ಓ ದೇವರೆ ನೀನೆಷ್ಟು ಕ್ರೂರಿ ಆ ಕಾಮಾಂದರು ಮಗುವಿನ ಮೇಲೆ ಪಾಪ ಕೃತ್ಯ ಎಸಗುವಾಗ ನೀ ನಿನ್ನ ಶಕ್ತಿಯನ್ನು ಮರೆತೆಯಾ...ಆಕ್ಷಣದಲ್ಲಿಯೇ ಆ ಪಾಪಿಗಳನ್ನ ಬೆಂಕಿಯಲ್ಲಿ ಸುಟ್ಟು ಬಿಡಬಾರದಿತ್ತೇ... ಬೇರೆ ಬೇರೆ ಧರ್ಮದ ಬೇರೆ ಬೇರೆ ಹೆಸರಲ್ಲಿರುವ ನಿನಗೆ ಆ ಶಕ್ತಿ ಇಲ್ಲವೇ... ನಿನ್ನಿಂದಾ ಸಾಧ್ಯವಾದರೆ ಆ ಮುಗ್ಧ ಮಗುವಿನ ಆತ್ಮಕ್ಕೆ ಶಾಂತಿ ನೀಡು...
ಇಡಿಯ ಪ್ರಪಂಚದಲ್ಲಿ ಯಾವಾಗ-ಯಾವಾಗಧರ್ಮ ಮಲೀನವಾಗಿ ಅಧರ್ಮದ ಮುಂದೆಸೋಲೊಪ್ಪಿಕೊಂಡು, ತಲೆ ಕೆಳಗಾಗಿ ನಿಲ್ಲುವಪ್ರಸಂಗ ಬರುತ್ತದೋ, ಆಗ ನಾನು ಧರೆಗಿಳಿದುಬರುತ್ತೇನೆ ಎನ್ನುತ್ತಾನೆ ಕೃಷ್ಣ. ಇಲ್ಲಿ ಧರ್ಮಸೋಲುವುದು ಅಂದರೆ ಅದು ಒಂದುಮನೆಗೆ- ಒಂದು ದೇಶಕ್ಕೆ ಸಂಬಂಧಪಟ್ಟಿದ್ದಲ್ಲ. ಇಡೀ ವಿಶ್ವದಲ್ಲೇ ಧರ್ಮಕ್ಕೆ ನೆಲೆ ಸಿಗದ ಪರಿಸ್ಥಿತಿ.