ಮಾತು ಅಂದರೆ ಕೇವಲ ಶಬ್ದಗಳಲ್ಲ, ಅದು ನಂಬಿಕೆಯ ಬೆಸುಗೆ.
ಜನಸಾಮಾನ್ಯರ ಅಂತರಾಳದ ದನಿಯಾಗಿ, ಅವರ ನೋವು-ನಲಿವುಗಳಿಗೆ ಕಿವಿಯಾಗುವ ಈ ಕ್ಷಣಗಳೇ ನಿಜವಾದ ಮಾತುಕತೆ..
ಕಾಯಕ ಜೀವಿಗಳೊಂದಿಗೆ ಮಾತುಕತೆ
📍ಎಪಿಎಂಸಿ, ಯಶವಂತಪುರ
ಜನರ ಕಷ್ಟ ಅರಿಯಲು ರಾಜ ಮಾರುವೇಶ ಧರಿಸಿ ರಾಜ್ಯ ಪ್ರವಾಸ ಮಾಡುತ್ತಿದ್ದ ಎಂದು ನಾವು ಚಂದಾಮಾಮದ ಎಷ್ಟೋ ಕಥೆಗಳಲ್ಲಿ ಓದಿದ್ದೇವೆ. ರಾಜನಿಗೆ ತನ್ನ ರಾಜ್ಯದ ಜನರ ಕಷ್ಟಗಳನ್ನು ಹೇಳಲು ಮಂತ್ರಿಗಳು, ಸೈನಿಕರು, ಭಟ್ಟಂಗಿಗಳು ಇದ್ದರೂ, ಅವರು ಎಲ್ಲ ಸತ್ಯವನ್ನೂ ಹೇಳುವುದಿಲ್ಲ. ಅದಕ್ಕಾಗಿಯೇ ರಾಜ ಮಾರುವೇಷದಲ್ಲಿ ಜನರ ನಡುವೆ ಹೋಗಿ ಅವರ ಕಷ್ಟಗಳನ್ನು ಕಣ್ಣಾರೆ ನೋಡುತ್ತಿದ್ದ.
ನಾಡಪ್ರಭು ಕೆಂಪೇಗೌಡರ ಕುರಿತಾಗಿಯೂ ಇಂಥದ್ದೊಂದು ಐತಿಹ್ಯವಿದೆ. ದಳ್ಳಾಳಿಗಳಿಂದ ರೈತರಿಗೆ ಆಗುತ್ತಿದ್ದ ಅನ್ಯಾಯವನ್ನು ತಿಳಿಯಲು ಅವರೇ ಮಾರುವೇಷದಲ್ಲಿ ಮಾರುಕಟ್ಟೆಗೆ ಹೋಗಿ ವಾಸ್ತವ ಅರಿತುಕೊಂಡಿದ್ದರು.
ನಿನ್ನೆ ಮುಖ್ಯಮಂತ್ರಿ @DKShivakumar ಡಿ.ಕೆ. ಶಿವಕುಮಾರ್ ಅವರು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಬೆಳಗ್ಗೆ 7 ಗಂಟೆಗೆ ದಿಢೀರ್ ಭೇಟಿ ನೀಡಿದರು. ರೈತರು, ವ್ಯಾಪಾರಿಗಳು, ಮಹಿಳಾ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರೊಂದಿಗೆ ನೇರವಾಗಿ ಮಾತನಾಡಿದರು. ಬೆಳೆ, ಬೆಲೆ, ಕಮಿಷನ್, ಸಾಗಣೆ ವೆಚ್ಚ, ಉತ್ಪಾದನಾ ವೆಚ್ಚ, ತೂಕದಲ್ಲಿ ಅಕ್ರಮ ನಡೆಯುತ್ತಿದೆಯೇ ಎಂಬುದನ್ನೂ ವಿಚಾರಿಸಿದರು.
ಈರುಳ್ಳಿ ಮೂಟೆಗಳ ಮೇಲೆ ಕುಳಿತು ರೈತರೊಂದಿಗೆ ಮಾತನಾಡಿದ್ದು, ಸಣ್ಣ ಉಪಾಹಾರ ಅಂಗಡಿಯಲ್ಲಿ ಕೂಲಿ ಕಾರ್ಮಿಕರೊಂದಿಗೆ ಕುಳಿತು ಇಡ್ಲಿ ಸೇವಿಸಿದ್ದು ನನಗೆ ವಿಶೇಷವಾಗಿ ಗಮನ ಸೆಳೆಯಿತು.
ಈ ಭೇಟಿಯ ವೇಳೆ ಅಪ್ರಾಪ್ತ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ದೂರುಗಳು ಗಮನಕ್ಕೆ ಬಂದವು. ಕೂಡಲೇ ಐದು ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿ 19 ಅಪ್ರಾಪ್ತರನ್ನು ರಕ್ಷಿಸಿದವು.
ಇವತ್ತಿನ ರೀಲ್ಸ್ ಯುಗದಲ್ಲಿ ರಾಜಕಾರಣಿಗಳ ಕೃತಕ ಸೀನ್ಗಳನ್ನು ಸಾಕಷ್ಟು ನೋಡಿದ್ದೇವೆ. ಆದರೆ ಎಪಿಎಂಸಿ ಭೇಟಿಯ ದೃಶ್ಯಗಳಲ್ಲಿ ನನಗೆ ನಾಟಕೀಯತೆ ಕಾಣಿಸಲಿಲ್ಲ. ಜನರ ಸಮಸ್ಯೆಗಳನ್ನು ನೇರವಾಗಿ ತಿಳಿಯಬೇಕೆಂಬ ಪಕ್ವತೆ ಕಾಣಿಸಿತು.
ಶಿವಕುಮಾರ್ ಅವರಿಗೆ ಇರುವ ಅಧಿಕಾರದ ಅವಧಿ ಬಹಳ ಕಡಿಮೆ. ಮುಂದೆ ಏನಾಗುತ್ತದೆ ಎಂಬುದು ಊಹೆಯ ಮಾತು. ಇರುವ ಸಮಯವನ್ನು ಪ್ರಾಮಾಣಿಕವಾಗಿ ಜನಸೇವೆಗೆ ಮುಡುಪಾಗಿಡುವ ಅವಕಾಶ ಅವರ ಮುಂದಿದೆ. ಅವರು ಕಳೆದುಕೊಳ್ಳುವುದು ಏನೂ ಇಲ್ಲ.
ಅವರು ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ಏಟುಗಳನ್ನು ತಿಂದಿದ್ದಾರೆ. ಎಲ್ಲ ರೀತಿಯ ಏಳಿರಿತಗಳನ್ನು ಕಂಡಿದ್ದಾರೆ. ಉಳಿ ಏಟುಗಳನ್ನು ತಿಂದ ಶಿಲೆಯೇ ಮೂರ್ತಿಯಾಗುವುದಲ್ಲವೇ? ಶಿವಕುಮಾರ್ ಈಗ ಮೂರ್ತಿಯಾಗಲಿ ಎಂಬುದು ಗೆಳೆಯನಾಗಿ ನನ್ನ ಹಂಬಲ.
ರಾಜಶಾಹಿಯಲ್ಲಿ ರಾಜನ ಕಿವಿ ಚುಚ್ಚುವ ಮಂತ್ರಿಗಳಿದ್ದಂತೆ, ಪ್ರಜಾಪ್ರಭುತ್ವದಲ್ಲೂ ಅಧಿಕಾರಿಗಳು ಮತ್ತು ಆಪ್ತ ಬಳಗ ಮುಖ್ಯಮಂತ್ರಿಗೆ ಎಲ್ಲವನ್ನೂ ವಿವರಿಸುತ್ತಾರೆ. ಆದರೆ ಅವರು ಹೇಳುವುದೇ ಅಂತಿಮ ಸತ್ಯವಲ್ಲ. ಇದನ್ನು ಅರ್ಥ ಮಾಡಿಕೊಂಡವರಷ್ಟೇ ಜನರ ಬಳಿಗೆ ನಡೆಯುತ್ತಾರೆ.
ಮುಖ್ಯಮಂತ್ರಿಗಳು ಇದನ್ನು ಇಲ್ಲಿಗೆ ನಿಲ್ಲಿಸಬಾರದು. ಸಮಾಜದ ಎಲ್ಲ ಸ್ಥರಗಳ ಜನರ ಕಷ್ಟಗಳಿಗೂ ಕಿವಿಯಾಗಬೇಕು. ಕಾರ್ಪೊರೇಟ್ ಕುಳಗಳು, ಬಿಲ್ಡರ್ಗಳು, ಧನವಂತರು ಮಾತ್ರ ಸರ್ಕಾರವನ್ನು ಪ್ರಭಾವಿಸಿದರೆ ಅದು ಜನರ ಸರ್ಕಾರವಾಗುವುದಿಲ್ಲ.
ಜನರ ನಡುವೆ ನಿಂತವರು ವಿಫಲ ರಾಜಕಾರಣಿಯಾಗಲು ಸಾಧ್ಯವೇ ಇಲ್ಲ. ಏಕೆಂದರೆ ಅಧಿಕಾರ ನೀಡುವವರು ಅಂತಿಮವಾಗಿ ಜನಸಾಮಾನ್ಯರೇ.
ಮುಖ್ಯಮಂತ್ರಿಗಳ @CMofKarnataka ಈ ನಡೆಗೆ ಅಭಿನಂದನೆಗಳು. ಒಳಿತಾಗಲಿ.
ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ಬಾರದ ಟ್ಯಾಕ್ಸಿ ಮತ್ತು ಆಟೋ ಚಾಲಕರ ಪರವಾನಗಿಯನ್ನು ರದ್ದುಪಡಿಸಲು ಅಲ್ಲಿನ ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರ ದೃಢ ನಿರ್ಧಾರ ಕೈಗೊಂಡಿದೆ. ಮೇ 1ರಿಂದ (ಮಹಾರಾಷ್ಟ್ರ ದಿನಾಚರಣೆಯಂದು) ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬರುತ್ತಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳು ರಾಜ್ಯಾದ್ಯಂತ 59 ಆರ್ಟಿಒ ಕಚೇರಿಗಳಲ್ಲಿ ತಪಾಸಣೆ ನಡೆಸಿ, ಮರಾಠಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿಯದ ಚಾಲಕರ ಪರವಾನಗಿಗಳನ್ನು ರದ್ದುಗೊಳಿಸುವ ಕೆಲಸ ಈಗಾಗಲೇ ಆರಂಭಿಸಿದ್ದಾರೆ.
ಈ ಅರ್ಥಪೂರ್ಣ, ಧೈರ್ಯದ ನಿರ್ಧಾರವನ್ನು ಕರ್ನಾಟಕ ರಕ್ಷಣಾ ವೇದಿಕೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತದೆ.
ಜೀವನ ನಿರ್ವಹಣೆಗಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗುವವರು ಆ ರಾಜ್ಯದ ಅಧಿಕೃತ ಭಾಷೆಯನ್ನು ಕಲಿಯುವುದು ಅತ್ಯಂತ ಮೂಲಭೂತ ಕರ್ತವ್ಯವಾಗಿದೆ. ತಮ್ಮ ಜೀವನಾಧಾರಕ್ಕಾಗಿ ಆ ರಾಜ್ಯದ ಮಣ್ಣು, ನೀರು ಮತ್ತು ಜನರನ್ನು ಅವಲಂಬಿಸುವಾಗ, ಅಲ್ಲಿನ ಭಾಷೆ, ಸಂಸ್ಕೃತಿ ಮತ್ತು ಜನರೊಂದಿಗೆ ಬೆರೆಯುವುದು ಸಹಜವಾದ ನೈತಿಕ ಜವಾಬ್ದಾರಿಯಾಗಿದೆ. ಮರಾಠಿ ಬಾರದ ಚಾಲಕರು ಮರಾಠಿ ಭಾಷಿಕ ಪ್ರಯಾಣಿಕರೊಂದಿಗೆ ಹೇಗೆ ಸಂವಾದ ನಡೆಸುತ್ತಾರೆ? ದಾರಿಯಲ್ಲಿ ತುರ್ತು ಸಮಸ್ಯೆ ಎದುರಾದಾಗ, ವಿಳಾಸ ಅಥವಾ ಸೂಚನೆಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ? ಇಂತಹ ಸಂವಹನದ ಕೊರತೆಯಿಂದಾಗಿ ಪ್ರಯಾಣಿಕರು ತೊಂದರೆಗೊಳಗಾಗುತ್ತಿದ್ದಾರೆ ಎಂಬ ದೂರುಗಳು ಹಲವಾರು. ಹೀಗಾಗಿ ಮಹಾರಾಷ್ಟ್ರ ಸರ್ಕಾರದ ಈ ತೀರ್ಮಾನ ಸಂಪೂರ್ಣವಾಗಿ ಸರಿಯಾದುದು ಮತ್ತು ಅಗತ್ಯವಾದುದು.
ಕರ್ನಾಟಕದಲ್ಲೂ ಇದೇ ಪರಿಸ್ಥಿತಿ ನಿರಂತರವಾಗಿ ಕಾಣಸಿಗುತ್ತಿದೆ. ಕನ್ನಡ ಬಾರದ, ಕನ್ನಡದಲ್ಲಿ ವ್ಯವಹರಿಸದ ವಲಸಿಗ ಚಾಲಕರು ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ನಾನಾ ರೀತಿಯ ಸಮಸ್ಯೆಗಳಿಗೆ ಕಾರಣರಾಗುತ್ತಿದ್ದಾರೆ. ಪ್ರಯಾಣಿಕರೊಂದಿಗೆ ಸಂವಾದದ ಕೊರತೆ, ತಪ್ಪು ದಾರಿ ತೋರಿಸುವುದು, ಮೀಟರ್ ವ್ಯವಹಾರದಲ್ಲಿ ಗೊಂದಲ, ಮತ್ತು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ — ಇವು ಸಾಮಾನ್ಯವಾಗುತ್ತಿವೆ. ಕೆಲವು ಸಂದರ್ಭಗಳಲ್ಲಿ ಇದು ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ತರುತ್ತಿದೆ.
ತಮಿಳುನಾಡಿನಲ್ಲೂ ಅಲ್ಲಿನ ಚಾಲಕರು ಪರವಾನಗಿ ಪಡೆಯುವಾಗ ಅಥವಾ ನವೀಕರಿಸುವಾಗ ತಮಿಳು ಭಾಷೆಯಲ್ಲಿ ಕನಿಷ್ಠ ಮಟ್ಟದ ಜ್ಞಾನ ಇದೆಯೇ ಎಂದು ಪರೀಕ್ಷಿಸಲಾಗುವುದು. ದೀರ್ಘಕಾಲದಿಂದಲೂ ಈ ನೀತಿ ಜಾರಿಯಲ್ಲಿದೆ. ಚಾಲಕರು ಪ್ರಯಾಣಿಕರೊಂದಿಗೆ ತಮಿಳಿನಲ್ಲಿ ವ್ಯವಹರಿಸಬೇಕು ಎಂಬ ನಿಯಮವಿದೆ.
ಹೀಗಾಗಿ, ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಅನುಸರಿಸುತ್ತಿರುವ ಈ ಧೋರಣೆಯನ್ನು ಕರ್ನಾಟಕ ಸರ್ಕಾರವೂ ತಕ್ಷಣ ಅನುಸರಿಸಬೇಕು. ಕನ್ನಡ ಬಾರದ ಆಟೋ, ಟ್ಯಾಕ್ಸಿ, ಕ್ಯಾಬ್ ಮತ್ತು ಇತರ ಸಾರಿಗೆ ವಾಹನ ಚಾಲಕರ ಪರವಾನಗಿಯನ್ನು ರದ್ದುಗೊಳಿಸುವ ಸ್ಪಷ್ಟ ನಿಯಮಾವಳಿಯನ್ನು ಜಾರಿಗೊಳಿಸಬೇಕು.
ಭಾಷೆ ಕೇವಲ ಸಂವಹನದ ಸಾಧನವಲ್ಲ, ನಮ್ಮ ಅಸ್ಮಿತೆ, ಬದುಕು., ಸಂಸ್ಕೃತಿ ಮತ್ತು ಆತ್ಮಗೌರವದ ಸಂಕೇತ. ಯಾವುದೇ ರಾಜ್ಯದಲ್ಲಿ ವ್ಯವಹಾರ ಮಾಡುವವರು ಆ ರಾಜ್ಯದ ಭಾಷೆಯನ್ನು ಗೌರವಿಸುವುದು ಅನಿವಾರ್ಯ.
ಎಸ್ ಎಸ್ ಎಲ್ ಸಿ ಯಲ್ಲಿ ತೃತೀಯ ಭಾಷೆಯನ್ನು ಅಂಕಗಳಿಂದ ಅಳೆಯುವ ಬದಲು ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಹೂಡಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವುದಷ್ಟೇ ಅಲ್ಲದೆ, ಪ್ರಚಾರದ ಹಂಬಲದಿಂದ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಒಂದು ಲಕ್ಷ ರುಪಾಯಿಗಳ ದಂಡ ವಿಧಿಸಿರುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಇದು ಹಿಂದಿಹೇರಿಕೆ ಪರವಾಗಿ ವಾದ ಮಾಡುತ್ತಿದ್ದವರಿಗೆ ನೇರವಾಗಿ ಮಾಡಿದ ಕಪಾಳಮೋಕ್ಷ. ಹಿಂದಿಯನ್ನೂ ಸಂಪೂರ್ಣವಾಗಿ ಕೈಬಿಡಲಾಗಿದೆ ಎಂಬ ಅರ್ಥದ ಹೇಳಿಕೆಯು ಮಾಧ್ಯಮಗಳಲ್ಲಿ ಪ್ರಕಟವಾಗಿಲ್ಲ. ಹೀಗಿದ್ದರೂ ಪೂರ್ವಾಗ್ರಹ ಪೀಡಿತವಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ಕಿಡಿ ಕಾರಿದೆ ಎಂದು ವರದಿಗಳು ಹೇಳುತ್ತಿವೆ. ಕೇವಲ ಪತ್ರಿಕಾ ಹೇಳಿಕೆ ಓದಿ ನೀವು ಪಿಐಎಲ್ ಸಲ್ಲಿಸಿದ್ದೀರಾ ಎಂದು ನ್ಯಾಯಪೀಠ ಅರ್ಜಿದಾರರನ್ನು ಪ್ರಶ್ನಿಸಿತ್ತು.
ತೃತೀಯ ಭಾಷೆ ಗ್ರೇಡಿಂಗ್ ವ್ಯವಸ್ಥೆಯನ್ನು ಹಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಮನಸಿಗೆ ಬಂದಂತೆ ವ್ಯಾಖ್ಯಾನಿಸಿ ಗೊಂದಲ ಉಂಟುಮಾಡಿದ್ದರು. ಹಿಂದಿಯೂ ಸೇರಿದಂತೆ ಮೂರನೇ ಭಾಷೆಯ ಕಲಿಕೆಯನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿರಲಿಲ್ಲ. ಆದರೆ ಇದನ್ನು ತಪ್ಪುತಪ್ಪಾಗಿ ಬಿಂಬಿಸಲಾಯಿತು ಮಾತ್ರವಲ್ಲ, ಹೈಕೋರ್ಟ್ ವರೆಗೆ ತೆಗೆದುಕೊಂಡುಹೋಗಲಾಯಿತು. ಈಗ ಅಲ್ಲಿ ಅವರಿಗೆ ಮುಖಭಂಗವಾಗಿದೆ. ಮೊದಲು ಐವತ್ತು ಸಾವಿರ ದಂಡ ವಿಧಿಸಿದ್ದ ನ್ಯಾಯಾಲಯ ನಂತರ ಒಂದು ಲಕ್ಷ ರುಪಾಯಿ ದಂಡಕ್ಕೆ ಏರಿಸಿರುವುದು ಇದಕ್ಕೆ ಸಾಕ್ಷಿ.
ರಾಜ್ಯ ಸರ್ಕಾರ ತನ್ನ ನೀತಿಯ ಕುರಿತು ಇನ್ನೂ ನಿಯಮಾವಳಿಗಳನ್ನು ರೂಪಿಸುವ, ಆದೇಶ ಹೊರಡಿಸುವ ಮುನ್ನವೇ ನ್ಯಾಯಾಲಯಕ್ಕೆ ಹೋದವರು ಬಹಳ ಆತುರವಾಗಿ ಏನನ್ನೋ ಸಾಧಿಸುವ ಉದ್ದೇಶ ಹೊಂದಿದ್ದರು. ಒಂದು ವೇಳೆ ಅರ್ಜಿ ಸ್ವೀಕೃತವಾಗಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯೂ ಸಹ ವಿದ್ಯಾರ್ಥಿಗಳ ಪರ ಕಾನೂನು ಹೋರಾಟ ನಡೆಸಲು ಸಜ್ಜಾಗಿತ್ತು. ಆದರೆ ಅರ್ಜಿ ವಜಾಗೊಳಿಸಿ, ಅರ್ಜಿದಾರರಿಗೆ ದಂಡ ವಿಧಿಸಲಾಗಿರುವುದರಿಂದ ಪಟ್ಟಭದ್ರ ಶಕ್ತಿಗಳ ಹುನ್ನಾರ ವಿಫಲವಾಗಿದೆ.
ರಾಜ್ಯ ಸರ್ಕಾರ ಕೂಡಲೇ ನಿಯಮಾವಳಿಗಳನ್ನು ರೂಪಿಸಿ, ಗ್ರೇಡಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು. ಹಿಂದಿ ಸಾಮ್ರಾಜ್ಯಶಾಹಿಗಳ ಹುನ್ನಾರಗಳಿಗೆ ಮಣೆ ಹಾಕಬಾರದು. ಕನ್ನಡದ ಮಕ್ಕಳ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ನಾನು ಒತ್ತಾಯಿಸುತ್ತೇನೆ.
ಕನ್ನಡಿಗ ಸಿಟ್ಟಿಗೆದ್ದು ಕುಟ್ಟಿದ್ದು ಲಕ್ಷ ಲಕ್ಷ ಟ್ವಿಟ್, @TCGEHLOT ನಮ್ಮ ಆಕ್ರೋಶ ಕಟ್ಟೆ ಒಡೆದಿದೆ, ನಿನ್ನ ಕನ್ನಡ ದ್ರೋಹಿ ಹೇಳಿಕೆಗೆ ಕರ್ನಾಟಕ ಕನ್ನಡಿಗ ಕೂಗುತ್ತಿದ್ದಾನೆ ಹೊರಟು ಹೋಗು ನಮ್ಮ ನಾಡಿಂದ
India no 4 trending
Karnataka no 1 trending.
#GobackGiverner#GobackGoverner
Pro-Kannada organization KRV Protest in Bengaluru Targets Governor Amid Third-Language Controversy
Bengaluru
Pro-Kannada organization KRV staged a protest in the city on Monday, launching the “Go Back Governor” campaign amid the ongoing SSLC third-language row.
Activists accused the #BJP of imposing #Hindi in #Karnataka and alleged that the #Governor has now intervened in the matter. Protesters demanded an apology from the Governor, warning that they would gherao his office.
The protest reflects growing tensions over language policy in the state, with pro-Kannada groups insisting that #Kannada must remain central to education and administration. KRV leaders said the campaign will intensify if their demands are not met.
@karave_KRV@TCGEHLOT@BJP4Karnataka@INCKarnataka
ಬಿಹಾರ, ಉತ್ತರಪ್ರದೇಶದಿಂದ ಅನಿಯಂತ್ರಿತ ವಲಸೆಯಿಂದ ಕರ್ನಾಟಕ ಕಸದ ಬುಟ್ಟಿಯಾಗುತ್ತಿದೆ. ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ನಮ್ಮ ನಾಡು, ನಮ್ಮ ಸಂಸ್ಕೃತಿ ಉಳಿಸಿಕೊಳ್ಳಿ!
#GoBackGoverner
ಬಿಹಾರ, ಉತ್ತರಪ್ರದೇಶದಿಂದ ಅನಿಯಂತ್ರಿತ ವಲಸೆಯಿಂದ ಕರ್ನಾಟಕ ಕಸದ ಬುಟ್ಟಿಯಾಗುತ್ತಿದೆ. ಬೆಂಗಳೂರಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ನಮ್ಮ ನಾಡು, ನಮ್ಮ ಸಂಸ್ಕೃತಿ ಉಳಿಸಿಕೊಳ್ಳಿ!
#GoBackGoverner
ಹಿಂದಿ ವಲಸಿಗರು ಕರ್ನಾಟಕದಲ್ಲಿ ಕನ್ನಡ ಕಲಿಯುವುದಿಲ್ಲ. ಬದಲಿಗೆ “ಹಿಂದಿ ರಾಷ್ಟ್ರಭಾಷೆ” ಎಂದು ದುರಹಂಕಾರದಿಂದ ಹೇಳುತ್ತಾರೆ. ಸಂವಿಧಾನದಲ್ಲಿ ರಾಷ್ಟ್ರಭಾಷೆಯೇ ಇಲ್ಲ ಎಂಬುದನ್ನು ಅವರು ಮರೆಯುತ್ತಾರೆ!
#GoBackGoverner
ಕೇಂದ್ರ ಸರ್ಕಾರ ನಮ್ಮ ತೆರಿಗೆ ಹಣದಲ್ಲಿ ಹಿಂದಿ ದಿವಸ್, ಹಿಂದಿ ಸಪ್ತಾಹ ಆಚರಿಸಿ ಕೋಟ್ಯಂತರ ಖರ್ಚು ಮಾಡುತ್ತಿದೆ. ಆದರೆ ಕನ್ನಡ ದಿವಸ, ತಮಿಳು ದಿವಸ ಎಂದೂ ಆಚರಿಸಿಲ್ಲ. ಇದು ತಾರತಮ್ಯವಲ್ಲವೇ?
#GoBackGoverner
ಬೆಂಗಳೂರಿಗೆ ಲಕ್ಷ ಲಕ್ಷ ಹಿಂದಿ ಭಾಷಿಕರು ವಲಸೆ ಬರುತ್ತಿದ್ದಾರೆ. ಕನ್ನಡ ಕಲಿಯುವುದಿಲ್ಲ, ಬದಲಿಗೆ ಹಿಂದಿ ಹೇರುತ್ತಿದ್ದಾರೆ. ನಮ್ಮ ನಗರದ ಸಂಸ್ಕೃತಿ, ಜನನುಡಿ ಬದಲಾಗುತ್ತಿದೆ. ಅನಿಯಂತ್ರಿತ ವಲಸೆಯ ಕುತಂತ್ರ!
#GoBackGoverner
ಕೇಂದ್ರ ಸರ್ಕಾರದ ರೈಲ್ವೆ, ಬ್ಯಾಂಕು, ಅಂಚೆ, ವಿಮಾನ ನಿಲ್ದಾಣಗಳಲ್ಲಿ ಹಿಂದಿ+ಇಂಗ್ಲಿಷ್ ಮಾತ್ರ. ಕನ್ನಡಿಗರ ಉದ್ಯೋಗ ಹಕ್ಕು ಕಸಿದುಕೊಳ್ಳುತ್ತಿದ್ದಾರೆ. ಹಿಂದಿ ಭಾಷಿಕರಿಗೆ ಮಾತ್ರ ಸವಲತ್ತು! ಇದು ನ್ಯಾಯವೇ?
#GoBackGoverner
ಸಂವಿಧಾನದಲ್ಲಿ 22 ಭಾಷೆಗಳಿಗೆ ಮಾನ್ಯತೆ. ರಾಷ್ಟ್ರಭಾಷೆ ಎಂಬುದೇ ಇಲ್ಲ! ಹಿಂದಿ ಕೇವಲ ಒಂದು ಪ್ರಾದೇಶಿಕ ಭಾಷೆ. ಆದರೂ ಕೇಂದ್ರ ಸರ್ಕಾರ ಅದನ್ನು ರಾಷ್ಟ್ರಭಾಷೆಯಂತೆ ಹೇರುತ್ತಿದೆ. ಸಂವಿಧಾನ ವಿರೋಧಿ ಕುತಂತ್ರ!
#GoBackGoverner