71 frames of our incredible Karnataka as a tribute to the 71st Kannada Rajyotsava!
71ನೇ ಕನ್ನಡ ರಾಜ್ಯೋತ್ಸವ!
ಒಂದು ರಾಜ್ಯ, ಹಲವು ಜಗತ್ತು!
#KarnatakaRajyotsava
#ಭಾಷಾಚಿಂತನೆ#ನುಡಿವಿಚಾರ#language#books 📚📚📚
ಭಾಷೆಗಳಲ್ಲಿ ಧ್ವನಿಗಳ ಬದಲಾವಣೆಗಳು
==========================
ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಪದಗಳು ಹೋಗುವುದು ಸಾಮಾನ್ಯವಾಗಿ ನಡೆಯುವ ವಿಷಯ. ಹೀಗೆ ಆಗಲು ಎರಡೂ ಭಾಷೆಗಳು ಒಂದು ಪರಿಸರದಲ್ಲಿ ಇರಬೇಕಾಗುತ್ತದೆ. ಅಥವಾ ಬೇರೊಂದು ದೂರದ್ದೇ ಆಗಿರಬಹುದಾದ ಭಾಷೆಯ, ನಾಡಿನ ಪದಾರ್ಥವನ್ನು ನಾವು ಅದೇ ಹೆಸರಿನಲ್ಲಿ ತೆಗೆದುಕೊಳ್ಳುವ ಕಾರಣದಿಂದಲೂ ಪದಗಳು ಒಂದು ನುಡಿಯಿಂದ ಮತ್ತೊಂದು ನುಡಿಗೆ ಹೋಗು��್ತದೆ.
ಹಾಗೆ ಹೋಗುವಾಗ ಮೂಲ ಭಾಷೆಯಲ್ಲಿದ್ದಂತೆಯೇ ಹೋಗುವ ( =ತತ್ಸಮ) ಹಾಗೂ ಯಾವ ಭಾಷೆಗೆ ಹೋಗುತ್ತದೋ ಆ ಭಾಷೆಗೆ ಹೊಂದಾಣಿಕೆ ಆಗುವ ರೀತಿಯಲ್ಲಿ (=ತದ್ಭವ) ಎರಡೂ ಬಗೆಯಲ್ಲಿ ಪದಗಳು ಹೋಗುವುದನ್ನು ನೋಡುತ್ತೇವೆ. ಮೂಲದಲ್ಲಿ ತತ್ಸಮ ಮತ್ತು ತದ್ಭವ ಈ ಎರಡೂ ಪದಗಳೂ ಸಂಸ್ಕೃತದಿಂದ ಕನ್ನಡ (ಮೊದಲಾದ) ಭಾಷೆಗೆ ಬರುವಾಗ ಬಳಸುತ್ತಿದ್ದ ಪಾರಿಭಾಷಿಕಾ ಪದವಾಗಿದ್ದರೂ, ಇವತ್ತು ಇಂಗ್ಲಿಷ್,ಪರ್ಶಿಯನ್, ಅರೇಬಿಕ್ (ಅಥವಾ ಸ್ವಾಹಿಲಿ, ಹಿಂದ ನಾವು ಪದಗಳನ್ನು ತೆಗೆದುಕೊಂಡಿದ್ದರೆ, ಅದರಿಂದಲೂ) ಪದಗಳು ಬಂದಾಗ ತತ್ಸಮ ಮತ್ತೆ ತದ್ಭವ ಎಂದು ಕರೆಯುವುದು ತಾತ್ತ್ವಿಕವಾಗಿ ತಪ್ಪೇನಲ್ಲ ಎಂದು ನನ್ನ ಭಾವನೆ.
ಅದಿರಲಿ. ಹೀಗೆ ತದ್ಭವವಾಗುವಾಗ ಪದಗಳು ಸವರಿಕೊಂಡು ಉಚ್ಚಾರ ಬದಲಾಗುವುದುಂಟು. ಆ ಬದಲಾವಣೆಗಳು ಧ್ವನಿಶಾಸ್ತ್ರಕ್ಕೆ ಅನುಗುಣವಾಗಿಯೇ ನಡೆಯುತ್ತವೆ. ಎಂದರೆ ಬದಲಾದ ಧ್ವನಿಗಳೂ ಮೂಲ ಧ್ವನಿಗಳೂ ಒಂದಕ್ಕೊಂದು ಹತ್ತಿರದ ಸ್ಥಳದಲ್ಲೇ (ನಮ್ಮಗಂಟಲಲ್ಲಿ, ಬಾಯಲ್ಲಿ) ಹುಟ್ಟುವಂತಿರಬೇಕು. ಅದು ಬಿಟ್ಟು ಯಾವುದೋ ಅಕ್ಷರವು ಯಾವುದೋ ಅಕ್ಷರವಾಗಲು ಸಾಧ್ಯವಿಲ್ಲ. (ಇಲ್ಲಿ ಅಕ್ಷರ ಅನ್ನುವುದು ಧ್ವನಿಯನ್ನು ಸೂಚಿಸುವ ಪರಿಕರವೇ ಹೊರತು ಇನ್ನೇನಲ್ಲ). ಈಗ ಕಾಗZ ಎಂಬ ಪರ್ಶಿಯನ್ ಪದವನ್ನು ಅಥವಾ Zebra ಎಂಬ ಇಂಗ್ಲಿಷ್ ಪದವನ್ನೇ ಗಮನಿಸಿ. ಅದು ಕನ್ನಡಕ್ಕೆ ಬಂದಾಗ, ಮೊದಲು Z ಅನ್ನುವ ಧ್ವನಿ ಕನ್ನಡದಲ್ಲೇ ಆಗಲಿ, ಕನ್ನಡದ ಪರಿಸರದಲ್ಲಿ ಇರುವ ಇತರ ಭಾರತೀಯ ಭಾಷೆಗಳಲ್ಲಾಗಲೀ ಇಲ್ಲದ್ದರಿಂದ ಅದು, ಆ Z ಎಂಬ ಅಕ್ಷರದ ಉಚ್ಚಾರಣೆಗೆ ಸಮೀಪವಾದ "ಜ" ಕಾರಕ್ಕೆ ತಿರುಗುತ್ತದೆ. (ಕಾಗಜ, ಜೀಬ್ರಾ). ಕಾಲಾನಂತರ ಕಾಗಜವು ಕಾಗದವಾಯಿತು. ಇಂದು ಇಂಗ್ಲಿಷ್ ಪರಿಚಯ ಹೆಚ್ಚು ಇರುವುದರಿಂದ ಜನರು ಜೀಬ್ರಾ ಎನ್ನದೇ Zebra ಎಂಬ ಇಂಗ್ಲಿಷ್ ಉಚ್ಚಾರವನ್ನೇ ತತ್ಸಮವಾಗಿ ಬಳಸುತ್ತಿರುವುದನ್ನು ನೋಡಬಹುದು. ಅದೇ ರೀತಿ ಸಂಸ್ಕೃತದಿಂದ ಬಂದ ಹಲವು ಪದಗಳೂ 8-೧೦ ನೇ ಶತಮಾನದಲ್ಲಿ ತದ್ಭವವಾಗಿ ಬಂದರೂ ಇಂದು ಅಂತಹ ಎಷ್ಟೋ ಪದಗಳನ್ನು ತತ್ಸಮವಾಗಿಯೇ ಬಳಸುತ್ತ ಇರುವುದಕ್ಕೂ ಇದೇ ಕಾರಣ. ಅದಿರಲಿ, ನಾನು ಹೇಳಬೇಕೆಂದಿದ್ದದ್ದು, ಧ್ವನಿ ಬದಲಾವಣೆ. Zebra ವು ಜೀಬ್ರಾವೋ, ಝೀಬ್ರಾವೋ ಆಗಬಹುದೇ ಹೊರತು , ಲಾಬ್��ಾ ಅಥವಾ ಡಾಬ್ರೂ ಆಗದು. ಯಾಕೆಂದರೆ �� ಧ್ವನಿಗಳಿಗೆ ಒಂದಕ್ಕೊಂದಕ್ಕೆ ಸಂಬಂಧವಿಲ್ಲ, ಹಾಗೂ ಅವು ಹುಟ್ಟುವ ಸ್ಥಾನಗಳೂ ಒಂದಕ್ಕೊಂದು ಹತ್ತಿರವಿಲ್ಲ.
ಈಗ ನಡೆಯುತ್ತಿರುವ "ಪುಸ್ತಕಸಂತೆ"ಯ ವಿಚಾರಕ್ಕೇ ಬರೋಣ. ಕಣ್ಣಿಗೆ ಕಾಣುವಂತೇ ಅಲ್ಲಿ ಎರಡು ಪದಗಳಿವೆ. ಪುಸ್ತಕ, ಮತ್ತು ಸಂತೆ. ಒಂದು ಸಂಸ್ಕೃತ ಮತ್ತೊಂದು ಕನ್ನಡ, ಹಾಗಾಗಿ ಅರಿಸಮಾಸವಾಯಿತು, ಅದು ಬೇರೆ ವಿಷಯ. ಆದರೆ ತತ್ಸಮ ತದ್ಭವ ಎರಡೂ ಇರುವ ಒಂದು ಉದಾಹರಣೆಯಾಗಿ ಅದನ್ನು ತೆಗೆದುಕೊಂಡೆ. ಪುಸ್ತಕ ಅನ್ನುವುದು ಮೂಲ ಸಂಸ್ಕೃತದಲ್ಲಿ ಇದ್ದಂತೆಯೇ ಇರುವುದರಿಂದ ಅ��ು ತತ್ಸಮ. ಅದನ್ನು ತದ್ಭವ ಮಾಡಲಾಗದೇ ? ಯಾಕಿಲ್ಲ! ಖಂಡಿತ ಮಾಡಬಹುದು.
ತದ್ಭವವಾಗುವಾಗ ಮೊದಲಿಗೆ ಆಗುವ ಬದಲಾವಣೆ , ವಿಜಾತೀಯ ಸಂಯುಕ್ತಾಕ್ಷರವು ( ಇಲ್ಲಿ ಪು*ಸ್ತ*ಕ ) ಸಜಾತೀಯವಾಗಿ ಬದಲಾಗುತ್ತೆ. ಅಂದರೆ ಪುತ್ತಕವಾಗಬೇಕು. ಅದರ ಜೊತೆಗೇ ಅ/ಆ ಕಾರಗಳು ಎ ಕಾರವಾಗುವುದೂ, ಕಕಾರವು ಗಕಾರವಾಗಿ ಬದಲಾಗುವುದೂ ಇಂತಹ ಸಂದರ್ಭದಲ್ಲಿ ಚಲಾವಣೆಯಲ್ಲಿರುವ ಬದಲಾವಣೆ. ಅಕಾರವೂ ಎಕಾರವೂ ನಮ್ಮ ಬಾಯೊಳಗೆ ಹತ್ತಿರಹತ್ತಿರದಲ್ಲೇ ಉತ್ಪತ್ತಿಯಾಗುವುದನ್ನೂ, ಕ ಗ ಕಾರಗಳು ನಮ್ಮ ಗಂಟಲೊಳಗೆ ಹತ್ತಿ��ಹತ್ತಿರದಲ್ಲೇ ಉಂಟಾಗುವುದನ್ನೂ ಗಮನಿಸಿ. ಹಾಗಾದರೆ ಪುತ್ತಕವು ಬಹುಶಃ ಪುತ್ತಗೆ ಎಂದು ಬದಲಾಗಬೇಕು.
ಇದರ ಜೊತೆಗೆ ಕನ್ನಡದಲ್ಲಿ ಸುಮಾರು ಸಾವಿರ ವರ್ಷಗಳ ಹಿಂದೆ ಉ ಕಾರವು ಒಕಾರವಾಗಿ ಸವೆದ ಉದಾಹರಣೆಗಳೂ ಉಂಟು. ಇದು ನಮ್ಮ ಕನ್ನಡದ್ದೇ ಪದಗಳಲ್ಲೂ, ಬೇರೆ ಭಾಷೆಯಿಂದ ಬಂದ ಪದಗಳಲ್ಲೂ ಆಗಿರುವ ಬದಲಾವಣೆ. ತುಳಸಿ -> ತೊಳಸಿ , ಉರಲು -> ಒರಲು , ಒರಳು, ಕುರಲ್ -> ಕೊರಳು, ಮೊದಲಾದ ಬದಲಾವಣೆಗಳನ್ನು ಗಮನಿಸಿ. ಹಾಗಾಗಿ ಪುತ್ತಗೆ ಪೊತ್ತಗೆ ಎಂದಾಗಿರುವುದು.
ಸುಮಾರಾಗಿ ಅದೇ ಸಮಯದಿಂದಲೇ ಆರಂಭಿಸಿ, ಪದದ ಮೊದಲಿನ ಪಕಾರಗಳು ಎಷ್ಟೋ ಹಕಾರಕ್ಕೆ ಬದಲಾಗಿವೆ. ಪಕಾರಕ್ಕೆ ಬೇಕಾದ ತುಟಿ ಮುಚ್ಚುವಿಕೆಯನ್ನು ಬಿಟ್ಟುಬಿಟ್ಟರೆ, ಅದೇ ಧ್ವನಿ ಹಕಾರ��ಾಗುತ್ತದೆಂಬುದನ್ನು ಗಮನಿಸಿ. ಅಂದರೆ ಪೊತ್ತಗೆಯು ಹೊತ್ತಗೆಯಾಗುವುದು.
ಇಷ್ಟೂ ಬದಲಾವಣೆಗಳು ಜನರ ಮಾತಿನಲ್ಲಿ ಆಗಿದ್ದಿರಲೂಬಹುದು, ಅಥವಾ ಸಾಮಾನ್ಯವಾಗಿ ಆಗುವ ಬದಲಾವಣೆಗಳನ್ನು ಗಮನಿಸಿದ ಓರ್ವ ಬರಹಗಾರ ಈ ಪದವನ್ನು ಕಲ್ಪಿಸಿಕೊಂಡು ಅದನ್ನು ಬಳಸಲು ಆರಂಭಮಾಡಿದ್ದರೂ ಇರಬಹುದು. (ಇದನ್ನೇ ಭಾಷೆಯ ಸಲುವಳಿ ಎನ್ನಬಹುದು - ಇದಿಲ್ಲದಿದ್ದರೆ ಹಾಗೆ ಒಬ್ಬ ಕಲ್ಪಿಸಿಕೊಂಡ ಪದ ಭಾಷೆಗೆ ಹೊಂದದೇ ಹೋಗುವುದು.
ಇನ್ನು ಸಂತೆ ಅನ್ನುವುದಂತೂ ಇಂದು ಅಚ್ಚ ಕನ್ನಡವೇನೋ ಎಂಬ ಭ್ರಮೆ ಹುಟ್ಟಿಸುವ ಪದವಾಗಿದ್ದರೂ, ಅದು ಸಂಸ್ಥಾ -> ಸಂಸ್ಥೆ-> ಸಂತೆ ಎಂಬ ಬದಲಾವಣೆಗಳ ಸರಣಿಯಿಂದ ಬಂದದ್ದು. ಇಂದು ಕನ್ನಡದಲ್ಲಿ ಸ���ಸ್ಥೆ ಎಂಬ ಪದವೂ ಸಂತೆ ಎಂಬ ಪದವೂ ತಮ್ಮ ತಮ್ಮದೇ ವಿಶಿಷ್ಟಾರ್ಥಗಳಲ್ಲೇ ಬಳಕೆ ಆಗುತ್ತಿರುವುದನ್ನು ಗಮನಿಸಬಹುದು.
ಹಾಗಾಗಿ ಪುಸ್ತಕ ಸಂತೆ ಅನ್ನುವುದಕ್ಕೆ ಬದಲಾಗಿ ಹೊತ್ತಗೆ ಸಂತೆ ಅಂತ ಹೇಳಿದ್ದರೆ ಕನ್ನಡದ ಜಾಯಮಾನಕ್ಕೆ ಇನ್ನೂ ಚೆನ್ನಾಗಿ ಹೊಂದುತ್ತಿತ್ತು. ಅದೇನೇ ಇರಲಿ, ಸಮಯವಿದ್ದವರು #ಪುಸ್ತಕಸಂತೆ ಗೆ ಹೋಗಿ ಆನಂದಿಸಿ.
ಅಂದಹಾಗೆ ಈ ಸಂತೆ ನವೆಂಬರ್ ಕೊನೆಯವರೆಗೂ ಇರುವುದೇ? ಮಾಹಿತಿ ಇದ್ದವರು ದಯವಿಟ್ಟು ತಿಳಿಸಿ.
Another attack on Jains in karnataka. Tirtankar idol is destroyed and broken by miscreants at gangavathi . Honorable @CMofKarnataka, is Karnataka still ಸರ್ವ ಜನಾ��ಗದ ಶಾಂತಿಯ ತೋಟ? @BlrCityPolice what's happening in Karnataka? Jains living as 2nd class citizens in Karnataka . @osd_cmkarnataka will any action be initiated !
ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.
ನಾವು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆಂದರೆ ಅದು ನಮ್ಮ ಭವ್ಯ ಪರಂಪರೆಯನ್ನು ಸಂರಕ್ಷಿಸಿದಂತೆಯೇ ಸರಿ.
ನಮ್ಮ ವೀರಗಲ್ಲು, ಶಾಸನ ಮತ್���ು ಪಾರಂಪರಿಕ ಸ್ಮಾರಕಗಳು, ಹಾಗೆಯೇ ವಿವಿಧ ಸಂಪ್ರದಾಯಗಳು, ಜಾತ್ರೆಗಳು, ಜನಪದ ಹಾಡುಗಳು, ಕಥೆಗಳು, ಕರಕುಶಲ ಕಲೆ ಇವೆಲ್ಲವೂ ನಮಗೆಲ್ಲರಿಗೂ ಸೇರಿದವು ಹಾಗು ನಾವು ಉಳಿಸಿಕೊಂಡು ಹೋಗುವಂಥವು.
ಇಂತಹ ಪರಂಪರೆಯನ್ನು ಆಚರಣೆಗಳನ್ನು ನಾವು ಗೌರವದಿಂದ ಮುಂದಿನ ಪೀಳಿಗೆಗೂ ಉಳಿಸೋಣ. ನಮ್ಮ ಮಕ್ಲು ಕೂಡ ಇವನ್ನು ಹೆಮ್ಮೆಯಿಂದ ಸ್ವೀಕರಿಸುತ್ತಾರೆ.
ಸಂರಕ್ಷಣೆಯ ಕೆಲಸ ನಿರಂತರವಾಗಿ ನಡೆಯಬೇಕು.
1. ವೀರಗಲ್ಲು, ಶಾಸನ, ಹಳೆಯ ಕಟ್ಟಡಗಳ ಸ್ಪಷ್ಟ ಫೋಟೋಗಳನ್ನು ತೆಗೆದು ನಿಖರ ಸ್ಥಳದ ಹೆಸರೊಂದಿಗೇ ಹಂಚಿಕೊಳ್ಳಿ; 2. ಹಿರಿಯರಿಂದ ಜಾತ್ರೆಯ ಆಚರಣೆಗಳು, ಜನಪದ ಕಲೆ, ರಂಗೋಲಿ/ರಂಗವಲ್ಲಿಯ ವಿನ್ಯಾಸಗಳು - ಇವುಗಳ ಬಗ್ಗೆ ವಿವರಗಳನ್ನು ದಾಖಲಿಸಿ;
3. ಯಾವುದೇ ಸ್ಮಾರಕ ಹಾನಿಯಾಗಿದ್ದಲ್ಲಿ ಫೋಟೋ ಮತ್ತು ಚಿಕ್ಕ ಟಿಪ್ಪಣಿಯ ಜೊತೆಗೆ ಸ್ಥಳೀಯ ಅಧಿಕಾರಿಗಳಿಗೂ/ರಾಜ್ಯ ಪುರಾತತ್ವ ಇಲಾಖೆಯಿಗೂ ತಿಳಿಸಿ;
4. ಕೆರೆಗಳು, ಬೀದಿಗಳು ಅಥವಾ ಕೋಟೆಗಳ ಸ್ವಚ್ಛತಾ ಅಭಿಯಾನಗಳಲ್ಲಿ ಪಾಲ್ಗೊಳ್ಳಿ;
5. ಪಾರಂಪರಿಕ ಸ್ಥಳಗಳಲ್ಲಿ ಸರಳ ಸೂಚನಾ ಫಲಕಗಳನ್ನು ಅಳವಡಿಸಿ, ಸ್ಥ���ೀಯ ಜಾತಿಯ ಗಿಡಗಳನ್ನು ನೆಡಿ; ಸ್ಥಳಗಳಲ್ಲಿ ಬಹುಭಾಷಾ ಮಾಹಿತಿಗೆ/ಸಹಾಯವಾಣಿಗೆ ಕೊಂಡಿಯಿರುವ QR ಕೋಡ್ಗಳನ್ನು ಹಾಕಿರಿ; ಮಕ್ಕಳಿಗಾಗಿ ಚಿಕ್ಕ ಕಾರ್ಯಾಗಾರಗಳನ್ನು ನಡೆಸಿ. ಅದು ಕೇವಲ ಭೇಟಿಗಾಗಿ ಅಲ್ಲದೆ ಸಂರಕ್ಷಣೆಗಾಗಿ ಮಾದರಿಯಾಗಲಿ.
ನಮ್ಮ ಪರಂಪರೆ,ನಮ್ಮ ಗುರುತು ಮತ್ತು ನಮ್ಮ ಹೆಮ್ಮೆ.
ಪ್ರತಿಯೊಬ್ಬರೂ ಕೈ ಜೋಡಿಸಿದರೆ ಇದು ಖಂಡಿತವಾಗಿಯೂ ಸಾಧ್ಯ. ಇದು ನಮ್ಮಿಂದಲೇ ಪ್ರಾರಂಭವಾಗಲಿ.
#KarnatakaRajyotsava #HeritageForAll #CommunityAction #ItStartsWithUs #Jatre #Rajyotsava
@OlaataSlayer He is correct, though — science and math need to be studied in English. Having studied in a Kannada-medium school myself, I understand what he is trying to say.