ಪತ್ರಕರ್ತ ನೆನಪಿನ ಸಂಚಿಕೆ
ಬಿಡುಗಡೆ ಮಾಡಿದ ಸಿಎಂ
ಬೆಂಗಳೂರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ವತಿಯಿಂದ ಬೀದರದಲ್ಲಿ ನಡೆದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಅಂಗವಾಗಿ ಹೊರತಂದಿರುವ ಪತ್ರಕರ್ತ ನೆನಪಿನ ಸಂಚಿಕೆಯನ್ನು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಡುಗಡೆ ಮಾಡಿ, ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ
ಪತ್ರಕರ್ತ ಮೊದಲ ಸಂಚಿಕೆಯನ್ನು ಬೀದರ್ ಸಮ್ಮೇಳನ ಉದ್ಘಾಟಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅರ್ಪಿಸಲಾಯಿತು.
ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಪತ್ರಕರ್ತರ ಸೇವೆ ಹಾಗೂ ತ್ಯಾಗವನ್ನು ದಾಖಲಿಸುವ ಇಂತಹ ನೆನಪಿನ ಸಂಚಿಕೆಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಲಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹರಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೆರಗೋಡು ಹಾಗೂ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.
🇮🇳 78ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು!
ಸ್ವಾತಂತ್ರ್ಯವು ನಮಗೆ ದೊರೆತ ಅಮೂಲ್ಯ ಪರಂಪರೆ. ಅದು ಕೇವಲ ಹಕ್ಕುಗಳ ಸಂಕೇತವಲ್ಲ, ಕರ್ತವ್ಯ ಮತ್ತು ಜವಾಬ್ದಾರಿಯ ಪ್ರತೀಕವೂ ಹೌದು.
ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರ ಕನಸುಗಳನ್ನು ಸಾಕಾರಗೊಳಿಸುವ ಸಂಕಲ್ಪದೊಂದಿಗೆ, ಬಲಿಷ್ಠ ಮತ್ತು ಸಮೃದ್ಧ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ.
ಜೈ ಹಿಂದ್! ವಂದೇ ಮಾತರಂ! 🇮🇳
— ಶಿವಾನಂದ ತಗಡೂರು
ರಾಜ್ಯಾಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ)
#HappyIndependenceDay #ಸ್ವಾತಂತ್ರ್ಯದಿನ #JaiHind #KUWJ
ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಕೋಲಾರ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿಗಳಿಗೆ ಭಾಜನರಾಗಿರುವ ಪತ್ರಕರ್ತರುಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಭಿನಂದನೆಗಳು.
ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ಪತ್ರಕರ್ತರ ಮಕ್ಕಳಿಗೂ ಶುಭಾಶಯಗಳು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಎಲ್ಲಾ ವೃತ್ತಿನಿರತ ಪತ್ರಕರ್ತರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಭಿನಂದನೆಗಳು.
ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಶಾಸಕ ಪೊನ್ನಣ್ಣ, ಜಿಲ್ಲಾಧ್ಯಕ್ಷ ಅನುಕಾರ್ಯಪ್ಪ, ರಾಜ್ಯ ಸಮಿತಿ ಸದಸ್ಯರಾದ ಸವಿತಾ ರೈ ಮತ್ತು ಜಿಲ್ಲಾ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
Karnataka union of Working Journalists (KUWJ) congratulates all the professional journalists who have been awarded the Kodagu District Working Journalists Association Annual Award. KUWJ State President Shivananda Tagadoor, MLA Ponnanna, District President Anukaryappa, State Committee Member Savita Rai and District Association office bearers participated in the program.
ಉಡುಪಿ "ಸನ್ಮತಿ" ಪತ್ರಿಕೆ
ಕೆಯುಡಬ್ಲ್ಯೂಜೆ ಅಭಿನಂದನೆ
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿ ತಿಂಗಳು ತನ್ನ ಕಾರ್ಯಚಟುವಟಿಕೆಗಳನ್ನು 'ಇಡಿ'ಯಾಗಿ ಸನ್ಮತಿ ಹೆಸರಿನ ಪತ್ರಿಕೆ ರೂಪದಲ್ಲಿ ಅಚ್ಚುಕಟ್ಟಾಗಿ ಹೊರತರುತ್ತಿರುವುದು ಅಭಿನಂದನೀಯ.
ಇದೇ ಮಾದರಿಯಲ್ಲಿ ಎಲ್ಲಾ ಜಿಲ್ಲಾ ಸಂಘಗಳು ತಮ್ಮಕಾರ್ಯಚಟುವಟಿಕೆಗಳನ್ನು ದಾಖಲೀಕರಣ ಮಾಡಿ ಹೊರತರುವ ಪ್ರಯತ್ನ ಮಾಡಬಹುದು. ಆ ಪ್ರಯತ್ನ ಈಗಿನಿಂದಲೇ ಆಗಲಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಿರೀಕ್ಷಿಸಿದೆ
ಖಾದ್ರಿಶಾಮಣ್ಣ ಸ್ಮಾರಕ ಟ್ರಸ್ಟ್ ನೀಡುವ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ಪ್ರಜಾವಾಣಿಯ ಹಿರಿಯ ಪತ್ರಕರ್ತರಾದ ಎನ್.ಉದಯಕುಮಾರ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅಭಿನಂದಿಸಿದ್ದಾರೆ.
—-
Shivananda Tagadoor, state president of the Karnataka union of Working Journalists (KUWJ) has congratulated Prajavani's senior journalist N. Udayakumar, who has been awarded the Khadri Shamanna Journalism Award presented by the Khadri Shamanna Memorial Trust.
ಗ್ರಾಮೀಣ ಪತ್ರಕರ್ತರ ಬಸ್ ಪಾಸ್
ಷರತ್ತುಗಳನ್ನು ಸರಳೀಕರಣ ಮಾಡಿ
ಆದೇಶ: ಕೆಯುಡಬ್ಲ್ಯೂಜೆ ಸ್ವಾಗತ
ಬೆಂಗಳೂರು:
ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಯೋಜನೆ ಜಾರಿಗೆ ಅಡ್ಡಿಯಾಗಿದ್ದ ಕಠಿಣ ಷರತ್ತುಗಳನ್ನು ತೆಗೆದು, ನಿಯಮಾವಳಿ ಸರಳೀಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಕೆಯುಡಬ್ಲ್ಯೂಜೆ ಸ್ವಾಗತಿಸಿದೆ.
ಬೀದರನಲ್ಲಿ ನಡೆದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಒತ್ತಾಯಕ್ಕೆ ಸ್ಪಂಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ವೇದಿಕೆಯಲ್ಲಿ ಕಠಿಣ ಷರತ್ತುಗಳನ್ನು ಕೈಬಿಡುವುದಾಗಿ ಭರವಸೆ ನೀಡಿದ್ದರು.
ಸರ್ಕಾರಕ್ಕೆ ಮೂರು ವರ್ಷ ತುಂಬಿದಾಗ ಕೆಯುಡಬ್ಲ್ಯೂಜೆ ಏರ್ಪಡಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಈ ಬಗ್ಗೆ ವಾರದೊಳಗೆ ಕ್ರಮ ವಹಿಸುವುದಾಗಿ ತಿಳಿಸಿದ್ದರು. ಸಿಎಂ ಸೂಚನೆ ಮೇರೆಗೆ ಹೊಸ ಆದೇಶ ಹೊರಬಿದ್ದಿದೆ.
ಪೂರ್ಣಾವಧಿಗೆ ಸೀಮಿತವಾಗಿದ್ದನ್ನು ಬದಲಿಸಿ, ಅರೆಕಾಲಿಕ ವರದಿಗಾರರಿಗೂ ಯೋಜನೆ ವಿಸ್ತರಿಸಲಾಗಿದೆ.
ಸೌಲಭ್ಯ ಪಡೆಯಲು 11 ತಿಂಗಳ ಲೈನೇಜ್ ಪಡೆದಿರುವ ಬ್ಯಾಂಕ್ ಸ್ಟೇಟ್ ಮೆಂಟ್ ಕಡ್ಡಾಯವಾಗಿದ್ದನ್ನು ಷರತ್ತಿನಲ್ಲಿ ಕೈಬಿಡಲಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಸತತ ಹೋರಾಟಕ್ಕೆ ಸ್ಪಂಧಿಸಿ ಬೇಡಿಕೆ ಈಡೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ (ಭಾವಿ ಸಿಎಂ) ಡಿ.ಕೆ.ಶಿವಕುಮಾರ್ ಅವರು ಈ ನಿಟ್ಟಿನಲ್ಲಿ ಸತತವಾಗಿ ಸ್ಪಂಧಿಸಿದ ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರಿಗೆ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಅಭಿನಂದನೆ ಸಲ್ಲಿಸಿದ್ದಾರೆ.