AICMOA takes this opportunity to congratulate Sh. Vivek Chaturvedi on his elevation as Chairman CBIC.
Hon'ble Sir, the cadre has high hopes and expectations from your goodself & we look forward to ur kind intervention towards filling up the PR vacancies by way of issuance of OTR
ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದು ನ್ಯಾಯ ದೊರಕಿಸಲು ಮಾನ್ಯ @CMofKarnataka ಅವರು ಎರಡು ದಿನಗಳ ಗಡುವು ನೀಡಿದ್ದರು ಆದರೆ ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ವಿದ್ಯಾರ್ಥಿಗಳು ಸರ್ಕಾರದ ಮೇಲೆ ನಂಬಿಕೆ ಕಳೆದುಕೊಳ್ಳುವ ಮುನ್ನ ಸೂಕ್ತ ಕ್ರಮ ಕೈಗೊಳ್ಳಲು ವಿನಂತಿಸಿಕೊಳ್ಳುತ್ತೇವೆ
KPSC in Karnataka has been the most corrupt institution which has directly and indirectly impacted the development of state by recruiting corrupt officials over many decades. To reform KPSC state needs a student led intense movement across the state. It should be apolitical and should not depend on organisations that hijack these movements to further their own vested agenda.
Reforming KPSC requires bold and radical action. All politicians whichever party they belong to have all contributed to this mess and lack courage and intent to reform KPSC. Whenever they are in power they use KPSC to insert their kith and kin and loyalists inside the administration system.
Most of the posts recruited by KPSC go to those rich kids or relatives of influential politicians who can bid highest amount for the post. Students from poor and vulnerable background don’t stand any chance even if they are meritorious. Add to this the recent recruitment’s where English medium students are having an upper hand impacting adversely kannada language and kannada medium students. @Aksaraofficial2
AKSARA ಸಂಘಟನೆಯ ಮನವಿಗಳ ಮಹಾಪೂರದಿಂದ ಶ್ರೀ ಹಂಪನಗೌಡ ಬಾದರ್ಲಿ ಶಾಸಕರು - ಸಿಂಧನೂರು ವಿಧಾನಸಭಾ ಕ್ಷೇತ್ರ ಮತ್ತು ಶ್ರೀ ಬಸನಗೌಡ ತುರುವಿಹಾಳ ಶಾಸಕರು - ಮಸ್ಕಿ ವಿಧಾನಸಭಾ ಕ್ಷೇತ್ರ ರವರು ಕೆಎಎಸ್ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ನೀಡಿದ್ದಾರೆ
ಕೆ ಎ ಎಸ್ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆಗಿರುವಂತಹ ಅನ್ಯಾಯಕ್ಕೆ @karave_KRV ನೇತೃತ್ವದಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗೆ @Aksaraofficial2 ಜೊತೆ ನಿಂತು @vinaygb ಸರ್ ಅವರು ಬೆಂಬಲಿಸುವುದಾಗಿ ತಿಳಿಸಿದ್ದಾರೆ
ಎಲ್ಲಾ ಕನ್ನಡ ಮಾಧ್ಯಮದ ಅಭ್ಯರ್ಥಿಗಳ ವತಿಯಿಂದ ಮಾನ್ಯರಿಗೆ ಹೃದಯಪೂರ್ವಕ ಅಭಿನಂದನೆಗಳು
@Aksaraofficial2
ಸಂಘಟನೆಯ ನಿರಂತರ ಶ್ರಮ ಮತ್ತು ಮನವಿಗಳ ಮಹಾಪೂರದಿಂದ ಮಾನ್ಯ ಶ್ರೀ ಜಿ ಟಿ ದೇವೇಗೌಡರು ಶಾಸಕರು - ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಮತ್ತು ಮಾಜಿ ಸಚಿವರು, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕೆ ಪಿ ಎಸ್ ಸಿ ಯಿಂದ ಅನ್ಯಾಯವಾಗಿರುವುದನ್ನು ಅರಿತುಕೊಂಡು ಮರು ಪರೀಕ್ಷೆಗೆ ಒತ್ತಾಯಿಸಿದ್ದಾರೆ
@CMofKarnataka
ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನಡೆಸಿರುವ ಪರೀಕ್ಷೆಯ ಫಲಿತಾಂಶ ತಡೆ ಹಿಡಿದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಒಂದು ದಿನದ ಎಕ್ಸ್ (ಟ್ವಿಟರ್) ಅಭಿಯಾನ ಏರ್ಪಡಿಸಲಾಗಿದೆ. ಅಭಿಯಾನವು 17-2-2025ರ ಸೋಮವಾರ ಸಂಜೆ 5 ಗಂಟೆಯಿಂದ 18-2-2025ರ ಮಂಗಳವಾರ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಎಲ್ಲ ಕನ್ನಡದ ಮನಸುಗಳು ಈ ಅಭಿಯಾನ ಬೆಂಬಲಿಸಲು ಕೋರುತ್ತೇವೆ.
ಹ್ಯಾಶ್ ಟ್ಯಾಗ್:
#KPSCMosa
#KPSCDroha
ಕೆಪಿಎಸ್ ಸಿ ನಡೆಸಿರುವ ಕೆಎಎಸ್ ಪರೀಕ್ಷೆಗಳಲ್ಲಿ ಮತ್ತೆ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಫೆ.18ರಂದು ಬೆಂಗಳೂರಿನಲ್ಲಿ ದೊಡ್ಡ ಹೋರಾಟವನ್ನು ಹಮ್ಮಿಕೊಂಡಿದೆ. ಅನ್ಯಾಯಕ್ಕೆ ಒಳಗಾದ ಸಾವಿರಾರು ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಿಂದೆ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡಾನುವಾದದ ಸಮಸ್ಯೆ ಕಂಡುಬಂದಿದ್ದರಿಂದ ಆದ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಚಳವಳಿ ಹಮ್ಮಿಕೊಂಡಿತ್ತು. ನಮ್ಮ ಚಳವಳಿಗೆ ಸ್ಪಂದಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮರುಪರೀಕ್ಷೆಗೆ ಆದೇಶಿಸಿದ್ದರು. ಮುಖ್ಯಮಂತ್ರಿಗಳ ತೀರ್ಮಾನವನ್ನು ನಾವೆಲ್ಲ ಒಕ್ಕೊರಲಿನಿಂದ ಅಭಿನಂದಿಸಿದ್ದೆವು.
ಆದರೆ ಮರುಪರೀಕ್ಷೆಯಲ್ಲೂ ಕನ್ನಡಾನುವಾದದ ಸಮಸ್ಯೆ ಉಂಟಾಗಿದೆ. ಹೋರಾಟದ ಸಂದರ್ಭದಲ್ಲಿ ನಾವು ಕನ್ನಡದಲ್ಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನಂತರ ಅದನ್ನು ಇಂಗ್ಲಿಷ್ ಗೆ ಅನುವಾದಿಸುವಂತೆ ಆಗ್ರಹಿಸಿದ್ದೆವು. ಕರ್ನಾಟಕದ ಆಡಳಿತ ಭಾಷೆ ಕನ್ನಡವಾದ್ದರಿಂದ ಇದೇ ಸಹಜವಾಗಿ ನಡೆಯಬೇಕಿತ್ತು. ಆದರೆ ದುರಂಹಕಾರಿ ಅಧಿಕಾರಿಗಳಿಂದಾಗಿ ಮತ್ತೆ ಇಂಗ್ಲಿಷ್ ನಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸಿ, ಕನ್ನಡಕ್ಕೆ ತಪ್ಪುತಪ್ಪಾಗಿ ಅನುವಾದಿಸಲಾಗಿದೆ. ಇದರಿಂದಾಗಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ವಂಚನೆ ಎಸಗಲಾಗಿದೆ.
ಈಗ ಫಲಿತಾಂಶದಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ತೀರಾ ಕನಿಷ್ಟ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ ಎಂಬ ಮಾಹಿತಿ ಇದೆ. ಇದಕ್ಕೆ ಕೆಟ್ಟದಾಗಿ ಸಿದ್ಧಪಡಿಸಿದ ಕನ್ನಡಾನುವಾದದ ಪ್ರಶ್ನೆ ಪತ್ರಿಕೆಗಳೇ ಕಾರಣ ಎಂದು ಕನ್ನಡ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಇವರೆಲ್ಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಸಾಮಾಜಿಕವಾಗಿ ಹಿಂದುಳಿದ ಜನವರ್ಗಗಳಿಂದ ಬಂದವರು. ಇಂಥವರಿಗೆ ಅನ್ಯಾಯವಾಗುತ್ತಿದ್ದರೂ ಸರ್ಕಾರ ಮೌನವಾಗಿ ಕುಳಿತುಕೊಳ್ಳಲು ಹೇಗೆ ಸಾಧ್ಯ?
ಹಲವಾರು ವಿದ್ಯಾರ್ಥಿಗಳು ಪ್ರತಿನಿತ್ಯ ನನ್ನೊಂದಿಗೆ ಮಾತನಾಡುತ್ತಿದ್ದಾರೆ. ಅವರ ಸಂಕಟಗಳನ್ನು ಹೇಳುತ್ತಿದ್ದಾರೆ. ಅವರ ಭವಿಷ್ಯದ ಬದುಕು ಬೀದಿಗೆ ಬಿದ್ದಂತಾಗಿದೆ. ಎಷ್ಟೋ ವರ್ಷಗಳಿಂದ ಅವರು ಈ ಪರೀಕ್ಷೆಗಾಗಿ ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ಅವರ ಪೋಷಕರೂ ತ್ಯಾಗ ಮಾಡಿದ್ದಾರೆ. ಈ ಪರೀಕ್ಷೆಯಲ್ಲಿ ಅವರು ಅನುತ್ತೀರ್ಣಗೊಂಡರೆ ಬಹುತೇಕರು ವಯೋಮಿತಿಯ ಕಾರಣಕ್ಕೆ ಮುಂದೆ ಇನ್ನೊಂದು ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಯಾರೋ ದುಷ್ಟ ಅಧಿಕಾರಿಗಳು ಮಾಡಿದ ದ್ರೋಹಕ್ಕೆ ಅವರ ಬದುಕು ನರಕವಾಗಿದೆ.
ಪರೀಕ್ಷೆ ಬರೆದವರಿಗೆಲ್ಲ ಕೆಎಎಸ್ ಹುದ್ದೆಯೇನು ಲಭಿಸುವುದಿಲ್ಲ. ಆದರೆ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳನ್ನು ಬೇಕೆಂದೇ ತಪ್ಪುತಪ್ಪಾದ ಪ್ರಶ್ನೆ ಪತ್ರಿಕೆ ಕೊಟ್ಟು ಅಂಕಗಳಿಸಿದಂತೆ ತಡೆಯಲಾಯಿತು ಎಂಬ ಅನ್ಯಾಯ ಪ್ರಜ್ಞೆ ಅವರನ್ನು ಕೊನೆಯವರೆಗೂ ಬಾಧಿಸಲಿದೆ. ಅಧಿಕಾರಿಗಳಾಗುವ ನಮ್ಮ ಆಸೆಗೆ ರಾಜ್ಯ ಸರ್ಕಾರವೇ ತಣ್ಣೀರೆರಚಿತು, ನಮಗೆ ಮೋಸ ಮಾಡಿತು ಎಂದು ಅವರು ಭಾವಿಸುತ್ತಾರೆ. ಇದು ಬೇಕಾಗಿರಲಿಲ್ಲ. ಇದಕ್ಕೆ ನೇರವಾಗಿ ಕೆಪಿಎಸ್ ಸಿ ಮತ್ತು ರಾಜ್ಯ ಸರ್ಕಾರವೇ ಹೊಣೆ. ಇದನ್ನು ಸರಿಪಡಿಸುವ ಜವಾಬ್ದಾರಿಯನ್ನೂ ಸರ್ಕಾರವೇ ಹೊರಬೇಕಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಿಂದೆ ಮಾಡಿದಂತೆ ಕೂಡಲೇ ಮಧ್ಯೆ ಪ್ರವೇಶಿಸಿ ಕೂಡಲೇ ಫಲಿತಾಂಶವನ್ನು ತಡೆಹಿಡಿಯಬೇಕು, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಪರಿಹಾರ ಸೂತ್ರವನ್ನು ರೂಪಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಮೊಕದ್ದಮೆ ಹೂಡಿ ಜೈಲಿಗಟ್ಟಬೇಕು. ಫೆ. 18ರಂದು ನಡೆಯುವ ಸಾಂಕೇತಿಕ ಪ್ರತಿಭಟನೆಯಲ್ಲೇ ಹತ್ತಾರು ಸಾವಿರ ಮಂದಿ ನೆರೆಯುತ್ತಿದ್ದಾರೆ. ಅನ್ಯಾಯ ಸರಿಪಡಿಸದೇ ಹೋದಲ್ಲಿ ಅದರ ಪರಿಣಾಮ ಗಂಭೀರವಾಗಿರುತ್ತದೆ.
@INCKarnataka
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಅಹಿಂದ ವರ್ಗದ ವಿದ್ಯಾರ್ಥಿಗಳ ಮತ ಕಾರಣ ಇಂದು ಕೆಪಿಎಸ್ಸಿ ಇಲಾಖೆಯ ಧೋರಣೆಯಿಂದ ಗ್ರಾಮೀಣ ಹಿಂದುಳಿದ ಅಭ್ಯರ್ಥಿಗಳು ಮೋಸಕ್ಕೆ ಒಳಗಾಗಿದ್ದಾರೆ !
ವಿದ್ಯಾರ್ಥಿಗಳಿಂದ ಜೀವದಾನ ಪಡೆದ ನೀವು ಇಂದು ಅದೇ ವಿದ್ಯಾರ್ಥಿಗಳ ಕತ್ತು ಹಿಸುಕುತ್ತಿದ್ದೀರಿ ಇದು ಯಾವ ನ್ಯಾಯ ?
@CMofKarnataka
ಕೆಪಿಎಸ್ಸಿ ಗೊಂದಲ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಸರ್ಕಾರದಿಂದ ನಿರಂತರ ಅನ್ಯಾಯ!
"ಕಂಗಾಲನ ಮನೀಗೆ ಕಂಗಾಲ ಹೋದರೆ ಗಂಗಾಳ ನೆಕ್ಕು" ಎಂಬ ಗಾದೆಯ ಅರ್ಥದಂತೆ ಸರ್ಕಾರ ಮತ್ತು ಕೆಪಿಎಸ್ಸಿ ಎಸಗುವ ಎಲ್ಲಾ ಅನಾಚಾರಗಳನ್ನು ಸಹಿಸಿಕೊಳ್ಳಿ ಎಂದು ಪರೀಕ್ಷಾರ್ಥಿಗಳನ್ನು ಅತಂತ್ರ ಸ್ಥಿತಿಯಲ್ಲಿ ಸಿಕ್ಕಿಹಾಕಿಸುತ್ತಿದೆ ಕಾಂಗ್ರೆಸ್.
ಪ್ರಶ್ನೆ ಪತ್ರಿಕೆಯಲ್ಲಿ ದೋಷ, ಅನುವಾದದಲ್ಲಿ ಅರ್ಥಹೀನತೆ, ಪರೀಕ್ಷಾ ವೇಳಾಪಟ್ಟಿಯಲ್ಲಿ ಗೊಂದಲ, ಫಲಿತಾಂಶದಲ್ಲಿ ತಾರತಮ್ಯ – ಈ ಎಲ್ಲ ಸಮಸ್ಯೆಗಳ ಕಾರಣದಿಂದಾಗಿ ಕೆಪಿಎಸ್ಸಿ ಮೇಲೆ ವಿದ್ಯಾರ್ಥಿಗಳು ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರತಿ ಬಾರಿ ಪರೀಕ್ಷೆ ನಡೆಸಿದಾಗಲೂ ಪುನಃಪರೀಕ್ಷೆ, ಪ್ರಶ್ನೆಪತ್ರಿಕೆ ಸೋರಿಕೆ, ಅಧಿಕಾರಿಗಳ ನಿರ್ಲಕ್ಷ್ಯವೆಂಬುದು ರೂಢಿಯಾಗಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ವಿದ್ಯಾರ್ಥಿಗಳು ನಿರಂತರ ಹೋರಾಟ ನಡೆಸಿದರೂ, @INCKarnataka ಸರ್ಕಾರ ಅವರ ಕೂಗಿಗೆ ಮನ್ನಣೆ ನೀಡುತ್ತಿಲ್ಲ. ಪ್ರತಿಭಾವಂತ ಅಭ್ಯರ್ಥಿಗಳಿಗೆ ಪ್ರತಿ ಬಾರಿ ಅನ್ಯಾಯವಾಗುತ್ತಿದ್ದು, ಸರ್ಕಾರ ಈ ಸಮಸ್ಯೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುತ್ತಿದೆ.
ಇನ್ನಾದರೂ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಂಡು ಕೆಪಿಎಸ್ಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಬೇಕಾಗಿದೆ. ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿರುವ ಈ ಭ್ರಷ್ಟ ವ್ಯವಸ್ಥೆಯನ್ನು ಶುದ್ಧೀಕರಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಇದು ಕೇವಲ ಒಂದು ಪರೀಕ್ಷೆಯ ಪ್ರಶ್ನೆಯಲ್ಲ, ಇದು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ!
#CongressFailsKarnataka #KPSCಮೋಸ #KPSCMosa
ಪರೀಕ್ಷೆ ಮೇಲೆ ಪರೀಕ್ಷೆಗಳನ್ನು ನಡೆಸಿದರೂ ಕೆಪಿಎಸ್ಸಿ ಪ್ರಶ್ನೆ ಪತ್ರಿಕೆಯಲ್ಲಿ ದೋಷ, ಅನುವಾದದಲ್ಲಿ ದೋಷ, ಪರೀಕ್ಷಾ ವೇಳಾಪಟ್ಟಿ, ಫಲಿತಾಂಶದಲ್ಲಿ ಗೊಂದಲ, ಪ್ರಶ್ನೆಪತ್ರಿಕೆ ಸೋರಿಕೆ, ಅವ್ಯವಹಾರ, ಭ್ರಷ್ಟಾಚಾರ ಇದು ಕೆಪಿಎಸ್ಸಿ ಸಂಸ್ಥೆ ಕುರಿತಾಗಿ ಸಾರ್ವಜನಿಕರ ನಿಲುವು.
ವಿದ್ಯಾರ್ಥಿಗಳು ಭ್ರಷ್ಟ @INCKarnataka ದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಿರಂತರ ಹೋರಾಟ ಮಾಡಿದರೂ ಅವರ ಅವರ ಕೂಗಿಗೆ ಮನ್ನಣೆ ದೊರಕಿಲ್ಲ. ಕೆಪಿಎಸ್ಸಿ ನಡೆಸುವ ಪರೀಕ್ಷೆಯಲ್ಲಿ ಪ್ರತಿ ಬಾರಿಯು ಅಭ್ಯರ್ಥಿಗಳಿಗೆ ಅನ್ಯಾಯ ನಡೆದರೂ ಅದನ್ನು ಸರಿಪಡಿಸುವ ಕೆಲಸವನ್ನು ಸರ್ಕಾರವಿನ್ನೂ ಮಾಡಿಲ್ಲ.
ಇನ್ನಾದರೂ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಂಡು ಕೆಪಿಎಸ್ಸಿ ಗೊಂದಲವನ್ನು ಸರಿಪಡಿಸುವ ಕೆಲಸವನ್ನು ಮಾಡಬೇಕು.
#CongressFailsKarnataka #KPSCಮೋಸ #KPSCMosa
ಗೊಂದಲ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ವಿಳಂಬ ನೀತಿ, ಪಾರದರ್ಶಕತೆ ಇಲ್ಲದೆ ಇರುವುದು, ಅಸಮರ್ಥ ಪರೀಕ್ಷಾ ನಿಯಂತ್ರಕರು, ಅವೈಜ್ಞಾನಿಕ ಪರೀಕ್ಷಾ ಪದ್ಧತಿ,
ಪರೀಕ್ಷಾರ್ಥಿಗಳ ಭವಿಷ್ಯವನ್ನು ಹಾಳುಗೆಡುವುತ್ತಿರುವುದು, ಸಾಲು ಸಾಲು ತಪ್ಪುಗಳಾದರೂ ತಿದ್ದುಕೊಳ್ಳದೆ ಇರುವುದು, ದಕ್ಷ ಅಧಿಕಾರಿಗಳನ್ನು ವರ್ಗ ಮಾಡುವ ಮೂಲಕ ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುತ್ತಿರುವ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಡಳಿತಾತ್ಮಕ ಬದಲಾವಣೆ, ಪರಿವರ್ತನೆ ಆಗದೆ ಇದ್ದರೆ ಸಂಸ್ಥೆಯನ್ನು ಮುಚ್ಚುವುದೇ ಒಳ್ಳೆಯದು.
ಸರ್ಕಾರ ಇನ್ನಾದರೂ ಕ್ರಮ ಕೈಗೊಳ್ಳಲಿ. ಅಧಿಕಾರಿ, ಒಳ್ಳೆಯ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಬೇಕೆಂದು ಅಹರ್ನಿಶಿ ಓದುವ ಮಕ್ಕಳಿಗೆ, ಪರೀಕ್ಷಾರ್ಥಿಗಳಿಗೆ, ಮಗ/ಮಗಳು ಓದಿ ಅಧಿಕಾರಿ ಆಗುತ್ತಾರೆಂದು ಕನಸಿನ ಗೋಪುರ ಕಟ್ಟಿಕೊಂಡಿರುವ ಪೋಷಕರ ನೋಯಿಸಬೇಡಿ. ಲೋಕಸೇವಾ ಆಯೋಗದ ಶುದ್ದೀಕರಣ ಪ್ರಾರಂಭವಾಗಲಿ.
@HosadiganthaWeb I @prajavani I @tv9kannada I @AsianetNewsSN I @Vijayavani_Digi I @VijayaKarnataka I @OneindiaKannada I @AKSSAofficial I @secretarykpsc I #KPSCMosa I #KPSC I #RevampKPSC I
ಕೆಪಿಎಸ್ಸಿಯ ನಿರಂತರ ಎಡವಟ್ಟುಗಳು – @INCKarnataka ಸರ್ಕಾರದ ನಿರ್ಲಕ್ಷ್ಯದ ಪ್ರತಿಬಿಂಬ.
ಕೆಪಿಎಸ್ಸಿ ನಡೆಸುವ ಪ್ರತಿಯೊಂದು ನೇಮಕಾತಿ ಪರೀಕ್ಷೆಯಲ್ಲೂ ಗೊಂದಲ, ಲೋಪ, ದೋಷ, ಅಸಮರ್ಪಕತೆಯ ಸರಣಿ ಮುಂದುವರಿಯುತ್ತಲೇ ಇದೆ. ಕನ್ನಡದಲ್ಲಿ ಸೂಕ್ತ ಹಾಗೂ ನಿಖರವಾದ ಪ್ರಶ್ನೆಗಳು ನೀಡುವಲ್ಲಿ ನಿರಂತರ ವಿಫಲವಾಗುತ್ತಿರುವುದು ಕೆಪಿಎಸ್ಸಿಯ ಅವ್ಯವಸ್ಥಿತ ಕಾರ್ಯಪದ್ಧತಿಯಲ್ಲದೇ, ಕಾಂಗ್ರೆಸ್ ಸರ್ಕಾರದ ಅಸಮರ್ಥ ಆಡಳಿತವನ್ನೂ ಮುಚ್ಚುಮರೆಯಿಲ್ಲದಂತೆ ಬಹಿರಂಗಪಡಿಸಿದೆ.
ಮುಖ್ಯಮಂತ್ರಿ @siddaramaiah ನವರ ಎಚ್ಚರಿಕೆಗೂ ಕಡೆಗಣನೆ, ಪರೀಕ್ಷಾರ್ಥಿಗಳ ಭವಿಷ್ಯಕ್ಕೂ ಕೊಕ್ಕೆ—ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ ಎಂಬುದಕ್ಕೆ ಕೆಪಿಎಸ್ಸಿಯ ನಿರ್ವಹಣಾ ವೈಫಲ್ಯವೇ ದೊಡ್ಡ ಉದಾಹರಣೆ. ಈ ಅವ್ಯವಸ್ಥೆಯಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳು ಅವಕಾಶಗಳಿಂದ ವಂಚಿತರಾಗಿದ್ದಾರೆ.
ಈ ಅಸಡ್ಡೆ ನಿಲುವನ್ನು ನಮ್ಮ ಪಕ್ಷವು ಖಂಡಿಸುತ್ತದೆ. ಕೆಪಿಎಸ್ಸಿ ಭ್ರಷ್ಟಾಚಾರದ ಕೇಂದ್ರವಾಗದೇ, ಮೆರಿಟ್ ಆಧಾರಿತ ನೇಮಕಾತಿಗೆ ವೇದಿಕೆಯಾಗಬೇಕು. ಈ ನಿರ್ಲಕ್ಷ್ಯ ನಿಲ್ಲಿಸದಿದ್ದರೆ, ಅವಕಾಶವಂಚಿತರಾಗುತ್ತಿರುವ, ಅನ್ಯಾಯಕ್ಕೊಳಗಾಗುತ್ತಿರುವ ಯುವಕರ ಪರವಾಗಿ ಬಿಜೆಪಿ ತೀವ್ರ ಹೋರಾಟಕ್ಕಿಳಿಯಲಿದೆ!
#KPSC_Fails #CongressFailsKarnataka