ಮೊಹರಂ ಹಬ್ಬದ ಅಂಗವಾಗಿ ಇಂದು ತೇರದಾಳ ಪೊಲೀಸ್ ಠಾಣೆಯಲ್ಲಿ ಶಾಂತಿ ಸಮಿತಿ ಸಭೆ ಕೈಗೊಂಡು ಹಬ್ಬವನ್ನು ಶಾಂತಿಯುತವಾಗಿ, ಸೌಹಾರ್ದಯುತವಾಗಿ ಆಚರಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಕೋರಲಾಯಿತು.
@IgpBelagavi@DgpKarnataka@KarnatakaCops
ಮೊಹರಂ ಹಬ್ಬದ ಪ್ರಯುಕ್ತ ಇಂದು ಜಮಖಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಸಮುದಾಯಗಳ ಮುಖಂಡರು,ಗಣ್ಯರು ಹಾಗೂ ಸಾರ್ವಜನಿಕರೊಂದಿಗೆ ಶಾಂತಿ ಸಭೆ ಕೈಗೊಂಡು, ಹಬ್ಬದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವ ಕುರಿತು ಅಗತ್ಯ ಸಲಹೆ,ಸೂಚನೆಗಳನ್ನು ನೀಡಲಾಯಿತು.
@IgpBelagavi@DgpKarnataka@KarnatakaCops
ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ.
ಇದು ಪ್ರಾಣಾಪಾಯವನ್ನು ತರುವಂತಹ ತಪ್ಪು ನಿರ್ಧಾರವಾಗಿದೆ.
ನಿಮ್ಮ ಜೀವನ ಮತ್ತು ಇತರರ ಜೀವನವು ನಿಮ್ಮ ಕೈಯಲ್ಲಿದೆ.
@IgpBelagavi@DgpKarnataka@KarnatakaCops
'ಡಿಜಿಟಲ್ ಅರೆಸ್ಟ್' (Digital Arrest) ವಂಚನೆಯಿಂದ ಎಚ್ಚರವಾಗಿರಿ
ಸೈಬರ್ ವಂಚಕರು ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಹೆದರಿಸಬಹುದು
ಕರೆ ಅಥವಾ ವಿಡಿಯೋ ಮೂಲಕ ಪೊಲೀಸ್ ಕ್ರಮದ ಬೆದರಿಕೆಗಳಿಗೆ ಹೆದರಬೇಡಿ
ಬಂಧನ ತಪ್ಪಿಸಲು ಹಣದ ಬೇಡಿಕೆ ಬಂದರೆ, ಅದು ಖಂಡಿತವಾಗಿಯೂ ವಂಚನೆಯಾಗಿದೆ.
@IgpBelagavi@DgpKarnataka@KarnatakaCops
ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗಿ ನಿಮ್ಮ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ
ಮಾದಕ ದ್ರವ್ಯ ಸೇವನೆಯ ಬಗ್ಗೆ ಮಾಹಿತಿ ಇದ್ದಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಿ
@IgpBelagavi@DgpKarnataka@KarnatakaCops
ಪೊಲೀಸ್, ವೈದ್ಯಕೀಯ, ಅಥವಾ ಅಗ್ನಿಶಾಮಕ ದಳ, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ತುರ್ತು ಸಹಾಯಕ್ಕಾಗಿ 112 ಕ್ಕೆ ಕರೆ ಮಾಡಿ
ತ್ವರಿತ ಸ್ಪಂದನೆ – ಉಚಿತ ಸಹಾಯ
@IgpBelagavi@DgpKarnataka@KarnatakaCops
ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಪ್ರಕರಣ ಸಂಖ್ಯೆ 29/2026 ನೇದ್ದರಲ್ಲಿ ಅಪಹರಣಕ್ಕೊಳಗಾದ ಬಾಲಕಿಯನ್ನು ಪತ್ತೆ ಮಾಡಿ, ಪಾಲಕರೊಂದಿಗೆ ಕಳುಹಿಸಲಾಯಿತು.
@IgpBelagavi@DgpKarnataka@KarnatakaCops
ಮುಧೋಳ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಯವರು ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಯವರು ಜೊತೆಗೂಡಿ ಸದರಿ ಮಗುವನ್ನು ರಕ್ಷಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ ನಂತರ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ದಾಖಲು ಮಾಡಲಾಯಿತು.
@IgpBelagavi@DgpKarnataka@KarnatakaCops
ತಂದೆ ತಾಯಿಯವರು ತಮ್ಮ ಮಗುವನ್ನು, ಸಂಬಂಧಿಕರ ಮನೆಯಲ್ಲಿ ಬಿಟ್ಟು ಹೋಗಿದ್ದು, ಸದರಿ ಮಗುವಿಗೆ ಸಂಬಂಧಿಕರು ಕಿರುಕುಳ ನೀಡುತ್ತಿದ್ದ ಬಗ್ಗೆ ಹಾಗೂ ಶೆಲ್ಟರ್ ವ್ಯವಸ್ಥೆ (ಬಾಲ ಮಂದಿರಕ್ಕೆ ದಾಖಲಿಸಲು) ಮಾಡಿಕೊಡುವ ಕುರಿತು ಮತ್ತು ಸದರಿ ಬಾಲಕಿಗೆ ಆಪ್ತ ಸಮಾಲೋಚನೆಯ ಅವಶ್ಯಕತೆ ಇದೆ ಎಂದು ಮಕ್ಕಳ ಸಹಾಯವಾಣಿಗೆ (1098) ಮಾಹಿತಿ ಬಂದ ಮೇರೆಗೆ,
ಬಾಲ್ಯ ವಿವಾಹವು ಮಕ್ಕಳ ಬಾಲ್ಯವನ್ನು ನಾಶಪಡಿಸುವ ಗಂಭೀರ ಅಪರಾಧವಾಗಿದೆ.
ಹೆಣ್ಣುಮಕ್ಕಳಿಗೆ18 ವರ್ಷ ಮತ್ತು ಗಂಡುಮಕ್ಕಳಿಗೆ21 ವರ್ಷ ತುಂಬುವ ಮೊದಲೇ ವಿವಾಹ ಮಾಡುವುದು"ಬಾಲ್ಯ ವಿವಾಹ" ಎಂದು ಪರಿಗಣಿಸಲಾಗುತ್ತದೆ.
ಬಾಗಲಕೋಟೆ ನಗರದಲ್ಲಿ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಸಾಧಿಸಿ, ಕಾನೂನು ಸುವ್ಯವಸ್ಥೆ, ಶಾಂತಿ ಮತ್ತು ಭದ್ರತೆ ಕಾಪಾಡುವ ಹಾಗೂ ಅಪರಾಧಿಕ ಚಟುವಟಿಕೆಗಳನ್ನು ತಡೆಗಟ್ಟುವ ಮುಂಜಾಗೃತಾ ಕ್ರಮವಾಗಿ ಕಾಲ್ನಡಿಗೆ ಗಸ್ತು ನಿರ್ವಹಿಸಲಾಯಿತು.
@IgpBelagavi@DgpKarnataka@KarnatakaCops
ತೆಗೆದುಕೊಳ್ಳುವ ಮುನ್ನ ಬ್ಯಾಂಕ್ ಅಥವಾ ಸಂಸ್ಥೆಯ ಅಧಿಕೃತತೆಯನ್ನು ಪರಿಶೀಲಿಸಿ.
ಸಂದೇಹಾಸ್ಪದ ಆಫರ್ಗಳನ್ನು ತಕ್ಷಣವೇ ಪೊಲೀಸರಿಗೆ ವರದಿ ಮಾಡಿ.
ಎಚ್ಚರದಿಂದಿರಿ, ಸುರಕ್ಷಿತವಾಗಿ ಹೂಡಿಕೆ ಮಾಡಿ.
@IgpBelagavi@DgpKarnataka@KarnatakaCops
ಠೇವಣಿ ವಂಚನೆಗಳ ಬಗ್ಗೆ ಎಚ್ಚರವಿರಲಿ, ನಿಮ್ಮ ಉಳಿತಾಯವನ್ನು ರಕ್ಷಿಸಿಕೊಳ್ಳಿ!
ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಗ್ಯಾರಂಟಿ ನೀಡುವ ಹೂಡಿಕೆ ಆಫರ್ಗಳ ಬಗ್ಗೆ ಎಚ್ಚರವಿರಲಿ.
ತಕ್ಷಣ ಹಣ ಹೂಡಿಕೆ ಮಾಡಲು ಒತ್ತಡ ಹೇರುವವರ ಬಗ್ಗೆ ಜಾಗರೂಕರಾಗಿರಿ.
ಪರಿಚಯವಿಲ್ಲದ ಖಾತೆಗಳಿಗೆ ಹಣವನ್ನು ಜಮಾ ಮಾಡಬೇಡಿ.
ಯಾವುದೇ ಹೂಡಿಕೆ ನಿರ್ಧಾರ