ಜಗತ್ತಿನ ಅತ್ಯಂತ ಸುಂದರ ಮತ್ತು ಸುಸಂಬದ್ಧ ಬೆಳವಣಿಗೆಗಳಲ್ಲಿ ಹಿಂದೂಧರ್ಮವೂ ಒಂದು. ಅನಾಗರಿಕತೆಯೆಡೆಗೆ ಮರುಕಳಿಸಿದ ಧರ್ಮವಲ್ಲ ನಮ್ಮದು. ಶಿಕ್ಷಣದ ಸಂಬಂಧ ಹಿಂದೂಧರ್ಮ ಯಾವ ಧರ್ಮದೊಂದಿಗೂ ಕಾದಾಡಿಲ್ಲ.
- ಅಕ್ಕ ನಿವೇದಿತಾ
#ನಿವೇದಿತಾ_ಜಯಂತಿ
#1
28ರ ಬೆಳಿಗ್ಗೆ ಅಕ್ಕನ ಸಂದೇಶವನ್ನು ನೋಡಿ ದಿನ ಆರಂಭಿಸುವುದು ಎಷ್ಟು ಚೆಂದವಲ್ಲವೇ!
ಮತ್ತೇಕೆ ತಡ? ಈ ಸಂಖ್ಯೆಗೆ ನಿಮ್ಮ ದೂರವಾಣಿ ಸಂಖ್ಯೆಯನ್ನು ಕಳಿಸಿಕೊಡಿ. ಅಕ್ಕನ ಸಂದೇಶಗಂಗೆಯಲ್ಲಿ ಮಿಂದು ಆನಂದಿಸಿ.
ಸಂಪರ್ಕ: 9620355844, 9113896395
*ಸೋದರಿ ನಿವೇದಿತಾ ಪ್ರತಿಷ್ಠಾನ*
*ನಿವೇದಿತಾ ಜಯಂತಿ*
'ನಾನು ಈ ದೇಶದಲ್ಲಿ ಹುಟ್ಟಲಿಲ್ಲವಲ್ಲ ಎಂಬುದೇ ನನ್ನ ಪಾಲಿನ ಅತಿ ಬೇಸರದ ಸಂಗತಿ' ಎನ್ನುತ್ತಿದ್ದ ಅಕ್ಕ ನಿವೇದಿತಾಳ ಜಯಂತಿ ಅಕ್ಟೋಬರ್ 28ಕ್ಕೆ. ಈ ಬಾರಿ ವಿನೂತನವಾಗಿ ಆಕೆಯ ಜಯಂತಿಯನ್ನು ವಿಶೇಷವಾಗಿ ಆಚರಿಸುತ್ತಿದ್ದೇವೆ. ನೀವು ನಿಮ್ಮ ಹೆಸರಿನೊಂದಿಗೆ ವಾಟ್ಸಪ್ ಮಾಡಿದರೆ ಅಕ್ಕನ ಸಂದೇಶವನ್ನು ಖುದ್ದಾಗಿ ನಿಮಗೆ ನಾವು ಕಳಿಸಿಕೊಡುತ್ತೇವೆ.
ದತ್ತು ಪುತ್ರರಿಗೆ ಹಕ್ಕಿಲ್ಲ ಎಂಬ ಬ್ರಿಟೀಷರ ದುರ್ನೀತಿಯ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಸಿಡಿದೆದ್ದು, ಅವರೊಡನೆ ಯುದ್ಧ ಮಾಡಿದ ಕರ್ನಾಟಕದ ಧೀರಮಹಿಳೆ #ಕಿತ್ತೂರು_ರಾಣಿ_ಚನ್ನಮ್ಮ ಅವರ ಜನ್ಮಜಯಂತಿ.
ಪರಾಶರರು ತಮ್ಮ ಪುಸ್ತಕ ವೃಕ್ಷ ಆಯುರ್ವೇದದಲ್ಲಿ ದ್ಯುತಿಸಂಶ್ಲೇಷಣೆ- ಸಸ್ಯಗಳು ಬೇರುಗಳಿಂದ ನೀರನ್ನು ತೆಗೆದುಕೊಂಡು ಎಲೆಗಳ ಮೂಲಕ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ ಎಂದೂ ಉಲ್ಲೇಖಿಸಿದ್ದಾರೆ. ಇದನ್ನವರು 'ಸ್ಯಂಧನ' ಎಂದು ಕರೆದಿದ್ದರು. ಸಸ್ಯಶಾಸ್ತ್ರದ ಜನಕ ಎಂದು ಪರಾಶರ ಮುನಿಗಳನ್ನು ಕರೆಯಬಹುದೇನೋ!
#ನಮ್ಮಲ್ಲೇ_ಮೊದಲು#SNP
#2
ಅವರ ಪ್ರಕಾರ ಒಂದು ಸೆಕೆಂಡಿಗೆ ಬೆಳಕು ಚಲಿಸುವ ವೇಗ 1,86,300 ಮೈಲಿಗಳು. ಈ ಸತ್ಯವನ್ನು ಮ್ಯಾಕ್ಸ್ ಮುಲ್ಲರ್ ಸಹ ತಾನು ಋಗ್ವೇದವನ್ನು ಅನುವಾದಿಸುವಾಗ ನಮೂದಿಸಿದ್ದಾನೆ. ಆತ ಸಾಯಣಾಚಾರ್ಯರ ಭಾಷ್ಯವನ್ನು ಮೂಲವಾಗಿಟ್ಟುಕೊಂಡು ಬರೆದದ್ದು.
ಖಗೋಳಶಾಸ್ತ್ರದಲ್ಲಿ ಭಾರತೀಯರಿಗಿದ್ದ ಜ್ಞಾನ ಅಪಾರ.
#ನಮ್ಮಲ್ಲೇ_ಮೊದಲು#SNP
#1
ಕ್ರಿ.ಶ. 14ನೇ ಶತಮಾನದಲ್ಲಿ ಸಾಯಣಾಚಾರ್ಯರು ಋಗ್ವೇದಕ್ಕೆ ಬರೆದ ಭಾಷ್ಯದಲ್ಲಿ ಸೂರ್ಯನ ಬೆಳಕು ಅರ್ಧ ನಿಮಿಷದಲ್ಲಿ 2202 ಯೋಜನಗಳು ಚಲಿಸುತ್ತದೆ ಎಂದಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಸಾಯಣಾಚಾರ್ಯರ ಈ ಲೆಕ್ಕಾಚಾರವು 19ನೇ ಶತಮಾನದಲ್ಲಿ ವಿಜ್ಞಾನಿಗಳಾದ ಮೈಕಲ್ಸನ್ ಮತ್ತು ಮಾರ್ಲ್ ಅವರು ಅಂದಾಜಿಸಿದ್ದಕ್ಕೆ ಬಹಳ ಸಮೀಪದಲ್ಲಿದೆ.
ಬೆಂಗಳೂರಿನ ವೀರಭದ್ರ ನಗರ ಸೇವಾಬಸ್ತಿಯ ಮಕ್ಕಳಿಗೆ
ಸ್ವಚ್ಛಮನಸ್ಸು ತರಗತಿಯನ್ನು ನಡೆಸಲಾಯ್ತು. ಶ್ಲೋಕ, ಹನುಮನ ಕುರಿತು ಕಥೆ ಹೇಳಲಾಯಿತು. ದೇಶಭಕ್ತಿ ಮೂಡಿಸುವ ಸಂಗತಿಗಳನ್ನು ಮಕ್ಕಳೊಡನೆ ಹಂಚಿಕೊಳ್ಳಲಾಯ್ತು.
#ಸ್ವಚ್ಛಮನಸ್ಸು#SNP
ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಗ್ಲೇಸಿಯರ್ನಲ್ಲಿ ಸೇವೆ ಸಲ್ಲಿಸಲು ನೇಮಕಗೊಂಡ ದೇಶದ ಮೊದಲ ಮಹಿಳಾ ಭಾರತೀಯ ಸೇನಾ ಅಧಿಕಾರಿಯಾಗಿ ಇತಿಹಾಸ ನಿರ್ಮಿಸಿದ ನಮ್ಮ ಮೈಸೂರಿನ ಕ್ಯಾಪ್ಟನ್ ಸುಪ್ರಿತಾ ಅವರಿಗೆ ಅಭಿನಂದನೆಗಳು...
#ಜೈ_ಹಿಂದ್
ಹುಬ್ಬಳ್ಳಿ-ಧಾರವಾಡದ ಸೋದರಿ ನಿವೇದಿತಾ ಪ್ರತಿಷ್ಠಾನ ಯುವಾಬ್ರಿಗೇಡ್ನೊಡನೆ ಕೂಡಿ ಹುಬ್ಬಳ್ಳಿಯ ಬೈರಿದೇವರಕೊಪ್ಪದ ಗ್ಲೋಬಲ್ ಬಿಸಿನೆಸ್ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷವನ್ನು ಸಂಭ್ರಮದಿಂದ ಆಚರಿಸಿತು. ಸೈನಿಕರ ತ್ಯಾಗ-ಬಲಿದಾನಗಳು ವಿದ್ಯಾರ್ಥಿಗಳನ್ನು ಮೂಕವಿಸ್ಮಿತರನ್ನಾಗಿಸಿತ್ತು.
#ಮುಟ್ಟಿದ್ರೆ_ತಟ್ಟಿಬಿಡ್ತೀವಿ#SNP
ನಿವೇದಿತಾ ಪ್ರತಿಷ್ಠಾನದ ವತಿಯಿಂದ ಮಂಗಳೂರಿನ ಖಾಸಗಿ ಮಂಗಳ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜಲಿಯನ್ ವಾಲಾಬಾಗ್ ವೀಡಿಯೋ ಪ್ರದರ್ಶನ ಮಾಡಲಾಯಿತು. ನಂತರ ಮೌಲ್ಯಶಿಕ್ಷಣದ ಕುರಿತು ಮಕ್ಕಳೊಡನೆ ಚರ್ಚಿಸಲಾಯಿತು.
#SNP
*ಎರಡು ರಾಜಪೂತಾನ ರೈಫಲ್ಸ್ನ ಹವಿಲ್ದಾರ್ ದಿಗೇಂದ್ರ ಕುಮಾರ್ ಕಾರ್ಗಿಲ್ ಯುದ್ಧದಲ್ಲಿ ಪಾಕೀ ಸೈನಿಕರ ಎರಡು ಬಂಕರ್ಗಳನ್ನು ಒಬ್ಬರೇ ನಾಶಗೈಯ್ಯುವಲ್ಲಿ ಯಶಸ್ವಿಯಾಗಿದ್ದರು.
*48 ಪಾಕೀ ಸೈನಿಕರನ್ನು ಕೊಂದು ಯಮಪುರಿಗಟ್ಟಿದೆ ಇವರ ದೇಹಕ್ಕೆ 18 ಗುಂಡುಗಳು ಹೊಕ್ಕಿದ್ದವು.
*ಇವರ ಅನನ್ಯ ಸಾಹಸಕ್ಕೆ ಮಹಾವೀರ ಚಕ್ರ ನೀಡಿ ಗೌರವಿಸಲಾಗಿದೆ.
ಆಪರೇಶನ್ ವಿಜಯ್ನಲ್ಲಿ ತೊಲೊಲಿಂಗ್ನ ಬ್ಲಾಕ್ ಟೂತ್ ಅನ್ನು ವಶಪಡಿಸಿಕೊಳ್ಳುವಲ್ಲಿ ಅಪರೂಪದ ಸಾಹಸ ತೋರಿದ್ದು ನಾಗಾ ರೆಜಿಮೆಂಟಿನ ಸಿಪಾಯಿ ಕೆ.ಅಶುಲಿ. ಅತ್ಯಂತ ಕಡಿದಾದ ಬೆಟ್ಟವನ್ನು ಏರಿ, ಉಳಿದ ಸೈನಿಕರಿಗೆ ದಾರಿ ಮಾಡಿಕೊಟ್ಟದ್ದಲ್ಲದೇ, ಶತ್ರುಗಳೊಡನೆ ನೇರಯುದ್ಧಕ್ಕಿಳಿದಿದ್ದರು. ಈ ಕಾದಾಟದಲ್ಲಿ ದೇಹ ನಜ್ಜುಗುಜ್ಜಾಗಿಬಿಟ್ಟಿತ್ತು.
ಕಾರ್ಗಿಲ್ನ ತೊಲೊಲಿಂಗ್ನಲ್ಲಿರುವ ಪಾಯಿಂಟ್ 4590 ವಶಪಡಿಸಿಕೊಳ್ಳುವಲ್ಲಿ ಶತ್ರುಗಳ ಪಾಲಿಗೆ ಅಕ್ಷರಶಃ ಯಮನಾಗಿ ನಿಂತವ ಹವಿಲ್ದಾರ್ ಯಶವೀರ್ ಸಿಂಗ್ ತೋಮರ್. ಈತನ ಸಾಹಸಕ್ಕೆ ಭಾರತ ಸರ್ಕಾರ ವೀರ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
#ಮಾ_ತುಝೆ_ಪ್ರಣಾಮ್#SNP
ಬೆಂಗಳೂರಿನ ಲಕ್ಕಸಂದ್ರ ವಠಾರದಲ್ಲಿ ಮಕ್ಕಳಿಗೆ ಪ್ರಸಕ್ತ ಸಾಲಿನ ಪಠ್ಯಕ್ರಮದ ಅಭ್ಯಾಸವನ್ನು ಪ್ರತಿದಿನವೂ ಮಾಡುವಂತೆ ಪ್ರತ್ಯೇಕವಾಗಿ ಪ್ರೇರೇಪಿಸಲಾಯಿತು. ಕನ್ನಡ , ಆಂಗ್ಲ ಮತ್ತು ಗಣಿತ ಕೆಲವು ವಿಷಯಗಳನ್ನೂ ಅಭ್ಯಾಸ ಮಾಡಿಸಲಾಯ್ತೂ. ಕೊನೆಯಲ್ಲಿ ಶಾಂತಿ ಮಂತ್ರವನ್ನು ಹೇಳಿಸಲಾಯಿತು.
#ಸ್ವಚ್ಛ_ಮನಸ್ಸು#SNP
ಭಾರತ ಕಾರ್ಗಿಲ್ ಯುದ್ಧವನ್ನು ಗೆದ್ದು 25 ವರ್ಷಗಳು ಸಂದಿವೆ. ಭಾರತದ ಸೈನಿಕರ ಈ ಪರಾಕ್ರಮ ಇಂದಿಗೂ ಹಲವರಿಗೆ ಪ್ರೇರಣಾ ಸ್ರೋತ. ಅತ್ಯಾಧುನಿಕ ಶಸ್ತ್ರಗಳಿಲ್ಲದ್ದಾಗ್ಯೂ ಸೈನಿಕರು ತೋರಿದ ಆ ಸಾಹಸ ಸದಾ ಸ್ಮರಣೀಯ. ಹೀಗಾಗಿ ಇಂದಿನಿಂದ ಕಾರ್ಗಿಲ್ ಯುದ್ಧದ ಹಿರೊಗಳನ್ನು 'ಮಾ ತುಝೆ ಪ್ರಣಾಮ್' ಅಡಿಯಲ್ಲಿ ಪರಿಚಯಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
ಬೆಂಗಳೂರಿನ ನಿವೇದಿತಾ ಪ್ರತಿಷ್ಠಾನದ ಸೋದರಿಯರು ಗಾರ್ಮೆಂಟ್ಸ್ಗಳಲ್ಲಿ ಕೆಲಸ ನಿರ್ವಹಿಸುವ ಹೆಣ್ಣುಮಕ್ಕಳೊಡನೆ ಈ ಬಾರಿಯ ಯೋಗ ದಿನವನ್ನು ಆಚರಿಸಿದ್ದಾರೆ. ಅವರು ಮಾಡುವ ಕೆಲಸದಿಂದ ಆಗುವ ದೈಹಿಕ ತೊಂದರೆಗೆ ಸುಲಭವಾಗಿ, ಯಾವ ರೀತಿಯಲ್ಲಿ ಮನೆಯಲ್ಲಿ ಆಸನಗಳನ್ನು ಮಾಡಬೇಕು ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ತಿಳಿಸಿದ್ದಾರೆ.