ಕೆ.ಎ.ಎಸ್ ಪರೀಕ್ಷಾರ್ಥಿಗಳ ಹಾಗೂ ನಮ್ಮ ನಿರಂತರ ಪ್ರಯತ್ನ ಹಾಗೂ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಮರುಪರೀಕ್ಷೆ ಮಾಡಲು ನಿರ್ಧರಿಸಿದೆ. ಈ ವಿವೇಚನಾಯುತ ನಿರ್ಧಾರವನ್ನು ಸ್ವಾಗತಿಸುತ್ತಾ, ಈ ಕೆಳಕಂಡ ಸುಧಾರಣೆಗಳನ್ನು ಆಯೋಗದಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ಸರ್ಕಾರ ಮಾಡಲಿ.
➮ ಪರೀಕ್ಷಾರ್ಥಿಗಳು ವಾಸಿಸುವ ಊರು ಅಥವಾ ಗರಿಷ್ಟ 50 ಕಿ.ಮೀ. ದೂರವಿರುವ ಪರೀಕ್ಷಾ ಕೇಂದ್ರದಲ್ಲೇ ಅವರಿಗೆ ಪರೀಕ್ಷೆ ಬರೆಯುವ ಅವಕಾಶ ನೀಡಬೇಕು
➮ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಭಾನುವಾರವೇ ಪರೀಕ್ಷೆ ಆಗಬೇಕು ಮತ್ತು ಯಾವುದೇ ಇತರೆ ಪರೀಕ್ಷೆ ಇದ್ದ ದಿನ schedule ಮಾಡಬಾರದು
➮ಲೋಕಸೇವಾ ಆಯೋಗದಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ IAS ಕೆ.ಎಸ್.ಲತಾ ಕುಮಾರಿ ಅವರನ್ನು ಆಯೋಗದ ಕಾರ್ಯದರ್ಶಿಯಾಗಿ ನೇಮಕ ಮಾಡಬೇಕು.
➮ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷಾ ನಿಯಂತ್ರಕರನ್ನು [Controller of Examinations ] ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಡಬೇಕು. ಹಾಗೆಯೇ ಆಯೋಗದ ಅಧ್ಯಕ್ಷರನ್ನು ಕೂಡಲೇ ಬದಲಿಸಲಿ.
➮ಆಯೋಗವು ಆಯೋಜಿಸಿದ್ದ ಎಲ್ಲಾ ಪರೀಕ್ಷೆಗಳ ಫಲಿತಾಂಶವನ್ನು ಕೂಡಲೇ ಬಿಡುಗಡೆ ಮಾಡಬೇಕು.
➮ಆಯೋಗವು ನಡೆಸುವ ಪರೀಕ್ಷೆಗಳ ಫಲಿತಾಂಶವನ್ನು ಪರೀಕ್ಷೆ ನಡೆದ 100 ದಿನಗಳಲ್ಲಿ ಬಿಡುಗಡೆ ಮಾಡಬೇಕು
➮ಪ್ರಶ್ನೆ ಪತ್ರಿಕೆಯ ಗುಣಮಟ್ಟವನ್ನು ಧೃಡೀಕರಿಸಲು ಆಯೋಗದ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚನೆ ಆಗಬೇಕು. ಆಯೋಗದಲ್ಲೇ ಪ್ರಶ್ನೆಗಳು ತರ್ಜುಮೆ ಆಗಬೇಕು
➮ಪರೀಕ್ಷೆಯ ಕ್ಯಾಲೆಂಡರ್ ಅನ್ನು ಮುಂಚಿತವಾಗಿಯೇ ಆಯೋಗ ಪ್ರಕಟಿಸಬೇಕು. ಇದರಿಂದ ಪರೀಕ್ಷಾರ್ಥಿಗಳಿಗೆ ಎಷ್ಟು ಸಮಯ ಇದೆ ಮತ್ತು ಅವರ ಅಧ್ಯಯನಕ್ಕೆ ಸಹಕಾರಿಯಾಗಲಿದೆ.
➮ ಆಯೋಗದಲ್ಲಿರುವ ಭ್ರಷ್ಟರು, ದಲ್ಲಾಳಿಗಳ ಮೇಲೆ ಹಾಗೂ ಪರೀಕ್ಷಾರ್ಥಿಗಳ ಹಿತಾಸಕ್ತಿಯ ವಿರುದ್ಧ ನಿರ್ಧಾರವನ್ನು ಕೈಗೊಳ್ಳುವವರ ವಿರುದ್ಧ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಅಂತಹವರನ್ನು ಆ ಸ್ಥಾನದಿಂದ ಎತ್ತಂಗಡಿ ಮಾಡಿ ಅಥವಾ ಶಿಸ್ತು ಕ್ರಮ ಜರುಗಿಸಿ.
➮ ಪರೀಕ್ಷೆಗಳು ಸಂಪೂರ್ಣವಾಗಿ ಪಾರದರ್ಶಕವಾಗಿರುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ fool proof ವ್ಯವಸ್ಥೆ ಕಲ್ಪಿಸಲಿ.
@tv9kannada I @AsianetNewsSN I @NewsFirstKan@AKSSAofficial I @prajavani I @publictvnews I @Vijayavani_Digi I @VijayaKarnataka I @DeccanHerald I @TheSouthfirst I @timesofindia I @Andolanadigital I @StarOfMysore I @HosadiganthaWeb I @thefileindia I
@KannadaPrabha I @CMofKarnataka I
ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿನ ಲೋಪ ದೋಷಗಳು ಲಕ್ಷಾಂತರ ಆಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ..
ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಹಿಂದೇಟು ಹಾಕುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ಮರು ಪರೀಕ್ಷೆ ವಿಚಾರದಲ್ಲಿ ಮೌನ ವಹಿಸಿರುವುದು ನಿಜಕ್ಕೂ ನಾಚೀಕೆಗೇಡು..
ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಕನ್ನಡ ಅನುವಾದ , ಭಾಷಾಂತರ ದೋಷ ಮತ್ತು ವಾಸ್ತವಾಂಶಗಳ ತಪ್ಪು ಸೇರಿ 50ಕ್ಕೂ ಹೆಚ್ಚು ಲೋಪ ದೋಷಗಳು ಕೆಪಿಎಸ್ ಸಿಯ ಬೌದ್ಧಿಕ ದಾರಿದ್ರ್ಯವನ್ನು ಜಗಜ್ಜಾಹಿರುಮಾಡಿದೆ.
ಕರ್ನಾಟಕ ಲೋಕಸೇವಾ ಆಯೋಗದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕನ್ನಡ ಹಾಗೂ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಭಾರೀ ಮೋಸವಾಗಿದೆ.. ಕನ್ನಡಕ್ಕೆ ಆದ್ಯತೆ ನೀಡಬೇಕಾದ ಸಂಸ್ಥೆಯೇ, ಈ ಪರಿ ಕನ್ನಡಕ್ಕೆ ಅಪಮಾನ ಮಾಡಿರುವುದು ಅಕ್ಷಮ್ಯ ಅಪರಾಧ ಮತ್ತು ಕೆಪಿಎಸ್ ಸಿಯ ಶೈಕ್ಷಣಿಕ ಅಧಃಪತನಕ್ಕೆ ಸಾಕ್ಷಿ..
ವರ್ಷಾನುಗಟ್ಟಲೆ ತಪಸ್ಸಿನಂತೆ ತಯಾರಿ ನಡೆಸಿ ಓದಿರುವ ಉದ್ಯೋಗದ ಕನಸು ಕಂಡಿರುವ ಅಭ್ಯರ್ಥಿಗಳ ಅಳಲನ್ನು ಆಲಿಸಿ, ಇನ್ನಾದರೂ ಎಚ್ಚೆತ್ತು ಕಾಂಗ್ರೆಸ್ ಸರ್ಕಾರ ಹಾಗೂ ಕೆಪಿಎಸ್ಸಿ ಮರು ಪರೀಕ್ಷೆ ನಡೆಸಬೇಕು.. ಅನ್ಯಾಯಕ್ಕೊಳಗಾದ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲೇ ಬೇಕು .ಇದು ಜಾತ್ಯತೀತ ಜನತಾದಳ ಪಕ್ಷದ ಆಗ್ರಹವಾಗಿದೆ..
#ಕೆಪಿಎಸ್ಸಿ_ಮೋಸ
#KPSC_Re_Exam
ಕೆ ಎ ಎಸ್ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಆದ ಅನ್ಯಾಯದ ವಿರುದ್ಧ ಮಹಾಪ್ರತಿಭಟನೆ
ಮರು ಪರೀಕ್ಷೆಯೇ ಪರಿಹಾರ ;
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
ನಾಳೆ ಬೆಳಗ್ಗೆ 10 ಗಂಟೆಗೆ ಸ್ವತಂತ್ರ ಉದ್ಯಾನವನದಲ್ಲಿ ಕನ್ನಡ ಕಹಳೆ ಮೊಳಗಲಿದೆ ;
ನೀವು ಬನ್ನಿ ನಿಮ್ಮವರನ್ನು ಕರೆತನ್ನಿ !
Kannada translation has been really pathetic , hope @secretarykpsc , it would be really injustice to Kannada medium students , KPSC should have been more careful at stage of setting paper itself
Requesting @secretarykpsc to look into it
#KPSC_Mosa
ಯಾವ ಸರ್ಕಾರ ಬಂದರೂ ಕನ್ನಡಕ್ಕಾಗುವ ಅವಮಾನ ಅನ್ಯಾಯ ಮಾತ್ರ ನಿಲ್ಲದಿರುವುದು ದುರಂತವೇ ಸರಿ ;
ಕನ್ನಡ ಮಾಧ್ಯಮದಲ್ಲಿ ಕಲಿಯುವ ನಗರ ಅಥವಾ ಗ್ರಾಮೀಣ ವಿದ್ಯಾರ್ಥಿಗಳು ಬಡ ದಲಿತ ಹಿಂದುಳಿದ ಅಲ್ಪಸಂಖ್ಯಾತ ವಿದ್ಯಾರ್ಥಿಗಳೇ ಆಗಿರುತ್ತಾರೆ ;
ಕನ್ನಡಿಗರ ಮೇಲೆ ಅಕ್ಷರದ ದೌರ್ಜನ್ಯ
ಹಾ ರ ಮಹೇಶ್ ಚಿಂತಕರು ಬಹು ಜನ ಹೋರಾಟಗಾರರು
ಪರೀಕ್ಷಾರ್ಥಿಗಳು ಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತಿಲ್ಲ, ಪರೀಕ್ಷಾ ನಿಯಂತ್ರಕರ ಅಜಾಗರೂಕತೆ, ನಿರ್ಲಕ್ಷ್ಯ, ಅಸಮರ್ಥತೆಯಿಂದ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪಾಗಿದೆ. ಇದು ಸರ್ಕಾರದ ವೈಫಲ್ಯವೇ ಹೊರತು ಪರೀಕ್ಷಾರ್ಥಿಗಳದ್ದಲ್ಲ.
ಕರ್ನಾಟಕ ಲೋ(ಪ)ಕ ಸೇವಾ ಆಯೋಗದ ತಪ್ಪಿನಿಂದ ಪರೀಕ್ಷಾರ್ಥಿಗಳು ಆಕ್ಷೇಪಣೆ ಹಾಕುವುದಕ್ಕೆ ಶುಲ್ಕ ಯಾಕೆ ಕಟ್ಟಬೇಕು.
ಸರ್ಕಾರ ಮೊದಲು ಪರೀಕ್ಷಾ ನಿಯಂತ್ರಕರನ್ನು ಕೂಡಲೇ ಅಮಾನತಿನಲ್ಲಿಟ್ಟು, ಪರೀಕ್ಷಾರ್ಥಿಗಳಿಂದ ಯಾವುದೇ ಶುಲ್ಕ ಪಡೆಯದೇ ಆಕ್ಷೇಪಣೆಗಳನ್ನು ಪಡೆಯಬೇಕು
Why must KPSC conduct re-examination? I have given reasons in this video. If PSCs don’t reform, they will keep infusing corrupt and inefficient officers who are as dangerous as terrorists. KPSC ಮರುಪರೀಕ್ಷೆ ಈಗ ಅನಿವಾರ್ಯ. #KPSC_Mosa#KPSCReExam#KPSC
ಒಕ್ಕೂಟ ಭಾರತ ಸರ್ಕಾರ ಕರ್ನಾಟಕದ ಕನ್ನಡಿಗರ ಉದ್ಯೋಗದ ವಿಷಯದಲ್ಲಿ
ಬೆನ್ನಿಗೆ ಚೂರಿ ಹಾಕುತ್ತಿದ್ದರೆ‚
ಕರ್ನಾಟಕ ಸರ್ಕಾರ ಕನ್ನಡಿಗರ ಉದ್ಯೋಗದ ವಿಷಯದಲ್ಲಿ ನೇರವಾಗಿ ಎದೆಗೇ ಚೂರಿ ಹಾಕುತ್ತಿದೆ.😡
ಅಲ್ಲಿಗೆ ಕರ್ನಾಟಕದ ಕನ್ನಡದ ಕನ್ನಡಿಗರ
ಕಥೆ ಮುಗಿಯಿತು.
ಇನ್ನಾದರೂ ಮರು ಪರೀಕ್ಷೆ ಮಾಡಿ.
#KPSC_Mosa#KASReExam#2nd_Gokak#KPSCReExam
ಕೋಟಿ ಸಾರಿ ಮೊಳಗಲಿ ಈ ಘರ್ಜನೆ! 🔥
ಕರ್ನಾಟಕದಲ್ಲಿ ಕನ್ನಡವೇ ಮೊದಲು,
ಉಳಿದಿದ್ದೆಲ್ಲ ಆಮೇಲೆ!
ಕನ್ನಡವೇ ಜೇಷ್ಠ - ಕನ್ನಡವೇ ಶ್ರೇಷ್ಠ! 🌻
ಕರ್ನಾಟಕ ದಲ್ಲಿ ಕನ್ನಡವೇ ಸಾರ್ವಭೌಮ
#kannada#KPSCmosa