ಬ್ಯಾಟರಾಯನಪುರ ಕ್ಷೇತ್ರದಲ್ಲಿ ಇಂದು ಅತಿದೊಡ್ಡ ಸಮಸ್ಯೆ ಅಕ್ರಮ ವಸತಿಗಳೇ ಆಗಿವೆ ಎಂಬುದನ್ನು ನಾವು ಬಿಜೆಪಿ ಪಕ್ಷವಾಗಿ ಮೊದಲಿನಿಂದಲೇ ಸ್ಪಷ್ಟವಾಗಿ ಹೇಳುತ್ತಿದ್ದೇವೆ. ಕೊಗಿಲು ವಾರ್ಡ್ನಲ್ಲಿ ಅಕ್ರಮವಾಗಿ ವಾಸವಾಗಿದ್ದ ಮನೆಗಳನ್ನು ತೆರವುಗೊಳಿಸಬೇಕೆಂದು ನಾವು ಮೊದಲೇ ಆಗ್ರಹಿಸಿದ್ದೇವೆ. ಆದರೆ ಈ ವಿಚಾರ ಗಂಭೀರ ಹಂತ ತಲುಪಿದರೂ ಕ್ಷೇತ್ರದ ಶಾಸಕ ಹಾಗೂ ಸಚಿವ ಕೃಷ್ಣ ಬೈರೇಗೌಡ ಕ್ಷೇತ್ರದಿಂದ ಕಾಣೆಯಾಗಿದ್ದಾರೆ. ಯಾವುದೇ ವಾರ್ಡ್ಗಳಿಗೆ ಭೇಟಿ ಇಲ್ಲ, ಯಾವುದೇ ಸ್ಪಷ್ಟ ಹೇಳಿಕೆ ಇಲ್ಲ ಮತ್ತು ಜನ ಸಾಮಾನ್ಯರ ಕಷ್ಟಗಳಂತೂ ಹೇಳ ತೀರದಾಗಿದೆ. ಅಕ್ರಮ ವಸತಿ ಎಂಬುದು ಕಾನೂನುಬಾಹಿರ ವಿಷಯವಾಗಿದ್ದರೂ, ಮಂತ್ರಿಯೊಬ್ಬರು ಸ್ಪಷ್ಟ ನಿಲುವು ತಾಳದೇ ಮೌನ ವಹಿಸಿರುವುದು ಅವರ ಆಡಳಿತ ವೈಫಲ್ಯವನ್ನು ತೋರಿಸುತ್ತದೆ.
ಇನ್ನೂ ಗಂಭೀರವಾದ ವಿಚಾರವೆಂದರೆ, ಈ ಅಕ್ರಮ ವಸತಿ ವಿಚಾರ ಉದ್ಭವಿಸುವ ಮೊದಲೇ ಸಚಿವರ ಸಮೀಪವರ್ತಿಗಳು ಜನರಿಂದ ಹಣ ಪಡೆದಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಅಕ್ರಮ ಎಂದು ತಿಳಿದಿದ್ದರೂ ಹಣ ಸಂಗ್ರಹ ಮಾಡಿದ್ದಾರೆ, ಅದರ ರಾಜಕೀಯ ಮತ್ತು ನೈತಿಕ ಹೊಣೆ ಯಾರದ್ದು? ಈ ಎಲ್ಲ ಬೆಳವಣಿಗೆಗಳ ಬಗ್ಗೆ ಕೃಷ್ಣ ಬೈರೇಗೌಡ ಅವರಿಗೆ ತಿಳಿದಿಲ್ಲವೆಂದು ನಂಬುವುದು ಕಷ್ಟ. ತಿಳಿದಿದ್ದರೂ ‘ನನಗೆ ಏನೂ ಗೊತ್ತಿಲ್ಲ’ ಎಂಬಂತೆ ವರ್ತಿಸುವುದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವೇ ಹೊರತು ಬೇರೆ ಏನೂ ಅಲ್ಲ.
ಅಕ್ರಮ ವಸತಿಗಳ ವಿರುದ್ಧ ಕಾನೂನು ಕ್ರಮ ನಡೆಯುವಾಗ, ಕ್ಷೇತ್ರದ ಮಂತ್ರಿಯೊಬ್ಬರು ಸ್ಪಷ್ಟವಾಗಿ ಮಾತನಾಡಬೇಕು, ಜನರಿಗೆ ಸತ್ಯವನ್ನು ತಿಳಿಸಬೇಕು, ತಪ್ಪು ಮಾಡಿದವರ ವಿರುದ್ಧ ಕ್ರಮಕ್ಕೆ ಬೆಂಬಲ ನೀಡಬೇಕು. ಆದರೆ ಇಲ್ಲಿ ಮಂತ್ರಿ ಕಾಂಗ್ರೆಸ್ ಹೈಕಮಾಂಡ್ ಭಯದಿಂದ ಮೌನ ವಹಿಸಿದ್ದಾರೆ ಎಂಬ ಅನುಮಾನಗಳು ಬಲವಾಗುತ್ತಿವೆ. ಕ್ಷೇತ್ರದ ಜನರು ಪ್ರಶ್ನಿಸುತ್ತಿದ್ದಾರೆ ಕೃಷ್ಣ ಬೈರೇಗೌಡ ಅವರು ಕಾನೂನಿನ ಪರವಾಗಿದ್ದಾರಾ, ಅಥವಾ ತಮ್ಮ ಪಕ್ಷದ ಮತ್ತು ಈ ವಲಸಿಗರ ರಕ್ಷಿಸುವುದೇ ಅವರ ಆದ್ಯತೆಯೇ?
ಕ್ಷೇತ್ರದಲ್ಲಿ ಸಮಸ್ಯೆಗಳು ಒಂದೊಂದಾಗಿ ಉಲ್ಬಣಗೊಳ್ಳುತ್ತಿದ್ದರೂ, ಸಚಿವ ಕೃಷ್ಣಬೈರೇಗೌಡ ಕ್ಷೇತ್ರದಿಂದ ಕಾಣೆಯಾಗಿರುವುದಂತೂ ಸ್ಪಷ್ಟವಾಗಿ ಕಾಣಿಸುತ್ತಿದೆ.
ಕಾಂಗ್ರೆಸ್ ಸರ್ಕಾರ ಕೋಗಿಲು ಲೇಔಟ್ ಬಳಿ 200 ಕ್ಕೂ ಅಧಿಕ ಮನೆಗಳನ್ನು ನೆಲಸಮ ಮಾಡಿರುವ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರಾದ ಶ್ರೀ @RAshokaBJP , ಮಾಜಿ ಉಪಮುಖ್ಯಮಂತ್ರಿಗಳಾದ @drashwathcn , ರಾಜ್ಯ ಕಾರ್ಯದರ್ಶಿಗಳಾದ ಶ್ರೀ @thammeshgowda , ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಎಸ್. ಹರೀಶ್ ಮತ್ತು ಪ್ರಮುಖರು ಉಪಸ್ಥಿತರಿದ್ದರು.
#CongressFailsKarnataka
ಬೆಂಗಳೂರು ಯಲಹಂಕದ ಕೋಗಿಲು ಲೇಔಟ್ ಬಳಿ 200 ಕ್ಕೂ ಅಧಿಕ ಮನೆಗಳನ್ನು ಕಾಂಗ್ರೆಸ್ ಸರ್ಕಾರ ನೆಲಸಮ ಮಾಡಿರುವ ಕುರಿತು ಅದರ ಹಿಂದಿರುವ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರು ಸತ್ಯಶೋಧನಾ ತಂಡ ರಚಿಸಿ ಆದೇಶ ಹೊರಡಿಸಿದ್ದಾರೆ.
#CongressFailsKarnataka
ಕಾಂಗ್ರೆಸ್ ಸರ್ಕಾರ ಕೋಗಿಲು ಲೇಔಟ್ ಬಳಿ 200 ಕ್ಕೂ ಅಧಿಕ ಮನೆಗಳನ್ನು ನೆಲಸಮ ಮಾಡಿರುವ ಹಿನ್ನೆಲೆಯಲ್ಲಿ ಇಂದು ಪ್ರತಿಪಕ್ಷ ನಾಯಕರಾದ ಶ್ರೀ @RAshokaBJP ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ @NswamyChalavadi ಅವರು ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ @drashwathcn, ರಾಜ್ಯ ಕಾರ್ಯದರ್ಶಿಗಳಾದ ಶ್ರೀ ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಎಸ್. ಹರೀಶ್ ಮತ್ತು ಪ್ರಮುಖರು ಉಪಸ್ಥಿತರಿದ್ದರು.
#CongressFailsKarnataka
ರಾಜ್ಯದಲ್ಲಿ ವಸತಿ ರಹಿತರು ತುಂಡು ಭೂಮಿಗಾಗಿ, ತಲೆಮೇಲಿನ ಸೂರಿಗಾಗಿ ಶಬರಿಯಂತೆ ಕಾಯುತ್ತಿದ್ದಾರೆ. ಆದರೆ ಇವರೆಲ್ಲರನ್ನೂ ನಿರ್ಲಕ್ಷ್ಯ ಮಾಡಿರುವ ಸರ್ಕಾರ ಕೋಗಿಲು ಬಡಾವಣೆಯ ಅಕ್ರಮ ವಲಸಿಗರಿಗೆ ಸರ್ಕಾರಿ ವಸತಿ ನೀಡುತ್ತಿದೆ.
ನಾಡದ್ರೋಹಿ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಗೆ ಮುಗ್ಧ ಕನ್ನಡಿಗರು ಬಲಿಯಾಗುತ್ತಿದ್ದಾರೆ.
#CongressFailsKarnataka #ನಾಡದ್ರೋಹಿಕಾಂಗ್ರೆಸ್ #kogiluLayout
ಕರ್ನಾಟಕದಲ್ಲಿ ಕನ್ನಡಿಗರಿಗೆ ಟೋಪಿ ಹಾಕಿ ಮಿನಿ ಬಾಂಗ್ಲಾದೇಶಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯವು ಮಿನಿ ಬಾಂಗ್ಲಾದೇಶಗಳ ಹಬ್ ಆಗುತ್ತಿದೆ. ಕೇರಳ ಸರ್ಕಾರದ ಒಂದು ಟ್ವೀಟ್ಗೆ ಸರ್ಕಾರ ಮಂಡಿಯೂರಿದೆ. ಕೋಗಿಲು ಬಡವಾಣೆ ಒತ್ತುವರಿ ತೆರವು ಮಾಹಿತಿ ಪಾಕಿಸ್ಥಾನಕ್ಕೆ ಹೇಗೆ ರವಾನೆಯಾಗಿದೆ? ಇಲ್ಲಿಯ ಪಾಕ್ ಸ್ಲೀಪರ್ ಸೆಲ್ನಿಂದಲೇ ಮಾಹಿತಿ ಸೋರಿಕೆಯಾಗಿದೆಯೇ ?
- ಶ್ರೀ @RAshokaBJP, ಪ್ರತಿಪಕ್ಷ ನಾಯಕರು
#CongressFailsKarnataka #ನಾಡದ್ರೋಹಿಕಾಂಗ್ರೆಸ್
"ಮನೆಗೆ ಮಾರಿ ಪರರಿಗೆ ಉಪಕಾರಿ" ಎಂಬುದು ಕಾಂಗ್ರೆಸ್ ಸರ್ಕಾರದ ನಡೆಯಿಂದ ವೇದ್ಯವಾಗುತ್ತಿದೆ.
ಕರ್ನಾಟಕದ ನಿರಾಶ್ರಿತರು ಮನೆ ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದರೂ ಕಾಣದ ಕಾಂಗ್ರೆಸ್ ಸರ್ಕಾರಕ್ಕೆ, ಎಲ್ಲಿಂದಲೋ ಬಂದು ಅಕ್ರಮವಾಗಿ ನೆಲೆಸಿದವರಿಗೆ ಮನೆ ಕಟ್ಟಿಕೊಡಲು ಎಲ್ಲಿಲ್ಲದ ಉತ್ಸಾಹವೇಕೆ?
ಮನೆಗಾಗಿ ಅರ್ಜಿ ಹಾಕಿ ಕಾಯುತ್ತಿರುವ ನಾಡಿನ ಲಕ್ಷಾಂತರ ಬಡವರು ಇಂದಿಗೂ ಸೂರಿಲ್ಲದೇ ಅಲೆಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಕನ್ನಡಿಗರ ಬದುಕು ಕತ್ತಲಲ್ಲಿರುವಾಗ, ಅಕ್ರಮ ವಲಸಿಗರಿಗೆ ಆಶ್ರಯ ಭಾಗ್ಯ ನೀಡುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ದ್ರೋಹವಲ್ಲವೇ?
#CongressFailsKarnataka
#ನಾಡದ್ರೋಹಿಕಾಂಗ್ರೆಸ್
ಕನ್ನಡಿಗರಿಗೆ 'No Entry' - ಅಕ್ರಮ ವಲಸಿಗರಿಗೆ 'Free Entry'!
ಬೆಂಗಳೂರಿನ ಬಡವರು ಸೂರಿಲ್ಲದೆ ಪರದಾಡುತ್ತಿದ್ದರೆ, ಇತ್ತ ನೂರಾರು ಕೋಟಿ ಬೆಲೆಬಾಳುವ ಸರ್ಕಾರಿ ಜಮೀನಿನಲ್ಲಿ ಕೇರಳದ ಅಕ್ರಮ ವಲಸಿಗರಿಗೆ ರಾಜಾತಿಥ್ಯ ನೀಡಲಾಗುತ್ತಿದೆ.
#Karnataka#KogiluLayout#RAshok#SaveBengaluru
ಮೊದಲು ಒತ್ತುವರಿ ತೆರವು ಎಂದರು, ಈಗ ಮನೆ ಕೊಡುತ್ತೇವೆ ಎನ್ನುತ್ತಿದೆ @INCKarnataka ಸರ್ಕಾರ!
ಕೇರಳ ನಾಯಕರ ಒತ್ತಡಕ್ಕೆ ಮಣಿದು @siddaramaiah ಸರ್ಕಾರ ಹೀಗೆ 'ಯು-ಟರ್ನ್' ಹೊಡೆದಿದೆ. ಆಡಳಿತ ನಡೆಯುತ್ತಿರುವುದು ವಿಧಾನಸೌಧದಿಂದಲೋ ಅಥವಾ ಕೇರಳದಿಂದಲೋ?
#UturnGovernment#SaveKarnataka
ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಕೇರಳ ಮೂಲದ ಅಕ್ರಮ ವಲಸಿಗರಿಗೆ ಅಕ್ರಮವಾಗಿ ಸೂರು ಕೊಡಲು ಹೊರಟಿರುವುದು ತೆರಿಗೆ ಕಟ್ಟುವ ಕನ್ನಡಿಗರಿಗೆ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಅನ್ಯಾಯ.
- ಶ್ರೀ @BYVijayendra , ರಾಜ್ಯಾಧ್ಯಕ್ಷರು
#CongressFailsKarnataka#ನಾಡದ್ರೋಹಿಕಾಂಗ್ರೆಸ್
ಸಚಿವ ಕೃಷ್ಣ ಬೈರೇಗೌಡ ಅವರು ಅಕ್ರಮವಾಗಿ ಸರ್ಕಾರಿ ಭೂಮಿ ಕಬಳಿಸಿದ್ದಾರೆ. ದಾಖಲೆಗಳನ್ನು ತಿದ್ದುಪಡಿ ಮಾಡಲಾಗಿದೆ. ದಾಖಲೆಗಳು ತಾಳೆಯಾಗುತ್ತಿಲ್ಲ, ಸರ್ಕಾರ ಕೂಡಲೇ ತನಿಖೆಗೆ ಆದೇಶಿಸಬೇಕು.
- ಶ್ರೀ @RAshokaBJP , ಪ್ರತಿಪಕ್ಷ ನಾಯಕರು
#BelagaviSession#CongressFailsKarnataka
ಲೂಟಿಕೋರ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪ್ರತಿಭಟನೆ!
ಕಂದಾಯ ಸಚಿವರೇ, ಭೂಮಿಯ ಹಕ್ಕು ನೀಡುವ ಇಲಾಖೆಯನ್ನು ನಿಮ್ಮ ಸ್ವಾರ್ಥಕ್ಕೇಕೆ ಬಳಸುವಿರಿ?
ಸರ್ಕಾರದ ಜಾಗವನ್ನು ಸರ್ಕಾರಕ್ಕೆ ಮರಳಿಸಿ ಇಲ್ಲವೇ ರಾಜೀನಾಮೆ ನೀಡಿ ತೊಲಗಿ.
#CongressLootsKarnataka
ಬಿಜೆಪಿ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿರುವ ಶ್ರೀ @NitinNabin ಜೀ ಅವರನ್ನು ನವದೆಹಲಿಯ ಬಿಜೆಪಿ ಕೇಂದ್ರ ಕಛೇರಿಯಲಿ ಇಂದು ಭೇಟಿಯಾಗಿ ಅಭಿನಂದಿಸಲಾಯಿತು.
‘ಯುವ ಸಮೂಹ’ ಸಂಘಟನೆಯ ಬಹುದೊಡ್ಡ ಶಕ್ತಿ, ಈ ನಿಟ್ಟಿನಲ್ಲಿ ಯುವ ಉತ್ಸಾಹಿಗಳನ್ನು ಗುರುತಿಸುವುದು ಭಾರತೀಯ ಜನತಾ ಪಾರ್ಟಿಯ ಆದ್ಯತೆ ಹಾಗೂ ಬದ್ಧತೆಯಾಗಿದೆ. ಮಾನ್ಯ ಪ್ರಧಾನಿ @narendramodi ಜೀ ಅವರು, ರಾಷ್ಟ್ರೀಯ ಅಧ್ಯಕ್ಷರೂ ಆದ ಕೇಂದ್ರ ಸಚಿವ ಮಾನ್ಯ @JPNadda ಜೀ, ಗೃಹ ಸಚಿವ ಮಾನ್ಯ @AmitShah ಜೀ ಹಾಗೂ ಪಕ್ಷದ ಇತರ ವರಿಷ್ಠರು ಯುವ ನಾಯಕ ನಿತಿನ್ ನಬಿನ್ ಅವರನ್ನು ಕಾರ್ಯಾಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ದೇಶದ ಯುವ ಜನರಿಗೆ ಸ್ಫೂರ್ತಿಯ ಸಂದೇಶ ರವಾನಿಸಿದ್ದಾರೆ.
ಬಿಜೆಪಿ ಪಕ್ಷದ ಇತಿಹಾಸದಲ್ಲಿ ಅತ್ಯುನ್ನತ ಜವಾಬ್ದಾರಿ ವಹಿಸಿಕೊಂಡ ಯುವ ನಾಯಕ ಎಂಬ ಹೆಗ್ಗಳಿಕೆಗೆ ನಿತಿನ್ ನಬಿನ್ ಜೀ ಪಾತ್ರರಾಗಿದ್ದಾರೆ. ಅವರು ನಡೆದು ಬಂದ ಹಾದಿಯಲ್ಲಿ ಪಕ್ಷ ನಿಷ್ಠೆ, ಕ್ರಿಯಾಶೀಲತೆ, ರಾಷ್ಟ್ರಬದ್ಧತೆ ಹಾಗೂ ಸಂಘಟನಾ ಸಾಮರ್ಥ್ಯವನ್ನು ಸಮರ್ಥವಾಗಿ ನಿರೂಪಿಸಿದ್ದಾರೆ, ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಬಿಹಾರದಲ್ಲಿ ಅಪಾರ ಜನಮನ್ನಣೆ ಗಳಿಸಿದ ಜನನಾಯಕನಾಗಿ ಹೊರಹೊಮ್ಮಿದ್ದಾರೆ.
ನಿತಿನ್ ನಬಿನ್ರವರು ಪ್ರಸ್ತುತ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸ್ಥಾನದ ಮೂಲಕ ನಮ್ಮಂತವರಿಗೆ ಪ್ರೇರಣೆಯ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಅವರಿಂದ ಬಿಜೆಪಿ ಸಂಘಟನೆ ಇನ್ನಷ್ಟು ಬಲವೃದ್ಧಿಯಾಗಲಿದೆ.
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ@hd_kumaraswamy ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತನ ಕೃಪಾಶೀರ್ವಾದದಿಂದ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಲಭಿಸಲಿ, ರಾಷ್ಟ್ರಕ್ಕೆ ಹಾಗೂ ರಾಜ್ಯಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವ ಅವಕಾಶ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.
#HDKumaraswamyBirthDay
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಈಗಲ್ಟನ್ ಸ್ಪೋರ್ಟ್ಸ್ ಪಾರ್ಕ್ ,ಸಾತನೂರ್ ನಲ್ಲಿ ತಿಂಡ್ಲು ಹಿಂದೂ ಯುವಕರ ಸಂಘ & ಸ್ನೇಹಿತರ ಸಹಕಾರದಿಂದ ಡಾ.ರಾಜ್ ಕುಮಾರ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಾಯಿತು.
ಈ ಸಂದರ್ಭದಲ್ಲಿ ಆಯೋಜಕರಾದ ದರ್ಶನ್ ಗೌಡ,ಯಶಸ್ ಗೌಡ ಉಪಸ್ಥಿತರಿದ್ದರು.
#Byatarayanapura
#Thammeshgowda #Cricket
ಶ್ರೀ ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ.
ರಾಜ್ಯದ ಹಿರಿಯ ರಾಜಕಾರಣಿ, ಜನನಾಯಕ ಹಾಗೂ ಸರಳ ವ್ಯಕ್ತಿತ್ವದ ಶಾಮನೂರು ಶಿವಶಂಕರಪ್ಪ ಅವರು ಇಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಅವರ ರಾಜಕೀಯ ಸೇವೆ, ಜನಪರ ಕಾಳಜಿ ಮತ್ತು ನಿಷ್ಠಾವಂತ ನಾಯಕತ್ವ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿರಲಿದೆ.
ಈ ದುಃಖದ ಘಳಿಗೆಯಲ್ಲಿ ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಹಾಗೂ ಬೆಂಬಲಿಗರಿಗೆ ಹೃದಯಪೂರ್ವಕ ಸಂತಾಪಗಳು.
ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. 🙏
#Omshanthi
ಬಿಜೆಪಿ ಸಂಸದೀಯ ಮಂಡಳಿಯು ಬಿಹಾರ ಸರ್ಕಾರದ ಕ್ಯಾಬಿನೆಟ್ ಸಚಿವ ಶ್ರೀ ನಿತಿನ್ ನಬಿನ್ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಿದೆ.
ಅಭಿನಂದನೆಗಳು..ji 💐
BJP Parliamentary Board has appointed Shri Nitin Nabin, Cabinet Minister, Bihar Government as National Working President of the party.
Heartliy Congratulations. @NitinNabin ji.
ಲಂಚ ಲಂಚ ಲಂಚ!
ಕಂದಾಯ ಇಲಾಖೆಯ ಪ್ರತಿಯೊಂದು ಮೂಲೆಯಲ್ಲೂ ಲಂಚ ಕೊಟ್ಟರೆ ಮಾತ್ರ ಫೈಲ್ ಚಲಿಸುತ್ತದೆ.
ಸೈಟ್ ನೋಂದಣಿ, ಖಾತಾ ಬದಲಾವಣೆ, ದಾಖಲೆ ಪರಿಶೀಲನೆ, ಲಂಚ ಇಲ್ಲ ಎಂದರೆ ಕೆಲಸವೇ ಇಲ್ಲ!
ಸಾಮಾನ್ಯ ಜನರಿಗೆ ಆಗುತ್ತಿರುವ ಅನ್ಯಾಯ ಅಷ್ಟಿಷ್ಟಲ್ಲ.
ಹೆಬ್ಬಾಳ ಜಂಕ್ಷನ್ ಟ್ರಾಫಿಕ್ ಗಿಂತಲೂ ಎಚ್ಚು ಜಾಮ್ ಕಂದಾಯ ಕಚೇರಿಗಳ ಮುಂದೆ, ಯಾಕೆಂದರೆ ಬ್ರೋಕರ್ಗಳಿಗೆ ಹಣ ತಲುಪಿಲ್ಲ ಎಂದರೆ ಅಧಿಕಾರಿಗಳು ಯಾವ ಫೈಲ್ ಸಹ ಮುಟ್ಟುತ್ತಿಲ್ಲ, ಈ ಕಂದಾಯ ಇಲಾಖೆಯ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರೋ ಅಥವಾ ಬ್ರೋಕರ್ಗಳೋ ಗೊತ್ತಿಲ್ಲ.
ಬ್ಯಾಟರಾಯನಪುರ ಶಾಸಕರೂ ಹಾಗು ಕಂದಾಯ ಇಲಾಖೆಯ ಮಂತ್ರಿಗಳೂ
ಜನರ ಮುಂದೆ ಕ್ಲೀನ್ ಇಮೇಜ್ ಮತ್ತು ವಿಡಿಯೋ ಮುಂದೆ ಅಧಿಕಾರಿಗಳಿಗೆ ಬೈಯೋದು ಬಿಟ್ಟರೆ, ಕಂದಾಯ ಇಲಾಕೆಯ ಒಬ್ಬ ಅಧಿಕಾರಿ ಇರಲಿ ಬಿಡಿ ಒಬ್ಬ ಗುಮಾಸ್ತನು ಸಹ ಸಸ್ಪೆಂಡ್ ಮಾಡಿಲ್ಲ.
ಸಚಿವರ ಇಂತಹ ನಟನೆ ನೋಡಿದರೆ ಚಲನಚಿತ್ರ ನಟರು ಸಹ ನಾಚುವಂತಿದೆ!
ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ₹1600 ಕೋಟಿ ಹಗರಣ ಎಂದು ಕನ್ನಡ ಸುದ್ದಿ ವಾಹಿನಿಯೊಂದು ಪ್ರಕಟಿಸಿದೆ.
ಈ ಹಗರಣದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೋ ಅವರೆಲ್ಲರಿಗೂ ಶಿಕ್ಷೆ ಆಗಲೇಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತೇನೆ.
https://t.co/uC4g738Zsw
#bytarayanapuradeservbetter
#CongressFailsKarnataka
ರಾಮಭಕ್ತ ಆಂಜನೇಯ ಸ್ವಾಮಿಯ ಆರಾಧನೆಯ ಪವಿತ್ರ ದಿನವಾದ ಇಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ಆಶೀರ್ವಾದ ಪಡೆಯಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಹೆಚ್.ಸಿ. ತಮ್ಮೇಶ್ ಗೌಡ, ಶ್ರೀ ಶರಣು ತಳ್ಳಿಕೇರಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಎಸ್. ಹರೀಶ್, ಬೆಂಗಳೂರು ದಕ್ಷಿಣ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಉಮೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.