📢 *ಸಾರ್ವಜನಿಕರ ಗಮನಕ್ಕೆ*
ನಿಮ್ಮ ಸುತ್ತಮುತ್ತ ಕಂಡುಬರುವ *ಆರೋಗ್ಯ ಸಂಬಂಧಿತ ಸಮಸ್ಯೆಗಳು ಅಥವಾ ರೋಗ ಪ್ರಕರಣಗಳನ್ನು* IHIP ಪೋರ್ಟಲ್ನ *Community Reporting* ಮೂಲಕ ವರದಿ ಮಾಡಬಹುದು.
📝 *ಹೇಗೆ ವರದಿ ಮಾಡಬೇಕು?*
Community Reporting ಮಾಡುವ *Step-by-Step ಮಾರ್ಗಸೂಚಿ ವಿಡಿಯೋ*ವನ್ನು ವೀಕ್ಷಿಸಿ ಮತ್ತು ಸುಲಭವಾಗಿ ವರದಿ ಮಾಡಿ.
📢 Public Awareness Message
The public can report *health-related issues and disease cases* in their community through the *Community Reporting* feature on the IHIP Portal.
📝 How to Report?
Watch the *Step-by-Step Guide Video* to learn how to submit a Community Report easily.
PM-ABHIM ಯೋಜನೆಯ IDSP, NCDC ಕಾರ್ಯಕ್ರಮದಡಿ ಸ್ಥಾಪಿಸಲಾದ Metropolitan Surveillance Unit, ಬೆಂಗಳೂರು ಇಲ್ಲಿ ಖಾಲಿ ಇರುವ ವೈದ್ಯಕೀಯ, ಅರೆವೈದ್ಯಕೀಯ ಮತ್ತು ಸಹಾಯಕ ಸಿಬ್ಬಂದಿ ಹುದ್ದೆಗಳನ್ನು ಸಂಪೂರ್ಣ ಗುತ್ತಿಗೆ ಆಧಾರದ ಮೇಲೆ ವಾಕ್ ಇನ್ ಪ್ರಕ್ರಿಯೆ ಮೂಲಕ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ | ಬೆಂಗಳೂರು, ಆಗಸ್ಟ್ 24, 2026
🦠 ಬೆಂಗಳೂರಿನಲ್ಲಿ H1N1 ಹಾಗೂ ಋತುಮಾನದ ಜ್ವರದ ಕುರಿತು ಜಾಗೃತಿ
🏥 H1N1 ಹಾಗೂ ಋತುಮಾನದ ಜ್ವರದ ಹಿನ್ನೆಲೆಯಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳಿಗೆ ಆದ್ಯತೆ.
📢 ಆಯುಕ್ತರಾದ ಶ್ರೀ ಜಗದೀಶ್.ಜಿ. ಅವರ ನಿರ್ದೇಶನದಂತೆ ವಿವಿಧ ಯುಪಿಎಚ್ಸಿಗಳಲ್ಲಿ IEC ಚಟುವಟಿಕೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ | ಬೆಂಗಳೂರು, ಆಗಸ್ಟ್ 24, 2026
🩺 325 ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ: ಆಯುಕ್ತ ಕೆ.ಎನ್. ರಮೇಶ್
🏥 ಬೊಮ್ಮನಹಳ್ಳಿ ವಲಯದ 325 ಪೌರಕಾರ್ಮಿಕರು ಹಾಗೂ ಕಸದ ಆಟೋ ಚಾಲಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ.
🩺 ಬಿ.ಪಿ., ಡಯಾಬಿಟಿಸ್, ಇಸಿಜಿ ಹಾಗೂ ಮೂಳೆ ಸಂಬಂಧಿತ ತಪಾಸಣೆ ನಡೆಸಲಾಯಿತು.
🩺 ಆರೋಗ್ಯ ತಪಾಸಣೆ ಹಾಗೂ ಲಸಿಕಾ ಕಾರ್ಯಕ್ರಮ
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಜಯನಗರ ವ್ಯಾಪ್ತಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ BHS ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಿಮೋಗ್ಲೋಬಿನ್ (HB) ಪರೀಕ್ಷೆ ಹಾಗೂ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
On 3/8/2026, Dr Velayudham, Entomologist MSU visited dengue death and positive reported area at Shahakara Nagar UPHC, BNCC to investigate case details & cross verify dengue larval source reduction activity along with Epidemologist and concerned HIOs & ASHA workers' of the UPHC.
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದ HPV ಲಸಿಕೆ ನೀಡಿಕೆ
✅ ವಿದ್ಯಾರ್ಥಿನಿಯರ ಆರೋಗ್ಯ ರಕ್ಷಣೆ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮ
✅ ಶಾಲಾ ಆಧಾರಿತ ಲಸಿಕಾ ಅಭಿಯಾನದ ಯಶಸ್ವಿ ಅನುಷ್ಠಾನ
✅ ಆರೋಗ್ಯಕರ ಭವಿಷ್ಯಕ್ಕಾಗಿ ಮುನ್ನೆಚ್ಚರಿಕೆಯ ಆರೋಗ್ಯ ಸೇವೆ
#DKShivakumar#karnataka#bengaluru#hpv#school
📍 ಕೇಂದ್ರೀಯ ವಿದ್ಯಾಲಯದಲ್ಲಿ HPV ಲಸಿಕೆ ನೀಡಿಕೆ
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕಾಕ್ಸ್ ಟೌನ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಇಂದು ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗೆ HPV (ಹ್ಯೂಮನ್ ಪ್ಯಾಪಿಲೋಮಾ ವೈರಸ್) ಲಸಿಕೆ ನೀಡಲಾಯಿತು.
✅
🏥 ಪೌರಕಾರ್ಮಿಕರ ಆರೋಗ್ಯ ತಪಾಸಣೆ | ಸುಧಾಮನಗರ ನಮ್ಮ ಕ್ಲಿನಿಕ್
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವತಿಯಿಂದ ಹೆಚ್. ಸಿದ್ದಯ್ಯ ರಸ್ತೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸುಧಾಮನಗರದ ನಮ್ಮ ಕ್ಲಿನಿಕ್ನಲ್ಲಿ ಪೌರಕಾರ್ಮಿಕರ ಆರೋಗ್ಯ ಮೌಲ್ಯಮಾಪನ (Health Assessment) ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.