ನೆಲದ ಮೇಲೆ ಗುರುತಾಗಿ ಇಡಲಾಗಿದ್ದ ಭಾರತೀಯ ಧ್ವಜದ ಚೀಟಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗೌರವದಿಂದ ಎತ್ತಿಕೊಂಡ ಕ್ಷಣಗಳು
ಜಗತ್ತಿಗೆ ಅದು ಕೇವಲ ಒಂದು ಧ್ವಜವಾಗಿರಬಹುದು...ಭಾರತಕ್ಕೆ ಅದು ಸಾಕ್ಷಾತ್ ಭಾರತ ಮಾತೆಯೇ ಆಗಿದೆ.
ನಮ್ಮ ಹೆಮ್ಮೇಯ ಪ್ರಧಾನಿಗಳಿಗೆ ತಾಯಿಯ ಗೌರವವೇ ಎಲ್ಲಕ್ಕಿಂತ ಮಿಗಿಲು.
ಭಾರತ ಮಾತಾ ಕೀ ಜೈ
ಕನ್ನಡನಾಡಿನ ಅಪ್ಪು, ತಮ್ಮ ಅಪೂರ್ವ ಅಭಿನಯ, ಸರಳತೆ, ಮಾನವೀಯತೆ ಹಾಗೂ ಸಮಾಜಮುಖಿ ಸೇವೆಯಿಂದ ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಪವರ್ ಸ್ಟಾರ್, ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು.
ಬಾಲನಟನಾಗಿ ಕಲಾ ಪಯಣ ಆರಂಭಿಸಿ, ನಾಯಕ ನಟನಾಗಿ ಕನ್ನಡ ಚಿತ್ರರಂಗದ ಹೆಮ್ಮೆಯಾಗಿ ಬೆಳೆದ ಅವರು, ತಮ್ಮ ನಟನೆ ಮಾತ್ರವಲ್ಲದೆ ದಾನ, ಶಿಕ್ಷಣ, ಆರೋಗ್ಯ ಹಾಗೂ ಸಮಾಜಸೇವೆಯ ಮೂಲಕವೂ ಅನೇಕರ ಬದುಕಿಗೆ ಬೆಳಕಾದವರು.
25 Years of Relentless Service.
25 Years of Nation First. Citizen First.
25 Years of Unstoppable Leadership.
Celebrating the remarkable journey of PM Shri @narendramodi ji — a journey defined by dedication, determination and an unwavering commitment to Bharat.
The mission continues. The resolve remains unshaken.
#25YearsOfSeva
ಅಹಿಂದ ಹೆಸರಿನಲ್ಲಿ ರಾಜಕಾರಣ ಮಾಡುವ ಕಾಂಗ್ರೆಸ್ ತನ್ನ ಹಳೆಯ ಚಾಳಿ ಇನ್ನೂ ಬಿಟ್ಟಿಲ್ಲ. ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಹಿರಿಯ ದಲಿತ ಮುಖಂಡರಾದ ಡಾ ಜಿ ಪರಮೇಶ್ವರ್ @DrParameshwara ಅವರನ್ನು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ @DKShivakumar ಅವರು ನಡೆಸಿಕೊಳ್ಳುವ ರೀತಿ ಅತ್ಯಂತ ಬೇಸರದ ಸಂಗತಿ.
ಅಂದು ಮಾಜಿ ಮುಖ್ಯಮಂತ್ರಿ ಶ್ರೀ ಡಿ ದೇವರಾಜ ಅರಸು ಅವರ ಪುಣ್ಯಸ್ಮರಣೆಯಂದು ರಾಜ್ಯ ಸರ್ಕಾರ ಉಪಮುಖ್ಯಮಂತ್ರಿಗಳನ್ನು ಹೊರೆತುಪಡಿಸಿ ಜಾಹಿರಾತು ಪ್ರಕಟಿಸಿತು. ಇಂದು ಹಸಿರು ಬೆಂಗಳೂರಿಗಾಗಿ ಕೊಟ್ಟ ಜಾಹಿರಾತಿನಲ್ಲಿ ಉಪಮುಖ್ಯಮಂತ್ರಿಗಳೇ ಮಾಯವಾಗಿದ್ದಾರೆ.
ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣಬೈರೇಗೌಡರು @krishnabgowda ಇನ್ನೂ ಅಧಿಕಾರವನ್ನು ಸ್ವೀಕರಿಸದೇ ಮುನಿಸನಲ್ಲಿದ್ದಾರೆ. ಬೆಂಗಳೂರಿಗೆ ಸಚಿವರೇ ಇಲ್ಲದೇ ಇದ್ದರೂ, ಅವರ ಫೋಟೋ ಸಮೇತ ಬೆಂಗಳೂರು ಅಭಿವೃದ್ಧಿ ಸಚಿವರು ಎಂದು ಜಾಹಿರಾತು ನೀಡಿ, ರಾಜ್ಯದ ಜನರನ್ನು ಒಂದೆಡೆ ದಿಕ್ಕುತಪ್ಪಿಸುತ್ತ, ಇನ್ನೊಂದೆಡೆ ಹಿಂದುಳಿದ ವರ್ಗ ಹಾಗೂ ದಲಿತ ಮುಖಂಡರು, ಉಪಮುಖ್ಯಮಂತ್ರಿಗಳನ್ನು ಕಡೆಗಣಿಸತ್ತಿರುವುದು ಸರ್ಕಾರದ ಉದ್ದೇಶ ಸ್ಪಷ್ಟವಾಗಿ ಕಾಣುತ್ತಿದೆ.
ಅಂದು ಬಾಬಾಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ, ಶ್ರೀ ಬಾಬು ಜಗಜೀವನ್ ರಾಮ್ ಅವರನ್ನು ಅವಗಣನೆ ಮಾಡಿದ್ದು, ಶ್ರೀ ಸೀತಾರಾಮ್ ಕೇಸರಿ ಅಧ್ಯಕ್ಷ ಸ್ಥಾನ ಕಸಿದಿದ್ದು, ಇಂದು ಉಪಮುಖ್ಯಮಂತ್ರಿ ಫೋಟೋ ಹಾಕದೇ ಇರುವುದು.. ಹಿರಿಯರನ್ನು ಕಡೆಗಣಿಸುವುದೇ ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಹಾಗೂ ಇತಿಹಾಸ.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಿಎಂ ಇದ್ದಾಗ ಉಪಮುಖ್ಯಮಂತ್ರಿ ಫೋಟೋ ಕಡ್ಡಾಯ ಈಗ ಪರಮೇಶ್ವರ್ ಫೋಟೋ ಇಲ್ಲ!
#CongressFailsKarnataka
Heartiest birthday wishes to senior @BJP4India leader and Hon’ble Union Minister for Road Transport and Highways, Shri @nitin_gadkari Ji.
Wishing him good health, happiness, and many more years of dedicated service to the nation.
Held a meeting with the Secretary and senior official, @fooddeptgoi at Krishi Bhavan to review regulations of the warehousing sector. Discussed proposed changes to the Warehousing Development and Regulatory framework, keeping the interests of farmers at the centre. These reforms aim to strengthen storage infrastructure, improve efficiency and transparency and further ease doing business in the sector.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ (SIR) ರಾಜ್ಯ ಸಂಚಾಲಕರಾಗಿ, ಕರ್ನಾಟಕ ಬಿಜೆಪಿಯ ರಾಜ್ಯ ಮಾಜಿ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯರಾಗಿ ಸಫಾಯಿ ಕರ್ಮಚಾರಿಗಳ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಿದ್ದ ಶ್ರೀ ಜಗದೀಶ್ ಹಿರೇಮನಿ ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ಆಘಾತವಾಗಿದೆ.
ವಿದ್ಯಾರ್ಥಿ ಪರಿಷತ್, ಸಂಘ ಪರಿವಾರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತ, ಸಾಮಾಜಿಕ ನ್ಯಾಯದ ಪರವಾಗಿದ್ದ ಅವರ ಧ್ವನಿ ಇಂದು ಮೌನವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಮತ್ತು ಅವರ ಕುಟುಂಬ ವರ್ಗದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ.
I apologise to all mothers & sisters: PM Shri @narendramodi ji
ನಾನು ದೇಶದ ಎಲ್ಲ ತಾಯಂದಿರು ಮತ್ತು ಸಹೋದರಿಯರಲ್ಲಿ ಕ್ಷಮೆಯಾಚಿಸುತ್ತೇನೆ: ಪ್ರಧಾನ ಮಂತ್ರಿ ಶ್ರೀ @narendramodi
ಬೆಂಗಳೂರಿನಿಂದ ಮುಂಬೈಗೆ ನೂತನ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಈ ರೈಲು ಬೆಂಗಳೂರಿನಿಂದ ಕಲ್ಯಾಣ ಕರ್ನಾಟಕದ ಮಾರ್ಗವಾಗಿ ಸಂಚರಿಸಲು ನನ್ನ ಮನವಿಗೆ ಸ್ಪಂದಿಸಿ, ನೂತನ ವಂದೇ ಭಾರತ್ ಸ್ಲೀಪರ್ ರೈಲು ಕೆ ಎಸ್ ಆರ್ ಬೆಂಗಳೂರು ನಿಲ್ದಾಣದಿಂದ ಕಲ್ಯಾಣ ಕರ್ನಾಟಕದ ಮೂಲಕ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಗೆ ಸಂಚರಿಸಲಿದೆ .
ಹಾಗೂ, ಬೆಂಗಳೂರಿನಿಂದ ಕರ್ನಾಟಕದ ಮಧ್ಯಭಾಗವಾದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ವಾಣಿಜ್ಯ ನಗರಿ ಮುಂಬೈಗೆ ತೆರಳಲು ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲಿಗೆ ನನ್ನ ಮನವಿಯ ಮೇರೆಗೆ ಈಗಾಗಲೇ ಅನುಮೋದನೆ ನೀಡಲಾಗಿತ್ತು. ಈ ಸೂಪರ್ ಫಾಸ್ಟ್ ರೈಲನ್ನು ಶೀಘ್ರವೇ ಪ್ರಾರಂಭಿಸುವುದಾಗಿ, ತದನಂತರದ ದಿನಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲಾಗಿ ಬದಲಾಯಿಸುವಂತೆ ನನ್ನ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ಹೇಳಿರುವ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ @AshwiniVaishnaw ಅವರಿಗೆ ರಾಜ್ಯದ ಪರವಾಗಿ ಧನ್ಯವಾದಗಳು.
ರಾಜ್ಯದ ಅಭಿವೃದ್ದಿಯ ಜೊತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತಷ್ಟು ಹೆಚ್ಚಿನ ಮಹತ್ವ ಹಾಗೂ ರಾಜ್ಯದಲ್ಲಿನ ವಾಣಿಜ್ಯ ಚಟುವಟಿಕೆಗಳನ್ನು ಹೆಚ್ಚಿಸುವುದರ ಜೊತೆಗೆ ಉತ್ತಮ ಸಂಚಾರ ಸೌಲಭ್ಯವನ್ನು ಈ ನೂತನ ವಂದೇ ಭಾರತ್ ರೈಲು ಬಲವರ್ಧಿಸಲಿದೆ.
ನೂತನ ವಂದೇ ಭಾರತ್ ಸ್ಲೀಪರ್ ರೈಲನ್ನು ಐಟಿ ಸಿಟಿ ಬೆಂಗಳೂರು - ವಾಣಿಜ್ಯ ನಗರಿ ಮುಂಬೈ ಮಧ್ಯೆ ಸಂಚಾರಕ್ಕೆ ಅನುವು ಮಾಡಿಕೊಟ್ಟ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ @narendramodi, ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ @VSOMANNA_BJP ಅವರಿಗೆ ಅನಂತ ಧನ್ಯವಾದಗಳು.
#VandeBharat
PM @narendramodi visited Adampur Air Base and received a detailed briefing from Indian Air Force personnel.
He also interacted with the brave air warriors, acknowledging their unwavering dedication to national security.
#IndianAirForce#AdampurAirBase