ಒಂದೆರಡು ತಿಂಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಹೊಸ ನಿರ್ಮಾಪಕರೊಬ್ಬರು ಸಿಕ್ಕಿದ್ದರು. ನಿರ್ಮಾಣ ಮಾಡೋ ಮುಂಚೆ ವಿತರಣೆ ಮಾಡಿ ಚಿತ್ರರಂಗದ experience ಪಡೆಯೋಣ ಅಂತ ರವಿಚಂದ್ರನ್ ಮನೆಗೆ ಹೋಗಿ ಅವರ ಹಳೆ ಎರಡು ಚಿತ್ರಗಳ ಮರುಬಿಡುಗಡೆ ಬಗ್ಗೆ ಮಾತನಾಡಿದ್ರಂತೆ. "ರವಿಚಂದ್ರನ್ ಬುದ್ದಿ ಹೇಳಿ ಕಳಿಸಿದ್ರು. ಈ ಫಿಲ್ಮ್, ಆ ಫಿಲ್ಮ್ ಮರು ಬಿಡುಗಡೆ ಮಾಡ್ತೀನಿ ಅಂತ ಜಾಹಿರಾತು ಕೊಟ್ಟ ದಿನದಿಂದ ಸನ್ ಅವರ ಉದಯ TV ನಲ್ಲಿ ಅದನ್ನು ದಿನಾ ಪ್ರಸಾರ ಮಾಡ್ತಾರೆ. ಸುಮ್ನೆ 50-60 ಲಕ್ಷ ಕಳೆದುಕೊಳ್ಳುತ್ತೀರ ಅಂತ ಅಂದ್ರು," ಅಂತಂದ್ರು.
ಉದಯ ಮಾತ್ರವಲ್ಲ, ಆ ಕಾಲದಲ್ಲಿ ಕೇವಲ Home Video ಹಕ್ಕು ಪಡೆದವರು, ಆಡಿಯೋ ರೈಟ್ಸ್ ಪಡೆದವರು, ಎಲ್ಲರೂ ಸೇರಿ FB, YT, Insta ಗಳಲ್ಲಿ ಈಗಾಗಲೇ ಈ "ಶಾಂತಿ ಕ್ರಾಂತಿ re-release ಮಾಡಿ" ಟ್ರೆಂಡ್ ನಿಂದ ದುಡ್ಡು ಮಾಡುತ್ತಿದ್ದಾರೆ. Theatre ನಲ್ಲಿ ಬಿಡುಗಡೆ ಮಾಡುವ ಬುದ್ದಿವಂತ ಮಾತ್ರ ದುಡ್ಡು ಕಳೆದುಕೊಳ್ಳುತ್ತಾನೆ.