ಹತ್ತಿದ ಏಣಿಯನ್ನೇ ಒದೆಯುವಷ್ಟು ಅಧಿಕಾರದ ಮದವೇರಿದೆಯೇ ಸಿಎಂ @siddaramaiah ನವರೇ?
ಅಧಿಕಾರದ ಮದವೇರಿದ @INCKarnataka ಪಕ್ಷಕ್ಕೆ ಮತದಾರರು use and throw ವಸ್ತುಗಳೇ ಹೊರತು ಜನರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎನ್ನುವುದಕ್ಕೆ ಚಾಮರಾಜನಗರದಲ್ಲಿ ನಡೆದಿರುವ ಘಟನೆಯೇ ಸಾಕ್ಷಿ.
ಸಿಎಂ @siddaramaiah ನವರೇ, ಜನರು ತಮ್ಮ ಸಮಸ್ಯೆಗಳನ್ನ, ಕುಂದುಕೊರತೆಗಳನ್ನ ಬರೆದು ಪತ್ರ, ಅಹವಾಲುಗಳನ್ನು ಕೊಟ್ಟರೆ ಅದನ್ನ ನಿಕೃಷ್ಟವಾಗಿ ಬೀದಿಪಾಲು ಮಾಡುತ್ತೀರಲ್ಲ, ಇದಕ್ಕೇನಾ ಜನ ನಿಮಗೆ ಅಧಿಕಾರ ಕೊಟ್ಟಿರೋದು?
ತಮ್ಮ ಕುರ್ಚಿ ಜನಸೇವೆ ಮಾಡಲಿ ಎಂದು ಮತದಾರರು ನೀಡಿರುವ ಭಿಕ್ಷೆಯೇ ಹೊರತು ತಾವು ಯಾವ ಸೀಮೆ ಸುಲ್ತಾನರೂ ಅಲ್ಲ, ನವಾಬರೂ ಅಲ್ಲ. ನಿಮ್ಮ ಅಹಂಕಾರವೇ ನಿಮ್ಮನ್ನ ರಾಜಕೀಯ ಅಧಃಪತನಕ್ಕಿಳಿಸುವುದು ಶತಸಿದ್ಧ.