Global energy solutions provider @Chevron will invest ₹8,300 crore ($1 billion) in Karnataka.
Chevron's proposed new R&D Hub in Bengaluru, called the 'Engineering & Innovation Excellence Center (ENGINE),' will be a major addition to our growing #MegaGCC ecosystem, creating 600 engineering jobs and driving innovation.
This centre will be the company’s largest tech centre outside the U.S.
#Karnataka continues to lead in attracting top #Fortune500 companies! 🌟
Welcome to Karnataka - The Destination.
#Industry #Innovation #Bengaluru #TechHub #Chevron #Energy #Research
ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕಾ ಸಂಸ್ಕೃತಿ ರೂಢಿಸಲು ದಾಪುಗಾಲು!
ಸುಜ್ಲಾನ್ ನಿಂದ ₹30 ಸಾವಿರ ಕೋಟಿ, ರೆನೈಸಾನ್ಸ್ ನಿಂದ ₹6 ಸಾವಿರ ಕೋಟಿ ಹೂಡಿಕೆಗೆ ಆಸಕ್ತಿ
ಬಸವನಾಡಿನಲ್ಲಿ ಕೈಗಾರಿಕಾ ಸಂಸ್ಕೃತಿ ರೂಢಿಸಲು ನಮ್ಮ ಸರ್ಕಾರ ಮುಂದಡಿ ಇಟ್ಟಿದ್ದು, ಈ ನಿಟ್ಟಿನಲ್ಲಿ ಪವನ ವಿದ್ಯುತ್ ಮತ್ತು ಸೌರವಿದ್ಯುತ್ ಕ್ಷೇತ್ರಗಳ ದೈತ್ಯ ಕಂಪನಿಗಳಾಗಿರುವ ಸುಜ್ಲಾನ್ & ರೆನೈಸಾನ್ಸ್ ಕಂಪನಿಗಳ ಉನ್ನತಾಧಿಕಾರಿಗಳ ಜತೆ ಇಂದು ಚರ್ಚೆ ನಡೆಸಿದೆ.
‘ಸುಜ್ಲಾನ್’ ಪವನ ವಿದ್ಯುತ್ ಕ್ಷೇತ್ರಕ್ಕೆ ಅಗತ್ಯವಿರುವ ಕಂಬಗಳು ಮತ್ತು ಬೃಹತ್ ಬ್ಲೇಡುಗಳ ಉತ್ಪಾದನೆಗೆ ಖ್ಯಾತಿಗಳಿಸಿದ್ದು, ವಿಜಯಪುರದಲ್ಲಿ ಹಂತಹಂತವಾಗಿ ಬೃಹತ್ 30 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ. ಮೊದಲ ಹಂತದಲ್ಲಿ ಕಂಪನಿಯು ಬ್ಲೇಡುಗಳ ತಯಾರಿಕಾ ಘಟಕ ಆರಂಭಿಸಲಿದ್ದು, 100 ಎಕರೆ ಜಮೀನನ್ನು ಕೇಳಿದೆ. ಕಂಪನಿಯು 5,000 ಮೆಗಾವ್ಯಾಟ್ ಸಾಮರ್ಥ್ಯದ ಘಟಕವನ್ನು ಪ್ರಾರಂಭಿಸಲಿದ್ದು, ಇದು ದೇಶದಲ್ಲೇ 2ನೇ ಅತೀ ದೊಡ್ಡ ಪವನ ವಿದ್ಯುತ್ ಘಟಕವಾಗಿರಲಿದೆ.
ರೆನೈಸಾನ್ಸ್ ಕಂಪನಿಯಿಂದ 6,000 ಸಾವಿರ ಕೋಟಿ ರೂ. ಹೂಡಿಕೆ
ಸೌರ ಫಲಕಗಳ (ಸೋಲಾರ್ ಪ್ಯಾನೆಲ್ಸ್) ತಯಾರಿಕೆಗೆ ಬೇಕಾಗುವ ಬಿಡಿ ಭಾಗಗಳ ಉತ್ಪಾದನೆಗೆ ಹೆಸರಾಗಿರುವ ರೆನೈಸಾನ್ಸ್ ಸೋಲಾರ್ & ಎಲೆಕ್ಟ್ರಾನಿಕ್ ಮೆಟೀರಿಯಲ್ಸ್ ಕಂಪನಿ ಕೂಡ ವಿಜಯಪುರದಲ್ಲಿ ತನ್ನ ಘಟಕ ಆರಂಭಿಸಲು 6,000 ಕೋಟಿ ರೂ. ಬಂಡವಾಳ ಹೂಡಲು ಮುಂದೆ ಬಂದಿದೆ. ಈ ಸಂಬಂಧ ಕಂಪನಿಯ ಸಿಇಒ ಶ್ರೀ ಮಿಲಿಂದ್ ಕುಲಕರ್ಣಿ ಅವರೊಂದಿಗೆ ಪ್ರಾಥಮಿಕ ಚರ್ಚೆ ನಡೆಸಲಾಯಿತು.
ಈ ಕಂಪನಿ ಕೂಡ ಸುಮಾರು 100 ಎಕರೆಯಲ್ಲಿ ಕಾರ್ಯಾರಂಭಿಸಲು ಮುಂದೆ ಬಂದಿದೆ. ಆರಂಭದಲ್ಲಿ 2,500 ಕೋಟಿ ರೂ. ಹಣ ಹೂಡಲಿದ್ದು, 5,000 ಮೆಗಾವ್ಯಾಟ್ ಸಾಮರ್ಥ್ಯದ ಘಟಕವನ್ನು (ಕ್ರಿಸ್ಟಲ್ ಗ್ರೋತ್ & ವೇಫರಿಂಗ್ ಯೂನಿಟ್) ಆರಂಭಿಸಲಿದೆ.
2025ರ ಕೊನೆಯ ಹೊತ್ತಿಗೆ ತನ್ನ ವಾಣಿಜ್ಯ ಚಟುವಟಿಕೆ ಆರಂಭಿಸಲಿದೆ. ಸುಮಾರು 1 ಸಾವಿರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. 2030ರ ಹೊತ್ತಿಗೆ ಕಂಪನಿಯು ತನ್ನ ಘಟಕವನ್ನು 20 ಸಾವಿರ ಮೆಗಾವ್ಯಾಟ್ ಮಟ್ಟಕ್ಕೆ ಕೊಂಡೊಯ್ಯುವ ಗುರಿ ಹೊಂದಿದೆ. ಆಗ 3,000ಕ್ಕೂ ಹೆಚ್ಚು ಜನರಿಗೆ ಇಲ್ಲಿ ಉದ್ಯೋಗ ಸಿಗಲಿದೆ.
ಸುಜ್ಲಾನ್ ಸಮೂಹದ ಸಿಇಒ ಶ್ರೀ ಜೆ ಪಿ ಚಲಸಾನಿ ಮತ್ತು ರೆನೈಸಾನ್ಸ್ ಸೋಲಾರ್ ಮತ್ತು ಎಲೆಕ್ಟ್ರಾನಿಕ್ ಮೆಟೀರಿಯಲ್ಸ್ ಕಂಪನಿಯ ಸಿಇಒ ಶ್ರೀ ಮಿಲಿಂದ್ ಕುಲಕರ್ಣಿ ಈ ಮಹತ್ವದ ಮಾತುಕತೆಗಳಲ್ಲಿ ಪಾಲ್ಗೊಂಡಿದ್ದರು. ಕೆಐಎಡಿಬಿ ಸಿಇಒ ಡಾ.ಮಹೇಶ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Delivered as promised our Govt allotted land in Bangalore rural for @HonHai_Foxconn manufacturing plant (Assembling @Apple I phone plant) within 100 days. By next year the plant will be operational lakhs of people will be benefited directly and indirectly. Congress means progress
ಹಣ್ಣೆಲೆ ಅಜ್ಜ ಅಜ್ಜಿ, ಚಿಗುರೆಲೆಯಾದ ತಮ್ಮ ಪ್ರೀತಿಯ ಮೊಮ್ಮಗನಿಂದ ತಮ್ಮ ತೋಟದಲ್ಲಿ ಗಿಡ ನೆಡಿಸುತ್ತಿರುವುದು!! 💚🌿
ನಾವು ಮಕ್ಕಳ ಹುಟ್ಟು ಹಬ್ಬದ ದಿನ ಕೇಕ್ ಗಳನ್ನು 'ಕಟ್' ಕಾಡುವ, ಜೊತೆಗೆ ಆ ದಿನ ಒಂದಾದರೂ ಗಿಡವಮ್ನ ನೆಟ್ಟು 'ಬೆಳಸುವ' ಪ್ರಯತ್ನ ಮಾಡಿದರೆ ಹುಟ್ಟು ಹಬ್ಬ ಹೆಚ್ಚು ಅರ್ಥ ಪಡೆದು ಕೊಳ್ಳಬಹುದು.
~ ಪರಿಸರ ಪರಿವಾರ
ಫಾಕ್ಸ್ ಕಾನ್ ಸಂಸ್ಥೆ ರಾಜ್ಯದಲ್ಲಿ ರೂ. 5,000 ಕೋಟಿ ಹೂಡಿಕೆಯೊಂದಿಗೆ 2 ಹೊಸ ಯೋಜನೆಗಳಿಗೆ ಒಪ್ಪಂದ ಮಾಡಿಕೊಂಡಿದೆ. ಆ ಕುರಿತು ಮಾಧ್ಯಮಗಳಲ್ಲಿ ಮೂಡಿ ಬಂದಿರುವ ವರದಿಗಳು...
https://t.co/pnAz1CEhSC
Foxconn are investing $600M to establish two cutting-edge manufacturing plants in Karnataka.
One will partner with Applied Materials, bringing innovation to chipmaking tools.
$350M will go into creating a unit for smartphone component manufacturing. An additional $250M will fuel a plant for chipmaking tools with Applied Materials.
This move follows a meeting between Foxconn & Govt of Karnataka. The project is expected to generate 14,000 jobs and will be the beginning of a great ecosystem of manufacturing in not only in Karnataka, but India.
@MBPatil
,@JnanendraAraga ಅವರೇ,
ನೀವು ಆಡಿರುವ ಮಾತು ಬರೀ ನಿಮ್ಮ ಮಾತುಗಳಲ್ಲ, ಕೇಶವ ಕೃಪಾದ ಪ್ರಭಾವದ ಮಾತು, ಬಿಜೆಪಿಯ ಆಂತರ್ಯದೊಳಗೆ ಅಡಗಿದ್ದ ಶೋಷಿತರ ಬಗೆಗಿನ ಅಸಹನೆಯ ಮಾತು.
ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ದಿಯೇ ಹೊರತು ಕಲ್ಯಾಣ ಕರ್ನಾಟಕದ ಜನರಲ್ಲ.
ಶತಶತಮಾನಗಳಿಂದ ವರ್ಣಾಶ್ರಮದ ಹೆಸರಲ್ಲಿ ಶೋಷಣೆ ನಡೆಸಿ ಶ್ರಮಜೀವಿಗಳ ಬೆವರಿನಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು, ಸ್ವಾಭಿಮಾನದಿಂದ ದುಡಿದು ತಿನ್ನುವವರ ಮೈ ಬಿಸಿಲಲ್ಲಿ ಸುಟ್ಟಿರುತ್ತದೆ.
ಆರಗ ಜ್ಞಾನೇಂದ್ರ ಅವರು ಒಂದೇ ಒಂದು ದಿನ ಮಣ್ಣು ಹೊತ್ತರೆ ಅವರ ಮೈಬಣ್ಣವೂ ಕಪ್ಪಗಾಗುತ್ತದೆ.
ಮನುಸ್ಮೃತಿಯ ವರ್ಣಾಶ್ರಮವನ್ನು ಅಪ್ಪಿ ಒಪ್ಪಿ ಮುದ್ದಾಡುವ ಬಿಜೆಪಿಗೆ ದಲಿತರ ರಾಜಕೀಯ ಏಳಿಗೆಯ ಬಗ್ಗೆ ತೀವ್ರ ಅಸಹನೆ ಇರುವುದು ಇಂತಹ ಮಾತುಗಳಿಂದ ಹೊರಬರುತ್ತವೆ.
@BJP4Karnatakaಯ ಈ ಅಸಹನೆ ಬಿಜೆಪಿಯನ್ನೇ ಸುಟ್ಟು ಕರಕಲು ಮಾಡುತ್ತದೆ, ಏಕೆಂದರೆ ಇದು ಮನುಸ್ಮೃತಿಯ ಕಾಲವಲ್ಲ, ಬಾಬಾ ಸಾಹೇಬರ ಸಂವಿಧಾನದ ಕಾಲ
ಫಾಕ್ಸ್ ಕಾನ್ ಸಂಸ್ಥೆಯಿಂದ ರಾಜ್ಯದಲ್ಲಿ ರೂ. 5,000 ಕೋಟಿ ಹೂಡಿಕೆಯೊಂದಿಗೆ 2ಹೊಸ ಯೋಜನೆಗಳು
ಫಾಕ್ಸ್ ಕಾನ್ ಸಂಸ್ಥೆ ಈಗಾಗಲೇ ರಾಜ್ಯದಲ್ಲಿ ರೂ. 14,000 ಕೋಟಿ ಮೊತ್ತದಲ್ಲಿ ಐಫೋನ್ ತಯಾರಿಕಾ ಘಟಕ ಸ್ಥಾಪಿಸುತ್ತಿದ್ದು, ಇದರ ಜೊತೆಗೆ ರಾಜ್ಯ ಸರ್ಕಾರ ರೂ. 5,000 ಕೋಟಿ ಹೂಡಿಕೆಯ ಎರಡು ಪ್ರಮುಖ ಯೋಜನೆಗಳಿಗೆ ಫಾಕ್ಸ್ ಕಾನ್ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಇತ್ತೀಚೆಗೆ #FOXCONN ಸಂಸ್ಥೆಯ CEO ಮತ್ತು ಅಧ್ಯಕ್ಷರಾದ ಶ್ರೀ ಯಂಗ್ ಲಿಯು ಅವರನ್ನು ಭೇಟಿಮಾಡಿ ಫಾಕ್ಸ್ ಕಾನ್ ಯೋಜನೆಗಳ ಕುರಿತು ಫಲಪ್ರದ ಮಾತುಕತೆ ನಡೆಸಲಾಯಿತು. ಈ ವೇಳೆ ಸಚಿವ ಶ್ರೀ Priyank Kharge ಅವರು ಜೊತೆಗಿದ್ದರು.
• ಫೋನ್ ಎನ್ಕ್ಲೋಷರ್ ಯೋಜನೆ- FII (ಫಾಕ್ಸ್ ಕಾನ್ ನ ಅಂಗ ಸಂಸ್ಥೆ) ವತಿಯಿಂದ ರೂ.3,000 ಕೋಟಿ ಹೂಡಿಕೆ, 12,000 ಉದ್ಯೋಗಾವಕಾಶಗಳ ಸೃಷ್ಟಿ
• ಅಪ್ಲೈಡ್ ಮೆಟೀರಿಯಲ್ಸ್ ನ ಸಹಯೋಗದೊಂದಿಗೆ ರೂ.2,000 ಕೋಟಿ ಹೂಡಿಕೆಯ ಸೆಮಿಕಂಡಕ್ಟರ್ ಉಪಕರಣಗಳನ್ನು ತಯಾರಿಸುವ ಯೋಜನೆ, 1,000 ಉದ್ಯೋಗಗಳ ಸೃಷ್ಟಿ
Karnataka Govt. signs a Letter of Intent (LOI) with Foxconn, paving the way for two groundbreaking projects with an investment of Rs. 5,000 crore in addition to the ongoing Rs. 14,000 crore iPhone Manufacturing project.
Recently met the CEO and Chairman of Hon Hai Technology Group (#FOXCONN) Mr. Young Liu and had a fruitful discussion on various projects in the state. Along with @PriyankKharge.
• Phone enclosure project - FII (Foxconn Subsidiary) invests Rs 3,000 Cr with employment opportunities for 12,000 people
• Semicon equipment project in collaboration with Applied Materials, with a projected investment of Rs 2,000 Cr with employment generation for 1000 people
#Investment #Karnataka #Innovation
ರಾಜ್ಯದಲ್ಲಿ ರೂ. 8000 ಕೋಟಿ ಹೂಡಿಕೆಗೆ IBC ಒಡಂಬಡಿಕೆ
ವಿದ್ಯುತ್ ಚಾಲಿತ ವಾಹನ (EV)ಗಳಿಗೆ ಅಗತ್ಯವಾದ ಲೀಥಿಯಂ ಕೋಶಗಳ ತಯಾರಿಕೆಗೆ ಹೆಸರಾಗಿರುವ ಇಂಟರ್ ನ್ಯಾಷನಲ್ ಬ್ಯಾಟರಿ ಕಂಪೆನಿ #IBC ಕರ್ನಾಟಕದಲ್ಲಿ ರೂ. 8000 ಕೋಟಿ ಹೂಡಿಕೆ ಮಾಡಲು ಆಸಕ್ತಿ ತೋರಿದೆ.
ಈ ಕುರಿತಂತೆ ಇಂದು ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆ (MOU) ಮಾಡಿಕೊಂಡಿದೆ.
ರಾಜ್ಯದಲ್ಲಿ ಸುಮಾರು 100ಎಕರೆ ಪ್ರದೇಶದಲ್ಲಿ IBC ತನ್ನ ಸ್ಥಾವರ ನಿರ್ಮಿಸಲಿದೆ.
ಭವಿಷ್ಯದಲ್ಲಿ ಹಸಿರು ಇಂಧನ ಕ್ಷೇತ್ರದಲ್ಲಿ ರಾಜ್ಯ ಮಹತ್ತರ ಸಾಧನೆ ಮಾಡಲಿದೆ ಎಂಬ ವಿಶ್ವಾಸ ಮೂಡಿಸಿದೆ.
Proud moment for Karnataka as IBC and the Government of Karnataka join hands with an MOU signing for a groundbreaking investment of Rs. 8,000 Cr to establish a cutting-edge Advanced Battery Manufacturing Facility.
Spanning across a sprawling 100 acres in the state, this venture promises to revolutionize the energy storage landscape.
#GreenEnergy #Investment #Karnataka #Innovation #BatteryTech #SustainableFuture
ಮುಖ್ಯಮಂತ್ರಿ @siddaramaiah ಅವರು ಇಂದು ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಗರದ ಬನ್ನಂಜೆಯಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕಿಯರ ಹಾಸ್ಟೆಲ್ ಗೆ ತೆರಳಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿ, ಊಟ, ವಸತಿ ಸೇರಿದಂತೆ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.
ಕರ್ನಾಟಕದ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಯ ಜೊತೆಗೆ ಹೈನುಗಾರಿಕೆಯನ್ನು ಮತ್ತಷ್ಟು ಲಾಭದಾಯಕ ಉದ್ಯೋಗವಾಗಿಸಿ, ಅವರನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ 2013ರ ಆಗಸ್ಟ್ 1 ರಂದು ನಮ್ಮ ಸರ್ಕಾರವು ಶಾಲಾ ಮಕ್ಕಳಿಗೆ ನಿತ್ಯ ಕೆನೆಭರಿತ ಹಾಲು ನೀಡುವ ಕ್ಷೀರಧಾರೆ ಯೋಜನೆಯನ್ನು ಜಾರಿಗೆ ನೀಡಿತ್ತು. ನಮ್ಮ ಈ ಯೋಜನೆ ಜಾರಿಯಾಗಿ ಇಂದಿಗೆ ಹತ್ತು ವರ್ಷಗಳು ತುಂಬಿದೆ. ಪ್ರತಿನಿತ್ಯ ಒಂದು ಕೋಟಿಗೂ ಅಧಿಕ ಮಕ್ಕಳಿಗೆ ಹಾಲು ನೀಡುವ ಮೂಲಕ ಅವರ ಶೈಕ್ಷಣಿಕ ಸಾಧನೆಗೆ ನೆರವಾದ ಸಂತೃಪ್ತಿ ನನ್ನದು.
ವಿಶ್ವ ಡೇರಿ ಫೆಡರೇಷನ್ನಿಂದ ನೀಡಲಾಗುವ "ಅಂತಾರಾಷ್ಟ್ರೀಯ ಅತ್ಯುತ್ತಮ ಯೋಜನೆ ಪ್ರಶಸ್ತಿ - 2022" ಅನ್ನು ನಮ್ಮ ಈ ಯೋಜನೆ ಪಡೆದಿದ್ದು, ಯೋಜನೆಯನ್ನು ಜಾರಿಗೆ ಕೊಟ್ಟ ನನಗಿದು ಹೆಮ್ಮೆಯುಂಟು ಮಾಡಿದೆ.