ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.
ಶ್ರೀ ವರಮಹಾಲಕ್ಷ್ಮಿ ದೇವಿಯ ಕೃಪಾಕಟಾಕ್ಷದಿಂದ ಪ್ರತಿಯೊಂದು ಮನೆಗೂ ಸುಖ, ಶಾಂತಿ, ಸಂತೋಷ, ಆರೋಗ್ಯ ಹಾಗೂ ಸಮೃದ್ಧಿ ದೊರೆಯಲಿ. ಕುಟುಂಬದ ಸದಸ್ಯರ ಬಾಳಿನಲ್ಲಿ ನೆಮ್ಮದಿ, ಐಶ್ವರ್ಯ ಮತ್ತು ಸೌಭಾಗ್ಯ ಸದಾ ನೆಲೆಸಲಿ ಎಂದು ಈ ಶುಭ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ.
ದೇಶಕಂಡ ದೂರದರ್ಶಿತ್ವದ ನಾಯಕರು, ತಂತ್ರಜ್ಞಾನ, ಕೈಗಾರಿಕೆ, ಕಂಪ್ಯೂಟರ್ ಕ್ಷೇತ್ರದಲ್ಲಿ ಅಸಾಮಾನ್ಯ ಕ್ರಾಂತಿ ಸೃಷ್ಟಿಸಿದ ಆಧುನಿಕ ಭಾರತ ನಿರ್ಮಾತೃ ದಿವಂಗತ ಶ್ರೀ ರಾಜೀವ್ ಗಾಂಧಿಯವರ ಜನ್ಮದಿನವಾದ ಇಂದು ಅನಂತ ನಮನಗಳನ್ನು ಸಲ್ಲಿಸುವೆ.ಹಾಗೂ ಅವರ ಜನ್ಮದಿನದ ಸವಿನೆನಪಿಗಾಗಿ ಆಚರಿಸುವ ಸದ್ಭಾವನಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
#RajivGandhi
ವೃದ್ದಾಪ್ಯ ವೇತನ, ಸೈಫೆಂಡರಿ, ಭಾಗ್ಯಜ್ಯೋತಿ, ಉಚಿತ ನಿವೇಶನಗಳು, ರಾಜ್ಯದಲ್ಲಿ ಉಳುವವನೇ ಹೊಲದೊಡೆಯ ಕಾನೂನನ್ನು ಸಮರ್ಥವಾಗಿ ಜಾರಿಗೆ ತಂದ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಡಿ. ದೇವರಾಜ್ ಅರಸು ಅವರ ಜನ್ಮದಿನದಂದು ಅವರ ಕೊಡುಗೆಗಳನ್ನು ಸ್ಮರಿಸೋಣ.
#Devarajaurs
ಭಾರತಾಂಬೆಯ ಸ್ವಾತಂತ್ರ್ಯಕ್ಕಾಗಿ ತಮ್ಮದೇ ರೀತಿಯಲ್ಲಿ ಹೋರಾಡಿದ, ಅಜಾದ್ ಹಿಂದ್ ಸೇನೆಯನ್ನು ಕಟ್ಟಿ ಯುವಜನರಲ್ಲಿ ಹೋರಾಟದ ಕಿಡಿ ಹಚ್ಚಿದ ಮಹಾನ್ ದೇಶಭಕ್ತ ಶ್ರೀ ಸುಭಾಷ್ ಚಂದ್ರ ಬೋಸ್ ಅವರ ಪುಣ್ಯಸ್ಮರಣೆಯಂದು ಅನಂತ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ.
ತಮ್ಮ ತ್ಯಾಗ ಬಲಿದಾನಗಳು ಭಾರತೀಯರ ಮನದಲ್ಲಿ ಅಜರಾಮರವಾಗಿರಲಿದೆ.
#SubhashChandraBose
ಕರ್ನಾಟಕದ ವೀರ ಪರಂಪರೆಯ ಅಪ್ರತಿಮ ನಾಯಕಿ, ಶೌರ್ಯದ ಗಣಿ ಬೆಳವಡಿ ಮಲ್ಲಮ್ಮ ಅವರ ಜಯಂತಿಯಂದು ನಾಡಿನ ಸಮಸ್ತ ಜನತೆಗೆ ಶುಭಾಶಯಗಳು. ನಮ್ಮ ಮಣ್ಣಿನ ಈ ಸಾಹಸಿ ಸಾಮ್ರಾಜ್ಞಿಯ ಕೀರ್ತಿಯನ್ನು ಜಗತ್ತಿನಾದ್ಯಂತ ಪಸರಿಸಲು ನಾವೆಲ್ಲರೂ ಬದ್ಧರಾಗೋಣ.
#BelavadiMallammaaJayanti
ನಾಗರಪಂಚಮಿಯು ಪ್ರಕೃತಿ ಮತ್ತು ಮಾನವನ ಅವಿನಾಭಾವ ಸಂಬಂಧವನ್ನು ಸಾರುವ ರೈತರ ಪವಿತ್ರ ಹಬ್ಬ. ಭೂಮಿತಾಯಿಯ ಒಡಲನ್ನು ಕಾಯುವ ನಾಗದೇವತೆಯು ನಮ್ಮ ನಾಡಿನ ಅನ್ನದಾತರಿಗೆ ಉತ್ತಮ ಮಳೆ-ಬೆಳೆ ನೀಡಿ, ಹಸಿರು ಸಮೃದ್ಧಿಯನ್ನು ಕರುಣಿಸಲಿ. ಸಮಸ್ತ ಕೃಷಿಕ ಬಾಂಧವರಿಗೂ ನಾಗರಪಂಚಮಿ ಹಬ್ಬದ ಶುಭಾಶಯಗಳು.
#NagaraPanchami
ರೈತರ ಹಿತಾಸಕ್ತಿಯೇ ನಮ್ಮ ಮೊದಲ ಆದ್ಯತೆ..
ಇಂಡಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರವೀಕ್ಷಣೆ ನಡೆಸಿ, ಬರದಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿದೆ.
ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಅಗತ್ಯ ಪರಿಹಾರ ಹಾಗೂ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ನಮ್ಮ ಪಕ್ಷದ ಹೆಮ್ಮೆಯ ಮಾರ್ಗದರ್ಶಕರು, ಸ್ವಚ್ಛ ಹಸ್ತದ ಮುತ್ಸದ್ದಿ ನಾಯಕರು ಹಾಗೂ ಮಾಜಿ ಸಚಿವರಾದ ಶ್ರೀ ಎಚ್. ಕೆ. ಪಾಟೀಲ ಅವರಿಗೆ ಹುಟ್ಟುಹಬ್ಬದ ಗೌರವಪೂರ್ವಕ ಶುಭಕಾಮನೆಗಳು. ಭಗವಂತನು ನಿಮಗೆ ಆಯುಷ್ಯ, ಆರೋಗ್ಯ ಕರುಣಿಸಲಿ, ನಿಮ್ಮ ಜನಸೇವೆ ಹೀಗೆಯೇ ಮುಂದುವರಿಯಲಿ ಎಂದು ಹಾರೈಸುವೆ.
H.K.Patil
ಕನ್ನಡ ನೆಲದ ಕೆಚ್ಚೆದೆಯ ವೀರ, ಭಾರತೀಯರ ಮನದಲ್ಲಿ ಅಚ್ಚಳಿಯದೆ ಉಳಿದಿರುವ, ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ಹೋರಾಟಗಾರ ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣ ಅವರ ಜಯಂತಿ ದಿನದಂದು ಆ ಅಮರ ವೀರನಿಗೆ ಸಹಸ್ರ ಪ್ರಣಾಮಗಳನ್ನು ಸಲ್ಲಿಸುವೆ.
#SangolliRayanna
ತ್ಯಾಗ, ಬಲಿದಾನಗಳ ಇತಿಹಾಸದೊಂದಿಗೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮುನ್ನಡೆಯುತ್ತಿರುವ ಹೆಮ್ಮೆಯ ಭಾರತದ ಸಮಸ್ತ ಜನತೆಗೆ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಬನ್ನಿ, ನವ ಭಾರತದ ನಿರ್ಮಾಣಕ್ಕಾಗಿ ನಾವೆಲ್ಲರೂ ಒಂದಾಗಿ ಸಂಕಲ್ಪ ತೊಡೋಣ.
#independenceday
ಪೂಜ್ಯ ತಂದೆಯವರಾದ ಲಿಂಗೈಕ್ಯ ಶ್ರೀ ವಿಠ್ಠಲಗೌಡ ಯಶವಂತರಾಯಗೌಡ ಪಾಟೀಲ ಅವರ ಪುಣ್ಯಸ್ಮರಣೆಯ ದಿನವಾದ ಇಂದು ಭಾವಪೂರ್ಣ ನಮನಗಳನ್ನು ಸಲ್ಲಿಸುವೆ. ಪೂಜ್ಯ ತಂದೆಯವರು ಹಾಕಿಕೊಟ್ಟ ಬದುಕಿನ ಮಾರ್ಗ, ಸರಳತೆ ಹಾಗೂ ಸೇವಾ ಮನೋಭಾವವು ನಮಗೆ ಎಂದಿಗೂ ಮಾದರಿ.
ಯುವಕರು ದೇಶದ ಶಕ್ತಿ. ಉತ್ತಮ ವಿದ್ಯಾಭ್ಯಾಸ ಪಡೆದು, ಸಮಾಜದಲ್ಲಿ ಹಾಸುಹೊಕ್ಕಾಗಿರುವ ಕೆಟ್ಟ ಚಟುವಟಿಕೆಗಳನ್ನು ತಡೆಯುವುದು ಯುವಜನರ ಜವಾಬ್ದಾರಿ.ದೇಶ ಕಟ್ಟಲು ಯುವಕರು ಮುಂದೆ ಬರಬೇಕು.ತಪ್ಪನ್ನು ಖಂಡಿಸುವ, ಒಪ್ಪನ್ನು ಶ್ಲಾಘಿಸುವ ಗುಣವನ್ನು ಬೆಳೆಸಿಕೊಳ್ಳಬೇಕು.
ಸರ್ವರಿಗೂ ರಾಷ್ಟ್ರೀಯ ಯುವ ದಿನಾಚರಣೆಯ ಶುಭಾಶಯಗಳು.
#InternationalYouthDay
ತಂತ್ರಜ್ಞಾನದ ಮೂಲಕ ನವ ಭಾರತದ ಕನಸು ಕಂಡು, ಇಸ್ರೋ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹಾನ್ ಚೇತನ, ಡಾ. ವಿಕ್ರಮ್ ಸಾರಾಭಾಯ್ ಅವರ ಜನ್ಮದಿನದಂದು ಶತ ಶತ ನಮನಗಳು.
ದೇಶದ ಯುವ ವಿಜ್ಞಾನಿಗಳಿಗೆ ಮತ್ತು ದೇಶದ ಪ್ರಗತಿಗೆ ಅವರ ಬದುಕು ಹಾಗೂ ಸಾಧನೆ ಸದಾ ದಾರಿದೀಪ.
#ISROFounder#VikramSarabhaiJayanti
ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪದಿಂದ ಆನೆಗಳ ಸಂತತಿ ಕ್ಷೀಣಿಸುತ್ತಿದೆ. ಇದನ್ನು ತಡೆಯದೇ ಹೋದರೆ ಮುಂದೊಂದು ದಿನ ಆನೆಗಳನ್ನು ಕೇವಲ ಚಿತ್ರಪಟದಲ್ಲಿ ಮಾತ್ರ ಕಾಣಲು ಸಾಧ್ಯ. ಆನೆಗಳ ಸಂತತಿಯನ್ನು ರಕ್ಷಿಸಲು ಸರ್ವರೂ ಪಣತೊಡೋಣ.
ಸರ್ವರಿಗೂ ವಿಶ್ವ ಆನೆ ದಿನದ ಶುಭಾಶಯಗಳು.
#worldelephantday
ಭಾರತದ ಮಾಜಿ ರಾಷ್ಟ್ರಪತಿ, 'ಭಾರತ ರತ್ನ' ಶ್ರೀ ವರಾಹಗಿರಿ ವೆಂಕಟ ಗಿರಿ ಅವರ ಜನ್ಮದಿನದಂದು ದೇಶಕ್ಕೆ ಅವರು ನೀಡಿದ ಕೊಡುಗೆಗಳನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ಕಾರ್ಮಿಕರ ಹಕ್ಕುಗಳಿಗಾಗಿ ಧ್ವನಿಯೆತ್ತಿದ ಅವರ ಜನಪರ ರಾಜಕಾರಣ ನಮಗೆಲ್ಲರಿಗೂ ಸದಾ ದಾರಿದೀಪ.
#VVGiri
ಪ್ರಕೃತಿಯ ಆರಾಧಕರು, ನಮ್ಮ ಹೆಮ್ಮೆಯ ಆದಿವಾಸಿ ಸಹೋದರ, ಸಹೋದರಿಯರಿಗೆ "ವಿಶ್ವ ಆದಿವಾಸಿ ದಿನ"ದ ಹಾರ್ದಿಕ ಶುಭಾಶಯಗಳು. ದೇಶದ ಮೂಲ ಸಂಸ್ಕೃತಿ, ಭಾಷೆ ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಉಳಿಸಿ ಬೆಳೆಸುತ್ತಿರುವ ಅವರ ಕೊಡುಗೆಗೆ ಗೌರವಪೂರ್ವಕ ನಮನಗಳು.
#ವಿಶ್ವಆದಿವಾಸಿದಿನ
ಕನ್ನಡ ಭಾಷೆಗೆ ಸಾರ್ವಭೌಮತ್ವ ತಂದುಕೊಡಲು ಹೋರಾಡಿದ ಧೀಮಂತ ನಾಯಕ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ವಿ.ಕೃ. ಗೋಕಾಕ್ ಅವರ ಜನ್ಮದಿನದಂದು ಭಕ್ತಿಪೂರ್ವಕ ನಮನಗಳನ್ನು ಅರ್ಪಿಸುವೆ.
#VKGokak
ಕನ್ನಡ ಭಾಷೆಗೆ ಸಾರ್ವಭೌಮತ್ವ ತಂದುಕೊಡಲು ಹೋರಾಡಿದ ಧೀಮಂತ ನಾಯಕ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ವಿ.ಕೃ. ಗೋಕಾಕ್ ಅವರ ಜನ್ಮದಿನದಂದು ಭಕ್ತಿಪೂರ್ವಕ ನಮನಗಳನ್ನು ಅರ್ಪಿಸುವೆ.
#VKGokak
ಕಾಯಕ ನಿಷ್ಠೆ, ಸತ್ಯಶುದ್ಧ ನಡೆ ಹಾಗೂ ಸಾಮರಸ್ಯದ ಮೂಲಕ ವಿಶ್ವಮಾನವ ಕೋಟಿಗೆ ಅರಿವಿನ ಬೆಳಕು ನೀಡಿದ ಹೆಮ್ಮೆಯ ಶಿವಶರಣ ಶ್ರೀ ನುಲಿಯ ಚಂದಯ್ಯನವರ ಜಯಂತಿಯ ಅಂಗವಾಗಿ ನಾಡಿನ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳು.
#nuliyachandayya