ಡಾಕ್ಟ್ರು ನೋಡೋಕಾ ಗೌಸ್ ತನ್ನಿ..!
ಉತ್ತರ ಕರ್ನಾಟಕದ ಪ್ರತಿಷ್ಠಿತ ಸರಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾದ ಬಳ್ಳಾರಿಯ ತಾರಾನಾಥ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಕೈಗವಸು, ಔಷಧ ಸೇರಿದಂತೆ ಸಿಬ್ಬಂದಿ ಕೊರತೆಯಿಂದ ರೋಗಿಗಳು ಪರದಾಡು ವಂತಾಗಿದೆ.
@CMofKarnataka@dineshgrao
ಸ್ವಾತಂತ್ರ್ಯ ಬಂದು 79 ವರ್ಷವಾದರೂ ಬಳ್ಳಾರಿ ಜನರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಇಲ್ಲದಿರುವುದು ಇಲ್ಲಿನ ಎಂಎಲ್ಎ, ಎಂಪಿ, ಮಿನಿಸ್ಟರ್, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಬಳ್ಳಾರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿ ಯಾವಾಗ?
#CMofKarnataka#mla @Districtadministration
ರಾಜ್ಯ ಸರಕಾರ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರ ಸಮಸ್ಯೆ ಪರಿಹರಿಸಲು 'ಮಕ್ಕಳ ವಿಶೇಷ ಗ್ರಾಮ ಸಭೆ'ಗಳು ಕೇವಲ ಆದೇಶ, ಸುತ್ತೋಲೆಗಳಿಗೆ ಮಾತ್ರ ಸೀಮಿತವಾಗಿವೆ. ಪರಿಣಾಮಕಾರಿ ಅನುಷ್ಠಾನ ಯಾವಾಗ?
@CMofKarnataka@SaveChildren@ballari
ಮಳೆಗೆ ನಲುಗುತ್ತಿದೆ ಗಣಿ ಜಿಲ್ಲಾ ನೋಂದಣಾಧಿಕಾರಿ ಕಚೇರಿ...!
ಸ್ಥಳೀಯ ರೈಲು ನಿಲ್ದಾಣ ಬಳಿಯ ನಾಲ್ಕು ದಶಕಗಳ ಚರಿತ್ರೆ ಹೊಂದಿರುವ ಜಿಲ್ಲಾ ನೋಂದಣಾಧಿಕಾರಿ ಕಚೇರಿ ಮಳೆಗೆ ನಲುಗಿದೆ, ನಲುಗುತ್ತಲೂ ಇದೆ. ಬಹುತೇಕ ಭಾಗ ಶಿಥಿಲಗೊಂಡು ಒಳಗೆ ಮಳೆ ನೀರು ಇಣುಕುತ್ತಿದ್ದರೂ ಕ್ರಮ ಎಂಬುದು ಕನಸಿನ ಮಾತಾಗಿದೆ.
ಗಣಿ ಜಿಲ್ಲೆಯಲ್ಲಿ 53,089,34 ಎಕರೆ ಸರಕಾರಿ ಭೂಮಿ ಒತ್ತುವರಿಯಾಗಿದ್ದು, ಪ್ರಭಾವಿಗಳು, ಉದ್ಯಮಿಗಳು, ಭ್ರಷ್ಟ ಅಧಿಕಾರಿಗಳು ಶಾಮೀಲಾಗಿರುವ ಸಂಶಯಗಳು ವ್ಯಕ್ತವಾಗಿವೆ.
#revenueminister#ballari#vijayaKarnataka
ಬಳ್ಳಾರಿ ತಾಲೂಕಿನಲ್ಲಿ ತುಂಗಭದ್ರಾ ಮತ್ತು ವೇದಾವತಿ ನದಿಗಳು ತುಂಬಿ ಹರಿಯುತ್ತಿದ್ದರೂ ಸಾವಿರಾರು ಎಕರೆ ಮಾಳೆಯಾಶ್ರಿತ ಜಮೀನುಗಳಿಗೆ ನೀರಿಲ್ಲದೇ ರೈತರು ತ್ರೀವ ತೊಂದರೆ ಅನುಭವಿಸುತ್ತಿದ್ದಾರೆ. ದೀಪದ ಬುಡದಲ್ಲೇ ಕತ್ತಲು ಎಂಬ ಮಾತು ಇಲ್ಲಿ ಅಕ್ಷರಶಃ ಸತ್ಯವಾಗಿದೆ.
#Vijaykarnataka#CMofKarnataka#ballari