ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಮೂಲತಃ, ಎಡಕ್ಕಾನ ಮನೆತನದ ಪೆರ್ಮುದೆ ಅಮ್ಮಂಕಲ್ಲು ನಿವಾಸಿನಿ ಶ್ರೀಮತಿ ಶಾರದಾ ಅಮ್ಮಂಕಲ್ಲು ಇವರು, #ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:
ಉತ್ತರಕನ್ನಡ ಪ್ರಾಂತ್ಯದ ಹೊನ್ನಾವರ ನಗರದ ಉಮಾಂಬಾ ಸಮಿತಿಯ, ಶ್ರೀಯುತ ವಸಂತ ಹೆಗಡೆ ಇವರ ಪತ್ನಿ ಶ್ರೀಮತಿ ಅಹಲ್ಯಾ ಇವರು ಗೋಮಾತೆಯ ರಕ್ಷಣೆಗೆ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಪೂರ್ಣಪ್ರಮಾಣದ ದಾನಿಯಾಗಿ ಸಮರ್ಪಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆ ನಿವಾಸಿನಿ ಶ್ರೀಮತಿ ಅಹಲ್ಯಾ, ಇವರು #ಮಾಸದ_ಮಾತೆ'ಯಾಗಿ ಎರಡು ಗೋವುಗಳ ಒಂದು ವರ್ಷದ ನಿರ್ವಹಣೆಯ ಮೊತ್ತವನ್ನು ಪೂರ್ಣಪ್ರಮಾಣದ ದಾನಿಯಾಗಿ ಸಮರ್ಪಿಸಿ ಗುರಿ ತಲುಪಿದ್ದಾರೆ.
ಅಶೋಕೆಯಲ್ಲಿ ರಾಮಚಂದ್ರ ಹರಿಹರ ಹೆಗಡೆ ಅವರ ಮಗ ಚಿ| ಶ್ರೀಕೇಸರಿ ಹಾಗೂ ಎಮ್. ರಾಮಪ್ರಸಾದ ಕರಿಯಾಲ ಅವರ ಮೊಮ್ಮೊಗ ಚಿ| ರಾಮಪ್ರಖ್ಯಾತ ಇವರಿಗೆ ಬ್ರಹ್ಮೋಪದೇಶ ಕಾರ್ಯಕ್ರಮ
ಅಶೋಕೆ, ಗೋಕರ್ಣ
17-06-2026