ಆಗ್ನೇಯ ವಿಭಾಗದ ರಾಣಿ ಚೆನ್ನಮ್ಮ ಪಡೆಯವರು @bomanahalli_ps ವ್ಯಾಪ್ತಿಯ ಆರ್.ಜೆ.ಎಸ್. ಶಾಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳು, ಮಕ್ಕಳ ಸುರಕ್ಷತೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ವಿವಿಧ ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ತಡೆ, ಬಾಲ್ಯವಿವಾಹ ನಿಷೇಧ, ಮಕ್ಕಳ ಸಹಾಯವಾಣಿ 1098 ಹಾಗೂ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಮಾಹಿತಿ ನೀಡಲಾಯಿತು. @DgpKarnataka@BlrCityPolice@jt_cpeastbcp #RaniChennammaPade #ChildRights #ChildProtection #AwarenessProgram #1098Childline #SouthEastDivision
🌿🌎 ವಿಶ್ವ ಪರಿಸರ ದಿನದ ಶುಭಾಶಯಗಳು!
ಹಸಿರು ಪರಿಸರವೇ ನಮ್ಮ ಭವಿಷ್ಯದ ಭದ್ರ ಅಡಿಪಾಯ. ಪ್ರಕೃತಿಯ ಸಂಪನ್ಮೂಲಗಳನ್ನು ಜವಾಬ್ದಾರಿಯಿಂದ ಕಾಪಾಡಿ, ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಮುಂದಿನ ತಲೆಮಾರಿಗೆ ಆರೋಗ್ಯಕರ ಮತ್ತು ಸುಂದರ ಭೂಮಿಯನ್ನು ಕೊಡುಗೆಯಾಗಿ ನೀಡೋಣ. 🌱💚
#ವಿಶ್ವಪರಿಸರದಿನ#EnvironmentDay #SaveNature #GoGreen #ProtectEnvironment #SouthEastDivision
🌿🌎 ಈ ವಿಶ್ವ ಪರಿಸರ ದಿನದಂದು ಪರಿಸರಕ್ಕಾಗಿ GREEN ಆಗಿ, ವಂಚನೆಗಳ ವಿರುದ್ಧ RED ಆಗಿ! 🚨🔐
ಸೈಬರ್ ಅಪರಾಧಿಗಳು ಭಯ, ಆತಂಕ ಮತ್ತು ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿ ಜನರಿಂದ ವೈಯಕ್ತಿಕ ಮಾಹಿತಿ ಅಥವಾ ಹಣವನ್ನು ಮೋಸದಿಂದ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ತಾಳ್ಮೆಯಿಂದ, ಶಾಂತವಾಗಿದ್ದು, ಜಾಗರೂಕರಾಗಿ ವರ್ತಿಸುವುದರಿಂದ ನೀವು ವಂಚನೆಯಿಂದ ತಪ್ಪಿಸಿಕೊಳ್ಳಬಹುದು.
🔴 RED ಅನ್ನು ನೆನಪಿಡಿ:
❌ ಭಯವನ್ನು ತಿರಸ್ಕರಿಸಿ (Reject the Fear)
📵 ಕರೆಯನ್ನು ತಕ್ಷಣವೇ ಕೊನೆಗೊಳಿಸಿ (End the Call Immediately)
📞 1930 ಗೆ ಕರೆ ಮಾಡಿ (Dial 1930)
🌱 ಸುರಕ್ಷಿತ ಡಿಜಿಟಲ್ ಜೀವನಶೈಲಿ ಮತ್ತು ಹಸಿರು ಪರಿಸರ – ಎರಡೂ ನಮ್ಮ ಜವಾಬ್ದಾರಿ. @DgpKarnataka@KarnatakaCops@BlrCityPolice@jt_cpeastbcp #WorldEnvironmentDay #GoGreen #CyberSafety #ScamAlert #RejectTheFear #Dial1930 #Southeastdvision
🚭 ತಂಬಾಕಿಗೆ ವಿದಾಯ ಹೇಳಿ, ಆರೋಗ್ಯವೇ ನಿಜವಾದ ಸಂಪತ್ತು 🌟
ತಂಬಾಕು ಸೇವನೆಯು ಕ್ಯಾನ್ಸರ್, ಹೃದಯ ಸಂಬಂಧಿತ ಕಾಯಿಲೆಗಳು ಹಾಗೂ ಉಸಿರಾಟದ ತೊಂದರೆಗಳಂತಹ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮ್ಮ ಆರೋಗ್ಯ ಮತ್ತು ಕುಟುಂಬದ ಸುಖಕ್ಕಾಗಿ ತಂಬಾಕಿನ ದುಷ್ಪರಿಣಾಮಗಳಿಂದ ದೂರವಿರಿ.
✅ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ
✅ ತಂಬಾಕಿಗೆ ಶಾಶ್ವತವಾಗಿ ವಿದಾಯ ಹೇಳಿ
✅ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ
@DgpKarnataka@BlrCityPolice@jt_cpeastbcp
#NoTobacco #HealthyLife #TobaccoFree #HealthAwareness #SayNoToTobacco #SouthEastDivision
🔐📱 ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮುನ್ನ, ನಿಮ್ಮ ಗೌಪ್ಯತಾ ಸೆಟ್ಟಿಂಗ್ಗಳನ್ನು ಪರಿಶೀಲಿಸಿ! 🔐🚨
ನಿಮ್ಮ ವೈಯಕ್ತಿಕ ಮಾಹಿತಿ, ಫೋಟೋಗಳು ಮತ್ತು ವೀಡಿಯೊಗಳು ತಪ್ಪು ವ್ಯಕ್ತಿಗಳ ಕೈಗೆ ಸಿಕ್ಕರೆ ದುರುಪಯೋಗವಾಗುವ ಸಾಧ್ಯತೆ ಇದೆ. ಆದ್ದರಿಂದ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಗೌಪ್ಯತೆ(Privacy) ಸೆಟ್ಟಿಂಗ್ಗಳನ್ನು ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ನವೀಕರಿಸಿ.
✅ ನಿಮ್ಮ ಮಾಹಿತಿ, ಫೋಟೋಗಳು ಮತ್ತು ವೀಡಿಯೊಗಳು ನೀವು ನಂಬುವ ವ್ಯಕ್ತಿಗಳಿಗೆ ಮಾತ್ರ ಕಾಣುವಂತೆ ಸರಿಯಾದ Privacy Settings ಆಯ್ಕೆಮಾಡಿ.
✅ ನಿಮ್ಮ ವಿಳಾಸ, ಮೊಬೈಲ್ ಸಂಖ್ಯೆ, ಬ್ಯಾಂಕ್ ಅಥವಾ ಹಣಕಾಸು ಮಾಹಿತಿ, ಹಾಗೂ ಪ್ರವಾಸದ ಯೋಜನೆಗಳಂತಹ ಸೂಕ್ಷ್ಮ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ.
✅ ಅಪರಿಚಿತರಿಂದ ಬರುವ Friend Request ಅಥವಾ Follow Requestಗಳನ್ನು ಸ್ವೀಕರಿಸುವಾಗ ಎಚ್ಚರಿಕೆಯಿಂದಿರಿ.
✅ ಹೆಚ್ಚುವರಿ ಭದ್ರತೆಗಾಗಿ Two-Factor Authentication (2FA) ಸೌಲಭ್ಯವನ್ನು ಸಕ್ರಿಯಗೊಳಿಸಿ.
🛡️ ಇಂದು ನೀವು ಮಾಡುವ ಕೆಲವು ಗೌಪ್ಯತಾ ಪರಿಶೀಲನೆಗಳು ನಾಳೆಯ ಸೈಬರ್ ಅಪರಾಧಗಳನ್ನು ತಡೆಯಬಹುದು. @DgpKarnataka@BlrCityPolice@KarnatakaCops@jt_cpeastbcp
#CyberSafety #OnlineSafety #PrivacyMatters #SocialMediaSafety #CyberAwareness #SafeBrowsing #SouthEastDivision
🚨📱ನಕಲಿ “ಸೀಮಿತ ಅವಧಿಯ ವಿಶೇಷ ಮಾರಾಟ” ಆನ್ಲೈನ್ ವಂಚನೆಗಳ ಬಗ್ಗೆ ಎಚ್ಚರಿಕೆ!
ವಂಚಕರು WhatsApp, Telegram, Facebook ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಫ್ಲ್ಯಾಶ್ ಸೇಲ್ ಗುಂಪುಗಳನ್ನು ರಚಿಸಿ, ಜನಪ್ರಿಯ ಸ್ಮಾರ್ಟ್ಫೋನ್ಗಳು, ಎಲೆಕ್ಟ್ರಾನಿಕ್ ವಸ್ತುಗಳು ಭಾರೀ ರಿಯಾಯಿತಿ ದರದಲ್ಲಿ ಲಭ್ಯವಿವೆ ಎಂದು ನಂಬಿಸುತ್ತಾರೆ.
⚠️ ಸಾಮಾನ್ಯ ವಂಚನೆ ಸಂದೇಶ:
📢 “ಹೊಸ ಸ್ಮಾರ್ಟ್ಫೋನ್ ಸ್ಟಾಕ್ ಬಂದಿದೆ! ಸೀಮಿತ ಸಂಖ್ಯೆಯ ಫೋನ್ಗಳು ಮಾತ್ರ ಲಭ್ಯ. ನಿಮ್ಮ ಫೋನ್ ಬುಕ್ ಮಾಡಲು ಈಗಲೇ ಹಣ ಪಾವತಿಸಿ.”
ವಂಚಕರು ವೈಯಕ್ತಿಕUPI ಖಾತೆಗಳಿಗೆ ಹಣ ಪಾವತಿಸಲು ಹೇಳುತ್ತಾರೆ. ಹಣ ಕಳುಹಿಸಿದ ಬಳಿಕ ಅವರು ಸಂಪರ್ಕ ಕಡಿದುಕೊಳ್ಳುತ್ತಾರೆ. ಫೋನ್ ಕೂಡ ಸಿಗುವುದಿಲ್ಲ, ಹಣವೂ ಮರುಪಾವತಿಯಾಗುವುದಿಲ್ಲ.
💡 ಸುರಕ್ಷಿತವಾಗಿರಿ:
✅ ಪರಿಶೀಲಿಸಿದ ಮತ್ತು ವಿಶ್ವಾಸಾರ್ಹ ಇ-ಕಾಮರ್ಸ್ ತಾಣಗಳು ಅಥವಾ ಅಧಿಕೃತ ಮಾರಾಟಗಾರರಿಂದ ಮಾತ್ರ ಖರೀದಿಸಿ.
✅ ಅತಿಯಾದ ರಿಯಾಯಿತಿ ಅಥವಾ “ಸೀಮಿತ ಅವಧಿಯ ವಿಶೇಷ ಆಫರ್” ಎಂಬ ಆಮಿಷಗಳಿಗೆ ಬಲಿಯಾಗಬೇಡಿ.
🔐 ಹಣ ಪಾವತಿಸುವ ಮೊದಲು ಯೋಚಿಸಿ. ಖರೀದಿಸುವ ಮೊದಲು ಪರಿಶೀಲಿಸಿ. @DgpKarnataka@BlrCityPolice@jt_cpeastbcp
🏏ಐಪಿಎಲ್-2026 ಕ್ರಿಕೆಟ್ ಫೈನಲ್ ಪಂದ್ಯಾವಳಿಯ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಸಲಹೆ ಮತ್ತು ಸೂಚನೆಗಳು. 🚨
🏏 Public Advisory and Safety Guidelines Regarding IPL 2026 Cricket Final Celebrations
#IPL2026#FinalMatch#PublicAdvisory#SafeCelebration
👴👵 ಹಿರಿಯ ನಾಗರಿಕರೆ, ಸೈಬರ್ ವಂಚನೆಗಳಿಂದ ಎಚ್ಚರವಹಿಸಿ! 🚨
ಸೈಬರ್ ವಂಚಕರ ನಕಲಿ ದೂರವಾಣಿ ಕರೆಗಳು, ಫಿಷಿಂಗ್ ಲಿಂಕ್ಗಳು, OTP ವಂಚನೆಗಳು ಹಾಗೂ ಆನ್ಲೈನ್ ಬ್ಯಾಂಕಿಂಗ್ ಮೋಸಗಳ ಮೂಲಕ ಹಿರಿಯ ನಾಗರಿಕರನ್ನು ಹೆಚ್ಚಾಗಿ ಗುರಿಯಾಗಿಸುತ್ತಾರೆ. ಎಚ್ಚರಿಕೆಯಿಂದಿರಿ ಮತ್ತು ನಿಮ್ಮ ಉಳಿತಾಯದ ಹಣವನ್ನು ಸುರಕ್ಷಿತವಾಗಿರಿಸಿ. 🔐
✅ ಅಗತ್ಯವಿಲ್ಲದಿದ್ದರೆ ನಿಮ್ಮ ಬ್ಯಾಂಕ್ ಖಾತೆಯ ಆನ್ಲೈನ್ ಬ್ಯಾಂಕಿಂಗ್ ಹಾಗೂ ಅಂತರರಾಷ್ಟ್ರೀಯ ಬ್ಯಾಂಕಿಂಗ್ ಸೌಲಭ್ಯಗಳನ್ನು ನಿಷ್ಕ್ರಿಯಗೊಳಿಸಿ ಅಥವಾ ಮುಕ್ತಾಯ ಮಾಡಿ.
✅ OTP, CVV, PIN ಅಥವಾ ಬ್ಯಾಂಕಿಂಗ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
✅ ಯಾವುದೇ ಅಪರಿಚಿತ/ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ.
✅ ಯಾವುದೇ ಬ್ಯಾಂಕಿಂಗ್ ಕರೆಗಳಿಗೆ ಪ್ರತಿಕ್ರಿಯಿಸುವ ಮೊದಲು ಪರಿಶೀಲಿಸಿ.
📞 ಸೈಬರ್ ವಂಚನೆ ಬಗ್ಗೆ ತಕ್ಷಣವೇ ಸೈಬರ್ ಕ್ರೈಂ ಸಹಾಯವಾಣಿ #1930 ಗೆ ಕರೆ ಮಾಡಿ ಅಥವಾ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಿ.
@DgpKarnataka@BlrCityPolice@jt_cpeastbcp
#CyberSafety #SeniorCitizens #CyberAwareness #StaySafeOnline #1930Helpline #OnlineFraud
#ಬಕ್ರೀದ್ ಹಬ್ಬದ ಪ್ರಯುಕ್ತ ಆಗ್ನೇಯ ವಿಭಾಗದ @thilaknagaraps, @sgpalyaps ಹಾಗೂ ಇತರೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಮಸೀದಿಗಳು ಮತ್ತು ಸಂವೇದನಾಶೀಲ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ವ್ಯವಸ್ಥೆಯನ್ನು ಜಾರಿಗೊಳಿಸಿ, ಸಾರ್ವಜನಿಕರ ಸುರಕ್ಷತೆ, ಶಾಂತಿ-ಸುವ್ಯವಸ್ಥೆ ಹಾಗೂ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ. @KarnatakaCops@DgpKarnataka@BlrCityPolice@jt_cpeastbcp
#Bakrid2026 #FestivalBandobast #PublicSafety #PeaceAndHarmony #StaySafe #SouthEastDivision
📈💻 ಆನ್ಲೈನ್ ಹೂಡಿಕೆ ಮತ್ತು ಶೇರ್ ಟ್ರೇಡಿಂಗ್ ಮೋಸಗಳ ಬಗ್ಗೆ ಎಚ್ಚರಿಕೆ 🚨
ಮೋಸಗಾರರು ನಕಲಿ ಟ್ರೇಡಿಂಗ್ ಆ್ಯಪ್ಗಳು, WhatsApp/Telegram ಗ್ರೂಪ್ಗಳು ಹಾಗೂ “ಅತಿ ಹೆಚ್ಚು ಲಾಭ ” ಎಂಬ ಸುಳ್ಳು ಭರವಸೆಗಳ ಮೂಲಕ ಜನರನ್ನು ಮೋಸಗೊಳಿಸುತ್ತಿದ್ದಾರೆ.
ಆರಂಭದಲ್ಲಿ ಸಣ್ಣ ಪ್ರಮಾಣದ ಲಾಭ ನೀಡಿ ಹಾಗೂ ನಕಲಿ ಲಾಭದ ವಿವರಗಳನ್ನು ತೋರಿಸಿ ನಿಮ್ಮ ನಂಬಿಕೆಯನ್ನು ಗಳಿಸುತ್ತಾರೆ. ನಂತರ ನಕಲಿ ಪಾವತಿ ಸ್ಕ್ರೀನ್ಶಾಟ್ಗಳು, ನಕಲಿ ಲಾಭ ವರ್ಗಾವಣೆ ಚಿತ್ರಗಳನ್ನು ಕಳುಹಿಸಿ “ಹೆಚ್ಚಿನ ಲಾಭ” ಅಥವಾ “ಹಣ ವಾಪಸ್ ಪಡೆಯಲು ಶುಲ್ಕ” ಹೆಸರಿನಲ್ಲಿ ಮತ್ತಷ್ಟು ಹಣ ಕೇಳಿ ವಂಚಿಸುತ್ತಾರೆ.
🔐 ಸುರಕ್ಷಿತವಾಗಿರಿ:
• ಖಚಿತ ಲಾಭದ ಭರವಸೆಗಳನ್ನು ನಂಬಬೇಡಿ
• ಅಪರಿಚಿತ ಆನ್ಲೈನ್ ಟ್ರೇಡಿಂಗ್ ಸಲಹೆಗಾರರ ಬಗ್ಗೆ ಎಚ್ಚರಿಕೆಯಿಂದಿರಿ
• ಅಧಿಕೃತ ಮತ್ತು ವಿಶ್ವಾಸಾರ್ಹ ಮೂಲಗಳ ಮೂಲಕ ಮಾತ್ರ ಹೂಡಿಕೆ ಮಾಡಿ
ನೀವು ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 📞 1930 ಗೆ ಕರೆ ಮಾಡಿ ಅಥವಾ National Cyber Crime Portal ನಲ್ಲಿ ದೂರು ದಾಖಲಿಸಿ.
@DgpKarnataka@BlrCityPolice@jt_cpeastbcp
#CyberCrime #InvestmentFraud #TradingScam #CyberSafety #OnlineFraud #StayAlert #CyberAwareness #SouthEastDivision
👮♀️ “ಮಹಿಳೆಯರು ಮತ್ತು ಮಕ್ಕಳ ಭದ್ರತೆ ನಮ್ಮೆಲ್ಲರ ಹೊಣೆಗಾರಿಕೆ; ಅವರ ಸುರಕ್ಷತೆ ಪೊಲೀಸ್ ಇಲಾಖೆಯ ಮೊದಲ ಆದ್ಯತೆ.”
ತುರ್ತು ಸಂದರ್ಭಗಳಲ್ಲಿ ಅಥವಾ ಅನುಮಾನಾಸ್ಪದ ಪರಿಸ್ಥಿತಿಗಳಲ್ಲಿ ತಕ್ಷಣ ನೆರವು ಪಡೆಯಲು 112 ತುರ್ತು ಸಹಾಯವಾಣಿ, KSP AppನSOS ಸೌಲಭ್ಯ, ಹಾಗೂ ನಗರದಲ್ಲಿರುವ Safety Island ಕೇಂದ್ರಗಳನ್ನು ಬಳಸಿಕೊಳ್ಳಿ. 🚨
💙 ಬೆಂಗಳೂರು ನಗರ ಪೊಲೀಸ್ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ, ಗೌರವ ಹಾಗೂ ಆತ್ಮವಿಶ್ವಾಸವನ್ನು ಕಾಪಾಡಲು ಸದಾ ನಿಮ್ಮೊಂದಿಗಿದೆ.
👮♀️ “The safety of women and children is everyone’s responsibility; ensuring their security is the highest priority of the Police Department.”
In case of emergencies or suspicious situations, immediately seek help through the 112 Emergency Helpline, the SOS feature in the KSP App, and the Safety Island centersestablished across the city. 🚨
💙 Bengaluru City Police is always committed to protecting the safety, dignity, and confidence of women and children.
@DgpKarnataka@BlrCityPolice@jt_cpeastbcp #WomenSafety #ChildSafety #StaySafe #SafetyFirst #Emergency112 #KSPSOS #SafetyIsland #SafeBengaluru #DCPSouthEastDivision
🚨 Fake Job Consultancy Scam Alert 🚨
ಉದ್ಯೋಗದ ಆಸೆಯಲ್ಲಿ ಅನೇಕರು ನಕಲಿ Job Consultancy ಕಚೇರಿಗಳ ಮೋಸಕ್ಕೆ ಒಳಗಾಗುತ್ತಿದ್ದಾರೆ. “100% Job Guarantee”, “ವಿದೇಶಿ ಉದ್ಯೋಗ”, “ತಕ್ಷಣ ನೇಮಕಾತಿ” ಎಂಬ ಆಮಿಷಗಳನ್ನು ನಂಬಿ ಹಣ ಪಾವತಿಸುವ ಮೊದಲು ಎಚ್ಚರಿಕೆಯಿಂದಿರಿ. ⚠️
💡 ಸುರಕ್ಷಿತವಾಗಿರಿ:
• ಯಾವುದೇ Consultancy ಸಂಸ್ಥೆಯ ದಾಖಲೆಗಳು ಮತ್ತು ಮಾನ್ಯತೆ ಪರಿಶೀಲಿಸಿ
• ಮುಂಗಡ ಹಣ, Registration Fee ಅಥವಾ Processing Fee ಕೇಳಿದರೆ ಎಚ್ಚರಿಕೆ ವಹಿಸಿ
• ಖಚಿತ ಉದ್ಯೋಗದ ಹೆಸರಿನಲ್ಲಿ ಒತ್ತಡ ಹಾಕುವವರನ್ನು ನಂಬಬೇಡಿ
• ಅಧಿಕೃತ ಕಂಪನಿ ವೆಬ್ಸೈಟ್ ಮತ್ತು ಇಮೇಲ್ ಪರಿಶೀಲಿಸಿ
• ಅನುಮಾನಾಸ್ಪದ ಕಚೇರಿ ಅಥವಾ ವ್ಯಕ್ತಿಗಳ ಬಗ್ಗೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ
ಮೋಸಕ್ಕೆ ಒಳಗಾದರೆ ಅಥವಾ ಅನುಮಾನ ಕಂಡುಬಂದರೆ:
📞 Cyber Helpline: 1930
📍 ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ @DgpKarnataka@BlrCityPolice@jt_cpeastbcp
#FakeJobScam #JobFraudAlert #CyberSafety #StayAlert #JobConsultancyScam
ಆಗ್ನೇಯ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿಯ ಧಾರ್ಮಿಕ ಮುಖಂಡರೊಂದಿಗೆ ಶಾಂತಿ ಪಾಲನಾ ಸಭೆಯನ್ನು ನಡೆಸಲಾಯಿತು. ಮುಂಬರುವ #ಬಕ್ರೀದ್ ಹಬ್ಬವನ್ನು ಶಾಂತಿ, ಸೌಹಾರ್ದತೆ, ಮತ್ತು ಪರಸ್ಪರ ಗೌರವದೊಂದಿಗೆ ಆಚರಿಸುವಂತೆ ಮನವಿ ಮಾಡಲಾಯಿತು.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ವದಂತಿಗಳು ಹಾಗೂ ಪ್ರಚೋದನಕಾರಿ ಸಂದೇಶಗಳನ್ನು ಹಂಚಿಕೊಳ್ಳದಂತೆ ಜಾಗೃತಿ ಮೂಡಿಸಿ, ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಜೊತೆಗೆ ಪೊಲೀಸ್ ಇಲಾಖೆಯಿಂದ ಸೂಚಿಸಲಾದ ಭದ್ರತಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸಲಹೆ ಹಾಗೂ ಸೂಚನೆಗಳನ್ನು ನೀಡಲಾಯಿತು.
ಸಾರ್ವಜನಿಕರ ಸುರಕ್ಷತೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸದಾ ಬದ್ಧವಾಗಿದೆ. @DgpKarnataka@BlrCityPolice@jt_cpeastbcp #Bakrid2026 #PeaceMeeting #PublicSafety #ResponsibleSocialMedia #SouthEastDivision
ಮೇ 2026ರ ಮಾಸಿಕ #ಜನಸಂಪರ್ಕ ಸಭೆಗಳು ಆಗ್ನೇಯ ವಿಭಾಗದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆಯೋಜಿಸಿದ್ದು, ಸಾರ್ವಜನಿಕರು ನೇರವಾಗಿ ಭಾಗವಹಿಸಿ ತಮ್ಮ ಸಮಸ್ಯೆಗಳು, ಸಲಹೆಗಳು ಹಾಗೂ ಅಹವಾಲುಗಳನ್ನು ಹಂಚಿಕೊಂಡಿರುತ್ತಾರೆ.
ಪೊಲೀಸ್ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಮಾರ್ಗಗಳನ್ನು ಚರ್ಚಿಸಿ ತ್ವರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿರುತ್ತಾರೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ನಮ್ಮ ಬದ್ಧತೆ ಮುಂದುವರೆಸಲಾಗುತ್ತದೆ.
@DgpKarnataka@BlrCityPolice@jt_cpeastbcp
#JanSamparkaSabhe #CommunityPolicing #PublicGrievance #PublicSafety #dcpsoutheast
ಆಗ್ನೇಯ ವಿಭಾಗದ ರಾಣಿ ಚೆನ್ನಮ್ಮ ಪಡೆಯವರು ಪೌರ ಕಾರ್ಮಿಕರನ್ನು ಭೇಟಿ ಮಾಡಿ, ತುರ್ತು ಸಂದರ್ಭಗಳಲ್ಲಿ ಉಪಯೋಗಿಸಬಹುದಾದ ಪೊಲೀಸ್ ಇಲಾಖೆಯ KSP App, Dial 112 ಹಾಗೂ 1930 ಸಹಾಯವಾಣಿ ಸಂಖ್ಯೆಗಳ ಬಳಕೆಯ ಕುರಿತು ಜಾಗೃತಿ ಮೂಡಿಸಿದರು.
ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ಇರುವ ಕಾನೂನುಗಳ ಬಗ್ಗೆ ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ ಅರಿವು ಮೂಡಿಸಿ, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಎಲ್ಲಾ ಸಾರ್ವಜನಿಕರ ಸಹಕಾರ ಅತ್ಯಗತ್ಯ. @DgpKarnataka@BlrCityPolice@jt_cpeastbcp
#Awareness #KSPApp #Dial112 #CyberSafety #POCSO #ChildSafety #PublicSafety #SouthEastDivision
🎓⚠️ “Congratulations! You’ve been selected for an International Scholarship” — ನಕಲಿ ವಿದ್ಯಾರ್ಥಿವೇತನದ ವಂಚನೆಗೊಳಗಾಗಬೇಡಿ.
ಸೈಬರ್ ಅಪರಾಧಿಗಳು ನಕಲಿ ಇಮೇಲ್ಗಳು, ಕೃತಕ ವಿಶ್ವವಿದ್ಯಾಲಯ ವೆಬ್ಸೈಟ್ಗಳು ಹಾಗೂ ನಿಜವಾದಂತೆಯೇ ಕಾಣುವ ಪರಿಶೀಲನಾ ಕರೆಗಳ ಮೂಲಕ ವಿದ್ಯಾರ್ಥಿಗಳನ್ನು ಗುರಿಯಾಗಿಸುತ್ತಿದ್ದಾರೆ. ಒಮ್ಮೆ ನಂಬಿಕೆ ಗಳಿಸಿದ ನಂತರ, OTP, ಬ್ಯಾಂಕ್ ವಿವರಗಳು ಅಥವಾ “ಪ್ರೊಸೆಸಿಂಗ್ ಶುಲ್ಕ” ಹೆಸರಿನಲ್ಲಿ ಹಣವನ್ನು ಕೇಳಲಾಗುತ್ತದೆ.
💡 ಎಚ್ಚರಿಕೆಯಿಂದಿರಿ:
• ವಿದ್ಯಾರ್ಥಿವೇತನದ ಮಾಹಿತಿಯನ್ನು ಅಧಿಕೃತ ವಿಶ್ವವಿದ್ಯಾಲಯ ವೆಬ್ಸೈಟ್ಗಳಲ್ಲೇ ಪರಿಶೀಲಿಸಿ
• ಅಪರಿಚಿತ ವ್ಯಕ್ತಿಗಳೊಂದಿಗೆ OTP, ಬ್ಯಾಂಕ್ ವಿವರಗಳು ಅಥವಾ ವೈಯಕ್ತಿಕ ದಾಖಲೆಗಳನ್ನು ಹಂಚಿಕೊಳ್ಳಬೇಡಿ
• ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡುವುದನ್ನು ಅಥವಾ ಅಟ್ಯಾಚ್ಮೆಂಟ್ಗಳನ್ನು ಡೌನ್ಲೋಡ್ ಮಾಡುವುದನ್ನು ತಪ್ಪಿಸಿ
• ಪ್ರತಿಕ್ರಿಯಿಸುವ ಮೊದಲು ಇಮೇಲ್ಗಳು ಮತ್ತು ಕರೆ ಮಾಡಿದವರ ಗುರುತನ್ನು ಮರುಪರಿಶೀಲಿಸಿ.
ಸೈಬರ್ ವಂಚನೆ ಅನುಮಾನಿಸಿದರೆ ತಕ್ಷಣ 1930 ಗೆ ಕರೆ ಮಾಡಿ ಅಥವಾ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ. @DgpKarnataka@BlrCityPolice@jt_cpeastbcp
#CyberSafety #ScholarshipScam #StayAlert #StudentSafety #CyberCrime #DigitalSafety #SouthEastDivision
#ಮೇ21 ರಂದು ಭಯೋತ್ಪಾದನಾ ವಿರೋಧಿ ದಿನದ ಪ್ರಯುಕ್ತ ಆಗ್ನೇಯ ವಿಭಾಗದ ಕಛೇರಿ ಹಾಗೂ ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಯೋತ್ಪಾದನೆ ಹಾಗೂ ಹಿಂಸಾಚಾರವನ್ನು ನಮ್ಮೆಲ್ಲ ಶಕ್ತಿ ಸಾಮರ್ಥ್ಯದಿಂದ ಎದುರಿಸುವ ಜೊತೆಗೆ, ನಮ್ಮ ಸಹಬಾಂಧವರಲ್ಲಿ ಶಾಂತಿ, ಸಾಮಾಜಿಕ ಸೌಹಾರ್ದತೆ ಮತ್ತು ಪರಸ್ಪರ ಅರಿವು ಮೂಡಿಸಲು ಹಾಗೂ ಉತ್ತೇಜಿಸಲು, ಮಾನವ ಜೀವ ಮತ್ತು ಮೌಲ್ಯಗಳಿಗೆ ಬೆದರಿಕೆ ಒಡ್ಡುತ್ತಿರುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಡಲು ನಾವು ಪಣ ತೊಡುತ್ತೇವೆ ಎಂಬ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.
@DgpKarnataka@BlrCityPolice@jt_cpeastbcp #AntiTerrorismDay
#May21 #SayNoToTerrorism #PeaceAndUnity #AntiViolence #NationalIntegrity #SouthEastDivision
ಈ ದಿನ ಭಯೋತ್ಪಾದನಾ ವಿರೋದಿ ದಿನದ ಪ್ರಯುಕ್ತ
ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ
ಪ್ರಮಾಣ ವಚನ ಸ್ವೀಕರಿಸಲಾಯಿತು.
ದೇಶದ ಏಕತೆ, ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಸಂಕಲ್ಪ ಕೈಗೊಳ್ಳಲಾಯಿತು.@BlrCityPolice@DCPSEBCP@acpmicolayout