RCB ಗು ಮತ್ತು ಕರ್ನಾಟಕಕ್ಕೂ ಏನಾದರೂ ಸಂಬಂಧ ಇದೆಯೇ? RCB ಯು (United Spirits Limited) USL ನ ಒಡೆತನದಲ್ಲಿದೆ. ಈ ಕಂಪನಿ ವಿದೇಶಿ ಮೂಲದ್ದು. ಆಟದ ತಂಡಕ್ಕೆ ಬೆಂಗಳೂರು ಎಂಬ ಹೆಸರನ್ನು ಸೇರಿಸಿದ ಮಾತ್ರಕ್ಕೆ ಅದು ನಮ್ಮದಾಗುತ್ತಾ?
ಪುರೋಹಿತರು ಎಂದಿಗೂ ದೇವರನ್ನು ಕೇಳುವುದಿಲ್ಲ, ಅವರು ಯಾವಾಗಲೂ ಭಕ್ತರನ್ನು ಕೇಳುತ್ತಾರೆ. ಏಕೆಂದರೆ, ಕಲ್ಲಿನ ವಿಗ್ರಹವು ನನಗೆ ಏನನ್ನು ನೀಡಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿದಿದೆ.
✍️ ಓಶೋ
ವಿಶ್ವಸಂಸ್ಥೆಗೆ ಯಾವುದೇ ತನ್ನದೇ ಆದ ಸ್ವಂತ ಶಕ್ತಿ ಇಲ್ಲ. ರಾಷ್ಟ್ರ ರಾಷ್ಟ್ರಗಳ ನಡುವಿನ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸುವುದು ವಿಶ್ವ ಸಂಸ್ಥೆಯ ಮುಖ್ಯ ಉದ್ದೇಶ. ಆದರೆ ಈಗ ಅದು ಇದ್ದು ಇಲ್ಲದಂತಿದೆ.
ಅಮೆರಿ���ದ ಅಧ್ಯಕ್ಷ (Donald J Trump) ಅವರು ನನಗೆ ನೋಬೆಲ್ ಪ್ರಶಸ್ತಿ ಬೇಕು, ನನಗೆ ನೋಬೆಲ್ ಪ್ರಶಸ್ತಿ ಬೇಕು ಎಂದು ಕನವರಿ��ುತ್ತಿದ್ದರು. ಕೊನೆಗೂ ಯಾವುದೋ ರೀತಿಯಲ್ಲಿ ಅದನ್ನು ಪಡೆದುಕೊಂಡರು.
ಇವರಿಗೆ ದೊಡ್ಡಣ್ಣ ಅಂತ ಕರೀಬೇಕಾ?
ನಾವು SSLC, PUC ಪರೀಕ್ಷೆ ಯನ್ನ ಬರೆಯುವಾಗ ಸುಮಾರು 40% ರಿಂದ 45% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದರು. ಪ್ರಶ್ನೆ ಪತ್ರಿಕೆಯನ್ನು ಸರಳೀಕರಣ ಮಾಡುತ್ತ ಮಾಡುತ್ತಾ ಉತ್ತೀರ್ಣ ಪ್ರಮಾಣವನ್ನು ಈಗ 80% ರಿಂದ 85% ಕ್ಕೆ ತಂದು ನಿಲ್ಲಿಸಿದ್ದಾರೆ. ಶಿಕ್ಷಣದಲ್ಲಿ ಕ್ರಾಂತಿಯೆಂದರೆ ಇದೆ ಅಲ್ಲವೇ?
ಕೆಲವರು 'Always think positive' ಎಂಬ ತತ್ವದಲ್ಲಿ ಬದುಕುತಿರುತ್ತಾರೆ. ತಮ್ಮ ಮೂಗಿನ ನೇರಕ್ಕೆ ವಿಚಾರ ಮಾಡುತ್ತಿರುತ್ತಾರೆ. ಇವರು ತಮ್ಮ ಗುರಿಯನ್ನು ಮುಟ್ಟಬಹು���ು, ವಿಜಯಶಾಲಿಯೂ ಆಗಬಹುದು. ಆದರೆ, ಇವರಾರೂ ಯಶಸ್ವಿಯಾಗಲಾರರು, ಸಂಪೂರ್ಣ ಲೋಕಾನುಭವವನ್ನು ಪಡೆಯಲಾರರು!