🚔 **ವೈಟ್ಫೀಲ್ಡ್ ವಿಭಾಗ – ಪೊಲೀಸ್ ಆಡಳಿತ ವ್ಯವಸ್ಥೆ ಮತ್ತು ಪೊಲೀಸ್ ಠಾಣ��ಗಳ ವ್ಯಾಪ್ತಿ**
ಕರ್ನಾಟಕ ಸರ್ಕಾರದ ಆದೇಶದಂತೆ ರಚಿಸಲಾಗಿರುವ ಹೊಸ ಪೊಲೀಸ್ ಕಮಿಷನರೇಟ್ ವ್ಯವಸ್ಥೆಯ ಹಿನ್ನೆಲೆಯಲ್ಲಿ, ಸಾರ್ವಜನಿಕರ ಅನುಕೂಲಕ್ಕಾಗಿ ವೈಟ್ಫೀಲ್ಡ್ ವಿಭಾಗದ ಪೊಲೀಸ್ ಆಡಳಿತ ವ್ಯವಸ್ಥೆ, ಉಪವಿಭಾಗಗಳು ಹಾಗೂ ಅವುಗಳ ವ್ಯಾಪ್ತಿಗೆ ಒಳಪಡುವ ಪೊಲೀಸ್ ಠಾಣೆಗಳ ವಿವರಗಳನ್ನು ಪ್ರಕಟಿಸಲಾಗಿದೆ.
ಇದರೊಂದಿಗೆ, ಸಾರ್ವಜನಿಕರು ಸಂಬಂಧಪಟ್ಟ ಪೊಲೀಸ್ ಠಾಣೆಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನು ಸುಲಭವಾಗಿ ಸಂಪರ್ಕಿಸಲು ಅನುಕೂಲವಾಗುವಂತೆ ಅಧಿಕೃತ ಮೊಬೈಲ್ ಸಂಖ��ಯೆಗಳು ಮತ್ತು ಇ-ಮೇಲ್ ವಿಳಾಸಗಳ ಮಾಹಿತಿಯನ್ನ�� ಒದಗಿಸಲಾಗಿದೆ.
ತಮ್ಮ ಪ್ರದೇಶದ ಪೊಲೀಸ್ ಠಾಣೆಯು ಯಾವ ಉಪವಿಭಾಗದ ವ್ಯಾಪ್ತಿಗೆ ಒಳಪಡುತ್ತದೆ ಹಾಗೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಆಡಳಿತ ವ್ಯವಸ್ಥೆ ಮತ್ತು ಸಂಪರ್ಕ ವಿವರಗಳ ಕುರಿತು ಸಾರ್ವಜನಿಕರು ಸುಲಭವಾಗಿ ಮಾಹಿತಿ ಪಡೆಯಲು ಈ ಪ್ರಕಟಣೆ ಸಹಕಾರಿಯಾಗಲಿದೆ.
**ನಿಮ್ಮ ಸುರಕ್ಷತೆ ನಮ್ಮ ಆದ್ಯತೆ. ಸಾರ್ವಜನಿಕರ ಸೇವೆ ನಮ್ಮ ಕರ್ತವ್ಯ.**
**ಉಪ ಪೊಲೀಸ್ ಆಯುಕ್ತರು**
ವೈಟ್ಫೀಲ್ಡ್ ವಿಭಾಗ
ಬೆಂಗಳೂರು ನಗರ ಪೊಲೀಸ್
#BengaluruCityPolice #WhitefieldDivision #PoliceForPublic #PublicAwareness #YourSafetyOurPriority
@BlrCityPolice
ದಿನಾಂಕ: 19-11-2026 ರಂದು ಮಧ್ಯಾಹ್ನ ಸುಮಾರು 12:00 ಗಂಟೆಗೆ ವರ್ತೂರು ಪೊಲೀಸ್ ಠಾಣೆಯ ಹೊಯ್ಸಳ-225 ವಾಹನಕ್ಕೆ 112 ಸಹಾಯವಾಣಿ ಮೂಲಕ ದೂರು ಸಂಖ್ಯೆ 95429 ಸ್ವೀಕೃತವಾಗಿತ್ತು.
ದೂರಿನ ಮೇರೆಗೆ ಹೊಯ್ಸಳ ಕರ್ತವ್ಯದಲ್ಲಿದ್ದ ಎಎಸ್ಐ ನಂಜುಂಡೇಶ್ವರ ರವರು ಬಾಗಲೂರು ಗ್ರಾಮದ ಶೋಭಾ ಡ್ರೀಮ್ ಏಕರ್ಸ್ ಅಪಾರ್ಟ್ಮೆಂಟ್ ಸಮೀಪದ ಖಾಲಿ ಜಾಗದಲ್ಲಿರುವ ಕಾರ್ಮಿಕರ ಶೆಡ್ಗಳ ಬಳಿ ತೆರಳಿ, ದೂರುದಾರರನ್ನು ಸಂಪರ್ಕಿಸಿ, ಅನುಮಾನಾಸ್ಪದವಾಗಿ ಕಂಡುಬಂದ ಐದು ಜನರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತಂದಿದ್ದರು.
ವಿಚಾರಣೆ ಸಂದರ್ಭದಲ್ಲಿ ಸದರಿ ಐದು ಜನರ ಪೈಕಿ **ಮೊಹಮ್ಮದ್ ಬಾಬುಲ್ ಶೇಕ್** ಎಂಬ ಒಬ್ಬ ವ್ಯಕ್ತಿ ಮಾತ್ರ ಬಾಂಗ್ಲಾದೇಶದ ಪ್ರಜೆಯಾಗಿರುವುದು ತಿಳಿದುಬಂದಿರುತ್ತದೆ. ಅವರ ಪಾಸ್ಪೋರ್ಟ್ ಮತ್ತು ವೀಸಾ ದಾಖಲೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಹಾಜರುಪಡಿಸಿ ದಾಖಲೆಗಳ ನೈಜತೆಯನ್ನು ದೃಢೀಕರಿಸಿಕೊಂಡ ನಂತರ ಅವರನ್ನು ಕಾನೂನುಬದ್ಧವಾಗಿ ಬಿಡುಗಡೆಗೊಳಿಸಲಾಗಿದೆ.
ಉಳಿದ ನಾಲ್ವರು ಅಸ್ಸಾಂ ರಾಜ್ಯದ ಬಾರ್ಪೇಟಾ ಮತ್ತು ಮೋರಿಗಾಂವ್ ಜಿಲ್ಲೆಗಳ ನಿವಾಸಿಗಳಾಗಿರುತ್ತಾರೆ. ಅವರ ದಾಖಲೆಗಳನ್ನು ಅಸ್ಸಾಂ ರಾಜ್ಯದ ಸಂಬಂಧಪಟ್ಟ ಸ್ಥ���ೀಯ ಪೊಲೀಸ್ ಠಾಣೆಗಳಿಗೆ ಕಳುಹಿಸಿ, ದಾಖಲೆಗಳ ನೈಜತೆಯನ್ನು ಪರಿಶೀಲಿಸಿ, ಇ-ಮೇಲ್ ಮೂಲಕ ವರದಿ ಪಡೆದುಕೊಂಡ ನಂತರ ಅವರನ್ನು ಸಹ ಕಾನೂನುಬದ್ಧವಾಗಿ ಬಿಡುಗಡೆಗೊಳಿಸಲಾಗಿದೆ.
ಸಾರ್ವಜನಿಕರಿಗೆ ಸ್ಪಷ್ಟನೆ:
ಮೇಲ್ಕಂಡ ಘಟನೆಯ ಕುರಿತು ದಿನಾಂಕ 19-11-2026 ರಂದು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅಕ್ರಮ ಬಾಂಗ್ಲಾದೇಶಿ ಪ್ರಜೆಗಳು ವಾಸವಾಗಿರುವ ಕುರಿತು ವಿಡಿಯೋವೊಂದು ಹರಿದಾಡುತ್ತಿದ್ದು, ಸದರಿ ವಿಡಿಯೋದಲ್ಲಿನ ಅಂಶಗಳು ವಾಸ್ತವಾಂಶಗಳಿಗೆ ದೂರವಾಗಿರುತ್ತವೆ.**
ಬೆಂಗಳೂರು ನಗರ ��ೊಲೀಸ್ ಇಲಾಖೆಯು ಅಕ್ರಮ ವಲಸಿಗರ ಕುರಿತು ನಿರಂತರವಾಗಿ ನಿಗಾ ವಹಿಸುತ್ತಿದ್ದು, ಕಾನೂನುಬದ್ಧವಾಗಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಆದ್ದರಿಂದ, ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪರಿಶೀಲಿಸದ ಮಾಹಿತಿಗಳನ್ನು ನಂಬಬಾರದು ಹಾಗೂ ಅಂತಹ ಮಾಹಿತಿಗಳನ್ನು ಇತರರಿಗೆ ಹಂಚಿಕೊಳ್ಳುವ ಮೊದಲು ಅವುಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕೋರಲಾಗಿದೆ.
ಉಪ ಪೊಲೀಸ್ ಆಯುಕ್ತರು
ವೈಟ್ಫೀಲ್ಡ್ ವಿಭಾಗ, ಬೆಂಗಳೂರು ನಗರ.
@BlrCityPolice
ಇಂದು ಡಾ. ಹರ್ಷ ಪಿ.ಎಸ್., ಐಪಿಎಸ್., ಮಾನ್ಯ ಪೊಲೀಸ್ ಆಯುಕ್ತರು, ಪೂರ್ವ, ಬೆಂಗಳೂರು ನಗರ ರವರು ಹಾಗೂ ಶ್ರೀ ಶ್ರೀಹರಿ ಬಾಬು, ಬಿ.ಎಲ್., ಐಪಿಎಸ್., ಉಪ ಪೊಲೀಸ್ ಆಯುಕ್ತರು, ವೈಟ್ಫೀಲ್ಡ್ ವಿಭಾಗ ರವರು ಮಾರತ್ತಹಳ್ಳಿ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಬಾಕಿ ಪ್ರಕರಣಗಳ ತನಿಖೆ ಹಾಗೂ ಸಾರ್ವಜನಿಕರ ದೂರುಗಳ ತ್ವರಿತ ವಿಲೇವಾರಿ ಕುರಿತು ಪರಿಶೀಲಿಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.
ಈ ಭೇಟಿಯ ಸಂದರ್ಭದಲ್ಲಿ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Today, Dr. Harsha P.S., IPS, Hon’ble Police Commissioner, East, Bengaluru City, along with Shri Shrihari Babu, B.L., IPS, Deputy Commissioner of Police, Whitefield Division, visited various police stations under Marathahalli Sub-Division and reviewed their functioning.
During the visit, they reviewed law and order, crime prevention, investigation of pending cases, and timely redressal of public grievances. They also provided necessary guidance and instructions to the officers.
Police officers and staff of Marathahalli Sub-Division were present on the occasion.
@BlrCityPolice@DgpKarnataka
ಬದಲಾಗುತ್ತಿರುವ ನಾಯಕತ್ವ | ಬೆಂಗಳೂರು ನಗರ ಪೊಲೀಸ್
��ೆಂಗಳೂರು ನಗರ ಪೊಲೀಸ್ ಇಲಾಖೆಯ ನೂತನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ನಗರ ಪೊಲೀಸ್ ಆಯುಕ್ತರಾಗಿ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ಅಧಿಕಾರ ಸ್ವೀಕರಿಸಿದ್ದು, ಶ್ರೀ ಸೀಮಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಅವರು ಅಧಿಕಾರ ಹಸ್ತಾಂತರಿಸಿದರು.
ಬೆಂಗಳೂರಿನಲ್ಲಿ ಮಾದರಿ ನಾಯಕತ್ವ ನೀಡಿ, ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಿ, ಪೊಲೀಸ್ ವ್ಯವಸ್ಥೆಗೆ ಗಣನೀಯ ಕೊಡುಗೆ ನೀಡಿದ ಶ್ರೀ ಸೀಮಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಅವರಿಗೆ ಬೆಂಗಳೂರು ನಗರ ಪೊಲೀಸ್ ಇಲಾಖೆಯು ಹೃತ��ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಮತ್ತು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ಅವರ ಮುಂದಿನ ಜವಾಬ್ದಾರಿಗೆ ಶುಭ ಹಾರೈಸುತ್ತದೆ.
ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರಿಗೆ ಆದರದ ಸ್ವಾಗತ ಕೋರುತ್ತಾ, ಸಾರ್ವಜನಿಕ ಸುರಕ್ಷತೆ, ಪರಿಣಾಮಕಾರಿ ಪೊಲೀಸ್ ಸೇವೆ ಮತ್ತು ನಾಗರಿಕ ಕೇಂದ್ರಿತ ಕಾರ್ಯಗಳನ್ನು ಮತ್ತಷ���ಟು ಬಲಪಡಿಸುವಲ್ಲಿ ಅವರ ನಾಯಕತ್ವದ ಮೇಲೆ ವಿಶ್ವಾಸವಿಡಲಾಗಿದೆ.
ಬೆಂಗಳೂರು ನಗರದ ರಕ್ಷಣೆ ಮತ್ತು ಸೇವೆಗಾಗಿ ಅಚಲ ಬದ್ಧತೆಯೊಂದಿಗೆ ನಾಯಕತ್ವದ ಹೊಸ ಅಧ್ಯಾಯ.
Change of Guard | Bengaluru City Police
Shri Seemant Kumar Singh, IPS, formally handed over the baton of leadership to Shri R. Hithendra, IPS, who assumes charge as the new Additional Director General & Chief Commissioner of Police, Bengaluru City.
Bengaluru City Police expresses its sincere gratitude to Sri Seemanth Kumar Singh, IPS, for his exemplary leadership, dedicated service and contributions to policing in Bengaluru, and wishes him continued success in his new role as Additional Director General of Police, Karnataka State Fire & Emergency Services.
We extend a warm welcome to Sri R. Hithendra, IPS, and look forward to his leadership in further strengthening public safety, effective policing and citizen-centric services.
A new chapter of leadership, with an unwavering commitment to serving and safeguarding Bengaluru.
#BengaluruCityPolice #KarnatakaPolice
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
Strength isn't just about being strong. It's about standing up for others, showing kindness and making a difference every day.
To every man who protects, supports, inspires and leads by example, your efforts matter, and your contributions deserve recognition.
Bengaluru City Police wishes everyone a Happy International Men's Day!
ಶಕ್ತಿ ಎಂದರೆ ಕೇವಲ ಬಲಶಾಲಿಯಾಗಿರುವುದಲ್ಲ. ಇತರರಿಗಾಗಿ ನಿಲ್ಲುವುದು, ದಯೆ ತೋರುವುದು ಮತ್ತು ಪ್ರತಿದಿನವೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವುದು ನಿಜವಾದ ಶಕ್ತಿ.
ಇತರರನ್ನು ರಕ್ಷಿಸುವ, ಬೆಂಬಲಿಸುವ, ಪ್ರೇರೇಪಿಸುವ ಮತ್ತು ಮಾದರಿಯಾಗಿ ಮುನ್ನಡೆಯುವ ಪ್ರತಿಯೊಬ್ಬ ಪುರುಷನ ಶ್ರಮವೂ ಮುಖ್ಯವಾಗಿದೆ ಹಾಗೂ ಅವರ ಕೊಡುಗೆಗಳು ಗೌರವಕ್ಕೆ ಅರ್ಹವಾಗಿವೆ.
ಬೆಂಗಳೂರು ನಗರ ಪೊಲೀಸ್ ಇಲಾಖೆಯ ವತಿಯಿಂದ ಎಲ್ಲರಿಗೂ ಅಂತಾರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು!
#InternationalMensDay #MensDay2026 #BengaluruCityPolice
@CPBlr @DgpKarnataka@KarnatakaCops@Jointcptraffic@CMofKarnataka@PriyankKharge
ನಾನು ಶ್ರೀಹರಿ ಬಾಬು, ಐಪಿಎಸ್, ವೈಟ್ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ವಿಭಾಗದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಸಾರ್ವಜನಿಕರು ಯಾವುದೇ ಕಾನೂನು��ಾಹಿರ ಚಟುವಟಿಕೆಗಳು ಅಥವಾ ಸಂಶಯಾಸ್ಪದ ಘಟನೆಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಹಾಗೂ ಪೊಲೀಸ್ ಸಹಾಯಕ್ಕಾಗಿ 112 ಗೆ ಕರೆ ಮಾಡುವಂತೆ ಮನವಿ ಮಾಡುತ್ತೇನೆ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಕೈಜೋಡಿಸಬೇಕಾಗಿ ವಿನಂತಿಸುತ್ತೇನೆ.
I am Srihari Babu, IPS, and have assumed charge as the Deputy Commissioner of Police, Whitefield Division. Maintaining peace and law and order, preventing crime, and ensuring public safety will be our top priorities.
I urge the public to promptly inform the police about any unlawful activities or suspicious incidents and call **112** for police assistance. I request all citizens to extend their cooperation and join hands with the police department in maintaining peace and public order.
@BlrCityPolice
@DgpKarnataka
ಇಂದು ಶ್ರೀ ಶ್ರೀಹರಿ ಬಾಬು, ಐಪಿಎಸ್, ಉಪ ಪೊಲೀಸ್ ಆಯುಕ್ತರು, ವೈಟ್ಫೀಲ್ಡ್ ವಿಭಾಗ ರವರು, ವಿಭಾಗದ ಎಲ್ಲಾ ACPಗಳು, ಪೊಲೀಸ್ ಇನ್ಸ್ಪೆಕ್ಟರ್ಗಳು ಹಾಗೂ PSIಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಅಪರಾಧ ತಡೆಗಟ್ಟುವಿಕೆ, ಗುಣಮಟ್ಟದ ತನಿಖೆ, ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿ ಹಾಗೂ ಸಾರ್ವಜನಿಕ��� ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವ ಕುರಿತು ಚರ್ಚಿಸಿ, ಅಗತ್ಯ ಮಾರ್ಗಸೂಚಿ ಮತ್ತು ಸೂಚನೆಗಳನ್ನು ನೀಡಿದರು.
@BlrCityPolice
The public informed the police by calling 112. Hoysala 231 staff immediately visited the spot, made enquiries, and brought the woman to the police station along with a woman police constable. Later, she was admitted to Aladamara Ashram for her care and safety.
Description: Within the limits of Whitefield Police Station, near Swastha Hospital, a 35-year-old unknown female who appeared to be mentally unstable was found creating difficulties for the public by suddenly coming in front of moving vehicles on the road.
The public informed the police by calling 112. Hoysala 231 staff immediately visited the spot, made enquiries, and brought the woman to the police station along with a woman police constable. Later, she was admitted to Aladamara Ashram for her care and safety.
Within the limits of Whitefield Police Station, near Swastha Hospital, a 35-year-old unknown female who appeared to be mentally unstable was found creating difficulties for the public by suddenly coming in front of moving vehicles on the road.