ಕನ್ನಡವನ್ನು ಯಾರು ಪ್ರೀತಿಸುತ್ತಾರೋ ಅವರನ್ನು ಕನ್ನಡಿಗರೂ ಪ್ರೀತಿಸುತ್ತಾರೆ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಈ ಮಾತುಗಳನ್ನು ತಪ್ಪದೇ ಕೇಳಿ.
#ಕರವೇಸಾಮಾಜಿಕಜಾಲತಾಣ#ಕರವೇ#KRV#karave#bengaluru
ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಫ್ರಾಂಚೈಸಿ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿಯಲ್ಲಿ ಪುಟವನ್ನು ತೆರೆದಿದೆ. ಇದು ಯಾವ ಕಾರಣಕ್ಕೆ ಎಂದು ಅವರು ಸ್ಪಷ್ಟಪಡಿಸಬೇಕು. ಕನ್ನಡಿಗರ ಮೇಲೆ ಹಿಂದಿ ಗುಲಾಮಗಿರಿಯನ್ನು ಹೇರುವುದು ಅವರ ಉದ್ದೇಶವಾಗಿದ್ದರೆ ಕರ್ನಾಟಕ ಬಿಟ್ಟು ತೊಲಗಲಿ. ನಿಮ್ಮ ಅವಶ್ಯಕತೆ ನಮಗಿಲ್ಲ. (1/8)
ಇಂದು ಬೆಂಗಳೂರಿನ ದೂರದರ್ಶನ ಕೇಂದ್ರದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ��ಷರಾದ ಟಿ.ಎ. ನಾರಾಯಣಗೌಡರು ಉದ್ಘಾಟಿಸಿದರು.
#ಕರವೇಸಾಮಾಜಿಕಜಾಲತಾಣ
#ಕರವೇ #KRV #karave
#ದೂರದರ್ಶನ
ಈ ಐತಿಹಾಸಿಕ ನಿರ್ಣಯಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಎಲ್ಲ ಶಾಸಕರನ್ನು ಅಭಿನಂದಿಸುತ್ತೇನೆ. ಕನ್ನಡಿಗರ ಬೇಡಿಕೆ ಈಡೇರಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ನಾಡುನುಡಿಯ ವಿಷಯದಲ್ಲಿ ಒಮ್ಮತದ ನಿಲುವು ಅಭಿನಂದನಾರ್ಹ (4/5)
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಡಬೇಕೆಂದು ನಾವು ಹೋರಾಟ ನಡೆಸಿ ಯಶಸ್ವಿಯಾಗಿದ್ದೆವು. ಅದೇ ರೀತಿ ಈಗ ನಾಲ್ಕು ವಿಮಾನ ನಿಲ್ದಾಣಗಳಿಗೆ ಕರ್ನಾಟಕದ ನಾಲ್ವರು ಮೇರುಸಾಧಕರ ಹೆಸರು ಇಡಬೇಕೆಂಬ ನಮ್ಮ ಹೋರಾಟದ ಬೇಡಿಕೆಯೂ ಈಗ ಈಡೇರಿದಂತಾಗಿದೆ.(5/5)
ಕನ್ನಡಿಗರು ಇತರೆ ರಾಜ್ಯಗಳಿಗೆ ಹೋದಾಗ ಅಲ್ಲಿನ ನುಡಿ, ಸಂಸ್ಕೃತಿಗಳನ್ನು ಗೌರವಿಸುತ್ತ ಬದುಕುತ್ತಿದ್ದಾರೆ. ಆದರೆ ಕರ್ನಾಟಕಕ್ಕೆ ಬರುವ ಉತ್ತರ ಭಾರತೀಯರೇಕೆ ಕನ್ನಡವನ್ನು ಗೌರವಿಸುತ್ತಿಲ್ಲ, ಕರ್ನಾಟಕವನ್ನು ಗೌರವಿಸುತ್ತಿಲ್ಲ? ಕನ್ನಡದ ನೆಲ, ಜಲ, ಸಂಪತ್ತು ಬೇಕು, ಕನ್ನಡ ಬೇಡವೆಂದರೆ ಹೇಗೆ?
#ಕನ್ನಡದಲ್ಲಿನಾಮಫಲಕ
ಕನ್ನಡಿಗರು ��ಾರ ಅಡಿಯಾಳುಗಳಲ್ಲ. ನಮ್ಮ ನೆಲದಲ್ಲಿ ನಾವು ಸಾರ್ವಭೌಮರು. ಇದನ್ನು ಎಲ್ಲರಿಗೂ ನೆನಪಿಸುವ ಕಾಲವಿದು. ಕನ್ನಡದಲ್ಲಿ ಗ್ರಾಹಕ ಸೇವೆ ಪಡೆಯುವುದು ಕನ್ನಡಿಗನ ಹಕ್ಕು. ಯಾರಾದರೂ ನಿರಾಕರಿಸಿದರೆ ಅದನ್ನು ಸಹಿಸಿಕೊಂಡಿರಬೇಡಿ. #ಕನ್ನಡದಲ್ಲಿನಾಮಫಲಕ ಇಲ್ಲದಿದ್ದರೆ ಪ್ರಶ್ನಿಸುವುದನ್ನು ಮರೆಯಬೇಡಿ.
ಡಿಸೆಂಬರ್ 27ರಂದು ಕರ್ನಾಟಕ ರಕ್ಷಣಾ ವೇದಿಕೆ ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಗೇಟ್ ಬಳಿಯಿಂದ ದೊಡ್ಡ ಮೆರವಣಿಗೆ ಇಟ್ಟುಕೊಂಡಿದೆ. ಅಂದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ತೆರಳಲಿದೆ. #ಕನ್ನಡದಲ್ಲಿನಾಮಫಲಕ ಇಲ್ಲದಿದ್ದರೆ ಆಗುವ ಅನಾಹುತಗಳಿಗೆ ನಾವು ಜವಾಬ್ದಾರರಲ್ಲ. ಇದು ನನ್ನ ಅಂತಿಮ ಎಚ್ಚರಿಕೆ.
ನಾನು ಯಾವ ಭಾಷೆಯ ವಿರೋಧಿಯಲ್ಲ. ಯಾವ ಭಾಷಿಕರ ವಿರೋಧಿಯೂ ಅಲ್ಲ. ಆದರೆ ಪದೇ ಪದೇ ಕನ್ನಡಕ್ಕೆ, ಕನ್ನಡಿಗರಿಗೆ ಅಪಮಾನ ಆಗುವುದನ್ನು ಸಹಿಸುವುದಿಲ್ಲ. #ಕನ್ನಡದಲ್ಲಿನಾಮಫಲಕ ಹಾಕದವರು ಕನ್ನಡದ್ರೋಹಿಗಳು, ನಾಡದ್ರೋಹಿಗಳು. ಅವರಿಗೆ ಈ ನಾಡಿನಲ್ಲಿ ಇರುವ ಯೋಗ್ಯತೆ ಇಲ್ಲ. ಇಂಥವರ ವಿರುದ್ಧ ನಮ್ಮ ಹೋರಾಟವೇ ಹೊರತು, ಯಾವುದೇ ಭಾಷೆ,ಭಾಷಿಕರ ವಿರುದ್ಧವಲ್ಲ
ಕರ್ನಾಟಕ ಸರ್ಕಾರ ಜಾರಿಗೆ ತಂದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಎಲ್�� ಅಂಗಡಿ ಮುಂಗಟ್ಟುಗಳ ಮೇಲೂ ಕನ್ನಡದ ನಾಮಫಲಕವೇ ದೊಡ್ಡದಾಗಿರಬೇಕು ಎಂದು ಹೇಳುತ್ತದೆ. ಈ ನೆಲದ ಕಾಯ್ದೆ ಕಾನೂನು ಪಾಲಿಸದವರು ಕರ್ನಾಟಕದಲ್ಲಿ ಇರಲು ಯೋಗ್ಯರಲ್ಲ. ಕಾನೂನು ಪಾಲಿಸುವ ಮನಸು ಇಲ್ಲದಿದ್ದರೆ ತಮ್ಮ ತಮ್ಮ ರಾಜ್ಯಗಳಿಗೆ ಹೋಗಿಬಿಡಲಿ.
#ಕನ್ನಡದಲ್ಲಿನಾಮಫಲಕ
ಪ್ರತಿವರ್ಷ ರಾಜ್ಯೋತ್ಸವ ತಿಂಗಳಲ್ಲಿ ಕನ್ನಡದಲ್ಲಿ ನಾಮಫಲಕ ಹಾಕಬೇಕು ಎಂಬ ಕೂಗು ಕನ್ನಡಿಗರಿಂದ ಏಳುತ್ತದೆ. ಇನ್ನೆಷ್ಟು ವರ್ಷ ಇದನ್ನೇ ಹೇಳಿಕೊಂಡಿರುವುದು. ಇನ್ನೆಂದೂ ನಾಮಫಲಕದ ವಿಷಯವೇ ಬರಬಾರದು. ಕರ್ನಾಟಕದ ಎಲ್ಲ ನಾಮಫಲಕಗಳು ಕನ್ನಡೀಕರಣವಾಗಬೇಕು. ಆಗದಿದ್ದರೆ ಅದನ್ನು ಹೇಗೆ ಮಾಡುವುದೆಂಬುದು ನಮಗೆ ಗೊತ್ತಿದೆ.
#ಕನ್ನಡದಲ್ಲಿನಾಮಫಲಕ
ಕನ್ನಡದಲ್ಲಿ ನಾಮಫಲಕ ಹಾಕಿ ಎಂದು ಮನವಿ ಪತ್ರ ನೀಡಿದ್ದಕ್ಕೆ ನನ್ನ ಮೇಲೆ, ನನ್ನ ಸಂಘಟನೆಯ ಮುಖಂಡರ ಮೇಲೆ ಮಾಲ್ ಒಂದರ ಮಾಲೀಕ ದೂರು ದಾಖಲಿಸಿದ್ದಾನೆ. ದುಡ್ಡಿನ ದುರಹಂಕಾರ ಇವರನ್ನು ಎಲ್ಲಿಗೆ ತಂದು ನಿಲ್ಲಿಸಿದೆ ನೋಡಿ. ಈ ದುರಹಂಕಾರಿಗಳಿಗೆ ಯಾವ ಭಾಷೆಯಲ್ಲಿ ಉತ್ತರ ಕೊಡಬೇಕೋ ಅದನ್ನು ಕೊಡುತ್ತೇವೆ.
#ಕನ್ನಡದಲ್ಲಿನಾಮಫಲಕ
ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಆಗಿದ್ದೇ ಆಯಾ ಭಾಗದ ನುಡಿಪರಂಪರೆಯನ್ನು ರಕ್ಷಿಸಲು, ಗೌರವಿಸಲು. ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡಕ್ಕೆ ಅಗೌರವ. ಇದನ್ನು ಹೇಗೆ ಸಹಿಸುವುದು, ಯಾಕಾಗಿ ಸಹಿಸುವುದು? ನಾವು ಹಿಂದಿ ರಾಜ್ಯಗಳಲ್ಲಿ ಕನ್ನಡ ನಾಮಫಲಕ ಕೇಳುತ್ತಿದ್ದೇವೆಯೇ? ನಮ್ಮ ನಾಡಿನಲ್ಲೇ ನಮ್ಮ ನ���ಡಿ ಸೊರಗಬೇಕೇ?
#ಕನ್ನಡದಲ್ಲಿನಾಮಫಲಕ
ಕರ್ನಾಟಕದಲ್ಲಿ ಕನ್ನಡ ನಾಮಫಲಕಗಳು ಇರಬೇಕು ಎಂಬುದು ಕನಿಷ್ಠ ಸಾಮಾನ್ಯ ಜ್ಞಾನ. ಆದರೆ ಕರ್ನಾಟಕವನ್ನು ಕಬಳಿಸಲು ಹೊರಟ ಶಕ್ತಿಗಳು ಬೇಕೆಂದೇ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿವೆ. ಅದಕ್ಕಾಗಿಯೇ ನಾವು #ಕನ್ನಡದಲ್ಲಿನಾಮಫಲಕ ಆಂದೋಲನಕ್ಕೆ ಕೈ ಹಾಕಿದ್ದೇವೆ. ಕೊನೆಯ ನಾಮಫಲಕ ಬದಲಾಗುವವರೆಗೆ ಈ ಆಂದೋಲನ ನಿಲ್ಲುವುದಿಲ್ಲ.
ಕನ್ನಡದ ಸಾಹಿತ್ಯ ಲೋಕದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಷಕ ಮತ್ತು ಚಿಂತಕ,
ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟ ರಸ ಋಷಿ ರಾಷ್ಟ್ರಕವಿ ಕುವೆಂಪು ಅವರ ಪುಣ್ಯಸ್ಮರಣೆ ದಿನದಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇನೆ.
#Kuvempu#ಕರವೇ#KRV#karave
ಕನ್ನಡ ನಾಡಿನ ವೀರವನಿತೆ, ಚಿತ್ರದುರ್ಗದ ಮೇಲೆ ಹೈದರಾಲಿ ಸೈನಿಕರು ಆಕ್ರಮಣ ಮಾಡಿದಾಗ ತನ್ನ ಒನಕೆಯನ್ನು ಅಸ್ತ್ರವನ್ನಾಗಿಸಿ ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ಸದೆಬಡಿದ ಶೌರ್ಯ ಮತ್ತು ಸ್ವಾಭಿಮಾನದ ಪ್ರತೀಕ ಒನಕೆಓಬವ್ವ ರವರ ಜಯಂತಿಯಂದು ಶತಕೋಟಿ ನಮನಗಳು...
#ಒನಕೆಓಬವ್ವ ##OnakeObavva#ಕರವೇ#KRV#karave
ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ನಾಡ ಬಾವುಟವನ್ನ ಹೊಸ ವಿನ್ಯಾಸ ನೀಡಿ, ಕಾನೂನಿನ ಮಾನ್ಯತೆಗಾಗಿ ಕೇಂದ್ರಕ್ಕೆ ಸಲ್ಲಿಸಲಾಗಿದೆ ಆದರೆ ಮನವಿ ಸಲ್ಲಿಸಿ ಹಲವಾರು ವರ್ಷಗಳಾದರು ಕೇಂದ್ರ ಸರ್ಕಾರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.(1)
#ಕನ್ನಡಬಾವುಟ_ನಮ್ಮಗುರುತು#KannadaFlag_MyPride
ಕನ್ನಡನಾಡಲ್ಲಿ ಈಗ ಇರುವ ಹಳದಿ, ಕೆಂಪು ಬಣ್ಣದ ಬಾವುಟ ಕನ್ನಡಿಗರ ಅಸ್ಮಿತೆಯಾಗಿ ಮನೆಮನಗಳಲ್ಲಿ ಹಲವಾರು ವರ್ಷಗಳಿಂದ ಹಾರುತ್ತಲೆ ಇದೆ, ಆದರ�� ದುರಂತ ಅಂದರೆ ಇಲ್ಲಿಯವರೆಗೂ ಬಾವುಟಕ್ಕೆ ಸಂವಿಧಾನಿಕ ಮಾನ್ಯತೆ ಸಿಕ್ಕಿಲ್ಲ.(3)
#ಕನ್ನಡಬಾವುಟ_ನಮ್ಮಗುರುತು
#KannadaFlag_MyPride
ಕರ್ನಾಟಕದ ಬಾವುಟಕ್ಕೆ ಮಾನ್ಯತೆ ಸಿಕ್ಕರೆ, ಕನ್ನಡಗರ ಆತ್ಮಾಭಿಮಾನ ಮತ್ತಷ್ಟು ಹೆಚ್ಚಾಗಲಿದೆ. ಈಗ ಇರುವ ಹಳದಿ, ಕೆಂಪು ಬಣ್ಣದ ಬಾವುಟ ಕನ್ನಡಿಗರ ಅಸ್ಮಿತೆಯಾಗಿ ಮನೆಮನಗಳಲ್ಲಿ ಹಲವಾರು ವರ್ಷಗಳಿಂದ ಹಾರುತ್ತಲೆ ಇದೆ, ಆದರೆ ಇಲ್ಲಿಯವರೆಗೂ ನಾಡ ಬಾವುಟಕ್ಕೆ ಸಂವಿಧಾನಿಕ ಮಾನ್ಯತೆ ಸಿಕ್ಕಿಲ್ಲ.
#ಕನ್ನಡಬಾವುಟ_ನಮ್ಮಗುರುತು#KannadaFlag_MyPride