ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಇಂದು ಶನಿವಾರ (ದಿನಾಂಕ 22 ಆಗಸ್ಟ್ 2026) ಬೆಳಗಿನ ವಿಶೇಷ ಪುಷ್ಪಾಲಂಕಾರದಲ್ಲಿ, ಸ್ವರ್ಣಾಭರಣದಿಂದ ಕಂಗೊಳಿಸುತ್ತಿರುವ ಮಲ್ಲಿಗೆ ಪ್ರಿಯೆ ಭ್ರಾಮರೀ
Kateel Shri Durgaparameshwari amma in today's special alankara.
#Kateel#Durgaparameshwari#KateeluOfficial
ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇಂದು ವಿಧಾನಸೌಧದಲ್ಲಿ ಸಭೆ ನಡೆಸಿ, ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಆರ್ಥಿಕ ಸಲಹೆಗಾರರಾದ ಶ್ರೀ ಎಲ್. ಕೆ. ಅತೀಕ್ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ |
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||
ಅಧಿಕೃತ ಗೃಹಕಚೇರಿ ಕುಮಾರಪಾರ್ಕ್ನ 'ಕೃಷ್ಣಾ'ದಲ್ಲಿ ಇಂದು ಪೂಜೆ ಸಲ್ಲಿಸುವ ಮೂಲಕ ಕಾರ್ಯಾರಂಭ ಮಾಡಿದೆನು.
ಬಿಡದಿ ಟೌನ್'ಶಿಪ್ ಯೋಜನೆಗೆ ಸಂಬಂಧಿಸಿದಂತೆ
ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.
ಕುಮಾರಸ್ವಾಮಿ ಅವರೊಂದಿಗೆ ಸಮಗ್ರವಾಗಿ
ಚರ್ಚಿಸಲು ನಾನು ಸಿದ್ಧನಿದ್ದು, ದಿನಾಂಕ 26-06-2026, ಬೆಳಗ್ಗೆ 11 ಗಂಟೆಗೆ ತಮ್ಮ ಐವರು ಪ್ರತಿನಿಧಿಗಳೊಂದಿಗೆ ವಿಧಾನಸೌಧದ ನನ್ನ ಕಚೇರಿಗೆ ಆಗಮಿಸುವಂತೆ ಪತ್ರದ ಮೂಲಕ ಅಧಿಕೃತ ಆಹ್ವಾನ ನೀಡಿದ್ದೇನೆ.
ಶ್ರೀ ಕುಮಾರಸ್ವಾಮಿ ಅವರೇ ಆರಂಭಿಸಿದ ಬಿಡದಿ ಟೌನ್'ಶಿಪ್ ಯೋಜನೆ ಕುರಿತು ಎಲ್ಲಾ ದಾಖಲೆಗಳು, ಸರ್ಕಾರದ ನಿರ್ಣಯಗಳು ಹಾಗೂ ವಾಸ್ತವಾಂಶಗಳ ಆಧಾರದ ಮೇಲೆ ಚರ್ಚಿಸಲು ನಾನು ಸದಾ ಸಿದ್ಧನಿದ್ದೇನೆ, ಬನ್ನಿ...
6 ವರ್ಷಗಳ ಶಕ್ತಿ, ಒಗ್ಗಟ್ಟು ಮತ್ತು ಸೇವೆ
ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ.
ರಾಜಕೀಯವನ್ನು ಕೇವಲ ಅಧಿಕಾರಕ್ಕಾಗಿ ಅಲ್ಲದೆ, ಸಾರ್ವಜನಿಕ ಸೇವೆಯ ಮಾಧ್ಯಮವಾಗಿ ಸ್ವೀಕರಿಸಿದ ನಾನು, ನನ್ನ ಸಾರ್ವಜನಿಕ ಜೀವನದ ಆರಂಭದಿಂದಲೂ ಕಾಂಗ್ರೆಸ್ ಸಿದ್ಧಾಂತ ಹಾಗೂ ಮೌಲ್ಯಗಳಿಗೆ ಬದ್ಧನಾಗಿ ನಡೆದುಬಂದಿದ್ದೇನೆ. ಪಕ್ಷದ ಪ್ರತಿಯೊಬ್ಬ ನಾಯಕರು ಮತ್ತು ಕಾರ್ಯಕರ್ತರನ್ನು ನನ್ನ ಸ್ವಂತ ಕುಟುಂಬದ ಸದಸ್ಯರೆಂದೇ ಭಾವಿಸಿ, ಸಂಘಟನೆಯ ಏಳಿಗೆಗಾಗಿ ನನ್ನನ್ನು ನಾನು ಸಂಪೂರ್ಣವಾಗಿ ಅರ್ಪಿಸಿಕೊಂಡು ನಿರಂತರವಾಗಿ ಶ್ರಮಿಸಿದ್ದೇನೆ.
2020ರಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ನಮ್ಮ ಮುಂದೆ ಸಾಲು ಸಾಲು ಸವಾಲುಗಳಿದ್ದವು. ಅಂದು ನಾನು ಕಾರ್ಯಕರ್ತರಿಗೆ ನೀಡಿದ ಒಂದೇ ಸರಳ ಕರೆ, "ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಿ" ಎಂಬುದು. ನಾಯಕರಷ್ಟೇ ಅಲ್ಲ, ತಳಮಟ್ಟದಲ್ಲಿ ನಿಸ್ವಾರ್ಥವಾಗಿ ದುಡಿಯುವ ಪ್ರತಿಯೊಬ್ಬ ಕಾರ್ಯಕರ್ತನೂ ಪಕ್ಷದ ನಿಜವಾದ ಜೀವಾಳ ಮತ್ತು ಶಕ್ತಿ ಎಂದು ನಂಬಿ, ನಾವೆಲ್ಲರೂ ಒಗ್ಗಟ್ಟು ಹಾಗೂ ದೃಢ ಸಂಕಲ್ಪದೊಂದಿಗೆ ಪಕ್ಷಕ್ಕಾಗಿ ಮತ್ತು ಅದರ ಆಶಯಗಳಿಗಾಗಿ ದಣಿವರಿಯಿಲ್ಲದೆ ಕೆಲಸ ಮಾಡಿದ್ದೇವೆ.
ಕಳೆದ ಆರು ವರ್ಷಗಳ ನನ್ನ ಈ ಸುದೀರ್ಘ ಪಯಣವು ಹೋರಾಟ, ತ್ಯಾಗ ಮತ್ತು ತೃಪ್ತಿಯಿಂದ ಕೂಡಿದ್ದಾಗಿದೆ. ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ʻಆರೋಗ್ಯ ಹಸ್ತʼದ ಮೂಲಕ ನಾವು ಜನರ ಪರವಾಗಿ ನಿಂತವು. ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರ ಕಣ್ಣೀರು ಒರೆಸಿ ಅವರಿಗೆ ಬೆಂಬಲ ನೀಡಿದೆವು. 75 ಲಕ್ಷಕ್ಕೂ ಅಧಿಕ ಸದಸ್ಯರನ್ನು ಕಾಂಗ್ರೆಸ್ ಕುಟುಂಬಕ್ಕೆ ಜೋಡಿಸಿದ ನಮ್ಮ ಬೃಹತ್ ಸದಸ್ಯತ್ವ ಅಭಿಯಾನ, ಕರ್ನಾಟಕದ ಹಿತರಕ್ಷಣೆಗಾಗಿ ನಾವು ಹಮ್ಮಿಕೊಂಡ ಐತಿಹಾಸಿಕ ʻಮೇಕೆದಾಟು ಪಾದಯಾತ್ರೆʼ ಮತ್ತು ಶ್ರೀ ರಾಹುಲ್ ಗಾಂಧಿ ಅವರ ನೇತೃತ್ವದ ʻಭಾರತ್ ಜೋಡೋ ಯಾತ್ರೆʼಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಹೆಜ್ಜೆ ಹಾಕಿದ್ದು ನನ್ನ ಈ ಪಯಣದ ಮೈಲಿಗಲ್ಲುಗಳು.
ʻನಮ್ಮ ಮತ - ನಮ್ಮ ಹಕ್ಕು - ನಮ್ಮ ಹೋರಾಟʼ ಮತ್ತು ಇತ್ತೀಚಿನ ʻನರೇಗಾ ಬಚಾವೋ ಸಂಗ್ರಾಮʼದವರೆಗೆ ರಾಜ್ಯದ ಮಹಾಜನತೆಯ ಹಿತಾಸಕ್ತಿ ಹಾಗೂ ಹಕ್ಕುಗಳನ್ನು ರಕ್ಷಿಸುವುದೇ ನಾವು ನಡೆಸಿದ ಪ್ರತಿಯೊಂದು ಹೋರಾಟದ ಏಕೈಕ ಉದ್ದೇಶವಾಗಿತ್ತು. ಈ ಹೋರಾಟಗಳು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ತಳಮಟ್ಟದಲ್ಲಿ ಹೊಸ ಚೈತನ್ಯವನ್ನು ನೀಡಿದ್ದಲ್ಲದೆ, ಪಕ್ಷ ಮತ್ತು ಸಾರ್ವಜನಿಕರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದವು.
ನಮ್ಮೆಲ್ಲರ ಈ ನಿರಂತರ ಪರಿಶ್ರಮ ಹಾಗೂ ಅಸಂಖ್ಯಾತ ನಾಯಕರು ಮತ್ತು ಕಾರ್ಯಕರ್ತರ ತ್ಯಾಗದ ಫಲವಾಗಿಯೇ 2023ರಲ್ಲಿ ಕರ್ನಾಟಕದ ಜನತೆ ನಮಗೆ ಭರ್ಜರಿ ಬಹುಮತದೊಂದಿಗೆ ಸ್ಪಷ್ಟ ಜನಾದೇಶ ನೀಡಿ ಅಧಿಕಾರಕ್ಕೆ ತಂದರು. ಜನತೆ ನಮ್ಮ ಮೇಲಿಟ್ಟಿರುವ ಅಪಾರ ನಂಬಿಕೆಗೆ ನಾವು ಸದಾ ಕೃತಜ್ಞರಾಗಿದ್ದೇವೆ. ಕೊಟ್ಟ ಮಾತಿನಂತೆ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನಮ್ಮ ಭರವಸೆಗಳನ್ನು ಈಡೇರಿಸಿದ್ದೇವೆ.
ಇಂದು ನೂತನ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹಿರಿಯ ನಾಯಕರಾದ ಶ್ರೀ ಬಿ. ಕೆ. ಹರಿಪ್ರಸಾದ್ (@HariprasadBK2) ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಸಮರ್ಥ ನಾಯಕತ್ವದಲ್ಲಿ ನಮ್ಮ ಪಕ್ಷವು ಮತ್ತಷ್ಟು ಬಲಗೊಂಡು, ಹೊಸ ಎತ್ತರಕ್ಕೆ ಬೆಳೆಯಲಿದೆ ಎಂಬ ವಿಶ್ವಾಸ ನನಗಿದೆ. ಪಕ್ಷವನ್ನು ಮತ್ತಷ್ಟು ಬಲಪಡಿಸುವ ಅವರ ಪ್ರತಿ ಹೆಜ್ಜೆಯಲ್ಲೂ ನಾನು ಹೆಗಲಿಗೆ ಹೆಗಲು ಕೊಟ್ಟು ಜೊತೆಯಾಗಿ ನಿಲ್ಲುತ್ತೇನೆ ಮತ್ತು ನನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ.
ನನಗೆ ಸಂಘಟನೆಯೇ ಎಲ್ಲಕ್ಕಿಂತ ಮೊದಲು, ಸಂಘಟನೆಯೇ ನನ್ನ ಪೂಜೆ. ಮುಂದಿನ ದಿನಗಳಲ್ಲೂ ಪಕ್ಷದ ಸಿದ್ಧಾಂತ ಮತ್ತು ಮೌಲ್ಯಗಳ ಅಡಿಯಲ್ಲಿ, ಅದೇ ಬದ್ಧತೆ ಹಾಗೂ ವಿಶ್ವಾಸದೊಂದಿಗೆ ಒಬ್ಬ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನಾಗಿ ಜನರ ಸೇವೆ ಮಾಡುತ್ತೇನೆ. ಸಾರ್ವಜನಿಕರ ವಿಶ್ವಾಸವನ್ನು ಮತ್ತೊಮ್ಮೆ ಗಳಿಸಿ, 2028ರ ಚುನಾವಣೆಯಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ನನ್ನ ಹೋರಾಟ ನಿರಂತರವಾಗಿರುತ್ತದೆ.
ನಾನು ಹುಟ್ಟು ಕಾಂಗ್ರೆಸ್ಸಿಗ, ಕಾಂಗ್ರೆಸ್ಸಿಗನಾಗಿಯೇ ಬದುಕಿದ್ದೇನೆ ಮತ್ತು ನನ್ನ ಕೊನೆಯ ಉಸಿರಿರುವವರೆಗೂ ಕಾಂಗ್ರೆಸ್ಸಿಗನಾಗಿಯೇ ಇರುತ್ತೇನೆ!
ಜೈ ಹಿಂದ್. ಜೈ ಕರ್ನಾಟಕ. ಜೈ ಕಾಂಗ್ರೆಸ್.
ಎಂಎಲ್ಸಿ ಚುನಾವಣೆಯ ವಿಜಯದ ಬಳಿಕ, ಬಮೂಲ್ ಅಧ್ಯಕ್ಷರು ಹಾಗೂ ಮಾಜಿ ಸಂಸದರಾದ ಶ್ರೀ ಡಿ. ಕೆ. ಸುರೇಶ್ ಅವರನ್ನು ಆತ್ಮೀಯವಾಗಿ ಭೇಟಿಯಾಗಿ ಅವರ ಆಶೀರ್ವಾದ ಹಾಗೂ ಶುಭಾಶಯಗಳನ್ನು ಪಡೆದೆ.
ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹದ ಮಾತುಗಳು ಇನ್ನಷ್ಟು ಜವಾಬ್ದಾರಿಯೊಂದಿಗೆ ಜನಸೇವೆ ಮಾಡುವ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಿವೆ. @DKSureshINC