ಅದಕ್ಷ @INCKarnataka ಆಡಳಿತದಲ್ಲಿ ಆದ್ಯತಾ ವೆಚ್ಚಗಳಿಗೆ ಸಂಪನ್ಮೂಲ ಕೊರತೆ ಎದುರಾಗಿದ್ದು, ಅಭಿವೃದ್ಧಿ ಹಣದ ಲಭ್ಯತೆಗೆ ತೊಡಕು ಉಂಟಾಗಿದೆ. ಬಂಡವಾಳ ವೆಚ್ಚದಲ್ಲಿನ ಇಳಿಕೆಯು ರಾಜ್ಯದ ದೀರ್ಘಾವಧಿ ಆರ್ಥಿಕ ಬೆಳವಣಿಗೆ ಮೇಲೆ ಗಂಭೀರ ಪ್ರಮಾಣದ ದುಷ್ಪರಿಣಾಮ ಬೀರಲಿದೆ.
ಹುಟ್ಟುವ ಕೂಸಿನ ತಲೆ ಮೇಲೂ ಸಾಲದ ಹೊರೆ ಹೊರಿಸುತ್ತಿರುವ, ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ.. ಸಿದ್ದರಾಮಯ್ಯರ ಕೆಟ್ಟ ಆರ್ಥಿಕ ನೀತಿ ರಾಜ್ಯಕ್ಕೆ ಅತ್ಯಂತ ಅಪಾಯಕಾರಿ ಹಾಗೂ ರಾಜ್ಯವನ್ನು ದಿವಾಳಿತನಕ್ಕೆ ಕೊಂಡೊಯ್ಯುವ ಆತಂಕ ಬಂದೊದಗಿದೆ.
#EconomicDisaster #FinancialCrisis
#SiddaramaiahFailure #SaveKarnataka
ಲೂಟಿಕೋರ @INCKarnataka ಸರ್ಕಾರ, ಬಡವರ ಮಕ್ಕಳ ಉಚಿತ ಶಿಕ್ಷಣ ಹಕ್ಕಿಗೂ ಕಲ್ಲು ಹಾಕಿದೆ.
ಅಧಿಕಾರಕ್ಕೆ ಬಂದಾಗಿನಿಂದ ಸಾವಿರಾರು ಸರ್ಕಾರಿ ಶಾಲೆಗಳನ್ನು ಬಂದ್ ಮಾಡಿದ್ದು, ಸಂವಿಧಾನದ ಮೂಲಭೂತ ಹಕ್ಕನ್ನು ಉಲ್ಲಂಘಿಸಿದೆ.
ಯಾವುದೇ ಕಾರಣಕ್ಕೂ ಒಂದೇ ಒಂದು ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸುಳ್ಳು ಹೇಳಿಕೊಂಡೇ, ಶಿಕ್ಷಣ ಸಚಿವ @Madhu_Bangarapp ಸದ್ದಿಲ್ಲದೇ 2,670 ಸರ್ಕಾರಿ ಶಾಲೆಗಳಿಗೆ ಬೀಜ ಜಡಿದಿದ್ದಾರೆ.
ಭ್ರಷ್ಟ @siddaramaiah ಸರ್ಕಾರದಲ್ಲಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಸಿಗುತ್ತಿಲ್ಲ, ಶೂ ಸಾಕ್ಸ್ ವಿತರಣೆಯಾಗಿಲ್ಲ, ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ಮರೀಚಿಕೆಯಾಗುತ್ತಿದೆ.
#CongressFailsKarnataka
ಕರ್ನಾಟಕದ ನೀರಾವರಿ ಹಾಗೂ ಕಾವೇರಿ ಕುಡಿಯುವ ನೀರಿನ ಗಂಭೀರ ಸಮಸ್ಯೆಯ ಬಗ್ಗೆ ಇಳಿವಯಸ್ಸಿನಲ್ಲಿಯೂ ಮಾಜಿ ಪ್ರಧಾನಿಗಳಾದ ಶ್ರೀ @H_D_Devegowda ಅವರು ಸಂಸತ್ತಿನಲ್ಲಿ ಧ್ವನಿ ಎತ್ತಿ ಕನ್ನಡಿಗರ ಸಂಕಷ್ಟವನ್ನು ಮನವರಿಕೆ ಮಾಡಿಕೊಟ್ಟರು.
ರಾಜ್ಯದ ನೀರಿನ ವಿಚಾರವಾಗಿ ಕಳೆದ 65 ವರ್ಷಗಳಿಂದಲೂ ಹೋರಾಡುತ್ತಿದ್ದೇನೆ. ಕೆಲವು ದಿನಗಳಲ್ಲಿ ರಾಜ್ಯಸಭಾ ಸದಸ್ಯತ್ವದ ಅವಧಿಯೂ ಮುಗಿಯುತ್ತಿದೆ. ಕೇಂದ್ರ ಸರ್ಕಾರ ನೀರಾವರಿ ವಿಚಾರದಲ್ಲಿ ಕರ್ನಾಟಕದ ರೈತರು ಹಾಗೂ ಜನರ ಹಿತವನ್ನು ಕಾಪಾಡಬೇಕು ಎಂದು
ಕೈಮುಗಿದು ಮನವಿ ಮಾಡಿದರು. ನಾಡು, ನುಡಿ, ನೆಲ, ಜಲ ವಿಷಯಗಳಲ್ಲಿ ಮಣ್ಣಿನ ಮಗ ದೇವೇಗೌಡರ ಕಾಳಜಿ ಮತ್ತು ಬದ್ಧತೆಗೆ ಅವರೇ ಸರಿಸಾಟಿ.
ದೇವರ ಮೇಲೆ ಭಕ್ತಿ ಇಲ್ಲ, ರಾಷ್ಟ್ರಧ್ವಜದ ಮೇಲೆ ಗೌರವವೂ ಇಲ್ಲ, ಅಭಿಮಾನವಿಲ್ಲ. ಕೊನೆಗೆ, ಹೆಣ್ಣುಮಕ್ಕಳು ಬಿಡಿಸಿರುವ ರಂಗೋಲಿ ಚಿತ್ತಾರಗಳ ಮೇಲೆಯೂ ಎಳ್ಳಷ್ಟೂ ಹೆಮ್ಮೆ ಇಲ್ಲ..
ಅಧಿಕಾರ ಅಹಂಕಾರಕ್ಕಲ್ಲ, ಅಧಿಕಾರ ಅಲಂಕಾರಕ್ಕಲ್ಲ. ಅಧಿಕಾರವೆನ್ನುವುದು ಜನಸೇವೆಗೊಂದು ಮಾರ್ಗ.. ಇಲ್ಲಿ ಅಧಿಕಾರವೇ ದುರಂಹಕಾರವಾಗಿ ಮೈವೇತ್ತಿ ನಿಂತಿದೆ.
ಬೂಟಾಟಿಕೆ ಶೂರನಿಗೆ ಮೈಯ್ಯೆಲ್ಲಾ ಪಂಗನಾಮ!
@DKShivakumar@INCKarnataka@INCIndia@RahulGandhi@CMofKarnataka
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಮಳವಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಗಿಲ್ಲಿ ನಟನಿಗೆ (ಶ್ರೀ ನಟರಾಜ್) ಹೃದಯಪೂರ್ವಕ ಅಭಿನಂದನೆಗಳು.
ಹಳ್ಳಿಯ ರೈತನ ಮಗನಾಗಿ ಹುಟ್ಟಿ ಕನ್ನಡಿಗರೆಲ್ಲರ ಮನಗೆದ್ದಿರುವ ಅವರಿಗೆ ಇನ್ನೂ ಹೆಚ್ಚಿನ ಕೀರ್ತಿ, ಹೆಸರು ಬರಲಿ ಎಂದು ಶುಭ ಹಾರೈಸುತ್ತೇನೆ.
ಹಾಗೆಯೇ, ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ ಕುಮಾರಿ ರಕ್ಷಿತಾ ಶೆಟ್ಟಿ ಅವರಿಗೂ ಅಭಿನಂದನೆಗಳು.
#BiggBoss12Kannada
ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಕರೆಮ್ಮ ಜಿ ನಾಯಕ್ ಅವರು, ಗಬ್ಬೂರು ಜಿಲ್ಲಾ ಪಂಚಾಯತಿಯ ಬೂತ್ ಮಟ್ಟದ ಮುಖಂಡರ ಸಭೆಯಲ್ಲಿ ಭಾಗವಹಿಸಿ, BLA ಪ್ರಕ್ರಿಯೆಯ ಕುರಿತು ಮಾಹಿತಿ ಹಂಚಿಕೊಂಡರು.
ಚಾಮರಾಜಪೇಟೆಯ ಜೆ.ಜೆ. ನಗರದಲ್ಲಿ ಓಂ ಶಕ್ತಿ ಮೆರವಣಿಗೆ ವೇಳೆ ಮಾಲಾಧಾರಿ ಮಹಿಳೆಯರ ಮೇಲೆ ಕಲ್ಲುತೂರಿರುವ ಘಟನೆ ಖಂಡನೀಯ.
ಓಲೈಕೆ ರಾಜಕಾರಣ ಮಾಡುತ್ತಿರುವ @INCKarnataka ಸರ್ಕಾರದಲ್ಲಿ ಹಿಂದೂಗಳಿಗೆ ಸೂಕ್ತ ರಕ್ಷಣೆ ಇಲ್ಲವಾಗಿದೆ.
ಮೆರವಣಿಗೆ ಸಾಗುತ್ತಿದ್ದ ವೇಳೆ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಕಲ್ಲು ತೋರಿದ್ದು, ಇಬ್ಬರು ಯುವತಿಯರ ತಲೆಗೆ ಗಾಯವಾಗಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, @siddaramaiah ಸರ್ಕಾರದ ಆಡಳಿತ ವೈಫಲ್ಯವನ್ನು ತೋರಿಸುತ್ತಿದೆ.
@BZZameerAhmedK
#CongressFailsKarnataka