“KPSC ಉಳಿಸೋಣ!” ಅಭಿಯಾನಕ್ಕೆ ಯುವ ಮಿತ್ರರಿಂದ ಬಂದಿರುವ 2,500ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಇಂದಿನ ಯುವಜನತೆಯ ಆಕ್ರೋಶ ಮತ್ತು ನೋವಿನ ಸ್ಪಷ್ಟ ಪ್ರತಿಬಿಂಬ.
ಭ್ರಷ್ಟಾಚಾರ ಮತ್ತು ಅಕ್ರಮಗಳಿಂದ ಯುವಕರ ಭವಿಷ್ಯ ಹಾಳಾಗುತ್ತಿರುವುದನ್ನು ಇನ್ನೂ ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಯುವಕರು ಸ್ಪಷ್ಟವಾಗಿ ನೀಡಿದ್ದಾರೆ.
ನಿಮ್ಮ ಪ್ರತಿಯೊಂದು ಸಲಹೆ ಮತ್ತು ಅಭಿಪ್ರಾಯವನ್ನು ಸದನ ಸಮಿತಿಗೆ ತಲುಪಿಸುವ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ. ಪಾರದರ್ಶಕ ಹಾಗೂ ನ್ಯಾಯಸಮ್ಮತ KPSCಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ.
ಇನ್ನೂ ಭಾಗವಹಿಸದ ಯುವ ಮಿತ್ರರು ತಪ್ಪದೇ ನಿಮ್ಮ ಸಲಹೆಗಳನ್ನು ಹಂಚಿಕೊಳ್ಳಿ:
https://t.co/xvb6SxeBGQ
ಕರ್ನಾಟಕ ರಾಜ್ಯ ರಾಜಕೀಯದ ಇತಿಹಾಸದಲ್ಲಿ ಕನ್ನಡಿಗರ ಗಟ್ಟಿಧ್ವನಿಯಾಗಿ, ಕಳೆದ 25 ವರ್ಷಗಳಿಂದ ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ಧವಾಗಿ ಜೆಡಿಎಸ್ ಪಕ್ಷ ಹೋರಾಟ ಮಾಡುತ್ತಾ ಬಂದಿದೆ. ಮಾಜಿ ಪ್ರಧಾನಿಗಳು ಹಾಗೂ ಪಕ್ಷದ ಸ್ಥಾಪಕರಾದ ಪೂಜ್ಯ ಶ್ರೀ ಹೆಚ್.ಡಿ. ದೇವೇಗೌಡರವರ ಅವಿರತ ಪರಿಶ್ರಮ ಮತ್ತು ದಣಿವರಿಯದ ನಾಯಕತ್ವದಿಂದ, ಪ್ರಾದೇಶಿಕ ಪಕ್ಷವೊಂದು 25 ವರ್ಷ ಪೂರೈಸಲು ಕಾರಣೀಭೂತವಾಗಿದೆ.
ನಮ್ಮ ನಿಷ್ಠಾವಂತ ಕಾರ್ಯಕರ್ತರು ಹಗಲಿರುಳೆನ್ನದೆ ನಾಯಕರ ಹೆಗಲಿಗೆ ಹೆಗಲು ಕೊಟ್ಟು ನಿಸ್ವಾರ್ಥವಾಗಿ ದುಡಿಯುತ್ತಿದ್ದಾರೆ. ನಮ್ಮ ಪಕ್ಷವು ಅನೇಕ ಸವಾಲುಗಳನ್ನು ಎದುರಿಸಿ, ಅನೇಕ ರಾಜಕೀಯ ಕುತಂತ್ರಗಳನ್ನು ಮೆಟ್ಟಿ ನಿಂತು, ಇವತ್ತು ಬಲಿಷ್ಠ ಪ್ರಾದೇಶಿಕ ಪಕ್ಷವಾಗಿ ಬೆಳೆದಿದೆ.
#ಜೆಡಿಎಸ್ #ಬೆಳ್ಳಿಹಬ್ಬ
#JDS #25years
#SilverJubilee #SilverJubileeCelebration
ಬಸವಕೇಂದ್ರ, ಶ್ರೀ ಜಗದ್ಗುರು ಮುರುಗರಾಜೇಂದ್ರ ಬೃಹನ್ಮಠ ಮತ್ತು ಹಿತೈಷಿಗಳಿಗೆ ಧನ್ಯವಾದಗಳು.
.
Thank you to all at Basavakendra, Shri Jagadguru Murugarajendra Bruhanmatha and well wishers.
#PowerInU
@hd_kumaraswamy ಪಕ್ಷದ ಸಂಘಟನೆ ಬಗ್ಗೆ ಗಮನಹರಿಸಿ
ಎಲ್ಲಾ ಕ್ಷೇತ್ರದ ಶಾಸಕರಿಗೆ ಸೂಚಿಸಿ ಗ್ರಾಮ ಪಂಚಾಯಿತಿಮಟ್ಟದಲ್ಲಿ ಜನರ ಕಷ್ಟಗಳ ಕುಂದುಕೊರತೆಗಳನ್ನು ಪರಿಶೀಲಿಸಲಿ
ನೀವು ರಾಜ್ಯದ್ಯಂತ ನಡಿಗೆಯ ಪ್ರವಾಸಮಾಡಿ