@jagal_ganti Madam, I will surely do that. I have great admiration for your posts, and through that, your ability. I am scheduled to appear in the Karnataka High Court in Bangalore on Aug.7. I will consider myself fortunate if I could briefly meet you. Pl let me know.🙏
“The life of the law has not been logic but experience” ಎಂಬುದು ಅಮೆರಿಕಾ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಆಲಿವರ್ ವೆಂಡೆಲ್ ಹೋಮ್ಸ್ ಅವರ ಪ್ರಸಿದ್ಧ ಹೇಳಿಕೆ. ಪ್ರಪಂಚ ಕಂಡ ಶ್ರೇಷ್ಠ ದಾರ್ಶನಿಕ ಬಸವಣ್ಣನವರ *ಅನುಭವ ಮಂಟಪ* ಸಹಾ ಜೀವನಾನುಭಾವ ಮತ್ತು ಶರಣಾಗತಿಯ ಮೂಲಕ ಸಾಕ್ಷಾತ್ಕಾರ ಹಾಗೂ ಏಳಿಗೆಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಜಗತ್ತಿಗೇ ಮಾರ್ಗದರ್ಶಕವಾಗಿರುವುದು ನಿಸ್ಸಂಶಯ. “ಅನುಭವದಡುಗೆಯ ಮಾಡಿ ಅದಕನುಭವಿಗಳು ಬಂದು ನೀವೆಲ್ಲಾ ಕೂಡಿ” ಎಂಬ ವಾಕ್ಯಗಳಿಂದ ಮೊದಲುಗೊಳ್ಳುವ ಪುರಂದರದಾಸರ ಕೃತಿಯೂ ಇದೇ ಸಂದೇಶವನ್ನು ಸಾರಿದೆ. ವಚನ – ದಾಸ ಸಾಹಿತ್ಯಗಳೆಂಬ ಜ್ಞಾನದ ಭಂಡಾರವನ್ನು ಜಗತ್ತಿಗೆ ಕರುಣಿಸಿದ ಹಿರಿಮೆ ನಮ್ಮ ಕನ್ನಡನಾಡಿನದು.🙏🙏
#ಬಸವಣ್ಣ #basavanna #ಬಸವಜಯಂತಿ #basavajayanthi #ವಚನಸಾಹಿತ್ಯ #ದಾಸಸಾಹಿತ್ಯ #dasasahitya