#Nifty50
NIFTY 50 ಸೂಚ್ಯಂಕದ ದೀರ್ಘಕಾಲದ (1991 ರಿಂದ 2026 ರವರೆಗೆ) ಐತಿಹಾಸಿಕ ಬೆಳವಣಿಗೆಯನ್ನು ತೋರಿಸುವ ಚಾರ್ಟ್ ಆಗಿದೆ. ಇದರ ಮುಖ್ಯಾಂಶಗಳು ಇಲ್ಲಿವೆ-
>ಮಾರುಕಟ್ಟೆಯ ಏರಿಳಿತ (Market Cycles)-ಕಳೆದ 35 ವರ್ಷಗಳಲ್ಲಿ ನಿಫ್ಟಿ ಹೇಗೆ ಸ್ಥಿರವಾಗಿ ಬೆಳೆದಿದೆ ಎಂಬುದನ್ನು ಇದು ತೋರಿಸುತ್ತದೆ. ಆರಂಭದಲ್ಲಿ ನೂರರಲ್ಲಿದ್ದ ಸೂಚ್ಯಂಕವು ಈಗ 26,000 ಗಡಿಯ ಸಮೀಪದಲ್ಲಿದೆ.
>ಪ್ರಮುಖ ಕುಸಿತಗಳು (Major Crashes)- ಚಾರ್ಟ್ನಲ್ಲಿ ನೀಲಿ ಬಣ್ಣದ ಬಾಕ್ಸ್ಗಳು ಮಾರುಕಟ್ಟೆಯಲ್ಲಿ ಸಂಭವಿಸಿದ ದೊಡ್ಡ ಕುಸಿತಗಳನ್ನು ಸೂಚಿಸುತ್ತವೆ.
1. 1992: ಹರ್ಷದ್ ಮೆಹ್ತಾ ಹಗರಣದ ಸಮಯದ ಕುಸಿತ (~53%).
2. 2000-2001: ಡಾಟ್-ಕಾಮ್Bubble (~52%).
3. 2008: ಜಾಗತಿಕ ಆರ್ಥಿಕ ಹಿಂಜರಿತ (ಲಿಮನ್ ಬ್ರದರ್ಸ್ ಬಿಕ್ಕಟ್ಟು - ಸುಮಾರು 64% ಕುಸಿತ).
4. 2020: ಕೋವಿಡ್-19 ಸಾಂಕ್ರಾಮಿಕದ ಆರಂಭದ ಕುಸಿತ (~39%).
ದೀರ್ಘಕಾಲದ ಪ್ರವೃತ್ತಿ (Long-term Trend): ಮಾರುಕಟ್ಟೆಯು ಕಾಲಕಾಲಕ್ಕೆ ದೊಡ್ಡ ಕುಸಿತಗಳನ್ನು ಕಂಡರೂ, ಅಂತಿಮವಾಗಿ ಚೇತರಿಸಿಕೊಂಡು ಹೊಸ ಎತ್ತರಕ್ಕೆ (Higher Highs) ತಲುಪಿರುವುದನ್ನು ನಾವು ನೋಡಬಹುದು.
ಷೇರು ಮಾರುಕಟ್ಟೆಯಲ್ಲಿ ಕುಸಿತಗಳು ಸಾಮಾನ್ಯ, ಆದರೆ ದೀರ್ಘಕಾಲದವರೆಗೆ ಹೂಡಿಕೆ ಮಾಡಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬುದು ಇದರ ಸಾರಾಂಶ.
EV ಅಂತ ಬಂದ್ರೆ ಎಲ್ಲರಿಗೂ ಗೊತ್ತಿರುವುದು ಎಲೆಕ್ಟ್ರಿಕ್ ಬೈಕ್, ಕಾರು, ಬಸ್..
ಆದರೆ ಎಲೆಕ್ಟ್ರಿಕ್ ಟ್ರಾಕ್ಟರ್ 🚜 ಬಗ್ಗೆ ಗೊತ್ತಾ?
ಇಡೀ ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಎಲೆಕ್ಟ್ರಿಕ್ ಟ್ರಾಕ್ಟರ್ ತಯಾರಿಕೆ ಮಾಡಿರುವ ಹೆಗ್ಗಳಿಕೆ ನಮ್ಮ ಕನ್ನಡಿಗರದ್ದು.
ವೋಲ್ವೋ ಕಂಪನಿಯ ₹1 ಕೋಟಿ ಪ್ಯಾಕೇಜ್ ಕೆಲಸ ಬಿಟ್ಟು, ನಮ್ಮ ರೈತರಿಗಾಗಿ 'ಮೂನ್ರೈಡರ್' (Moonrider) ಎನ್ನುವ ವಿಶ್ವದ ಮೊದಲ ಅಗ್ರಿ-ಫೋಕಸ್ಡ್ ಎಲೆಕ್ಟ್ರಿಕ್ ಟ್ರಾಕ್ಟರ್ ತಯಾರಿಸಿದ್ದಾರೆ ಅನೂಪ್ ಶ್ರೀಕಂಠಸ್ವಾಮಿ ಅವರು.
ಇವರ ಈ ಜರ್ನಿ ಪ್ರತಿಯೊಬ್ಬ ಕನ್ನಡಿಗನೂ ಕೇಳಲೇಬೇಕಾದ ಕಥೆ. ವಿಶ್ವದ ಮೊದಲ ಆಯಿಲ್-ಕೂಲ್ಡ್ ಬ್ಯಾಟರಿ ಸಿಸ್ಟಮ್ ಇರೋ ಟ್ರಾಕ್ಟರ್ ಈಗ ನಮ್ಮ ಭಾರತದ ಹೊಲಗಳಲ್ಲಿ ಓಡಲು ಸಜ್ಜಾಗಿದೆ! 🇮🇳
>ವೋಲ್ವೋ ಸಂಸ್ಥೆಯಲ್ಲಿ ದಶಕಗಳ ಕಾಲ ಅನುಭವ ಪಡೆದ ಅನೂಪ್ ಶ್ರೀಕಂಠಸ್ವಾಮಿ ಅವರು, ರೈತರ ಅತಿ ದೊಡ್ಡ ಸಮಸ್ಯೆ 'ಟ್ರಾಕ್ಟರ್ ನಿರ್ವಹಣೆ'ಗೆ ಎಲೆಕ್ಟ್ರಿಕ್ ಪರಿಹಾರ ಕಂಡುಕೊಂಡಿದ್ದಾರೆ.
>ಹಣಕಾಸಿನ ಸವಾಲು, ಹಾರ್ಡ್ವೇರ್ ತಯಾರಿ, ಮತ್ತು ರೈತರ ನಂಬಿಕೆ ಗಳಿಸುವುದು ಹೇಗೆ? ಮುಂಬರುವ ಕೃಷಿ ತಂತ್ರಜ್ಞಾನದ ಅಲೆ ಹೇಗಿರಲಿದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
> ಒಂದು ಟ್ರಾಕ್ಟರ್ ಹೇಗೆ ಕೆಲಸ ಮಾಡುತ್ತೆ?
>ಡೀಸೆಲ್ ಬಳಕೆ ಮಾಡದೆ ಕೃಷಿ ಸಾಧ್ಯವೇ?
>ಎಲೆಕ್ಟ್ರಿಕ್ ಟ್ರಾಕ್ಟರ್ಗಳ ಶಕ್ತಿ ಹೇಗಿರುತ್ತೆ?
>ಹಳ್ಳಿಗಳಲ್ಲಿ ಚಾರ್ಜಿಂಗ್ ಸಮಸ್ಯೆ ನೀಗಿಸುವುದು ಹೇಗೆ?
ಹೀಗೆ ಅನೇಕ ವಿಚಾರಗಳನ್ನು @mundhebanni ಮುಂದೆಬನ್ನಿ Podcast ಅಲ್ಲಿ ಹಂಚಿಕೊಂಡಿದ್ದಾರೆ.
ಉದ್ಯಮಶೀಲರಾಗಲು ಬಯಸುವ ಪ್ರತಿಯೊಬ್ಬರಿಗೂ ಈ ಎಪಿಸೋಡ್ ಒಂದು ಗೈಡ್.
https://t.co/yq55dArSWl
ನಮ್ಮ ನೆಲದ ಸಾಧಕರನ್ನು ಹುಡುಕಿ ಅವರ ಉದ್ಯಮದ ಪಯಣವನ್ನು ಇಡೀ ಕರ್ನಾಟಕದ ಜನತೆಗೆ ತಿಳಿಸುವ ಒಂದು ಕೆಲಸ ಸದ್ದಿಲ್ಲದೆ ನಡೀತಾ ಇದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಉದ್ಯಮಿಗಳು ಹೊರಹೊಮ್ಮಲು ಇದು ದಾರಿ ದೀಪವಾಗಲಿ.
ಇಂತಹ ಪ್ರಯತ್ನಗಳಿಗೆ ನಮ್ಮ ಕೈ ಜೋಡಿಸೋಣ.
@vasantshetty81@kodlady
Like, Share, Retweet ❤️💚
ಬಹಳಷ್ಟು ಸಲ ನಾವೇ ಖುದ್ದಾಗಿ ಹಾಕೋ ಅರೋಗ್ಯ ವಿಮೆ ಕ್ಲೇಮ್ ಗಳು ಇನ್ಶೂರೆನ್ಸ್ ಕಂಪನಿ ಗಳಿಂದ ರಿಜೆಕ್ಟ್ ಆಗತ್ತೆ , ಯಾವೆಲ್ಲ ಕಾರಣಕ್ಕೆ ಮತ್ತೆ ಏನ್ ಮಾಡಬಹುದು ಅಂತ ಒಂದ್ ಪೋಸ್ಟ್ ಮಾಡ್ಬೇಕಾ ?
ಬೇಕು ಅನ್ನೋರು REPOST ಮಾಡಿ , 100 ರೀಪೋಸ್ಟ್ ಬಂದ್ರೆ ಖಂಡಿತ ಪೋಸ್ಟ್ ಹಾಕ್ತಿನಿ
100 🔁 ಮಾಡಿ
ಆರೋಗ್ಯ ವಿಮೆ ಬಗ್ಗೆ ಮತ್ತೊಂದು ಪೋಸ್ಟ್ ಕಾಮೆಂಟ್ ನಲ್ಲಿದೆ ಗಮನಿಸಿ
"Trading ಅಂದ್ರೆ ಬರಿ ಲಾಭವಲ್ಲ, ಇದು ನಷ್ಟವನ್ನು ನಿಯಂತ್ರಿಸುವ ಕಲೆ! 🛡️📊
Losses Make You Work Harder-
ಷೇರು ಮಾರುಕಟ್ಟೆಯಲ್ಲಿ ನೀವು ಯಾವುದಾದರೂ ಸ್ಟಾಕ್ ಅಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡಾಗ, ನೀವು ಕಳೆದುಕೊಂಡ ಅಸಲನ್ನು ಮತ್ತೆ ಪಡೆಯಲು (Break Even) ಅದಕ್ಕಿಂತ ಹೆಚ್ಚಿನ ಲಾಭವನ್ನು ಗಳಿಸಬೇಕಾಗುತ್ತದೆ. ನಷ್ಟಗಳು ಭೌತಿಕವಾಗಿ ಅಲ್ಲ, ಬದಲಾಗಿ ಗುಣಾಕಾರದ ರೂಪದಲ್ಲಿ (Geometrically) ನಿಮ್ಮ ವಿರುದ್ಧ ಕೆಲಸ ಮಾಡುತ್ತವೆ.
ಗಮನಿಸಬೇಕಾದ ಗಣಿತದ ಲೆಕ್ಕಾಚಾರ -
ದೊಡ್ಡ ನಷ್ಟದ ಹೊರೆ- ಒಂದು ಷೇರಿನ ಬೆಲೆ 50% ಕುಸಿದರೆ (ಉದಾಹರಣೆಗೆ ₹28 ರಿಂದ ₹14), ಅದು ಮತ್ತೆ ಮೊದಲಿನ ಸ್ಥಿತಿಗೆ (₹28) ಬರಲು 100% ಲಾಭ ಗಳಿಸಬೇಕಾಗುತ್ತದೆ.
ನಿಮ್ಮ ನಷ್ಟವನ್ನು ಕೇವಲ 10% ಕ್ಕೆ ಸೀಮಿತಗೊಳಿಸಿದರೆ, ಅದನ್ನು ಸರಿದೂಗಿಸಲು ಕೇವಲ 11% ಲಾಭ ಸಾಕು. ಅದೇ 5% ನಷ್ಟವಾದರೆ, ಕೇವಲ 5.26% ಲಾಭದಿಂದ ಚೇತರಿಸಿಕೊಳ್ಳಬಹುದು.
ಸ್ಟಾಕ್ ಮಾರ್ಕೆಟ್ ಅಲ್ಲಿ ಗಣಿತದ ಲೆಕ್ಕಾಚಾರ ನಿಮ್ಮನ್ನು ಮೂರ್ಖನನ್ನಾಗಿ ಮಾಡುತ್ತೆ.
ಲಾಭ ಹೇಗೆ ಬರುತ್ತೋ ಅದೇ ತರ loss ಕೂಡ ಆಗುತ್ತೆ.ಇದನ್ನು ಮೊದಲು ಅರ್ಥ ಮಾಡಿಕೊಳ್ಳಿ.
✅ಷೇರು ಮಾರುಕಟ್ಟೆ ಕಲಿಯುವ ಹಂಬಲವಿದೆಯೇ?
ಹೊಸಬರಿಗಾಗಿ ಸರಳವಾಗಿ ಅರ್ಥವಾಗುವಂತೆ ನಾನೇ ಒಂದು 'Stock Market Model Book' ಅನ್ನು PDF ರೂಪದಲ್ಲಿ ಸಿದ್ಧಪಡಿಸಿದ್ದೇನೆ.
ಇದು ನಿಮ್ಮ ಟ್ರೇಡಿಂಗ್ ಜರ್ನಿಗೆ ಸಹಾಯ ಆಗುತ್ತೆ.
ನಿಮಗೆ ಈ PDF ಬೇಕಿದ್ದರೆ -
1️⃣ Follow at @Sheru_Katte
2️⃣ ಈ ಪೋಸ್ಟ್ ಅನ್ನು Retweet ಮಾಡಿ.
3️⃣ ಕಾಮೆಂಟ್ ಬಾಕ್ಸ್ನಲ್ಲಿ 'PDF' ಎಂದು ಟೈಪ್ ಮಾಡಿ.
ಶೀಘ್ರದಲ್ಲೇ ನಾನು ನಿಮಗೆ Direct Message (DM) ಮೂಲಕ ಕಳುಹಿಸಿಕೊಡುತ್ತೇನೆ! 🚀
Like, Share, Retweet ❤️💚
ಇದು Chartink Scanner
https://t.co/KOvJGBo0g9
ನೀವು ಪ್ರತಿದಿನ Scan ಮಾಡಿ .ಒಂದೇ sector ಅಲ್ಲಿ ಕಂಡು ಬರುವ ಷೇರುಗಳನ್ನು ನಿಮ್ಮ watchlist ಅಲ್ಲಿ ಸೇರಿಸಿಕೊಂಡು ಟ್ರಾಕ್ ಮಾಡಿ.
ಇದರ ಜೊತೆಗೆ ಸ್ಟಾಕ್ ಬೆಲೆಯಲ್ಲಿ ಕಂಡು ಬರುವ Price Action ಗಮನಿಸಿ.
ಇದನ್ನು 6 ರಿಂದ 12 ತಿಂಗಳು ಕಾಲ ಅಭ್ಯಾಸ ಮಾಡಿ.
ಮ್ಯೂಚುವಲ್ ಫಂಡ್ ಜಗತ್ತಿನ ಮುಖ್ಯ ಶಬ್ದಗಳು! 💰
NAV → Net Asset Value (ಫಂಡ್ನ ಒಂದು ಯೂನಿಟ್ ಬೆಲೆ)
AMC → Asset Management Company (ಫಂಡ್ ನಡೆಸುವ ಸಂಸ್ಥೆ)
SIP → Systematic Investment Plan (ಪ್ರತಿ ತಿಂಗಳ ಹೂಡಿಕೆ)
Lumpsum → ಒಂದು ಬಾರಿಯ ದೊಡ್ಡ ಹೂಡಿಕೆ
AUM → Assets Under Management (ಒಟ್ಟು ನಿರ್ವಹಣಾ ಮೊತ್ತ)
TER → Total Expense Ratio (ನಿರ್ವಹಣಾ ವೆಚ್ಚ)
CAGR → Compound Annual Growth Rate (ವಾರ್ಷಿಕ ಸರಾಸರಿ ಲಾಭ)
XIRR → Extended Internal Rate of Return (SIP ಲಾಭದ ಲೆಕ್ಕಾಚಾರ)
ELSS → Equity Linked Savings Scheme (ತೆರಿಗೆ ಉಳಿತಾಯದ ಫಂಡ್)
NFO → New Fund Offer (ಹೊಸ ಫಂಡ್ನ ಆರಂಭದ ಬೆಲೆ)
Lock-in Period → ಹೂಡಿಕೆ ಹಿಂಪಡೆಯಲು ಇರುವ ಕನಿಷ್ಠ ಕಾಲಾವಧಿ
Large Cap → ದೊಡ್ಡ ಕಂಪನಿಗಳ ಫಂಡ್ (ಕಡಿಮೆ ರಿಸ್ಕ್)
Mid Cap → ಮಧ್ಯಮ ಗಾತ್ರದ ಕಂಪನಿಗಳ ಫಂಡ್ (ಮಧ್ಯಮ ರಿಸ್ಕ್)
Small Cap → ಸಣ್ಣ ಕಂಪನಿಗಳ ಫಂಡ್ (ಹೆಚ್ಚಿನ ರಿಸ್ಕ್ ಮತ್ತು ಲಾಭ)
Hybrid Fund → ಈಕ್ವಿಟಿ ಮತ್ತು Debt ಎರಡರ ಮಿಶ್ರಣ
SWP → Systematic Withdrawal Plan (ನಿಯಮಿತವಾಗಿ ಹಣ ಹಿಂಪಡೆಯುವುದು)
Folio Number → ಹೂಡಿಕೆದಾರನ ಖಾತೆ ಸಂಖ್ಯೆ
ಲೈಕ್ ಮಾಡಿ, ಶೇರ್ ಮಾಡಿ, ಎಲ್ಲರಿಗೂ ತಲುಪಿಸಿ! ❤️💚
ಐಡಿಎಫ್ಸಿ ಫಸ್ಟ್ ಬ್ಯಾಂಕ್ (IDFC FIRST Bank) ಚಂಡೀಗಢದ ಶಾಖೆಯೊಂದರಲ್ಲಿ ನಡೆದ ₹590 ಕೋಟಿ ಮೌಲ್ಯದ ವಂಚನೆಯ ಪ್ರಕರಣವನ್ನು ಸ್ಟಾಕ್ ಎಕ್ಸ್ಚೇಂಜ್ಗೆ ವರದಿ ಮಾಡಿದೆ.
ಈ ಘಟನೆಯ ಸಂಪೂರ್ಣ ವಿವರಗಳು-
1.ವಂಚನೆ ಬಯಲಾಗಿದ್ದು ಹೇಗೆ?
ಹರಿಯಾಣ ಸರ್ಕಾರದ ಇಲಾಖೆಯೊಂದು ತನ್ನ ಖಾತೆಯನ್ನು ಮುಚ್ಚಲು ಮತ್ತು ಹಣವನ್ನು ಬೇರೆ ಬ್ಯಾಂಕಿಗೆ ವರ್ಗಾಯಿಸಲು ವಿನಂತಿಸಿದಾಗ ಈ ಹಗರಣ ಬೆಳಕಿಗೆ ಬಂದಿದೆ. ಬ್ಯಾಂಕ್ ದಾಖಲೆಗಳಲ್ಲಿದ್ದ ಹಣಕ್ಕೂ ಮತ್ತು ಸರ್ಕಾರದ ಬಳಿ ಇದ್ದ ದಾಖಲೆಗಳಿಗೂ ದೊಡ್ಡ ಮಟ್ಟದ ವ್ಯತ್ಯಾಸ (Discrepancy) ಇರುವುದು ಕಂಡುಬಂದಿದೆ.
2. ಪ್ರಮುಖ ಅಂಶಗಳು -
ಒಟ್ಟಾರೆ ಹಣ ಸರಿಸುಮಾರು ₹590 ಕೋಟಿ.
ಯಾರ ಖಾತೆಗಳು- ಇದು ಕೇವಲ ಹರಿಯಾಣ ಸರ್ಕಾರದ ಕೆಲವು ಇಲಾಖೆಗಳಿಗೆ ಸಂಬಂಧಿಸಿದ ಖಾತೆಗಳಿಗೆ ಸೀಮಿತವಾಗಿದೆ. ಸಾಮಾನ್ಯ ಗ್ರಾಹಕರ ಖಾತೆಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
ಕ್ರಮ: ಬ್ಯಾಂಕ್ ಈಗಾಗಲೇ 4 ಅಧಿಕಾರಿಗಳನ್ನು ಅಮಾನತು ಮಾಡಿದೆ ಮತ್ತು ಪೋಲೀಸ್ ದೂರು ದಾಖಲಿಸಿದೆ. ಕೆಪಿಎಂಜಿ (KPMG) ಸಂಸ್ಥೆಯ ಮೂಲಕ ವಿಧಿವಿಜ್ಞಾನ ತನಿಖೆ (Forensic Audit) ನಡೆಸಲು ನಿರ್ಧರಿಸಿದೆ.
ನೆನಪಿರಲಿ -
IDFC ಫಸ್ಟ್ ಬ್ಯಾಂಕ್ ಮುಂದಿನ HDFC ಬ್ಯಾಂಕ್ ಆಗಲಿದೆ ಎನ್ನುವ ನಿರೀಕ್ಷೆ ಮತ್ತು ಹೋಲಿಕ ಸುಮಾರು 2018-19 ರಿಂದಲೇ ಷೇರು ಮಾರುಕಟ್ಟೆಯಲ್ಲಿ ಇದೇ..
ಈ ಸಮಯದಲ್ಲಿ ಇದು ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಜನಪ್ರಿಯ ಪಡೆದ ಸ್ಟಾಕ್ ಆಗಿತ್ತು.
ಅನೇಕ ರಿಟೇಲ್ ಹೂಡಿಕೆದಾರರು ಇದರಲ್ಲಿ ಹಣ ಹಾಕಿದ್ದಾರೆ.
ಆದ್ದರಿಂದ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸದ್ದು ಗದ್ದಲ ಮಾಡುವ ಷೇರುಗಳಿಂದ ದೂರ ಇರಿ..
Like, Share, Retweet ❤️ 💚
#IDFC
#StockMarketIndia
ಮಾಹಿತಿ ಎಂಬ ಅಫೀಮು- ಎಚ್ಚರವಿರಲಿ!
"ಹೊಟ್ಟೆ ತುಂಬಿದಾಗ ಯಾವಾಗ ಊಟ ನಿಲ್ಲಿಸಬೇಕು ಎಂಬ ಅರಿವು ನಮಗಿದೆ. ಆದರೆ ಆಲೋಚನೆಗಳು, ಸುದ್ದಿಗಳು, ರೀಲ್ಸ್ಗಳು ಮತ್ತು ಮಾಹಿತಿಯ ವಿಷಯಕ್ಕೆ ಬಂದಾಗ, ನಾವು ಮೆದುಳಿಗೆ ತಡೆರಹಿತವಾಗಿ ಸುದ್ದಿ ಫೀಡ್ ಮಾಡುತ್ತಲೇ ಇರುತ್ತೇವೆ."
ನಮ್ಮ ಮೆದುಳು ಈಗ 'ಕಸದ ತೊಟ್ಟಿ'ಯಾಗುತ್ತಿದೆಯೇ?
ಜಂಕ್ ಫುಡ್ ಸಂಸ್ಕೃತಿ- ನಾವು ಕಂಟೆಂಟ್ ಅನ್ನು ಜಂಕ್ ಫುಡ್ನಂತೆ ಸೇವಿಸುತ್ತಿದ್ದೇವೆ ಅತಿ ವೇಗವಾಗಿ, ಸುಲಭವಾಗಿ ಮರೆತುಹೋಗುವ ಮತ್ತು ಯಾವುದೇ ಸತ್ವವಿಲ್ಲದ ಮಾಹಿತಿ.
Overflowing Brain - ಮಿತಿಮೀರಿದ ಮಾಹಿತಿಯಿಂದ ಮೆದುಳು ತುಂಬಿ ತುಳುಕುತ್ತಿದೆ, ಇದರಿಂದ ಸೃಜನಶೀಲತೆ ಮತ್ತು ಶಾಂತಿ ನಾಶವಾಗುತ್ತಿದೆ.
ಇಂದು ಮಾಹಿತಿಯೇ ಅಫೀಮು - ಇಂದು ಮಾಹಿತಿ ಎಂಬುದು ಒಂದು ನಶೆಯಂತಾಗಿದೆ (Information is Opium). ಇದು ನಮ್ಮನ್ನು ವಾಸ್ತವದಿಂದ ದೂರವಿಟ್ಟು, ಒಂದು ಕ್ಷಣಿಕ ಲೋಕದಲ್ಲಿ ಬಂಧನದಲ್ಲಿ ಇಡ್ತಾ ಇದೆ.
ನೀವು ತಿನ್ನುವ ಆಹಾರ,ಅನ್ನದಷ್ಟೇ, ನೋಡುವ ಮತ್ತು ಕೇಳುವ ವಿಷಯಗಳೂ ಆರೋಗ್ಯಕರವಾಗಿರಲಿ. ನೆನಪಿಡಿ, ಅತಿಯಾದ ಮಾಹಿತಿ ಜ್ಞಾನವಲ್ಲ, ಅದು ಕೇವಲ ಗೊಂದಲ.
📉 ಡಾಟ್-ಕಾಮ್ ಇತಿಹಾಸ ಮತ್ತು ಇಂದಿನ AI ಅಬ್ಬರ- ಒಂದು ಎಚ್ಚರಿಕೆ
✅ನಾವು ಇಂದು AI ಬಗ್ಗೆ ಕಾಣುತ್ತಿರುವ ಉತ್ಸಾಹವು 1995-2000 ರ ಅವಧಿಯ 'ಡಾಟ್-ಕಾಮ್ ಬಬಲ್' (Dot-com Bubble) ಅನ್ನು ನೆನಪಿಸುತ್ತಿದೆ. 25 ವರ್ಷ ಹಿಂದಕ್ಕೆ ಹೋಗಿ ಇತಿಹಾಸದ ಆ ಪುಟಗಳನ್ನು ಒಮ್ಮೆ ತಿರುವಿ ನೋಡೋಣ.
1.ಅಬ್ಬರದ ಏರಿಕೆ (1995 - 2000)
ಆ ಸಮಯದಲ್ಲಿ ಇಂಟರ್ನೆಟ್ ಆಧಾರಿತ ಕಂಪನಿಗಳ ಮೇಲೆ ಹೂಡಿಕೆದಾರರು ಮುಗಿಬಿದ್ದರು.
ಕೇವಲ 5 ವರ್ಷಗಳಲ್ಲಿ (1995 ರಿಂದ 2000ರ ಮಾರ್ಚ್ 10 ರವರೆಗೆ) Nasdaq Composite Index ಬರೋಬ್ಬರಿ 600% ಏರಿಕೆ ಕಂಡಿತು!
ಕಂಪನಿಯ ಹೆಸರಿನಲ್ಲಿ '.com' ಇದ್ದರೆ ಸಾಕು, ಅದರ ವ್ಯವಹಾರ ಲಾಭದಲ್ಲಿದೆಯೇ ಅಥವಾ ಇಲ್ಲವೇ ಎಂದು ನೋಡದೆ ಹಣ ಹೂಡಿಕೆ ಮಾಡಲಾಗುತ್ತಿತ್ತು.
2. ಭೀಕರ ಕುಸಿತ (2000 - 2002)
ಅತಿಯಾದ ನಿರೀಕ್ಷೆಗಳು ಹುಸಿಯಾದಾಗ ಷೇರು ಮಾರುಕಟ್ಟೆ ಕುಸಿಯಲು ಆರಂಭಿಸಿತು.
ಮಾರ್ಚ್ 2000 ರಿಂದ ಅಕ್ಟೋಬರ್ 2002 ರ ಅವಧಿಯಲ್ಲಿ ಸೂಚ್ಯಂಕವು 78% ರಷ್ಟು ಭಾರೀ ಕುಸಿತ ಕಂಡಿತು.
ಅನೇಕ ಕಂಪನಿಗಳು ರಾತ್ರೋರಾತ್ರಿ ಮುಚ್ಚಿಹೋದವು, ಹೂಡಿಕೆದಾರರು ಬಿಲಿಯನ್ ಡಾಲರ್ ಹಣ ಕಳೆದುಕೊಂಡರು...
3. ಇಂದಿನ AI ಟ್ರೆಂಡ್ ಜೊತೆ ಹೋಲಿಕೆ-
ಇಂದು ಕೂಡ ನಾವು ಅದೇ ರೀತಿಯ ಲಕ್ಷಣಗಳನ್ನು ಕಾಣುತ್ತಿದ್ದೇವೆ:
ಹೆಸರೇ ಬಂಡವಾಳ - ಅಂದು '.com' ಹೇಗೋ ಇಂದು 'AI' ಎನ್ನುವ ಪದಕ್ಕೆ ಅಷ್ಟೇ ಕ್ರೇಜ್ ಇದೆ.
FOMO (ಹಣ ಕಳೆದುಕೊಳ್ಳುವ ಭೀತಿ)- ಎಲ್ಲರೂ AI ಷೇರುಗಳ ಬೆನ್ನತ್ತುತ್ತಿದ್ದಾರೆ, ಇದು ಬೆಲೆಯನ್ನು ನೈಜ ಮೌಲ್ಯಕ್ಕಿಂತ (Intrinsic Value) ಅತಿ ಎತ್ತರಕ್ಕೆ ಕೊಂಡೊಯ್ಯುತ್ತಿದೆ.
IPO ಗಳ ಹಾವಳಿ- ಡಾಟ್-ಕಾಮ್ ಕಾಲದಂತೆಯೇ ಈಗಲೂ ಅನೇಕ AI ಕಂಪನಿಗಳು ದೊಡ್ಡ ಮಟ್ಟದ ಪ್ರಚಾರ ನೀಡಿ IPO ಮೂಲಕ ಹಣ ಸಂಗ್ರಹಿಸಲು ಸಜ್ಜಾಗಿವೆ.
ಉದ್ಯೋಗ ನಷ್ಟದ ಭೀತಿ vs ವಾಸ್ತವ
AI ಎಲ್ಲರ ಕೆಲಸವನ್ನೂ ಕಸಿದುಕೊಳ್ಳುತ್ತದೆ ಎಂಬುದು ಸದ್ಯಕ್ಕೆ ದೊಡ್ಡ ಮಟ್ಟದ ಪ್ರಚಾರ (Hype).
ವಾಸ್ತವ - AI ಕೆಲಸಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಬದಲು, ಕೆಲಸ ಮಾಡುವ ಶೈಲಿಯನ್ನು ಬದಲಾಯಿಸುತ್ತದೆ. ತಂತ್ರಜ್ಞಾನವನ್ನು ಬಳಸಿಕೊಳ್ಳುವವರಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ.
ಬಿಲಿಯನ್ ಡಾಲರ್ ಜಾಹೀರಾತು ಮತ್ತು IPOಗಳ ತಯಾರಿ
ಅನೇಕ AI ಸ್ಟಾರ್ಟ್ಅಪ್ಗಳಿಗೆ ತಮ್ಮ ಸಂಶೋಧನೆ ಮುಂದುವರಿಸಲು ಭಾರಿ ಪ್ರಮಾಣದ ಬಂಡವಾಳ ಬೇಕು.
ತಂತ್ರ- ದೊಡ್ಡ ಮಟ್ಟದ ಸುದ್ದಿಯನ್ನು ಸೃಷ್ಟಿಸುವ ಮೂಲಕ ಕಂಪನಿಗಳು ತಮ್ಮ ಮೌಲ್ಯವನ್ನು (Valuation) ಹೆಚ್ಚಿಸಿಕೊಳ್ಳುತ್ತಿವೆ. ಇದರಿಂದ ಮುಂಬರುವ IPOಗಳಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಹಣ ಸಂಗ್ರಹಿಸುವುದು ಅವರ ಗುರಿ.
ಹೂಡಿಕೆದಾರರು ಗಮನಿಸಬೇಕಾದ ಅಂಶಗಳು -
ಅತಿಯಾದ ಮೌಲ್ಯಮಾಪನ (Overvaluation) - ಕೇವಲ AI ಎಂಬ ಹೆಸರಿನ ಮೇಲೆ ಹೂಡಿಕೆ ಮಾಡುವ ಮುನ್ನ ಆ ಕಂಪನಿಯ ಲಾಭಾಂಶ (Profitability) ಮತ್ತು ನಿಜವಾದ ಬಳಕೆದಾರರ ಸಂಖ್ಯೆಯನ್ನು ಗಮನಿಸಿ.
ದೀರ್ಘಾವಧಿ ದೃಷ್ಟಿಕೋನ - 2000ರಲ್ಲಿ ಅಮೆಜಾನ್ನಂತಹ ಕಂಪನಿಗಳು ಡಾಟ್-ಕಾಮ್ ಕುಸಿತದ ನಂತರವೂ ಉಳಿದು ಬೆಳೆದವು. ಹಾಗೆಯೇ, ಕೇವಲ ಬಲವಾದ ತಳಹದಿ ಇರುವ AI ಕಂಪನಿಗಳು ಮಾತ್ರ ದೀರ್ಘಕಾಲ ಉಳಿಯುತ್ತವೆ.
ತಂತ್ರಜ್ಞಾನವಾಗಿ AI ಖಂಡಿತವಾಗಿಯೂ ಜಗತ್ತನ್ನು ಬದಲಿಸುತ್ತದೆ. ಆದರೆ ಮಾರುಕಟ್ಟೆಯ ಹೂಡಿಕೆಯ ದೃಷ್ಟಿಯಿಂದ ನೋಡಿದಾಗ, ಈಗಿನ "ಅಬ್ಬರ"ವು ಹೂಡಿಕೆದಾರರಲ್ಲಿ FOMO (Fear Of Missing Out) ಸೃಷ್ಟಿಸಿ ಹಣ ಕಬಳಿಸುವ ತಂತ್ರವೂ ಆಗಿರಬಹುದು. ಸದಾ ಜಾಗರೂಕತೆಯಿಂದ ಹೂಡಿಕೆ ಮಾಡಿ.
ಸದ್ಯದ ದೊಡ್ಡ ಪ್ರಶ್ನೆ ಎಂದರೆ? ನಾವು AI Bubble ನಲ್ಲಿದ್ದೇವೆಯೇ? ಅಥವಾ ಇದು ನಿಜವಾದ ಆರ್ಥಿಕ ಬದಲಾವಣೆಯೇ?
ಸತ್ಯವೇನೆಂದರೆ, ಯಾರಿಗೂ ಇದರ ಬಗ್ಗೆ ನಿಖರ ಉತ್ತರ ತಿಳಿದಿಲ್ಲ. 📉📈
AI ಜಗತ್ತನ್ನು ಮರುರೂಪಿಸುತ್ತದೆ. ಶಿಕ್ಷಣದಿಂದ ಆರೋಗ್ಯದವರೆಗೆ, ಕೃಷಿಯಿಂದ ಬಾಹ್ಯಾಕಾಶದವರೆಗೆ AI ಪ್ರಭಾವ ಬೀರದ ಕ್ಷೇತ್ರವೇ ಇಲ್ಲ.
ಈ ತಂತ್ರಜ್ಞಾನವನ್ನು ಕಟ್ಟುತ್ತ್ತಿರುವ ಕಂಪನಿಗಳು (Infrastructure Builders) ಉಳಿದ ಅರ್ಥವ್ಯವಸ್ಥೆಗಿಂತ 10x ವೇಗವಾಗಿ ಬೆಳೆಯುತ್ತಿವೆ. ಸಾಫ್ಟ್ವೇರ್ ಮತ್ತು ಚಿಪ್ ತಯಾರಕರು ಇಂದು ಜಗತ್ತಿನ ಹೊಸ ಆರ್ಥಿಕ ಶಕ್ತಿಗಳು. 🏗️
"ಹೈಪ್" (Hype) ಬೆನ್ನತ್ತಬೇಡಿ, "ಬಳಕೆ" (Utility) ನೋಡಿ. ಯಾವ ಕಂಪನಿ AI ಅನ್ನು ಬಳಸಿಕೊಂಡು ನಿಜವಾದ ಸಮಸ್ಯೆಗಳನ್ನು ಪರಿಹರಿಸುತ್ತಿದೆಯೋ, ಅದೇ ದೀರ್ಘಕಾಲ ಉಳಿಯುತ್ತದೆ. 💎
2026ರಲ್ಲಿ ನಾವು ತಂತ್ರಜ್ಞಾನ ಇತಿಹಾಸದ ಅತಿ ದೊಡ್ಡ ತಿರುವಿನಲ್ಲಿದ್ದೇವೆ. ಜಾಗರೂಕರಾಗಿರಿ, ಆದರೆ ಈ ಬದಲಾವಣೆಯನ್ನು ಮುಕ್ತವಾಗಿ ಸ್ವಾಗತಿಸಿ.🚀
#AI2026 #TechTrends #Investing #KannadaFinance #FutureIsHere
Swing Trading ಯಾಕೆ ಸಾಮಾನ್ಯ ಹೂಡಿಕೆದಾರರಿಗೆ ಸೂಕ್ತವಾದ ಆಯ್ಕೆ??
ಇನ್ವೆಸ್ಟ್ಮೆಂಟ್ ಅಂತಾ ಬಂದ್ರೆ ಅನೇಕ ರೀತಿಯ ವಿಧಗಳಿವೆ.
1. Intraday trading
2. Swing Trading
3. Positional Trading
4.Long term Investment
ಷೇರು ಮಾರುಕಟ್ಟೆಯಲ್ಲಿ ನಿರಂತರವಾಗಿ ಹಣಗಳಿಸಲು ಎರಡು ಪ್ರಮುಖ ಮಾರ್ಗಗಳಿವೆ-
There are two ways to make money from the Stock Market.
1.ಪ್ರತಿ ವರ್ಷ ಸ್ಟಾಕ್ ಮಾರ್ಕೆಟ್ ಅಲ್ಲಿ ಅನೇಕ ಷೇರುಗಳು ಭಾರಿ ಪ್ರಮಾಣದ ಏರಿಕೆ ಕಾಣುತ್ತವೆ.
ಇಂತಹ ಕೆಲವು ದೊಡ್ಡ ಲಾಭದಾಯಕ ಷೇರುಗಳನ್ನು (huge winners) ಹುಡುಕುವುದು. ಅವುಗಳಲ್ಲಿ ದೊಡ್ಡ ಮಟ್ಟದ ಹಣವನ್ನು ಹೂಡಿಕೆ ಮಾಡಿ, ಅತಿ ಹೆಚ್ಚಿನ ಲಾಭ ಸಿಗುವವರೆಗೆ ಕಾಯುವುದು.
2. ಅನೇಕ ಷೇರುಗಳು ಅತಿ ಕಡಿಮೆ ಅವಧಿಯಲ್ಲಿ ಅಂದ್ರೆ 4 ರಿಂದ 10 ದಿನಗಳಲ್ಲಿ 20 ರಿಂದ 40% ಏರಿಕೆ ಕಾಣುತ್ತವೆ.
ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ನೀಡುವ ನೂರಾರು ಷೇರುಗಳನ್ನು ಹುಡುಕುವುದು. ಇವುಗಳಲ್ಲಿ ಸಕ್ರಿಯವಾಗಿ ಟ್ರೇಡಿಂಗ್ ಮಾಡುವ ಮೂಲಕ (ಖರೀದಿಸುವುದು ಮತ್ತು ಮಾರಾಟ ಮಾಡುವುದು) ನಮ್ಮ ಹಣವನ್ನು ತ್ವರಿತವಾಗಿ ಹೆಚ್ಚಿಸುವುದು ಇದರ ಗುರಿಯಾಗಿದೆ.
Long term investment ಅಂತಾ ಹೂಡಿಕೆ ಮಾಡಿ ಹಣ ಗಳಿಕೆ ಮಾಡಬೇಕು ಅಂದ್ರೆ ನೀವು Buy ಮಾಡಿರುವ ಷೇರುಗಳು ದೀರ್ಘಾವಧಿಯಲ್ಲಿ 200% ರಿಂದ 300% ಲಾಭ ಗಳಿಸಬೇಕು.ಆದರೆ ಇದು ಅಷ್ಟು ಸುಲಭವಾಗಿ ಆಗುವಂತಹದು ಅಲ್ಲ.ಯಾವುದೇ ಸ್ಟಾಕ್ ಒಂದೇ ಸಮನೆ ಏರಿಕೆ ಕಾಣುವುದಿಲ್ಲ.ಬದಲಾಗಿ ಹಂತ ಹಂತವಾಗಿ ನಿಧಾನಕ್ಕೆ ಏರಿಕೆ ಕಾಣುತ್ತೆ.
200% ರಿಂದ 300% ಏರಿಕೆ ಕಾಣುವ ಮೊದಲು ಅದು 40 ರಿಂದ 50% ಕುಸಿತ ಕಾಣುವುದು ಸಹಜ.
ಇಂತಹ ಷೇರು ಮಾರುಕಟ್ಟೆಯ ದೊಡ್ಡ ಏರಿಳಿತಗಳನ್ನು ತಡೆದುಕೊಳ್ಳುವ ಮಾನಸಿಕ ಸ್ಥೈರ್ಯ ಎಲ್ಲರಿಗೂ ಇರುವುದಿಲ್ಲ.ಜೊತೆಗೆ ಇದಕ್ಕೆ ಬೇಕಾಗುವ ಸಮಯ ಬಹಳ. ಹಣವನ್ನು ಹೂಡಿಕೆ ಮಾಡಿ ವರ್ಷಾನುಗಟ್ಟಲೆ ತಾಳ್ಮೆಯಿಂದ ಕಾಯುವುದು ಅಷ್ಟು ಸುಲಭದ ಕೆಲಸವಲ್ಲ.
ಇದರ ಬದಲಾಗಿ ಪ್ರತಿ ವರ್ಷ 20 ರಿಂದ 30% ಏರಿಕೆ ನೂರಾರು ಷೇರುಗಳಲ್ಲಿ ಕಂಡು ಬರುತ್ತದೆ. ಇಂತಹ ಷೇರುಗಳನ್ನು ಹುಡುಕಿ ಹಣ ಹೂಡಿಕೆ ಶುರು ಮಾಡಿದರೆ ನೀವು ಬಹಳ ವೇಗವಾಗಿ ಹೆಚ್ಚಿನ ಹಣ ಸಂಪಾದನೆ ಮಾಡಬಹುದು.
Swing Trading -
ಸ್ವಿಂಗ್ ಟ್ರೇಡಿಂಗ್ ಅನ್ನೋದು ಒಂದು ರೀತಿಯ ಟ್ರೇಡಿಂಗ್ ಶೈಲಿ.
ಇಲ್ಲಿ ಯಾವುದೇ ಒಂದು ಕಂಪನಿಯ ಷೇರನ್ನು 5 ರಿಂದ 10 ದಿನಗಳವರೆಗೆ ಅಥವಾ ಕೆಲವು ವಾರಗಳವರೆಗೆ ಖರೀದಿ ಮಾಡಿ ಷೇರಿನ ಬೆಲೆಯಲ್ಲಿ ಕಂಡು ಬರುವ ಏರಿಕೆ/ಇಳಿಕೆಯಿಂದ ಲಾಭ ಪಡೆಯುವ ಒಂದು ಟ್ರೇಡಿಂಗ್ style..
👉 ಅಂದರೆ,ಇದು ದೀರ್ಘಾವಧಿ ಹೂಡಿಕೆ Long-term Investment ಅಲ್ಲ, ಜೊತೆಗೆ ಇದು Intraday day ಕೂಡಾ ಅಲ್ಲ..
ಇದು ಮಧ್ಯಮ ಅವಧಿಯ (Short to Medium term) ಟ್ರೇಡಿಂಗ್.
ಸ್ವಿಂಗ್ ಟ್ರೇಡಿಂಗ್ ತತ್ವಗಳನ್ನು ಸರಿಯಾಗಿ ಅಳವಡಿಸಿಕೊಂಡರೆ, ನಿಮ್ಮ ಹಣವನ್ನು ಬೆಳೆಸಲು ಇದು ಅತ್ಯಂತ ವೇಗವಾದ ಮಾರ್ಗವಾಗಿದೆ
ಏರಿಕೆಯಲ್ಲಿ ಇರುವ ಷೇರುಗಳಲ್ಲಿ ನಿಮ್ಮ ಹಣ ಹೂಡಿಕೆ ಮಾಡುವುದು ಮತ್ತು ಒಂದೇ ಕಡೆ ನಿಮ್ಮ ಹಣ ಸಿಲುಕಿಕೊಳ್ಳುವುದನ್ನು (dead money) ತಪ್ಪಿಸುವುದು ಇದರ ಗುರಿ.
ಷೇರುಗಳು 2 ರಿಂದ 10 ದಿನಗಳವರೆಗೆ 5% ರಿಂದ 30% ರಷ್ಟು ವೇಗದಲ್ಲಿ (momentum bursts) ಚಲಿಸುತ್ತವೆ. ನಂತರ ಅವು ಸರಾಸರಿ ಬೆಲೆಗೆ ಮರಳುತ್ತವೆ (mean-revert) ಅಥವಾ ಹೆಚ್ಚು ಏರಿಕೆ ಇಳಿಕೆ ಕಾಣದೆ ಒಂದು particular range ಅಲ್ಲಿ ಟ್ರೇಡ್ ಆಗ್ತಾ ಹೋಗುತ್ತವೆ (sideways consolidation). ಅಲ್ಪಾವಧಿಯ ಈ ವೇಗದ ಚಲನೆಯ ಲಾಭವನ್ನು ಪಡೆಯುವುದು ಮತ್ತು ಬೆಲೆ ಸ್ಥಿರವಾಗುವ ಸಮಯವನ್ನು ತಪ್ಪಿಸುವುದು ಪ್ರತಿಯೊಬ್ಬ ಸ್ವಿಂಗ್ ಟ್ರೇಡರ್ನ ಗುರಿಯಾಗಿದೆ.
ಸ್ವಿಂಗ್ ಟ್ರೇಡಿಂಗ್ನ ವಿಶೇಷತೆಯೆಂದರೆ ಅದು ಅನೇಕ ಅವಕಾಶಗಳನ್ನು (signals) ನೀಡುತ್ತದೆ. ಪ್ರತಿ ಅವಕಾಶಕ್ಕೂ ನೀವು ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಒಂದು ಟ್ರೇಡ್ ತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎಂದು ನೀವು ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಒಂದು ಟ್ರೇಡ್ ನಿಮ್ಮ ಇಡೀ ವರ್ಷದ ಅಥವಾ ತಿಂಗಳ ಲಾಭವನ್ನು ನಿರ್ಧರಿಸುವುದಿಲ್ಲ, ಇದು compounding ಮ್ಯಾಜಿಕ್ ಮೇಲೆ ಅವಲಂಬಿತವಾಗಿದೆ.
✅ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಕೇವಲ ಷೇರುಗಳನ್ನಲ್ಲದೆ, ಅವುಗಳು ಪ್ರತಿನಿಧಿಸುವ ವಲಯಗಳ (Sectors) ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ..
ಮಾರುಕಟ್ಟೆಯು ಯಾವಾಗಲೂ ಒಂದೇ ದಿಕ್ಕಿನಲ್ಲಿ ಸಾಗುವುದಿಲ್ಲ.
ಬದಲಾಗಿ ಹಣವು ಒಂದು ವಲಯದಿಂದ ಇನ್ನೊಂದು ವಲಯಕ್ಕೆ ಹರಿಯುತ್ತಿರುತ್ತದೆ. ಇದನ್ನೇ Sector Rotation ಎನ್ನಲಾಗುತ್ತದೆ.
ಇಲ್ಲಿರುವ ಇಮೇಜ್ ಗಮನಿಸಿದರೆ ಮಾರುಕಟ್ಟೆಯ ಚಕ್ರ (Market Cycle) ಹೇಗೆ ಕೆಲಸ ಮಾಡುತ್ತದೆ ಎಂಬುದು ತಿಳಿಯುತ್ತದೆ.
Don't put all eggs in one basket-
ಚಿತ್ರದಲ್ಲಿ ತೋರಿಸಿರುವಂತೆ, ಪ್ರತಿ ವರ್ಷವೂ ಅಗ್ರಸ್ಥಾನದಲ್ಲಿರುವ ವಲಯ ಬದಲಾಗುತ್ತದೆ. ಆದ್ದರಿಂದ ನಿಮ್ಮ ಹೂಡಿಕೆಯನ್ನು ಒಂದೇ ವಲಯಕ್ಕೆ ಸೀಮಿತಗೊಳಿಸದೆ Diversification ಮಾಡಿ.
ಯಾವಾಗ ನಿರ್ಗಮಿಸಬೇಕು?
ಒಂದು ವಲಯವು ಸತತ 2-3 ವರ್ಷಗಳಿಂದ ಅತಿ ಹೆಚ್ಚು ಲಾಭ ನೀಡುತ್ತಿದ್ದರೆ, ಅಲ್ಲಿ 'ಸೆಕ್ಟರ್ ರೊಟೇಷನ್' ಆಗುವ ಸಾಧ್ಯತೆ ಇರುತ್ತದೆ. ಲಾಭವನ್ನು ಬುಕ್ ಮಾಡಿ (Profit Booking), ಕಡಿಮೆ ಮೌಲ್ಯ (Undervalued) ಹೊಂದಿರುವ ಮತ್ತೊಂದು ಉತ್ತಮ ವಲಯಕ್ಕೆ ಹಣ ವರ್ಗಾಯಿಸುವುದು ಜಾಣತನ.
ಸ್ಟಾಕ್ ಮಾರ್ಕೆಟ್ ಇತಿಹಾಸವನ್ನು ನೋಡಿದರೆ (ಚಿತ್ರದಲ್ಲಿರುವಂತೆ), ಯಾವುದೇ ಒಂದು ವಲಯವು ಯಾವಾಗಲೂ 'ಸೂಪರ್ ಸ್ಟಾರ್' ಆಗಿರುವುದಿಲ್ಲ. ಸೆಕ್ಟರ್ ರೊಟೇಷನ್ ಅರ್ಥಮಾಡಿಕೊಂಡರೆ, ನೀವು ಮಾರುಕಟ್ಟೆಯ ಕುಸಿತದ ಸಮಯದಲ್ಲೂ ಸುರಕ್ಷಿತವಾಗಿರಬಹುದು.
Like, Share, Retweet ❤️💚
ಜೂನ್ 2025 ರಲ್ಲಿ ಎಕನಾಮಿಕ್ ಟೈಮ್ಸ್ ಕನ್ನಡ ಡಿಜಿಟಲ್ ವಾಹಿನಿಯ ಜೊತೆ ಹೂಡಿಕೆಯ ವಿಚಾರವಾಗಿ ಪಾಡ್ಕಾಸ್ಟ್ ಮಾದರಿಯಲ್ಲಿ ನನ್ನ ಅನುಭವ, ಅನಿಸಿಕೆ @avinashvagarna1 ಅವರ ಜೊತೆ ಹಂಚಿಕೊಳ್ಳುವುದಕ್ಕೆ ಶುರು ಮಾಡಿದೆ. ಇದುವರೆಗೂ 25 ಸಂಚಿಕೆಗಳು ಬಂದಿವೆ. ಯಾವ ಸಂಚಿಕೆಯಲ್ಲಿ ಯಾವ ವಿಷಯವಾಗಿ ಚರ್ಚಿಸಿದ್ದೇವೆ ಅನ್ನುವ ಪಟ್ಟಿ ಇಲ್ಲಿದೆ
ಸಂಚಿಕೆ 1- ಈಕ್ವಿಟಿ ಮ್ಯುಚುಯಲ್ ಫಂಡ್ ಉತ್ತಮ ಆಯ್ಕೆಯೇ? https://t.co/AUWFLEAaUv
ಸಂಚಿಗೆ 2- ಹಣದುಬ್ಬರ(Inflation) ಏರಿಕೆಯ ವಿರುದ್ಧ ಹೂಡಿಕೆ ಮಾಡುವುದು ಹೇಗೆ? - https://t.co/yzQlroaMfh
ಸಂಚಿಕೆ 3- ಚಿನ್ನ ಮತ್ತು ಬೆಳ್ಳಿ ಹೂಡಿಕೆಗೆ ಸೂಕ್ತವೇ? ಹೇಗೆ ಹೂಡಿಕೆ ಮಾಡಬಹುದು - https://t.co/tsjhfl5sKW
ಸಂಚಿಕೆ 4- SIP ಮೂಲಕ ಒಂದು ಕೋಟಿ ಗಳಿಸುವುದು ಹೇಗೆ - https://t.co/t3sKv62m00
ಸಂಚಿಕೆ 5- ತಿಂಗಳಿಗೆ ೫೦೦-೧೦೦೦ ರೂಪಾಯಿ ಹೂಡಿಕೆ ಶುರು ಮಾಡಿ ಕೋಟ್ಯಾಧಿಪತಿ ಆಗಬಹುದೇ - https://t.co/NTjrjbYKdR
ಸಂಚಿಕೆ 6- ನಮಗೆ ಸರಿಹೊಂದುವ ಮ್ಯುಚುಯಲ್ ಫಂಡ್ ಆರಿಸಿಕೊಳ್ಳುವುದು ಹೇಗೆ - https://t.co/CGlXY0Mhfo
ಸಂಚಿಕೆ 7- ಹಿಂದಿನ ಸಂಚಿಕಗಳಲ್ಲಿ ಬಂಡ ಪ್ರಶ್ನೆಗಳಿಗೆ ಉತ್ತರ - https://t.co/TGjMprDWIB
ಸಂಚಿಕೆ 8- ನಿವೃತ್ತಿ ತಯಾರಿಗೆ SIP ಹೇಗೆ ಸಹಕಾರಿ - https://t.co/ooWEm9c2a8
ಸಂಚಿಕೆ 9- ಮಲ್ಟಿ ಅಸೆಟ್ ಸ್ಟ್ರಾಟೆಜಿ ಅಂದರೇನು - https://t.co/zHV9upOo4d
ಸಂಚಿಕೆ 10- ತುರ್ತು ಪರಿಸ್ಥಿತಿ ಬಂದಾಗ SIP ಏನು ಮಾಡಬೇಕು - https://t.co/v8UEsRBTln
ಸಂಚಿಕೆ 11- ಹೂಡಿಕೆ ಜಗತ್ತಿನಲ್ಲಿ ವಿವಿಧ ರೂಲ್ ಗಳೇನು? ಅದನ್ನು ಹೇಗೆ ಬಳಸಿಕೊಳ್ಳಬಹುದು - https://t.co/bgUMOnhUQY
ಸಂಚಿಕೆ 12- ಈಟಿಎಫ್ ಹೂಡಿಕೆ ಅಂದರೇನು? https://t.co/sBg7A4OlHK
ಸಂಚಿಕೆ 13- ಜಿಎಸ್ಟಿ ರಿಯಾಯಿತಿ ಸಿಕ್ಕ ಮೇಲೆ ಜನರಿಗೆ ಏನು ಉಪಯೋಗ - https://t.co/motSB6CYOf
ಸಂಚಿಕೆ 14- ರೂಪಾಯಿ ಕುಸಿತ ಆಗುವಾಗ ಹೂಡಿಕೆ ಹೇಗೆ ಮಾಡಬೇಕು - https://t.co/SnYCSGt4zE
ಸಂಚಿಕೆ 15- ಸ್ಟಾಕ್ ಮಾರುಕಟ್ಟೆಯಲ್ಲಿ ಹೊಸಬರು ಹೇಗೆ ಹೂಡಿಕೆ ಶುರು ಮಾಡಬೇಕು - https://t.co/5Aw4D0rtAT
ಸಂಚಿಕೆ 16- ಕಂಪನಿಗಳ ಅನಾಲಿಸಿಸ್ ಹೇಗೆ ಮಾಡುವುದು - https://t.co/lD9CszjeiO
ಸಂಚಿಕೆ 17- ಟ್ರೇಡಿಂಗ್ ಮಾಡುವುದು ಹೇಗೆ ಮತ್ತು ಅಪಾಯಗಳೇನು? - https://t.co/bVppoxSE54
ಸಂಚಿಕೆ 18- ಕೋಟ್ಯಧಿಪತಿ ಆಗಲು ನಿಮ್ಮ ಹಣ ಎಲ್ಲಿ ಹೂಡಿಕೆ ಮಾಡಬೇಕು? ಷೇರಲ್ಲಿ AI, EV, ಗ್ರೀನ್ ಎನರ್ಜಿ - ಯಾವುದು ಬೆಸ್ಟ್? - https://t.co/aeiPWZogkR
ಸಂಚಿಕೆ 19- FOMO ನಿಯಂತ್ರಣ ಹೇಗೆ - https://t.co/lFIigx54nk
ಸಂಚಿಕೆ 20- ಫ್ಯೂಟರ್ ಮತ್ತು ಆಪ್ಷನ್ಸ್ ಟ್ರೇಡಿಂಗ್ ನಲ್ಲಿ ಆಗುವ ಸಮಸ್ಯೆಯೇನು - https://t.co/KxiwT9LW7K
ಸಂಚಿಕೆ 21- ಸ್ಟಾಕ್ ಹೂಡಿಕೆ ಉತ್ತಮವೇ? ಈಟಿಎಫ್ ಹೂಡಿಕೆ ಉತ್ತಮವೇ? - https://t.co/NhTHg2DQvr
ಸಂಚಿಕೆ 22- ಸರ್ಕಾರಿ ಬಾಂಡ್ ಗಳು ಯಾರು ಕೊಳ್ಳಬಹುದು - https://t.co/6akTFYlQ0h
ಸಂಚಿಕೆ 23- ಐಟಿ ಷೇರುಗಳ ಖರೀದಿಗೆ ಇದು ಸಕಾಲವೇ - https://t.co/IPnMXmOvWZ
ಸಂಚಿಕೆ 24- 2026 ಕ್ಕೆ ಫೈನಾನ್ಷಿಯಲ್ ಪ್ಲಾನಿಂಗ್ ಹೇಗಿರಬೇಕು - https://t.co/46Jt5M5HMS
ಸಂಚಿಕೆ 25- 2026 ರಲ್ಲಿ ಭಾರತದ ಸ್ಟಾಕ್ ಮಾರುಕಟ್ಟೆ ಮತ್ತು ಮ್ಯುಚುಯಲ್ ಫಂಡ್ ಗಳು ಹೇಗೆ ಮುನ್ನಡೆಯಬಹುದು - https://t.co/3D5pnvvgHP
Understand the risk in the Stock Market..
ನೀವು Buy ಮಾಡಿರುವ ಸ್ಟಾಕ್ 90% ಕುಸಿತ ಕಂಡರೆ,ನಿಮ್ಮ ಹಣ ವಾಪಸ ಬರಲು 900% ಲಾಭ ಬೇಕು.
Starting Capital and Efforts needed to recover your money.
💰 ಡಿಜಿಟಲ್ ಗೋಲ್ಡ್ vs ಗೋಲ್ಡ್ ಇಟಿಎಫ್ (Gold ETF) - ಹೂಡಿಕೆದಾರರಿಗೆ ಮಾರ್ಗದರ್ಶಿ
ಹೆಚ್ಚು ಕಡಿಮೆ ಎಲ್ಲ ಭಾರತೀಯರು ಚಿನ್ನದಲ್ಲಿ ಹೂಡಿಕೆ ಮಾಡುತ್ತಾರೆ. ಭಾರತದಲ್ಲಿ ಚಿನ್ನದ ಮೇಲಿನ ಹೂಡಿಕೆಯು ಒಂದು ಸಂಪ್ರದಾಯ.ಇತ್ತೀಚಿಗೆ ಆಗಿರುವ ಡಿಜಿಟಲ್ ಕ್ರಾಂತಿಯ ಪರಿಣಾಮವಾಗಿ ಚಿನ್ನದಲ್ಲಿ ಹೂಡಿಕೆ ಮಾಡಲು ಹಲವಾರು Apps ಗಳು ಬಂದಿವೆ.ನೀವು ಕೇವಲ 100 ರೂಪಾಯಿಯಿಂದ ನಿಮ್ಮ ಹೂಡಿಕೆ ಶುರು ಮಾಡಬಹುದು.ಆದ್ರೆ ಸಮಸ್ಯೆ ಏನೆಂದರೆ ಈ App ಗಳು ಸರ್ಕಾರದ ನೇರ ನಿಯಂತ್ರಣದಲ್ಲಿ ಇಲ್ಲ.
Gold ಅನ್ನು App ಮೂಲಕ ಖರೀದಿ ಮಾಡಲು ಇರುವ ಕಂಪನಿಗಳ ಮೇಲೆ ಸರ್ಕಾರದ ನಿಯಂತ್ರಣ ಇಲ್ಲ.ಅವು ಹೇಗೆ ನಿಮ್ಮ ಹಣ ಹೂಡಿಕೆ ಮಾಡುತ್ತವೆ,Gold ಅನ್ನು ಹೇಗೆ Sotre ಮಾಡುತ್ತವೆ, ಒಂದು ವೇಳೆ Apps ನಡೆಸುವ ಕಂಪನಿಗಳು ಮುಚ್ಚಿ ಹೋದರೆ ಅದಕ್ಕೆ ಹೊಣೆ ಯಾರು ಯಾವದಕ್ಕೂ ಉತ್ತರವಿಲ್ಲ.
ಆದ್ದರಿಂದ ನೀವು Digital Gold ಅಲ್ಲಿ ಹೂಡಿಕೆ ಮಾಡ್ತಾ ಇದ್ದರೆ ಎಚ್ಚರಿಕೆಯಿಂದ ಇರಿ. Digital Gold ಒಂದು Private ಕಂಪನಿ ಜೊತೆ ನೀವು ಮಾಡಿಕೊಳ್ಳುವ ಒಪ್ಪಂದ. ಇದು RBI, SEBI ಸೇರಿದಂತೆ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ.
ನೀವು ಸ್ಟಾಕ್ ಮಾರ್ಕೆಟ್ ಅಲ್ಲಿ ಹೂಡಿಕೆ ಮಾಡಿದ್ರೆ,ನೀವು Buy ಮಾಡಿರುವ ಷೇರುಗಳು NSDL or CDSL ಅಲ್ಲಿ ಇರುತ್ತವೆ.ಇವುಗಳನ್ನು Depositories ಅಂತಾ ಕರೆಯುತ್ತಾರೆ.ಒಂದು ವೇಳೆ Broking ಕಂಪನಿ ಮುಚ್ಚಿ ಹೋದರು ನಿಮ್ಮ ಷೇರುಗಳು safe ಆಗಿ ಇರುತ್ತವೆ.
ಅದೇ ತರ Digital Gold ಬದಲಾಗಿ Gold Etfs ಇವೆ.ಇಲ್ಲಿ ನಿಮ್ಮ ಹಣ ಹೂಡಿಕೆ ಮಾಡಬಹುದು.ಇದು ಅಂತ್ಯಂತ ಸುರಕ್ಷಿತ.
ಇವು SEBI under ಅಲ್ಲಿ ಬಹಳ Strict ಆಗಿ regulate ಆಗಿರುತ್ತವೆ.
ಪ್ರತಿದಿನ Gold Etfs ಬೆಲೆಯನ್ನು update ಮಾಡಲೇಬೇಕು. ಆದ್ರೆ Digital Gold ಅಲ್ಲಿ ಈ ತರದ ವ್ಯವಸ್ಥೆ ಇಲ್ಲ. ಜೊತೆಗೆ ಪ್ರತಿಯೊಂದು App ಅಲ್ಲಿ ಬೇರೆ ಬೇರೆ ರೀತಿಯ ಬೆಲೆ ಇರುತ್ತೆ.ಇದರ ಜೊತೆಗೆ ನೀವು storage, insurance,hedging, GST ಅಂತ ಹೆಚ್ಚಿನ ಹಣ ನೀಡಬೇಕಾಗುತ್ತೆ.
Digital Gold ಹೂಡಿಕೆ ಮಾಡಲು ಉತ್ತಮ ಅವಕಾಶ.ಆದರೆ Government ಅಥವಾ ಯಾವುದೇ Regulator under ಅಲ್ಲಿ ಬಂದ್ರೆ ಉತ್ತಮ ಆಯ್ಕೆ.ಆದರೆ ನಿಯಂತ್ರಣದ ಕೊರತೆಯಿಂದಾಗಿ ಇದು ಹೆಚ್ಚಿನ ಅಪಾಯವನ್ನು ಹೊಂದಿದೆ.
So Digital Gold ಬದಲಾಗಿ Gold Etfs ಆಯ್ಕೆ ಮಾಡಿಕೊಳ್ಳಿ.
For more such information, do follow @Sheru_Katte
Like, Share, Retweet ❤️ 💚