ಯೋಜನೆಯನ್ನು ರೂಪಿಸುವುದು ಎಷ್ಟು ಮುಖ್ಯವೋ, ಆ ಯೋಜನೆಯನ್ನು ಸಮರ್ಥವಾಗಿ ಅನುಷ್ಠಾನ ಮಾಡುವುದೂ ಅಷ್ಟೇ ಮುಖ್ಯ,
ಪರಿಣಾ���ಕಾರಿ ಅನುಷ್ಠಾನದಿಂದ ಮಾತ್ರ ಯೋಜನೆಯನ್ನು ನೈಜ ಫಲಾನುಭವಿಗಳಿಗೆ ತಲುಪಿಸಲು ಮತ್ತು ಫಲಾನುಭವಿಗಳ ಬದುಕಲ್ಲಿ ಬದಲಾವಣೆ ಬದಲಾವಣೆ ತರಬಹುದು.
ಕಲಬುರಗಿ ಜಿಲ್ಲೆಯಲ್ಲಿ ತೋಟಗಾರಿ��ಾ ಇಲಾಖೆಯ ವತಿಯಿಂದ PMKSY, NHM ಮತ್ತು RKVY ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ ಪರಿಣಾಮ ಜಿಲ್ಲೆಯ ರೈತರು ಉತ್ಸಾಹದಿಂದ ತಮ್ಮ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ, ನೀರಿನ ಕೊರತೆ ಎದುರಿಸುತ್ತಿದ್ದ ರೈತರಿಗೆ ನೀರು ಸಂಗ್ರಹಿಸಲು ಅನುಕೂಲವಾಗಿರುವ ಸಮುದಾಯ ಕೆರೆ, ಹನಿ ನೀರಾವರಿ ವ್ಯವಸ್ಥೆಗಳಿಂದ ಸಮೃದ್ದವಾದ ಲಾಭದಾಯಕ ಬೆಳೆ ಮತ್ತು ಬೆಳೆದ ಬೆಳೆಯಿಂದ ಉತ್ತಮ ಲಾಭ ಪಡೆಯುತ್ತಿದ್ದಾರೆ.
2023-24 ಮತ್ತು 2024- 25ನೇ ಸಾಲಿನಲ್ಲಿ PMKSY ಯೋಜನೆಯಡಿಯಲ್ಲಿ ಒಟ್ಟು 2,535 ರೈ���ರಿಗೆ, ₹2,225.39 ಲಕ್ಷ ಮೊತ್ತದ ಯೋಜನೆಯನ್ನು ತಲುಪಿಸಲಾಗಿದೆ.
NHM ಮತ್ತು RKVY ಯೋಜನೆಗಳಲ್ಲಿ ಒಟ್ಟು 77 ರೈತರಿಗೆ ₹260 ಲಕ್ಷ ಮೊತ್ತದ ಯೋಜನೆಯನ್ನು ಒದಗಿಸಲಾಗಿದೆ.
#ಕಲಬುರಗಿಕಲ್ಯಾಣ