Rahul Gandhi has mastered the art of losing elections and questioning the electoral process instead of accepting the people's verdict!
As Union Home Minister Shri @AmitShah Ji rightly pointed out, instead of questioning the electoral process after every defeat, Rahul Gandhi must question why the Congress continues to lose the people's trust.
The BJP's emphatic victory in Gujarat, winning 90 of 104 seats, including 38 of 44 seats in Gandhinagar, alongside the BJP and NDA's electoral successes in Rajasthan and Tripura, speaks volumes. Meanwhile, Congress drew a blank in the recent by-elections in West Bengal, Tamil Nadu and Puducherry.
The message is clear. The people continue to stand firmly with PM Shri @narendramodi Ji's leadership. No amount of excuses over SIR can conceal Congress's repeated electoral failures.
#ShahExposesRahul
ಕಳೆದ ಹಲವು ದಶಕಗಳಿಂದ ದೇಶದಲ್ಲೇ ಮಾದರಿ ಶಿಕ್ಷಣದಲ್ಲಿ ತ್ರಿಭಾಷಾ ನೀತಿ ಹೊಂದಿರುವ ಕರ್ನಾಟಕದಲ್ಲಿ ಯಾವುದೇ ಪೂರ್ವಾಪರ ಚರ್ಚೆ, ಶಿಕ್ಷಣ ತಜ್ಞರ ಸಲಹೆ, ಪ್ರತಿಪಕ್ಷಗಳ ನಿಲುವು ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ಹಿಂದಿ ಭಾಷೆ ಕೈ ಬಿಡುವ ನಿಲುವು ತೆಗೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಅದರಲ್ಲೂ SSLC ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರದ ಹಠಾತ್ ನಿಲುವು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ನಾವು ಕನ್ನಡ ಭಾಷೆಯಲ್ಲಿ ಕಲಿಕೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಕನ್ನಡ ನಮ್ಮ ಮಾತೃಭಾಷೆ. ಕನ್ನಡವು ನಮ್ಮ ಬೋಧನಾ ಭಾಷೆಯಾಗಿ ಜಾಗತಿಕ ದೃಷ್ಟಿಕೋನದಿಂದ ಇಂಗ್ಲಿಷ್ ಕಲಿಕೆಗೂ ನಮ್ಮ ಅಭ್ಯಂತರವಿಲ್ಲ. ಹಾಗೆಯೇ ಕನ್ನಡಿಗರು ದೇಶದ ಅನೇಕ ರಾಜ್ಯಗಳಿಗೆ ಉದ್ಯೋಗ ಅರಸಿ ಹೋದಾಗ ಕನಿಷ್ಠಮಟ್ಟದ ಹಿಂದಿ ಭಾಷೆಯ ಅರಿವು ಇರಬೇಕಾಗುತ್ತದೆ. ಕೇಂದ್ರ ಸರಕಾರದ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಕರ್ನಾಟಕದ ಯುವಸಮೂಹವು ರಾಷ್ಟ್ರಮಟ್ಟದಲ್ಲಿ ಹಿಂದೆ ಬೀಳಬಾರದು ಎಂಬ ಕಾಳಜಿ ನಮ್ಮದು.
ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಅನುಸರಿಸಲಾಗುತ್ತಿರುವ ತ್ರಿಭಾಷಾ ಸೂತ್ರವೂ ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್ನ್ನು ಸಂವಹನ ಭಾಷೆಯಾಗಿ ಹಾಗೂ ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಆದಾಗ್ಯೂ ಹಿಂದಿ ಭಾಷೆಯನ್ನು ಕೈಬಿಡುವುದಾದರೆ ಇದರ ಬಗೆಗೆ ಭಾಷಾ ತಜ್ಞರು, ಶಿಕ್ಷಣ ತಜ್ಞರು, ಎಲ್ಲ ಭಾಷೆಯ ಸಾಹಿತಿಗಳು ಸೇರಿದಂತೆ ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದೆ.
ಕೇವಲ ರಾಜಕೀಯ ವಿರೋಧಕ್ಕಾಗಿ ಕೇಂದ್ರ ಸರಕಾರದ ಮೇಲಿನ ದ್ವೇಷಕ್ಕಾಗಿ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವ ಸರಕಾರದ ತೀರ್ಮಾನ ವಿವೇಕ ರಹಿತ ಹಾಗೂ ಆಘಾತಕಾರಿ ಆದುದು.
ವಿಧಾನ ಪರಿಷತ್ತಿನ ಮಾಜಿ ಸಭಾಪತಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಮುತ್ಸದ್ದಿಗಳಾದ ಡಾ. ಶ್ರೀ ಎನ್. ತಿಪ್ಪಣ್ಣ ಅವರ ನಿಧನಕ್ಕೆ ಸಂತಾಪ ಕೋರುವೆ.
ಮಾನ್ಯ ತಿಪ್ಪಣ್ಣನವರು ಅತ್ಯಂತ ಸರಳ ಹಾಗೂ ಸಜ್ಜನಿಕೆಯ ಹಿರಿಯ ಮುತ್ಸದ್ದಿಗಳಾಗಿ ಸಮಾಜದ ಹಾಗೂ ನಾಡಿನ ಒಳಿತಿಗಾಗಿ ತಮ್ಮನ್ನು ಸಮರ್ಪಿಸಿಕೊಂಡು ಅವಿಸ್ಮರಣೀಯ ಸೇವೆ ಸಲ್ಲಿಸಿದ್ದರು, ತಮ್ಮ ಜೀವಿತಾವಧಿಯವರೆಗೂ ಸಮಾಜದ ಏಳಿಗೆಗಾಗಿ ಕಾಳಜಿಪೂರ್ವಕವಾಗಿ ಚಿಂತಿಸುತ್ತಿದ್ದವರು. ಹಿರಿಯ ವಕೀಲರಾಗಿ ಸಂಘಟನೆಗಳ ಮುಂಚೂಣಿಯಲ್ಲಿ ನಿಂತು ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಆದರ್ಶ ರಾಜಕಾರಣದ ಬಹುದೊಡ್ಡ ಕೊಂಡಿಯಾಗಿದ್ದ ಭವಿಷ್ಯದ ಪೀಳಿಗೆಗೆ ಬೆಳಕಾಗಿ ಮಾರ್ಗದರ್ಶಕರಾಗಿದ್ದ ತಿಪ್ಪಣ್ಣನವರ ಅಗಲಿಕೆ ಅತೀವ ವೇದನೆಯುಂಟುಮಾಡಿದೆ.
ತಿಪ್ಪಣ್ಣನವರ ಬದುಕು, ಸೇವೆ, ಸಾಧನೆ ನಾಡಿನ ಇತಿಹಾಸದಲ್ಲಿ ಹಾಗೂ ವೀರಶೈವ ಲಿಂಗಾಯತ ಸಮಾಜದ ಬೆಳವಣಿಗೆಯಲ್ಲಿ ಸದಾ ಪ್ರೇರಣಾದಾಯಕ ಶಕ್ತಿಯಾಗಿ ಉಳಿಯಲಿದೆ. ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ, ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುವೆ.
ಓಂ ಶಾಂತಿ 🙏
ನಮ್ಮ ಸೈನಿಕರು ಶತ್ರು ದೇಶ ಪಾಕಿಸ್ತಾನದ ವಿರುದ್ಧ ಹೋರಾಡುತ್ತಿದ್ದಾರೆ.
ಆದರೆ,
ಕಾಂಗ್ರೆಸ್ ಅಧ್ಯಕ್ಷರು @kharge, “ನಮ್ಮ ಪಾಕಿಸ್ತಾನ್” ಎಂದು ಪಾಕ್ ಪ್ರೇಮವನ್ನು ಪ್ರದರ್ಶಿಸುತ್ತಿದ್ದಾರೆ.
@INCIndia@INCKarnataka